/newsfirstlive-kannada/media/post_attachments/wp-content/uploads/2024/09/PAWAN-KALYAN-DEEKSHA.jpg)
ತಿರುಪತಿ ತಿಮ್ಮಪ್ಪನ ಪ್ರಸಾದಕ್ಕೆ ಪ್ರಾಣಿ ಕೊಬ್ಬು ಮಿಕ್ಸ್​ ಆಗಿದ್ದ ವಿಚಾರ ಕೋಟ್ಯಂತರ ಭಕ್ತರ ನಂಬಿಕೆಯನ್ನೇ ಘಾಸಿಗೊಳಿಸಿದೆ. ಹಾಗಾಗಿಯೇ ಟಿಟಿಡಿ ಆಗಮಶಾಸ್ತ್ರ ಪಂಡಿತರ ಮೊರೆ ಹೋಗಿದೆ. ಪರಿಹಾರಗಳ ಮೂಲಕ ತಿಮ್ಮಪ್ಪನನ್ನ ಪ್ರಸನ್ನಗೊಳಿಸೋಕೆ ಮುಂದಾಗಿದೆ. ಆಂಧ್ರದ ಡಿಸಿಎಂ ಪವನ್ ಕಲ್ಯಾಣ್ ಪ್ರಾಯಶ್ಚಿತಕ್ಕಾಗಿ 11 ದಿನಗಳ ದೀಕ್ಷೆ ತೊಟ್ಟಿದ್ದಾರೆ. ತಿಮ್ಮಪ್ಪನ ಸನ್ನಿಧಿ ಶುದ್ಧಿಗೊಳಿಸೋದಕ್ಕೆ ಕನಿಷ್ಠ 3 ದಿನ ಬೇಕಾಗುತ್ತದೆ. ಅಷ್ಟೇ ಅಲ್ಲ, ತಿಮ್ಮಪ್ಪನ ಜೀವಕಳೆಯನ್ನೇ ಕಳಶಕ್ಕೆ ತುಂಬಿ ಮಾಡುವ ಪ್ರಕ್ರಿಯೆ ಮೈನವಿರೇಳಿಸುವಂತಿದೆ.
ಸಾಕ್ಷಾತ್​ ತಿಮ್ಮಪ್ಪನಿಗೂ ಅಚ್ಚುಮೆಚ್ಚು ಲಡ್ಡು. ಶ್ರೀನಿವಾಸನೂ ಬಾಯಿ ಚಪ್ಪರಿಸಿಕೊಂಡು ತಿನ್ನುವ ಪದಾರ್ಥ. ತಿರುಪತಿ ತಿಮ್ಮಪ್ಪನ ಪವಿತ್ರ ಪ್ರಸಾದ ಲಡ್ಡು. ಯಾರಿಗೆ ಆಗಲಿ ಲಡ್ಡು ಮುಂದಿಟ್ರೆ ಕಣ್ಣಿಗೆ ಒತ್ತಿಕೊಂಡು ತಿನ್ನುತ್ತಾರೆ. ಕಾರಣ, ಅದು ಸಾಕ್ಷಾತ್ ಶ್ರೀನಿವಾಸನ ಪ್ರಸಾದ ಅಂತ. ಇದು ಕೋಟ್ಯಂತರ ಭಕ್ತರ ಅಚಲ ನಂಬಿಕೆ, ಶ್ರದ್ಧೆ ಹಾಗೂ ವಿಶ್ವಾಸ. ಇಂಥಾ ಭಕ್ತಿ, ನಂಬಿಕೆ, ಶ್ರದ್ಧೆಗೆ ಇದೀಗ ಅಪಚಾರವಾಗಿದೆ. ಹಾಗಾಗಿಯೇ ತಿರುಪತಿ ತಿರುಮಲ ದೇವಸ್ಥಾನಂ ಟ್ರಸ್ಟ್​ ಪರಿಹಾರ ಮಾರ್ಗಕ್ಕೆ ಮೊರೆ ಹೋಗಿದೆ. ಆಗಮಶಾಸ್ತ್ರ ಪಂಡಿತರ ಎದುರು ನಿಂತು ಸಲಹೆ ಕೇಳಿದೆ. ಕೆಲವೇ ದಿನಗಳಲ್ಲಿ ನಡೆಯಲಿರೋ ಬ್ರಹ್ಮಮಹೋತ್ಸವಕ್ಕೆ ಆಂಧ್ರ ಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ಟಿಟಿಡಿ ಆಹ್ವಾನಿಸಿದೆ. ಇದೇ ಹೊತ್ತಿಗೆ ಸರಿಯಾಗಿ ಡಿಸಿಎಂ ಪವನ್ ಕಲ್ಯಾಣ್ ಪ್ರಾಯಶ್ಚಿತ ದೀಕ್ಷೆಯನ್ನು ತೊಟ್ಟಿದ್ದಾರೆ.
/newsfirstlive-kannada/media/post_attachments/wp-content/uploads/2024/09/PAWAN-KALYAN-DEEKSHA-1.jpg)
11 ದಿನಗಳ ಕಾಲ ಗೋವಿಂದ ದೀಕ್ಷೆ ತೊಟ್ಟ ಪವನ್ ಕಲ್ಯಾಣ್!
ತಿಮ್ಮಪ್ಪನ ಸನ್ನಿಧಿಯಲ್ಲಿ ಲಡ್ಡು ಪ್ರಸಾದ ಪವಿತ್ರತೆ ಹಾಳಾಗಿದೆ. ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಲಡ್ಡು ತುಪ್ಪಕ್ಕೆ ಪ್ರಾಣಿ ಕೊಬ್ಬು ಬೆರೆಸಿತ್ತು. ಇಂಥದ್ದೊಂದು ಅಪಚಾರಕ್ಕೆ ತಿಮ್ಮಪ್ಪ ಕೋಪಗೊಂಡಿದ್ದಾನೆ ಅನ್ನೋ ಚರ್ಚೆ ನಡೀತಿತ್ತು. ಹಾಗಾಗಿಯೇ ಆಂಧ್ರ ಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ 11 ದಿನಗಳ ಗೋವಿಂದ ದೀಕ್ಷೆ ತೊಟ್ಟಿದ್ದಾರೆ. ಗುಂಟೂರು ಜಿಲ್ಲೆಯ ನಂಬೂರಿನ ಶ್ರೀ ದಶಾವತಾರ ವೆಂಕಟೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದರು. ಇದೇ ವೇಳೆಯೇ ಪ್ರಾಯಶ್ಚಿತ ದೀಕ್ಷೆಯಾಗಿ ಗೋವಿಂದ ದೀಕ್ಷೆಯನ್ನು ತೊಟ್ಟಿದ್ದಾರೆ. ಹಾಗಾಗಿಯೇ ಕಾಷಾಯ ವಸ್ತ್ರದ ಮಾಲೆಯನ್ನೂ ಧರಿಸಿದ್ದಾರೆ. ಮುಂದಿನ ಹನ್ನೊಂದು ದಿನಗಳ ಕಾಲ ಕಟ್ಟುನಿಟ್ಟಿನ ಉಪವಾಸ ಹಾಗೂ ವ್ರತವನ್ನು ಮಾಡಲಿದ್ದಾರೆ ಪವನ್ ಕಲ್ಯಾಣ್.
ಪ್ರತೀ ಹಿಂದೂ ಇದನ್ನು ಗೌರವಿಸಬೇಕು. ಮೊದಲು ನಿಮ್ಮ ಧರ್ಮವನ್ನು ಗೌರವಿಸಬೇಕು. ಪ್ರತೀ ಹಿಂದೂ ಕಲಿಯಬೇಕು. ಪ್ರತೀ ಹಿಂದೂ ಆತ್ಮಪರಿಶೀಲನೆ ಮಾಡಿಕೊಳ್ಳಬೇಕು. ನೀವು ಹೊರಗೆ ಬರಬೇಕು. ತಪ್ಪು ನಡೆಯುತ್ತಿದ್ದರೆ, ನಮಗೇಕೇ ಬಿಡು ಅಂತ ಕೈ ಕಟ್ಟಿ ಕುಳಿತುಕೊಂಡಿದ್ದರೇ ಹೀಗೇ ಆಗುತ್ತದೆ. ಇದು ಬದಲಾಗಬೇಕು. ಹಾಗಾಗಿಯೇ ನಾನು ಕೂಡ ಇದರ ಭಾಗವೇ ಆಗಿರುವುದರಿಂದ, ಇಷ್ಟು ಸಮಸ್ಯೆ ಹೇಳಿದ್ದಾರೆ, ಇಷ್ಟು ದಿನಗಳಲ್ಲಿ, ವೈಸಿಪಿ ಕಾಲದಲ್ಲಿ ರಸ್ತೆ ಸರಿ ಇಲ್ಲ ಅಂದಿದ್ದಕ್ಕೆ ಹೋರಾಡಿದ್ದೇವೆ. ರೈತನಿಗೆ ಸಮಸ್ಯೆ ಬಂದಾಗ ಮಾತಾಡಿದ್ದೀವಿ. ದೇಗುಲ ಅಪವಿತ್ರಗೊಂಡಿದ್ದಕ್ಕೆ ಮಾತಾಡುತ್ತಿದ್ದೀವಿ. ಆದರೆ, ಇದೆಲ್ಲಾ ನಡೆಯುತ್ತಿದ್ದಾಗಲೂ ಟಿಟಿಡಿ ಕಾರ್ಮಿಕರು ಮೌನವಾಗಿಯೇ ಇದ್ದರು ಎಂದರೇ ನೀವು ಮಹಾ ಅಪರಾಧ ಮಾಡಿದ್ದೀರಿ. ಆ ಮಹಾಪರಾಧಕ್ಕಾಗಿಯೇ ನನಗೆ ಸಂಬಂಧ ಇಲ್ಲದಿದ್ದರೂ, ಈ ದಿನ ನಾನು ಪ್ರಾಯಶ್ಚಿತ ದೀಕ್ಷೆಯನ್ನು ಆರಂಭಿಸಿದ್ದೇನೆ. 11 ದಿನ ಸ್ವಾಮಿಗೆ ಕ್ಷಮೆ ಕೋರುತ್ತಾ ಈ ದೀಕ್ಷೆ ತೆಗೆದುಕೊಂಡಿದ್ದೇನೆ.
- ಪವನ್ ಕಲ್ಯಾಣ್, ಆಂಧ್ರ ಡಿಸಿಎಂ
/newsfirstlive-kannada/media/post_attachments/wp-content/uploads/2024/09/PAWAN-KALYAN-DEEKSHA-2.jpg)
ತಿಳಿದೋ, ತಿಳಿಯದೆಯೋ ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತವಾಗಿ ದೀಕ್ಷೆ!
ತಿಮ್ಮಪ್ಪನ ಸನ್ನಿಧಿಯಲ್ಲಿ ಅಪಚಾರ ಆಗಿದೆ ಅನ್ನೋ ವಿಚಾರವೇ ಕೋಟ್ಯಂತರ ಭಕ್ತರ ನಂಬಿಕೆಯನ್ನು ಅಲುಗಾಡಿಸುತ್ತಿದೆ. ಇದೇ ಹೊತ್ತಿಗೆ ಸರಿಯಾಗಿ ತಿಳಿದೋ, ತಿಳಿಯದೆಯೋ ಮಾಡಿರೋ ತಪ್ಪಿಗೆ ಪ್ರಾಯಶ್ಚಿತ್ತ ಅನುಭವಿಸುವುದು. ಈ ಮೂಲಕ ತಿಮ್ಮಪ್ಪನನ್ನ ಪ್ರಸನ್ನಗೊಳಿಸುವುದು ಒಂದು ಕ್ರಮ. ಆಗಮಶಾಸ್ತ್ರವೂ ಕೂಡ ಇಂಥಾ ಹಲವು ಮಾರ್ಗೋಪಾಯಗಳನ್ನು ಹೇಳುತ್ತಿದೆ. ಈ ಪೈಕಿ ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿಯಾಗಿ ರಾಜನ ಸ್ಥಾನದಲ್ಲಿ ಪವನ್ ಕಲ್ಯಾಣ್ ಗೋವಿಂದ ದೀಕ್ಷೆ ತೊಟ್ಟಿದ್ದಾರೆ. ಅಯ್ಯಪ್ಪನ ಮಾಲೆ ಧರಿಸಿದ ರೀತಿಯಲ್ಲೇ ಇಲ್ಲೂ ಸಾಕಷ್ಟು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುವ ಮೂಲಕ ಗೋವಿಂದನ ಕೃಪೆಗೆ ಪಾತ್ರವಾಗುವ ಕ್ರಮವಿದು. ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ತಣ್ಣೀರಿನ ಸ್ನಾನ ಮಾಡಬೇಕು. ತುಳಸಿ ಮಾಲೆಯನ್ನು ಧರಿಸಬೇಕು. ಸದಾ ಗೋವಿಂದ ನಾಮಸ್ಮರಣೆಯನ್ನು ಮಾಡಬೇಕು. ಸಂಸಾರಿಯಾಗಿದ್ದರೇ ಮನೆಯಿಂದ ದೂರವಿರಬೇಕು. ಕಟ್ಟುನಿಟ್ಟಿನ ಬ್ರಹ್ಮಚರ್ಯೆ ಪಾಲಿಸಬೇಕು. ಒಂದೇ ಒಂದು ಹೊತ್ತಿನ ಊಟವನ್ನಷ್ಟೇ ಮಾಡಬೇಕು. 11 ದಿನ, 22 ದಿನ ಅಥವಾ 40 ದಿನಗಳ ಕಾಲ ಈ ಗೋವಿಂದ ದೀಕ್ಷೆಯನ್ನು ಆಚರಿಸುತ್ತಾರೆ. ಇದೇ ವ್ರತವನ್ನೇ ಇದೀಗ ಪವನ್ ಕಲ್ಯಾಣ್ ಪಾಲಿಸುತ್ತಿದ್ದಾರೆ.
ಪ್ರಾಣಿ ಕೊಬ್ಬು ಬೆರೆತ ತುಪ್ಪದ ಲಡ್ಡು ಪ್ರಸಾದ ಸ್ವೀಕರಿಸಿದ್ರೆ ಪಾಪವೇ?
ಪವನ್ ಕಲ್ಯಾಣ್ ಹನ್ನೊಂದು ದಿನಗಳ ಗೋವಿಂದ ದೀಕ್ಷೆಯನ್ನು ತೊಟ್ಟಿದ್ದಾರೆ. ಆದರೇ, ತಿಮ್ಮಪ್ಪನ ಸನ್ನಿಧಾನದ ಪ್ರಸಾದವೆಂದು ತಿಂದವರು ಏನು ಮಾಡಬೇಕು? ತಿಮ್ಮಪ್ಪನ ಲಡ್ಡು ಪ್ರಸಾದ ಸ್ವೀಕರಿಸಿ ಪೇಚಿಗೆ ಸಿಲುಕಿರುವ ಜನ ಇದೀಗ ಅಕ್ಷರಶಃ ಕಂಗಾಲಾಗಿದ್ದಾರೆ. ಅತ್ತ ತಿರುಪತಿ ತಿರುಮಲ ದೇವಸ್ಥಾನಂ ಟ್ರಸ್ಟ್ ಸಹ ಮಾರ್ಗೋಪಾಯಗಳನ್ನು ಮುಂದಿಟ್ಟುಕೊಂಡು ಚರ್ಚಿಸುತ್ತಿದೆ. ಈ ಮಧ್ಯೆಯೇ ಕೋಟ್ಯಂತರ ಭಕ್ತರಲ್ಲಿ ಇದೀಗ ಎದ್ದಿರೂ ಪ್ರಶ್ನೆ, ಅನುಮಾನ, ಸಂಶಯ ಒಂದೇ ಒಂದು. ಪ್ರಾಣಿ ಕೊಬ್ಬು ಬೆರೆತ ತುಪ್ಪದಿಂದ ತಯಾರಿಸಿದ ಲಡ್ಡು ತಿಂದರೇ ಏನಾಗುತ್ತದೆ? ಎಂತಹ ಪಾಪಕ್ಕೆ ಗುರಿ ಆಗುತ್ತವೆ? ಹೀಗೆ ಮಿಶ್ರಣ ಮಾಡಿ ಲಡ್ಡು ತಯಾರಿಸಿದವರಿಗೆ ಎಂಥಾ ಶಿಕ್ಷೆ ಎದುರಾಗಲಿದೆ? ಅನ್ನೋ ಪ್ರಶ್ನೆಗಳ ಮೂಟೆಯೇ ಮುಂದೆ ನಿಂತಿದೆ. ಆಗಮಶಾಸ್ತ್ರ ಹಾಗೂ ಗರುಡ ಪುರಾಣಗಳಲ್ಲಿ ಮಾಡುವ ಪ್ರತೀ ತಪ್ಪಿಗೂ ಶಿಕ್ಷೆ ಹಾಗೂ ಪ್ರಾಯಶ್ಚಿತ ಮಾರ್ಗಗಳ ಉಲ್ಲೇಖ ಇದ್ದೇ ಇದೆ.
ಇದನ್ನೂ ಓದಿ:Silver Train; ಜೋ ಬೈಡನ್​ಗೆ ಉಡುಗೊರೆ ನೀಡಿದ ಪ್ರಧಾನಿ ನರೇಂದ್ರ ಮೋದಿ; ಏನಿದರ ವಿಶೇಷತೆ?
ಸಾಕ್ಷಾತ್​ ಗರುಡಾದ್ರಿಯ ಮೇಲೆ ನೆಲೆ ನಿಂತಿರೋ ತಿಮ್ಮಪ್ಪ ಇಂಥಾ ಕೆಲಸ ಮಾಡಿದವರಿಗೆ ಘೋರ ಶಿಕ್ಷೆ ನೀಡಲಿದ್ದಾನೆ. ಅದರಲ್ಲೂ, ಗರುಡ ಪುರಾಣದಲ್ಲಿ ಉಲ್ಲೇಖಿಸಿರುವ 28 ಘೋರ ನರಕಗಳಿಗೆ ತಳ್ಳುತ್ತಾನೆ ಅನ್ನೋದನ್ನೇ ಧರ್ಮ ಹೇಳುತ್ತದೆ. ಮಾಡಿದವನಂತೂ ನರಕಕ್ಕೆ ಹೋಗೋದು ಖಚಿತ. ಆದರೇ, ತಿಳಿಯದೇ, ಗೊತ್ತಿಲ್ಲದೇ ಪ್ರಾಣಿ ಕೊಬ್ಬು ಬೆರೆತ ತುಪ್ಪದ ಲಡ್ಡು ತಿಂದ ಭಕ್ತ ಸಮೂಹ ಏನು ಮಾಡಬೇಕು. ಅವರಿಗೂ ಸಹ ಘೋರ ಶಿಕ್ಷೆ ಆಗಲಿದೆಯೇ? ಇಂಥದ್ದೊಂದು ಪ್ರಶ್ನೆಗೆ ಆಧ್ಯಾತ್ಮಿಕ ಚಿಂತಕರಾದ ಡಾ. ಶಲ್ವಪಿಳ್ಳೈ ಅಯ್ಯಂಗಾರ್​ ಸ್ಪಷ್ಟವಾಗಿ ಒಂದು ಸಂದೇಶವನ್ನು ನೀಡಿದ್ದಾರೆ.
/newsfirstlive-kannada/media/post_attachments/wp-content/uploads/2024/09/SHARVAPIALLIA-AYYANGARA.jpg)
ಪ್ರಾಣಿ ಕೊಬ್ಬಿನ ಲಡ್ಡು ತಿಂದ ಪಾಪಕ್ಕೆ ಧರ್ಮಶಾಸ್ತ್ರದಲ್ಲಿದೆ 3 ಪರಿಹಾರ!
ಡಾ. ಶಲ್ವಪಿಳ್ಳೈ ಅಯ್ಯಂಗಾರ್​ ಇಂಥದ್ದೊಂದು ಮಹತ್ವದ ವಿಚಾರವನ್ನು ಧರ್ಮಶಾಸ್ತ್ರಗಳ ಆಧಾರದ ಮೇಲೆ ಹೇಳುತ್ತಿದ್ದಾರೆ. ತಿಮ್ಮಪ್ಪನ ಸನ್ನಿಧಿಯಲ್ಲಿ ಆಗಿರೋ ಬಹುದೊಡ್ಡ ಅಪಚಾರಕ್ಕೆ ತಪ್ಪಿತಸ್ಥರನ್ನು ಶ್ರೀನಿವಾಸನೇ ಶಿಕ್ಷಿಸಲಿದ್ದಾನೆ. ಆದರೇ, ಭಕ್ತ ಕೋಟಿ ಪ್ರಾಣಿ ಕೊಬ್ಬು ಬೆರೆತ ಲಡ್ಡು ತಿಂದ ತಪ್ಪಿಗೆ ಪರಿತಪಿಸಬೇಕಿಲ್ಲ. ಯಾಕೆ ಎಂದರೇ, ತಿಳಿಯದೇ ಮಾಡಿದ ತಪ್ಪದು. ಅಲ್ಲದೇ, ಸಾಕ್ಷಾತ್​ ತಿಮ್ಮಪ್ಪನ ಪ್ರಸಾದವೆಂದೇ ತಿಂದಿದ್ದು ಘೋರ ತಪ್ಪಲ್ಲ. ವೆಂಕಟೇಶ್ವರನ ಪಾದ ಸ್ಪರ್ಶಿಸಿದರೇ ಸಾಕು ಯಾವುದೇ ತೊಡಕು ಎದುರಾಗೋದಿಲ್ಲ. ಶುಭ್ರವಾಗಿ ಸ್ನಾನ ಮಾಡಿಕೊಂಡು ತಿಮ್ಮಪ್ಪನ ಫೋಟೋಗೆ ಕೈ ಮುಗಿದರೂ ಸಾಕು ಏನಂದ್ರೆ ಏನೂ ಆಗೋದಿಲ್ಲ ಅನ್ನೋದನ್ನ ಶಲ್ವಪಿಳ್ಳೈ ಅಯ್ಯಂಗಾರ್ ಹೇಳುತ್ತಿದ್ದಾರೆ. ಅಷ್ಟಕ್ಕೂ ಇನ್ನುಳಿದ ಬಹುಮುಖ್ಯ ಮೂರು ಪರಿಹಾರ ಮಾರ್ಗಗಳೇನು ಗೊತ್ತಾ? ಅದಕ್ಕೂ ಮುನ್ನ ತಿಮ್ಮಪ್ಪನ ಸನ್ನಿಧಿಯಲ್ಲಿ ಏನಾಗಬೇಕಿದೆ? ಶ್ರೀನಿವಾಸನನ್ನ ಶಾಂತಗೊಳಿಸೋದಕ್ಕೆ ಇರೋ ಕ್ರಮಗಳೇನು ಗೊತ್ತಾ? ಈ ಬಗ್ಗೆ 56 ವರ್ಷ ಕಾಲ ವೆಂಕಟೇಶ್ವರನ ಗರ್ಭಗುಡಿಯಲ್ಲಿ ಆರಾಧನಾ ಸೇವೆ ಮಾಡಿ ಅನುಭವ ಇರೋ ಮಾಜಿ ಪ್ರಧಾನ ಅರ್ಚಕ ರಮಣ ದೀಕ್ಷಿತರು 4 ಮಾರ್ಗೋಪಾಯಗಳನ್ನು ಹೇಳಿದ್ದಾರೆ.
ಇದನ್ನೂ ಓದಿ:ತಿಮ್ಮಪ್ಪನ ಲಡ್ಡುವಿನಲ್ಲಿ ಕಲಬೆರಕೆ; ಪ್ರಾಯಶ್ಚಿತ್ತ ದೀಕ್ಷಾ ಕೈಗೊಂಡ ಪವನ್ ಕಲ್ಯಾಣ್
ತಿರುಮಲದಲ್ಲಿ ಅಪಚಾರಗಳು ನಡೆದರೇ ಅದಕ್ಕೆ ಶುದ್ಧೀಕರಣ ಸಲಹೆಗಳು ಆಗಮಶಾಸ್ತ್ರದಲ್ಲಿ ಅಡಗಿದೆ. ಲಘು ಸಂಪ್ರೋಕ್ಷಣ, ಜಲ ಸಂಪ್ರೋಕ್ಷಣ, ಪೂರ್ತಿಯಾಗಿ ಪುಣ್ಯವಚನವಾಗಲಿ ಅಥವಾ ಮಹಾ ಸಂಪ್ರೋಕ್ಷಣ ಮಾಡೋದಾಗಲಿ. ಆಯಾ ಅಪಚಾರದ ಇತಿಮಿತಿಗಳನ್ನು ಗಮನಿಸಿ, ಆಯಾ ಅಪಚಾರಗಳ ಲಕ್ಷಣಗಳನ್ನು ನೋಡಿಕೊಂಡು ಆಗಮಶಾಸ್ತ್ರ ನಿರ್ಧರಿಸಲಿದೆ. ಇದಕ್ಕೆ ಆಗಮಶಾಸ್ತ್ರ ನಿಪುಣರ ಸಲಹೆ ಪಡೆದುಕೊಳ್ಳಬೇಕಾಗುತ್ತದೆ.
ಆಗಮಶಾಸ್ತ್ರದಲ್ಲಿ ಎಲ್ಲವೂ ಅಡಗಿದೆ. ಅಚಾತುರ್ಯದಿಂದ ಆಗುವ ಅಪಚಾರಕ್ಕೆ ಪರಿಹಾರಗಳೂ ಇವೆ ಅನ್ನೋ ಮಾತನ್ನು ರಮಣ ದೀಕ್ಷಿತರು ಹೇಳುತ್ತಿದ್ದಾರೆ. ಬಹುಮುಖ್ಯವಾಗಿ ಲಘು ಸಂಪ್ರೋಕ್ಷಣ, ಜಲ ಸಂಪ್ರೋಕ್ಷಣ, ಪುಣ್ಯವಚನ, ಮಹಾ ಸಂಪ್ರೋಕ್ಷಣಗಳೆಂಬ ಪರಿಹಾರಗಳ ಮೂಲಕ ದೇವರನ್ನು ಸಂತೈಸಬಹುದು. ಇದರಿಂದಾಗಿ ಕೋಪಗೊಂಡ ಶ್ರೀನಿವಾಸ ಶಾಂತನಾಗಬಹುದು. ಇದರಿಂದಾಗಿ ಪ್ರಸನ್ನಗೊಳ್ಳುವ ತಿಮ್ಮಪ್ಪನ ಜಗತ್ತಿಗೆ ಒಳಿತನ್ನು ಮಾಡಬಲ್ಲ ಅನ್ನೋ ಸಲಹೆ ನೀಡಿದ್ದಾರೆ. ಇಲ್ಲಿ ಬಹುಮುಖ್ಯ ಅನಿಸೋ ಸಂಗತಿ ಏನು ಗೊತ್ತಾ? ಸುದೀರ್ಘ 3 ದಿನಗಳ ಕಾಲ ತಿಮ್ಮಪ್ಪನ ಸನ್ನಿಧಿಯಲ್ಲಿ ಶುದ್ಧೀಕರಣ ಕಾರ್ಯ ಶುರುವಾಗಲಿದೆ. ಈ ಸಂದರ್ಭ ತಿಮ್ಮಪ್ಪನ ದೈವ ಕಳೆ ಹಾಗೂ ಜೀವ ಕಳೆ ಮೂರೇ ಮೂರು ಕಳಶಕ್ಕೆ ಬಂದು ಸೇರಲಿದೆ. ಸುಟ್ಟ ಮನುಷ್ಯನನ್ನ ಸಹ ಬದುಕಿಸಬಹುದಾದ ಮಹತ್ವದ ಪದಾರ್ಥಗಳು ಆ ದಿನ ತಿಮ್ಮಪ್ಪನ ಸನ್ನಿಧಿಗೆ ಬರಲಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us