newsfirstkannada.com

ಜಾತಿ ಗಣತಿ ವರದಿ ಸಲ್ಲಿಕೆಗೆ ಕೂಡಿಬಂತು ಕಾಲ.. ಇಂದು ಸಿಎಂ ಕೈ ಸೇರಲಿದೆ ರಿಪೋರ್ಟ್​

Share :

Published February 29, 2024 at 7:39am

    2013ರಲ್ಲಿ ನಡೆಸಿದ್ದ ಕರ್ನಾಟಕದ ಸಾಮಾಜಿಕ-ಆರ್ಥಿಕ ಸಮೀಕ್ಷೆ

    ಇವತ್ತು ಸಿಎಂ ಸಿದ್ದರಾಮಯ್ಯ ಕೈ ಸೇರಲಿದೆ ಜಾತಿಗಣತಿ ವರದಿ

    ಜಾತಿಗಣತಿ ಸಮೀಕ್ಷೆಯನ್ನ ಸರ್ಕಾರದ ಕೈಗಿಡಲು ಜಯಪ್ರಕಾಶ್ ಹೆಗ್ಡೆ ನಿರ್ಧಾರ

ರಾಜ್ಯದಲ್ಲಿ ತೀವ್ರ ರಾಜಕೀಯ ಚರ್ಚೆಗೆ ಗ್ರಾಸವಾಗಿರುವ ಜಾತಿ ಗಣತಿ ವರದಿ ಸಲ್ಲಿಕೆಗೆ ಕೊನೆಗೂ ಕಾಲ ಕೂಡಿಬಂದಿದೆ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸರ್ಕಾರಕ್ಕೆ ಜಾತಿಗಣತಿ ರಿಪೋರ್ಟ್‌ ಸಲ್ಲಿಸಲು ಮುಂದಾಗಿದೆ. ಇವತ್ತೇ ಜಾತಿ ಗಣತಿ ವರದಿಯ ರಿಪೋರ್ಟ್ ಸಿಎಂ ಕೈ ಸೇರುವ ಸಾಧ್ಯತೆ ಇದೆ.

ಜಾತಿಗಣತಿ ವರದಿ. 2013ರಲ್ಲಿ ಸಿದ್ದರಾಮಯ್ಯ ಸರ್ಕಾರ ನಡೆಸಿದ್ದ ಕರ್ನಾಟಕದ ಸಾಮಾಜಿಕ-ಆರ್ಥಿಕ ಸಮೀಕ್ಷೆ. ಹಿಂದುಳಿದ ಸಮಾಜಗಳನ್ನ ಮೇಲೆತ್ತುವ ನಿಟ್ಟಿನಲ್ಲಿ ಅಹಿಂದ ನಾಯಕ ಕೈಗೊಂಡಿದ್ದ ಮಹತ್ವದ ನಿರ್ಧಾರ. ಆದ್ರೆ, ಹಿಂದುಳಿತ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜು ನಡೆಸಿದ್ದ ಜಾತಿ ಗಣತಿ ವರದಿಯ ಫೈಲ್ ಧೂಳು ಹಿಡಿದಿತ್ತು. ಇದೀಗ ಕೊನೆಗೂ ಫೈಲ್‌ ಸರ್ಕಾರದ ಕೈ ಸೇರುವ ಕಾಲ ಸನ್ನಿಹಿತವಾಗಿದೆ.

ಜಾತಿಗಣತಿ ಸಮೀಕ್ಷೆ ವರದಿ ಸಲ್ಲಿಸಲಿರುವ ಜಯಪ್ರಕಾಶ್ ಹೆಗ್ಡೆ

ಸಿದ್ದರಾಮಯ್ಯ ಸರ್ಕಾರ ನಡೆಸಿದ್ದ ಜಾತಿಗಣತಿ ವರದಿ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಲೇ ಇವೆ. ಸರ್ಕಾರ ಪಾರದರ್ಶಕವಾಗಿ ಸಮೀಕ್ಷೆಯನ್ನ ನಡೆಸಿಲ್ಲ ಎಂಬ ಆರೋಪವೂ ಇದೆ. ಲಿಂಗಾಯತ, ಒಕ್ಕಲಿಗ ಸಮುದಾಯದ ನಾಯಕರು ಕಾಂತರಾಜು ವರದಿ ಜಾರಿಗೆ ವಿರೋಧಿಸುತ್ತಿವೆ. ಈ ಹೊತ್ತಲ್ಲಿ ಮಹತ್ವದ ಜಾತಿಗಣತಿ ಸಮೀಕ್ಷೆಯ ವರದಿ ಇವತ್ತು ಸಿಎಂ ಸಿದ್ದರಾಮಯ್ಯ ಕೈ ಸೇರುವ ಲಕ್ಷಣಗಳು ಗೋಚರಿಸಿವೆ.

ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರ ಅಧಿಕಾರಾವಧಿ ಇವತ್ತು ಮುಕ್ತಾಯವಾಗಲಿದೆ. ಈ ನಿಟ್ಟಿನಲ್ಲಿ ಬಹುನಿರೀಕ್ಷಿತ ಜಾತಿಗಣತಿ ಸಮೀಕ್ಷೆ ವರದಿಯನ್ನ ಸರ್ಕಾರದ ಕೈಗಿಡಲು ಜಯಪ್ರಕಾಶ್ ಹೆಗ್ಡೆ ನಿರ್ಧರಿಸಿದ್ದಾರೆ. ಸಿಎಂ ಸಿದ್ದರಾಮಯ್ಯಗೆ ಜಾತಿ ಗಣತಿ ಸಮೀಕ್ಷೆ ವರದಿಯನ್ನ ಹಸ್ತಾಂತರಿಸೋದಾಗಿ ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.

ಇನ್ನೂ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜು ಸಮೀಕ್ಷೆಯ ದತ್ತಾಂಶ ಆಧರಿಸಿ ವರದಿಯನ್ನ ಸಿದ್ಧಪಡಿಸಲಾಗಿದೆ. ಅಲ್ಲದೇ ಪ್ರಬಲ ಸಮುದಾಯಗಳು ವಿರೋಧ ವ್ಯಕ್ತಪಡಿಸುವ ಯಾವುದೇ ಅಂಶಗಳು ಇದರಲ್ಲಿ ಇಲ್ಲ ಅಂತಲೂ ಜಯಪ್ರಕಾಶ್ ಹೆಗ್ಡೆ ಸ್ಪಷ್ಟನೆ ನೀಡಿದ್ದಾರೆ.

ಒಟ್ಟಾರೆ, ಜಯಪ್ರಕಾಶ್‌ ಹೆಗ್ಡೆ ನೇತೃತ್ವದ ಆಯೋಗದ ಕಾರ್ಯಾವಧಿ ಇವತ್ತಿಗೆ ಕೊನೆಗೊಳ್ಳಲಿದೆ. ಈ ಆಯೋಗವು ಎಚ್‌. ಕಾಂತರಾಜ್ ನೇತೃತ್ವದ ಆಯೋಗ ಸಿದ್ಧಪಡಿಸಿದ ವರದಿಯ ದತ್ತಾಂಶಗಳನ್ನು ಬಳಸಿಕೊಂಡು ಪರಿಷ್ಕೃತ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುತ್ತಿದೆ. ಲೋಕಸಭೆ ಚುನಾವಣೆ ಹೊತ್ತಲ್ಲಿ ಸರ್ಕಾರವು ವರದಿ ಸ್ವೀಕರಿಸಿ ಮುಂದೆ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬ ಕುತೂಹಲ ಮನೆ ಮನೆಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜಾತಿ ಗಣತಿ ವರದಿ ಸಲ್ಲಿಕೆಗೆ ಕೂಡಿಬಂತು ಕಾಲ.. ಇಂದು ಸಿಎಂ ಕೈ ಸೇರಲಿದೆ ರಿಪೋರ್ಟ್​

https://newsfirstlive.com/wp-content/uploads/2024/02/CM_SIDDARAMAIHA_12.jpg

Load More