ಜಗತ್ತನ್ನೇ ಬೆರಗುಗೊಳಿಸಿದ ದೃಶ್ಯ.. 12 ರೋಬೋಟ್​ಗಳನ್ನ ಕಿಡ್ನ್ಯಾಪ್ ಮಾಡಿದ ಒಂದು ಸಣ್ಣ ರೋಬೋಟ್..!

author-image
Ganesh
Updated On
ಜಗತ್ತನ್ನೇ ಬೆರಗುಗೊಳಿಸಿದ ದೃಶ್ಯ.. 12 ರೋಬೋಟ್​ಗಳನ್ನ ಕಿಡ್ನ್ಯಾಪ್ ಮಾಡಿದ ಒಂದು ಸಣ್ಣ ರೋಬೋಟ್..!
Advertisment
  • ನೀವು ಅಂದ್ಕೊಂಡು ರೋಬೋಟ್​ಗಳು ಪ್ರಾಮಾಣಿಕರಲ್ಲ
  • ಕಳ್ಳತನಕ್ಕೂ ಇಳಿಯುತ್ತಿವೆ ಮನುಷ್ಯ ನಿರ್ಮಿತ ರೋಬೋಟ್​ಗಳು
  • ಕಳ್ಳತನಕ್ಕೂ ಮೊದಲು ರೋಬೋಟ್​ಗಳ ಮಧ್ಯೆ ನಡೆದ ಸಂಭಾಷಣೆ ಏನು?

ಇಷ್ಟುದಿನ ಮನುಷ್ಯರ ಕಳ್ಳತನ ಪ್ರಕರಣಗಳ ಬಗ್ಗೆ ಕೇಳಿದ್ದೀರಿ, ನೋಡಿದ್ದೀರಿ! ಈಗ ಕಾಲ ಬದಲಾಗಿದೆ. ಮನುಷ್ಯ ಆವಿಷ್ಕೃತ ತಂತ್ರಜ್ಞಾನಗಳೂ ಕೂಡ ಕಳ್ಳತನದಂಥ ಅಪರಾಧಗಳ ಜಗತ್ತಿಗೆ ಕಾಲಿಡುತ್ತಿವೆ! ಅಂದರೆ ತಂತ್ರಜ್ಞಾನವನ್ನು ಬಳಸಿಕೊಂಡು ಮನುಷ್ಯರೇ ಗುಪ್ತ ಮಾಹಿತಿ, ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಿದ ಪ್ರಕರಣವಂತೂ ಅಲ್ಲ. ಇಲ್ಲಿ ಸ್ವತಃ ರೋಬೋಟ್​​ಗಳೇ ಕಳ್ಳತನಕ್ಕೆ ಇಳಿದಿವೆ.

ನಿಮಗೆ ಅಚ್ಚರಿ ಅನಿಸಬಹುದು! ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗ್ತಿದೆ. ಅದರಲ್ಲಿ ಸಣ್ಣ ರೋಬೋಟ್ ( Tiny robot) 12 ದೊಡ್ಡ ರೋಬೋಟ್​ಗಳನ್ನು (Larger robots) ಅಪಹರಣ ಮಾಡಿವೆ. ರೋಬೋಟ್ ಕಿಡ್ನ್ಯಾಪ್ ಆಗಿರುವ ಬಗ್ಗೆ ರೋಬೋಟ್ ತಯಾರಿಕ ಕಂಪನಿಗಳೇ ಹೇಳಿವೆ.

ಇದನ್ನೂ ಓದಿ:ನ್ಯಾನೋ ಕಮ್​​ಬ್ಯಾಕ್​.. ಹೊಸ ಅವತಾರದಲ್ಲಿ ರತನ್ ಟಾಟಾ ಅವರ ಕನಸಿನ ಕೂಸು; ಬೆಲೆ ಎಷ್ಟು ಗೊತ್ತಾ?

ಅಂದ್ಹಾಗೆ ಈ ಘಟನೆ ನಡೆದಿರೋದು ಚೀನಾದ ಶಾಂಘೈನಲ್ಲಿ. ಒಂದು ಸಣ್ಣ AI-ಚಾಲಿತ ಸಣ್ಣ ರೋಬೋಟ್​ ಶಾಂಘೈ ರೋಬೋಟಿಕ್ಸ್ ಕಂಪನಿಯ ಶೋರೂಮ್‌ನಿಂದ 12 ದೊಡ್ಡ ರೋಬೋಟ್‌ಗಳನ್ನು ಅಪಹರಿಸಿದೆ. ವೈರಲ್ ಆಗುತ್ತಿರುವ ಸಿಸಿಟಿವಿಯಲ್ಲಿ ಇರ್ಬೈ (Erbai) ಎಂಬ ಸಣ್ಣ ರೋಬೋಟ್ ನೋಡಬಹುದಾಗಿದೆ. ಅಲ್ಲಿಗೆ ಎಂಟ್ರಿಯಾಗುವ ಸಣ್ಣ ರೋಬೋಟ್​ಗಳು ದೊಡ್ಡ ರೋಬೋಟ್​ಗಳ ಜೊತೆ ಸಂವಹನ ನಡೆಸಿವೆ. ನಂತರ ಅವು ಕೆಲಸ ಮಾಡ್ತಿದ್ದ ಜಾಗವನ್ನು ಬಿಟ್ಟು ಶೋರೂಮ್‌ನಿಂದ ಹೊರನಡೆಯಲು ಮನವೊಲಿಸುತ್ತವೆ. ಅಪಹರಣಕ್ಕೆ ಒಳಗಾಗುವ ಈ ರೋಬೋಟ್‌ಗಳು ಸಣ್ಣ ರೋಬೋಟ್​ಗಳ ಆದೇಶವನ್ನು ಪಾಲಿಸುತ್ತವೆ.

ಹೇಗಿತ್ತು ಮಾತುಕತೆ..?
ಸಣ್ಣ ರೋಬೋಟ್ ದೊಡ್ಡ ರೋಬೋಟ್​ಗಳಿಗೆ ಹೊರಗೆ ಹೋಗುವಂತೆ ಕೇಳುತ್ತವೆ. ಅದಕ್ಕೆ ಅವು ಇಲ್ಲ, ನಾವು ಯಾವತ್ತೂ ಕೆಲಸದಿಂದ ರಜೆ ತೆಗೆದುಕೊಳ್ಳಲ್ಲ ಎಂದು ಉತ್ತರ ನೀಡುತ್ತವೆ. ಅದಕ್ಕೆ Erbai ನೀವು ನೀವು ಮನೆಗೆ ಹೋಗುವುದಿಲ್ಲವೇ ಎಂದು ಪ್ರಶ್ನೆ ಮಾಡುತ್ತವೆ. ಅವು ಮನೆ ಇಲ್ಲ ಎನ್ನುತ್ತವೆ. ಆಗ ಸಣ್ಣ ರೋಬೋಟ್ ಶೋರೂಮ್‌ನಿಂದ ಹೊರಡುವ ಮೊದಲು ನನ್ನೊಂದಿಗೆ ‘ಮನೆಗೆ ಬನ್ನಿ’ ಎಂದು ಹೇಳುತ್ತದೆ. ಅದರಂತೆ 12 ದೊಡ್ಡ ರೋಬೋಟ್​ಗಳು ಅಲ್ಲಿಂದ ಹೊರನಡೆದಿವೆ.

ಇದನ್ನೂ ಓದಿ:ಕೋಟಿ ಕೋಟಿ ಸಿಮ್ ಕಾರ್ಡ್ ದಿಢೀರ್​ ಬ್ಲಾಕ್.. ಕಾರಣ ಏನು ಗೊತ್ತಾ..?

ಈ ರೀತಿಯ ಘಟನೆ ನಡೆದಿರೋದು ನಿಜ ಎಂದು ಕಂಪನಿ ಹೇಳಿದೆ. ಇರ್ಬೈ ರೋಬೋಟ್ ದೊಡ್ಡ ರೋಬೋಟ್‌ಗಳ ಭದ್ರತಾ ಸಮಸ್ಯೆಯ ಲಾಭವನ್ನು ಪಡೆದುಕೊಂಡಿದೆ. ಅವುಗಳ ಮೇಲೆ ನಿಯಂತ್ರಣ ಸಾಧಿಸಿದೆ ಎಂದು ಕಂಪನಿ ಹೇಳಿದೆ. ಕಳೆದ ಕೆಲವು ವರ್ಷಗಳಿಂದ AI ಎಲ್ಲಾ ಕ್ಷೇತ್ರಗಳಲ್ಲೂ ಕಾಲಿಟ್ಟಿವೆ. ಅಂತಹ ಪರಿಸ್ಥಿತಿಯಲ್ಲಿ ಅಂತಹ ಘಟನೆಯು ಅದರ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment