/newsfirstlive-kannada/media/post_attachments/wp-content/uploads/2024/11/TTD.jpg)
ತಿರುಮಲ ತಿರುಪತಿ ದೇವಸ್ಥಾನದಲ್ಲಿ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಆಫೀಸರ್ ಆಗಿದ್ದುಕೊಂಡು ಕ್ರಿಶ್ಚಿಯನ್ ಧರ್ಮ ಪಾಲಿಸುತ್ತಿದ್ದ ರಾಜಶೇಖರ್ ಬಾಬುವನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಟಿಟಿಡಿಯಲ್ಲಿ ಉದ್ಯೋಗಕ್ಕೆ ಸೇರುವಾಗ ಹಿಂದೂ ಧರ್ಮವನ್ನು ಪಾಲಿಸುತ್ತೇನೆ ಎಂದು ಘೋಷಣೆ ಮಾಡಿಕೊಂಡು ರಾಜಶೇಖರ್ ಬಾಬು ಉದ್ಯೋಗಕ್ಕೆ ಸೇರಿದ್ದರು. ಆದರೆ, ಈ ನಿಯಮವನ್ನು ಉಲ್ಲಂಘಿಸಿ, ಪ್ರತಿ ಭಾನುವಾರ ಚರ್ಚ್ಗೆ ಹೋಗಿ ಪ್ರಾರ್ಥನೆ ಸಲ್ಲಿಸುತ್ತಿದ್ದಿದ್ದು ಗಮನಕ್ಕೆ ಬಂದ ಬಳಿಕ ಟಿಟಿಡಿ ರಾಜಶೇಖರ್ ಬಾಬುವನ್ನು ಸೇವೆಯಿಂದ ಅಮಾನತು ಮಾಡುವ ತೀರ್ಮಾನಕ್ಕೆ ಬಂದಿದೆ.
ಇದನ್ನೂ ಓದಿ: ಅಲಿಯಾ ಭಟ್ಗೆ ಲಕ್ಷ ಲಕ್ಷ ವಂಚನೆ, ಬೆಂಗಳೂರಲ್ಲಿ ಆಪ್ತ ಸಹಾಯಕಿ ಅರೆಸ್ಟ್.. ಈಕೆ ವಂಚಿಸಿದ್ದೇ ಸಖತ್ ಇಂಟರೆಸ್ಟಿಂಗ್
ರಾಜಶೇಖರ್ ಬಾಬು ಪ್ರತಿ ಭಾನುವಾರ ತಿರುಪತಿ ಜಿಲ್ಲೆಯ ತನ್ನ ಹೋಮ್ ಟೌನ್ ಪುತ್ತೂರುನ ಚರ್ಚ್ಗೆ ಹೋಗಿ ಪ್ರಾರ್ಥನೆ ಸಲ್ಲಿಸುತ್ತಿರುವುದು ಇತ್ತೀಚೆಗೆ ಟಿಟಿಡಿ ಮ್ಯಾನೇಜ್ ಮೆಂಟ್ ಗಮನಕ್ಕೆ ಬಂದಿದೆ. ಇದು ಟಿಟಿಡಿ ನಿಯಮಗಳ ಉಲಂಘನೆ. ರಾಜಶೇಖರ್ ಬಾಬು ಟಿಟಿಡಿ ಉದ್ಯೋಗಿಯಾಗಿ ಕೋಡ್ ಆಫ್ ಕಂಡಕ್ಟ್ ಅನ್ನು ಫಾಲೋ ಮಾಡುತ್ತಿಲ್ಲ. ರಾಜಶೇಖರ್ ಬಾಬು ಬೇಜವಾಬ್ದಾರಿಯಾಗಿ ವರ್ತಿಸಿದ್ದಾರೆ. ಹಿಂದೂ ಧಾರ್ಮಿಕ ಸಂಘಟನೆಯ ಪ್ರತಿನಿಧಿಸುತ್ತಾ, ಉದ್ಯೋಗಿಯಾಗಿ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ ಎಂದು ಟಿಟಿಡಿ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ.
ಟಿಟಿಡಿ ಉದ್ಯೋಗಿಯಾಗಿ ಸೇವೆಗೆ ಸೇರುವಾಗ, ಪ್ರಮಾಣವಚನ ಸ್ವೀಕರಿಸಬೇಕು. ಹಿಂದೂ ಧರ್ಮವನ್ನು ಪಾಲಿಸುತ್ತೇವೆ, ಹಿಂದೂ ಧರ್ಮವನ್ನು ಅನುಸರಿಸುತ್ತಾ, ಸಂಪ್ರದಾಯ ಪಾಲಿಸುತ್ತೇವೆ ಎಂದು ಘೋಷಣೆಗೆ ಸಹಿ ಹಾಕಬೇಕು. ಟಿಟಿಡಿ ವಿಜಿಲೆನ್ಸ್ ವಿಭಾಗವು, ರಾಜಶೇಖರ್ ಬಾಬು ಬಗ್ಗೆ ತನಿಖೆ ನಡೆಸಿ ಸಾಕ್ಷ್ಯಗಳನ್ನು ಕಲೆ ಹಾಕಿತ್ತು.
ಈ ಬಗ್ಗೆ ಟಿಟಿಡಿಗೆ ವರದಿ ನೀಡಿತ್ತು. ಈ ವರದಿ ಆಧಾರದ ಮೇಲೆ ನಿಯಮಗಳ ಪ್ರಕಾರ, ಕ್ರಮ ತೆಗೆದುಕೊಳ್ಳಲಾಗಿದೆ. ಟಿಟಿಡಿ ಮ್ಯಾನೇಜ್ ಮೆಂಟ್ 2024ರ ನವಂಬರ್ 18 ರಂದು ನಡೆದ ಬೋರ್ಡ್ ಸಭೆಯಲ್ಲಿ ಹಿಂದೂಯೇತರ ಉದ್ಯೋಗಿಗಳನ್ನು ತಿರುಮಲ ದೇವಸ್ಥಾನದ ಸೇವೆಯಿಂದ ಬಿಡುಗಡೆಗೊಳಿಸಿ, ಸರ್ಕಾರದ ವಿವಿಧ ಇಲಾಖೆಗಳಿಗೆ ಕಳಿಸಲು ನಿರ್ಧಾರ ತೆಗೆದುಕೊಂಡಿತ್ತು. 2018ರ ವರದಿಯ ಪ್ರಕಾರ, ಟಿಟಿಡಿಯಲ್ಲಿ ಹಿಂದೂ ಧರ್ಮವನ್ನು ಬಿಟ್ಟು ಬೇರೆ ಧರ್ಮದ 44 ಮಂದಿ ಉದ್ಯೋಗಿಗಳು ಕೆಲಸ ಮಾಡುತ್ತಿದ್ದರು. ಬೇರೆ ಧರ್ಮದ ಉದ್ಯೋಗಿಗಳನ್ನು ಸರ್ಕಾರದ ವಿವಿಧ ಇಲಾಖೆಗೆ ಕಳಿಸಲು ಕಳೆದ ವರ್ಷವೇ ಟಿಟಿಡಿ ತೀರ್ಮಾನ ತೆಗೆದುಕೊಂಡಿತ್ತು.
View this post on Instagram
ಆಂಧ್ರದ ಸಿಎಂ ಚಂದ್ರಬಾಬು ನಾಯ್ಡು ಕೂಡ ಬೇರೆ ಧರ್ಮದ ಉದ್ಯೋಗಿಗಳನ್ನು ಟಿಟಿಡಿಯಿಂದ ಬಿಡುಗಡೆ ಮಾಡುವಂತೆ ಸೂಚಿಸಿದ್ದರು. ಆದರೂ ರಾಜಶೇಖರ್ ಬಾಬು ಟಿಟಿಡಿಯಿಂದ ಬಿಡುಗಡೆ ಆಗಿರಲಿಲ್ಲ. ಈಗ ಕ್ರಿಶ್ಚಿಯನ್ ಧರ್ಮ ಪಾಲಿಸುತ್ತಿರುವುದು ಪ್ರತಿ ಭಾನುವಾರ ಚರ್ಚ್ಗೆ ಭೇಟಿ ನೀಡಿದ್ದರಿಂದ ಧೃಢಪಟ್ಟಿದೆ. ಹೀಗಾಗಿ ರಾಜಶೇಖರ್ ಬಾಬುರನ್ನು ಟಿಟಿಡಿ ಸೇವೆಯಿಂದ ಸಸ್ಪೆಂಡ್ ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ