newsfirstkannada.com

BREAKING: ವಿದ್ಯಾರ್ಥಿಗಳೇ ಗಮನಿಸಿ.. SSLC ಫಲಿತಾಂಶ ಪ್ರಕಟಕ್ಕೆ ಸಮಯ ಫಿಕ್ಸ್

Share :

Published May 8, 2024 at 1:30pm

Update May 8, 2024 at 1:34pm

    ರಿಸಲ್ಟ್‌ಗಾಗಿ ಕಾಯುತ್ತಿರುವ 8 ಲಕ್ಷ ವಿದ್ಯಾರ್ಥಿಗಳು ಹಾಗೂ ಪೋಷಕರು

    ಕರ್ನಾಟಕ ಶಾಲಾ ಪರೀಕ್ಷೆ & ಮೌಲ್ಯ ನಿರ್ಣಯ ಮಂಡಳಿಯಿಂದ ಪ್ರಕಟ

    ಸುದ್ದಿಗೋಷ್ಟಿ ಬಳಿಕ ಪರೀಕ್ಷಾ ಮಂಡಳಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ರಿಸಲ್ಟ್

ಬೆಂಗಳೂರು: SSLC ಪರೀಕ್ಷೆ ಫಲಿತಾಂಶಕ್ಕೆ ದಿನಾಂಕ ನಿಗದಿಯಾಗಿದೆ. ನಾಳೆ ಬೆಳಗ್ಗೆ 10.30ಕ್ಕೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಫಲಿತಾಂಶ ಪ್ರಕಟ ಮಾಡಲಾಗಿದೆ.

2023-24ನೇ ಸಾಲಿನ SSLC ಪರೀಕ್ಷೆಯ ಮೌಲ್ಯಮಾಪನ ಈಗಾಗಲೇ ಸಂಪೂರ್ಣವಾಗಿತ್ತು. ಫಲಿತಾಂಶದ ಸರ್ವ ಸಿದ್ಧತೆ ಮಾಡಿಕೊಂಡಿರುವ ಪರೀಕ್ಷಾ ಮಂಡಳಿ, ನಾಳೆ ಬೆಳಗ್ಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಲ್ಲಿ ಸುದ್ದಿಗೋಷ್ಟಿ ನಡೆಸುತ್ತಿದೆ.

ಇದನ್ನೂ ಓದಿ: ವಿದ್ಯಾರ್ಥಿಗಳೇ ಗಮನಿಸಿ.. SSLC ಫಲಿತಾಂಶ ಪ್ರಕಟಿಸಲು ದಿನಾಂಕ ನಿಗದಿ; ಯಾವಾಗ? 

ಏಪ್ರಿಲ್ 15ರಂದು SSLC ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಪ್ರಾರಂಭ ಆಗಿತ್ತು. ಎಸ್ಎಸ್ಎಲ್‌ಸಿ ರಿಸಲ್ಟ್‌ಗಾಗಿ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಪೋಷಕರು ಕಾಯುತ್ತಾ ಇದ್ದಾರೆ. 2023-24ನೇ ಸಾಲಿನ SSLCಯಲ್ಲಿ 8.69 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ನಾಳೆ ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರ ಆಗುತ್ತಿದೆ.

ಎಂದಿನಂತೆ SSLC ರಿಸಲ್ಟ್ ಅನ್ನು ಪರೀಕ್ಷಾ ಮಂಡಳಿಯು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟ ಮಾಡಲಿದೆ. http://kseeb.kar.nic.in ಮತ್ತು http://karresults.nic.in ನಲ್ಲಿ ಪರೀಕ್ಷೆಯ ಫಲಿತಾಂಶ ಲಭ್ಯವಿದೆ.

2023-24ನೇ ಸಾಲಿನ SSLC ಪರೀಕ್ಷೆ-1 ಕಳೆದ ಮಾರ್ಚ್‌ 25 ರಿಂದ ಏಪ್ರಿಲ್ 6, 2024ರವರೆಗೆ ನಡೆದಿತ್ತು. ಪರೀಕ್ಷೆ-1 ಬರೆದಿರುವ 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಫಲಿತಾಂಶಕ್ಕಾಗಿ ಕಾದು ಕುಳಿತಿದ್ದಾರೆ. ಕೊನೆಗೂ ಕಾಯುವಿಕೆಯ ಸಮಯ ಕೊನೆಯಾಗುತ್ತಿದೆ.

ಈ ಬಾರಿ ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿರುವುದರಿಂದ SSLC ಪರೀಕ್ಷೆ ಫಲಿತಾಂಶ ಪ್ರಕಟವಾಗುವುದು ತಡವಾಗಿದೆ. SSLC ಮೌಲ್ಯಮಾಪನ ಈಗಾಗಲೇ ಸಂಪೂರ್ಣವಾಗಿದ್ದು, ಪರೀಕ್ಷಾ ಮಂಡಳಿ ಫಲಿತಾಂಶ ಪ್ರಕಟ ಮಾಡಲು ಸರ್ವ ಸಿದ್ಧತೆಯನ್ನು ಮಾಡಿಕೊಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ವಿದ್ಯಾರ್ಥಿಗಳೇ ಗಮನಿಸಿ.. SSLC ಫಲಿತಾಂಶ ಪ್ರಕಟಕ್ಕೆ ಸಮಯ ಫಿಕ್ಸ್

https://newsfirstlive.com/wp-content/uploads/2024/03/SSLC_CM_1.jpg

Load More