ಟಿಪ್ಪು ಸುಲ್ತಾನ್​ ಖಡ್ಗ ಕೋಟಿ ಕೋಟಿ ಬೆಲೆಗೆ ಹರಾಜು.. ಯುದ್ಧದ ಕತ್ತಿಗೆ ಎಷ್ಟು ವರ್ಷಗಳ ಇತಿಹಾಸ ಇದೆ?

author-image
Bheemappa
Updated On
ಟಿಪ್ಪು ಸುಲ್ತಾನ್​ ಖಡ್ಗ ಕೋಟಿ ಕೋಟಿ ಬೆಲೆಗೆ ಹರಾಜು.. ಯುದ್ಧದ ಕತ್ತಿಗೆ ಎಷ್ಟು ವರ್ಷಗಳ ಇತಿಹಾಸ ಇದೆ?
Advertisment
  • ಖಡ್ಗವನ್ನು ಇಲ್ಲಿವರೆಗೆ ಯಾರು ಕಾಪಾಡಿಕೊಂಡು ಬಂದಿದ್ದರು ಗೊತ್ತಾ?
  • ತಂದೆಗೆ ಗೌರವ ಸೂಚಿಸಲು ಖಡ್ಗದ ಮುಂದೆ ಏನೆಂದು ಕೆತ್ತಿಸಿದ್ದರು?
  • ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಖಡ್ಗ ಹಿಡಿದು ಹೋರಾಡಿದ್ದ ಟಿಪ್ಪು

ಮೈಸೂರು ಹುಲಿ ಎಂದೇ ಖ್ಯಾತಿ ಪಡೆದಿದ್ದ ಟಿಪ್ಪು ಸುಲ್ತಾನ್ ಅವರು ಯುದ್ಧದಲ್ಲಿ ಬಳಸಿದಂತ ಖಡ್ಗವನ್ನು ಹರಾಜು ಮಾಡಲಾಗಿದ್ದು ಲಂಡನ್​​ನಲ್ಲಿ ಕೋಟಿ ಕೋಟಿ ಬೆಲೆಗೆ ಮಾರಾಟವಾಗಿದೆ.

ಟಿಪ್ಪು ಸುಲ್ತಾನ್ ಅವರ ಖಡ್ಗವನ್ನು ಲಂಡನ್​ನ ಬೋನ್‌ಹಾಮ್ಸ್ ಎನ್ನುವಲ್ಲಿ ಹರಾಜಿಗೆ ಇಡಲಾಗಿತ್ತು. ಹರಾಜಿನಲ್ಲಿ ಟಿಪ್ಪು ಸುಲ್ತಾನ್ ಅವರ ಖಡ್ಗ 3,17,900 ಪೌಂಡ್ ಅಂದರೆ 3.4 ಕೋಟಿ ರೂಪಾಯಿಗೆ ಮಾರಾಟ ಆಗಿದೆ. ಇದರ ಮೂಲವನ್ನು ಕೆದಕುತ್ತ ಹೋದರೆ ಮಂಡ್ಯದ ಶ್ರೀರಂಗಪಟ್ಟಣ ಯುದ್ಧವನ್ನು ನೆನಪಿಸುತ್ತದೆ. ಖಡ್ಗದ ಮುಂಭಾಗ ಹುಲಿ ಪಟ್ಟೆ ವಿನ್ಯಾಸವಿದ್ದು ಇದು ಮೈಸೂರು ಹುಲಿಯ ವಿಶಿಷ್ಟತೆ ಎಂದು ಹರಾಜಿನ ಸಂದರ್ಭದಲ್ಲಿ ಉಲ್ಲೇಖ ಮಾಡಲಾಗಿದೆ. ಇದರ ಜೊತೆಗೆ ಟಿಪ್ಪು ಸುಲ್ತಾನ್ ತಮ್ಮ ತಂದೆ ಹೈದರ್ ಅಲಿಗೆ ಗೌರವ ಸೂಚಿಸಲೆಂದು ಖಡ್ಗದ ಮುಂದೆ ಅರೇಬಿಕ್ ಅಕ್ಷರದಲ್ಲಿ ‘ಹ’ ಎಂದು ಬಂಗಾರದಿಂದ ಕೆತ್ತನೆ ಮಾಡಿಸಿದ್ದರು.

ಇದನ್ನೂ ಓದಿ; 50 MLAಗಳಿಗೆ ತಲಾ ₹50 ಕೋಟಿ ಆಫರ್.. ರಾಜಕೀಯದಲ್ಲಿ ಸಂಚಲನ ಮೂಡಿಸಿದ ಸಿದ್ದರಾಮಯ್ಯ ಹೇಳಿಕೆ

publive-image

ಸದ್ಯ ಲಂಡನ್​​ನಲ್ಲಿ ಹರಾಜು ಮಾಡಲಾದ ಖಡ್ಗ ಟಿಪ್ಪು ಸುಲ್ತಾನ್ ಅವರ ಕೊನೆ ದಿನಗಳ ಇತಿಹಾಸ ನೆನಪಿಸುತ್ತದೆ. 1799ರಲ್ಲಿ ನಾಲ್ಕನೆಯ ಮೈಸೂರು ಯುದ್ಧದ ವೇಳೆ ಟಿಪ್ಪು ಸುಲ್ತಾನ್ ಅವರು ಈ ಖಡ್ಗದಿಂದಲೇ ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಟ ಮಾಡಿದ್ದರು. ಈ ಯುದ್ಧದಲ್ಲಿ ಟಿಪ್ಪು ಸುಲ್ತಾನ್ ಕೊನೆಯುಸಿರೆಳೆಯುತ್ತಾರೆ. ಇಡೀ ಮೈಸೂರು ಸಾಮ್ರಾಜ್ಯವನ್ನು 1782 ರಿಂದ 1799ರ ವರೆಗೆ ಟಿಪ್ಪು ಸುಲ್ತಾನ್ ಆಳಿದ್ದರು.

ಟಿಪ್ಪು ಸುಲ್ತಾನ್​ ಮರಣದ ಬಳಿಕ ಬ್ರಿಟಿಷ್​ ಸೇನೆಯಲ್ಲಿ ಸೇವೆ ಮಾಡಿದರ ನೆನಪಿಗಾಗಿ ಅಂದಿನ ಸೇನೆ ಕ್ಯಾಪ್ಟನ್ ಜೇಮ್ಸ್ ಆಂಡ್ರ್ಯೂ ಡಿಕ್ ಎನ್ನುವರಿಗೆ ಇದನ್ನು ಉಡುಗೊರೆಯಾಗಿ ನೀಡಲಾಗಿತ್ತು. ಶ್ರೀರಂಗಪಟ್ಟಣ ಯುದ್ಧದ ಸಮಯದಲ್ಲಿ ಆಂಡ್ರ್ಯೂ ಡಿಕ್ ಗೋಡೆಗಳನ್ನು ಬೀಳಿಸಿ ಒಳ ನುಗ್ಗಲು ಪ್ರಮುಖ ಪಾತ್ರ ವಹಿಸಿದ್ದರು. ಇದರಿಂದಲೇ ಬ್ರಿಟಿಷ್ ಸೇನೆ ಒಳ ನುಗ್ಗಲು ಸಹಕಾರಿ ಆಯಿತು. ಇದು ಅಲ್ಲದೇ ಯುದ್ಧದ ಬಳಿಕ ಟಿಪ್ಪು ಸುಲ್ತಾನ್ ಮೃತದೇಹ ಹುಡುಕುವಲ್ಲಿಯೂ ಆಂಡ್ರ್ಯೂ ಡಿಕ್ ತಂಡ ಸಹಾಯ ಮಾಡಿತು ಎಂದು ಹೇಳಲಾಗುತ್ತದೆ.

ಕ್ಯಾಪ್ಟನ್ ಜೇಮ್ಸ್ ಆಂಡ್ರ್ಯೂ ಡಿಕ್ ಕುಟುಂಬದಲ್ಲೇ ಇದುವರೆಗೂ (2024) ಈ ಖಡ್ಗ ಇತ್ತು. 300 ವರ್ಷಗಳಿಂದ ಡಿಕ್ ಕುಟುಂಬ ಈ ಖಡ್ಗವನ್ನು ಕಾಪಾಡಿಕೊಂಡು ಬಂದಿತ್ತು. ಸದ್ಯ ಡಿಕ್ ವಂಶದವರು ಈ ಖಡ್ಗವನ್ನು ಹರಾಜಿಗಿಟ್ಟಿದ್ದರು. 3.4 ಕೋಟಿ ರೂಪಾಯಿಗೆ ಮಾರಾಟ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment