Advertisment

ಬಾಹ್ಯಾಕಾಶದಲ್ಲಿ ಚಿಗುರಿದ 8 ಅಲಸಂದೆ ಗಿಡ.. ವಿಡಿಯೋ ರಿಲೀಸ್ ಮಾಡಿದ ಇಸ್ರೋ; ಏನಿದರ ವಿಶೇಷ?

author-image
Gopal Kulkarni
Updated On
ಬಾಹ್ಯಾಕಾಶದಲ್ಲಿ ಚಿಗುರಿದ 8 ಅಲಸಂದೆ ಗಿಡ.. ವಿಡಿಯೋ ರಿಲೀಸ್ ಮಾಡಿದ ಇಸ್ರೋ; ಏನಿದರ ವಿಶೇಷ?
Advertisment
  • ಬಾಹ್ಯಾಕಾಶದಲ್ಲಿ ಮೊಳಕೆಯೊಡೆದ 8 ಅಲಸಂದೆ ಬೀಜಗಳು
  • ಬಾಹ್ಯಾಕಾಶ ಕೃಷಿಗಾರಿಕೆಯಲ್ಲಿ ಇಸ್ರೋದಿಂದ ಹೊಸ ಮೈಲಿಗಲ್ಲು
  • ಅಲಸಂದೆ ಮೊಳಕೆಯೊಡೆದ ವಿಡಿಯೋ ಹಂಚಿಕೊಂಡ ಇಸ್ರೋ

ಬಾಹ್ಯಾಕಾಶ ಕೃಷಿಗಾರಿಕೆಯಲ್ಲಿ ನಮ್ಮ ಹೆಮ್ಮೆಯ ಇಸ್ರೋ ಹೊಸ ಇತಿಹಾಸವನ್ನೇ ಬರೆದಿದೆ. ಪಿಎಸ್​ಎಲ್​ವಿ-ಸಿ60 ಮಿಷಿನ್​ನಲ್ಲಿ ಅಲಸಂದೆ ಬೀಜಗಳು ಮೊಳಕೆಯೊಡೆದಿರುವ ವಿಡಿಯೋವನ್ನು ಇಸ್ರೋ ಈಗ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.

Advertisment

ಜನವರಿ 4, 2025ರಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆ, ಬಾಹ್ಯಾಕಾಶದಲ್ಲಿ ನಡೆಸಿರುವ ತನ್ನ ಬಾಹ್ಯಾಕಾಶ ಕೃಷಿಗಾರಿಕೆಯಲ್ಲಿ ಯಶಸ್ವಿಯಾದ ಬಗ್ಗೆ ಹೇಳಿಕೊಂಡಿತ್ತು. ಕೇವಲ ನಾಲ್ಕು ದಿನಗಳಲ್ಲಿ ಮೈಕ್ರೊಗ್ರಾವಿಟಿ ಕಂಡಿಷನ್​ನಲ್ಲಿ ಎಂಟು ಅಲಸಂದೆ ಬೀಜಗಳು ಮೊಳಕೆಯೊಡೆದ ಬಗ್ಗೆ ಹೇಳಿಕೊಂಡಿತ್ತು. ಅವುಗಳ ಫೋಟೋಗಳನ್ನು ಹಂಚಿಕೊಂಡಿತ್ತು . ಇಸ್ರೋದಿಂದ ಕಳೆದ ತಿಂಗಳು ಪಿಒಇಎಂ-4 ರಾಕೆಟ್ ಉಡಾವಣೆಗೊಂಡಿತ್ತು.


">January 7, 2025


ಇದನ್ನೂ ಓದಿ:10 ವರ್ಷಗಳಿಂದ ಈ ವ್ಯಕ್ತಿ ಬಳಿ ಒಂದು ರೂಪಾಯಿಯೂ ಇಲ್ಲ.. ಆದರೂ ಐಷಾರಾಮಿ ಜೀವನ! ಹೇಗೆ ಸಾಧ್ಯ?

Advertisment

ರಾಕೆಟ್​ನಿಂದ ಹಲವು ವೈಜ್ಞಾನಿಕ ಪ್ರಯೋಗಗಳನ್ನು ಕೈಗೊಳ್ಳಲಾಗಿತ್ತು. ಮುಚ್ಚಿಟ್ಟ ಪೆಟ್ಟಿಗೆ ಪರಿಸರದಲ್ಲಿ ಎಂಟು ಅಲಸಂದೆ ಕಾಳುಗಳನ್ನು ಮೊಳಕೆಯೊಡೆಸಿ ಎಲೆ ಬರುವ ಹಂತದವರೆಗೆ ಸಸಿ ಬೆಳೆಸುವ ಇಸ್ರೋ ಪ್ರಯೋಗ ಯಶಸ್ವಿಯಾಗಿತ್ತು. ವಿಕ್ರಮ್ ಸಾರಾಭಾಯಿ ಬಾಹ್ಯಾಕಾಶ ಕೇಂದ್ರ ಅಭಿವೃದ್ಧಿಪಡಿಸಿ ಪ್ರಯೋಗ ನಡೆಸಸಲಾಗಿತ್ತು. ಬಾಹ್ಯಾಕಾಶ ಆಧಾರಿತ ಸಸ್ಯ ಸಂಶೋಧನೆಯಲ್ಲಿ ಮಹತ್ವದ ಮೈಲಿಗಲ್ಲು ಎಂದು ಇಸ್ರೋ ಹೇಳಿದ್ದು. ಈಗ ಅಲಸಂದೆ ಬೀಜಗಳು ಮೊಳಕೆಯೊಡೆದು ಎಲೆ ಬಿಡುವ ಹಂತದವರೆಗಿನ ವಿಡಿಯೋವನ್ನು ಇಸ್ರೋ ಹಂಚಿಕೊಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment