/newsfirstlive-kannada/media/post_attachments/wp-content/uploads/2025/03/TIRUMAL-TIRUPATI-TEPPOTSAVA.jpg)
ಹಿಂದೂ ಕ್ಯಾಲೆಂಡರ್ ಪ್ರಕಾರ ತಿರುಮಲ ತಿರುಪತಿ ತೆಪ್ಪೋತ್ಸವ ಫಾಲ್ಗುಣ ಮಾಸದಲ್ಲಿ ಆಯೋಜನೆ ಮಾಡಲಾಗುತ್ತದೆ. ಐದು ದಿನಗಳ ಕಾಲ ತಿರುಪತಿಯಲ್ಲಿ ಈ ಸಂಭ್ರಮ ಮನೆ ಮಾಡಿರುತ್ತದೆ. ಗೋವಿಂದ ಗೋವಿಂದ ಎಂದು ನಾಮಸ್ಮರಣೆ ಮಾಡುತ್ತಾ ಈ ಹಬ್ಬವನ್ನು ತಿರುಪತಿಯಲ್ಲಿ ಸಾವಿರಾರು ವರ್ಷಗಳಿಂದ ಆಚರಿಸಿಕೊಂಡು ಬರಲಾಗಿದೆ. ಈ ಬಾರಿ ಅಂದ್ರೆ 2025ರ ಸಾಲಿನ ತೆಪ್ಪೋತ್ಸವವು ಮಾರ್ಚ್ 10 ಅಂದ್ರೆ ನಾಳೆಯಿಂದ ಅದ್ಧೂರಿ ಚಾಲನೆ ಪಡೆಯಲಿದೆ. ನಾಳೆಯಿಂದ ಮಾರ್ಚ್ 14 ವರೆಗೂ ತೆಪ್ಪೋತ್ಸವದ ಸಂಭ್ರಮ ತಿಮ್ಮಪ್ಪನ ಸನ್ನಿಧಿಯಲ್ಲಿ ಕಳೆಗಟ್ಟಲಿದೆ.
ಇದನ್ನೂ ಓದಿ:
ಈ ಐದು ದಿನಗಳ ಕಾಲ ಏಕಾದಶಿ, ದ್ವಾದಶಿ, ತ್ರಯೋದಶಿ, ಚತುರ್ಧಶಿ ಹಾಗೂ ಪೌರ್ಣಿಮೆಯ ದಿನಗಳಲ್ಲಿ ಶ್ರೀವಾರಿ ಸನ್ನಿಧಿಯಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಶ್ರೀ ವೆಂಕಟೇಶ್ವರ ಹೆಸರಿನಲ್ಲಿಯೇ ನಡೆಯುವ ಈ ಐದು ದಿನದ ಕಾರ್ಯಕ್ರಮದಲ್ಲಿ ಸ್ವಾಮಿ ಪುಷ್ಕರಣಿಯಲ್ಲಿ ಸ್ನಾನ ಮಾಡಿ ತಿಮ್ಮಪ್ಪನ ದರ್ಶನ ಪಡೆಯುತ್ತಾರೆ ಭಕ್ತರು. ಇದರಿಂದ ಪಾಪವೆಲ್ಲಾ ನಾಶವಾಗಿ ಹೊಸ ದೈವಿಕ ಶಕ್ತಿಯೊಂದು ತನುಮನದಲ್ಲಿ ಮೂಡುತ್ತದೆ ಎಂಬ ನಂಬಿಕೆ ಇದೆ.
ಇನ್ನು ಈ ತೆಪ್ಪೋತ್ಸವದ ಅಂಗವಾಗಿ ಶ್ರೀವಾರಿಯ ಉತ್ಸವ ಮೂರ್ತಿಯನ್ನು ದೇವಸ್ಥಾನದ ಪ್ರಾಂಗಣದಲ್ಲಿ ಮೆರವಣಿಗೆ ಮಾಡಲಾಗುವುದು. ಮೊದಲನೇ ದಿನ ಭಗವಾನ್ ಶ್ರೀರಾಮ, ಸೀತಾಮಾತೆ, ಲಕ್ಷ್ಮಣ ಹಾಗೂ ಆಂಜನೇಯಸ್ವಾಮಿಗಳ ಉತ್ಸವ ಮೂರ್ತಿಗಳನ್ನು ತಂದು ಪುಷ್ಕರಣಿಯಲ್ಲಿ ಪವಿತ್ರ ಸ್ನಾನ ಮಾಡಿಸಲಾಗುವುದು. ಎರಡನೇ ದಿನ ಶ್ರೀಕೃಷ್ಣ ಹಾಗೂ ಮಾತಾ ರುಕ್ಮಿಣಿ ದೇವಿಯವರ ಉತ್ಸವ ಮೂರ್ತಿಯ ಮೆರವಣಿಗೆ ನಡೆಯುವುದು ಮತ್ತು ಪವಿತ್ರ ಸ್ನಾನವನ್ನು ನೆರವೇರಿಸಲಾಗುತ್ತದೆ. ಇನ್ನು ಕಡೆಯ ದಿನ ಅಂದ್ರೆ ಪೌರ್ಣಿಮೆಯ ದಿನ ಸುಮಾರು 7 ಬಾರಿ ಪವಿತ್ರ ಸ್ನಾನಗಳು ನೇರವೇರುತ್ತವೆ ಎಂದು ಟಿಟಿಡಿ ಆಡಳಿತ ಮಂಡಳಿ ಹೇಳಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ