/newsfirstlive-kannada/media/post_attachments/wp-content/uploads/2025/01/TIRUPATI_TEMPLE.jpg)
ತಿರುಪತಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇದೇ ಮೊದಲ ಬಾರಿಗೆ ಈ ಘಟನೆ ನಡೆದಿದೆ. ಭಕ್ತರ ನಡುವೆ ತಳ್ಳಾಟ ನೂಕಾಟದಿಂದ ಕಾಲ್ತುಳಿತ ಸಂಭವಿಸಿದೆ. ಘಟನೆ ಬಗ್ಗೆ ಪ್ರಧಾನಿ ಮೋದಿ, ವಿಪಕ್ಷ ನಾಯಕ ರಾಹುಲ್ ಗಾಂಧಿ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.
ಸರತಿ ಸಾಲಿನಲ್ಲಿ ನುಗ್ಗಿ ಬಂದ ಜನಸಾಗರ
ವೈಕುಂಠ ಏಕಾದಶಿಯ ಟಿಕೆಟ್ ಪಡೆಯುವ ಹಿನ್ನೆಲೆಯಲ್ಲಿ ಭಕ್ತಕೋಟಿ ನಡುವೆ ನೂಕು ನುಗ್ಗಲು ಸಂಭವಿಸಿ ಕಾಲ್ತುಳಿತ ಉಂಟಾಗಿದೆ. ತಿರುಪತಿ ವೆಂಕಟೇಶ್ವರನ ಸನ್ನಿಧಿಯಲ್ಲಿ ಇಂಥದ್ದೊಂದು ಘಟನೆ ನಡೆಯುತ್ತೆ ಅನ್ನೋ ಅಂದಾಜಯ ಇರಲೇ ಇಲ್ಲ. ಆದರೆ ಅನಾಹುತ ಸಂಭವಿಸಿರುವುದು ನಷ್ಟ ಉಂಟುಮಾಡಿದೆ. ವೈಕುಂಠ ದ್ವಾರ ದರ್ಶನದ ಟೋಕನ್ ಪಡೆದುಕೊಳ್ಳುವ ದಾವಂತವೊಂದು ಈ ದುರಂತಕ್ಕೆ ಕಾರಣವಾಗಿದೆ.
ತಿಮ್ಮಪ್ಪನ ಸನ್ನಿಧಿಯಲ್ಲಿ ಆಗಿದ್ದೇನು?
- ಶುಕ್ರವಾರ ಜನವರಿ 10 ರಿಂದ ವೈಕುಂಠ ಏಕಾದಶಿ ಇದೆ
- 12ರ ವರೆಗೆ ವೈಕುಂಠ ದ್ವಾರ ದರ್ಶನಕ್ಕೆ ಟಿಟಿಡಿ ವ್ಯವಸ್ಥೆ
- 3 ದಿನಗಳಿಗಾಗಿ ಒಟ್ಟು 1.20 ಲಕ್ಷ ಟೋಕನ್ ವಿತರಣೆ
- ದಿನಕ್ಕೆ 40 ಸಾವಿರದಂತೆ ಟಿಕೆಟ್ ವಿತರಿಸಲು ಯೋಜನೆ
- ಬೆಳಗ್ಗೆ 5 ಗಂಟೆಗೆ ಶ್ರೀನಿವಾಸಂ, ಸತ್ಯನಾರಾಯಣಪುರಂ
- ಬೈರಾಗಿಪಟ್ಟೆಡ ಸೇರಿ 9 ಕಡೆ 94 ಕೌಂಟರ್‌ಗಳ ಸ್ಥಾಪನೆ
- ಈ ಕೌಂಟರ್ಗಳಲ್ಲಿ ವೈಕುಂಠ ದ್ವಾರ ದರ್ಶನ ಟಿಕೆಟ್
- ಟೋಕನ್‌ಗಳಿಗಾಗಿ ಸಂಜೆಯೇ ಜಮಾಯಿಸಿದ ಭಕ್ತರು
- ಈ ವೇಳೆ ಟಿಕೆಟ್ ಕೌಂಟರ್ ಸಿಬ್ಬಂದಿಯೊಬ್ಬರು ಅಸ್ವಸ್ಥ
- ಸಿಬ್ಬಂದಿಯನ್ನ ಹೊರಗೆ ಕರೆದೊಯ್ಯಲು ಗೇಟ್ ಓಪನ್
- ಗೇಟ್ ಓಪನ್ ಆಗ್ತಿದ್ದಂತೆ ಗೇಟ್ನತ್ತ ನುಗ್ಗಲು ಭಕ್ತರ ಯತ್ನ
- ಕಾಲ್ತುಳಿತ ಸಂಭವಿಸಿ ಹಾರಿ ಹೋದ 6 ಜನರ ಪ್ರಾಣಪಕ್ಷಿ
ಇನ್ನು, ಘಟನೆ ಸಂಬಂಧಿಸಿ ಟಿಟಿಡಿ ಆಡಳಿತ ಮಂಡಳಿಯ ಅಧ್ಯಕ್ಷ ಬಿ.ಆರ್.ನಾಯ್ಡು ಅವರು ತುರ್ತು ಸಭೆ ನಡೆಸಿದ್ದಾರೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಇವತ್ತು ತಿರುಪತಿಗೆ ಭೇಟಿ ನೀಡಲಿದ್ದಾರೆ. ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿ, ಬಳಿಕ ಆಸ್ಪತ್ರೆಗೆ ತೆರಳಿ ಗಾಯಾಳುಗಳ ಆರೋಗ್ಯ ವಿಚಾರಿಸಲಿದ್ದಾರೆ.
ಇದನ್ನೂ ಓದಿ: ತಿಮ್ಮಪ್ಪನ ಸನ್ನಿಧಿಯಲ್ಲಿ ಪ್ರಾಣಬಿಟ್ಟ 6 ಭಕ್ತರು.. ಕಾಲ್ತುಳಿತ ಸ್ಥಳಕ್ಕೆ ಇಂದು CM ಭೇಟಿ..
ಪ್ರಧಾನಿ ಮೋದಿ, ವಿಪಕ್ಷ ನಾಯಕ ರಾಹುಲ್ ಗಾಂಧಿ ಸಂತಾಪ
ದುರಂತ ಬಗ್ಗೆ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದು ತಿರುಪತಿಯಲ್ಲಿ ಸಂಭವಿಸಿದ ಕಾಲ್ತುಳಿತದಿಂದ ನೋವಾಗಿದೆ. ಘಟನೆಯಲ್ಲಿ ಗಾಯಗೊಂಡವರು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ. ಸಂತ್ರಸ್ತರಿಗೆ ಆಂಧ್ರ ಪ್ರದೇಶ ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ ಅಂತ ಹೇಳಿದ್ದಾರೆ. ಇನ್ನು, ವಿಪಕ್ಷ ನಾಯಕ ರಾಹುಲ್ ಸಹ ತಮ್ಮ ಕಾರ್ಯಕರ್ತರಿಗೆ ಸಹಾಯಹಸ್ತ ಚಾಚುವಂತೆ ಕೋರಿದ್ದಾರೆ.
ಘಟನೆಯಲ್ಲಿ ಭದ್ರತಾ ಲೋಪವೂ ಎದ್ದು ಕಾಣಿಸುತ್ತಿದೆ. ಟಿಕೆಟ್ ನೀಡುವ ಮುನ್ನ ಕೌಂಟರ್ಗಳಲ್ಲಿ ಯಾವುದೇ ವ್ಯವಸ್ಥೆ ಮಾಡಿಲ್ಲ. ಹೀಗಾಗಿ ನೂಕುನುಗ್ಗಲು ಉಂಟಾಗಿದೆ ಅಂತ ಭಕ್ತರು ಆಕ್ರೋಶ ಹೊರಾಗಿದ್ದಾರೆ. ತಿರುಪತಿ ಸನ್ನಿಧಾನದಲ್ಲಿ ನಡೆದ ಮೊದಲ ದುರಂತ ಇದಾಗಿದ್ದು, ಭಕ್ತರ ಸುರಕ್ಷತೆಗೆ ಸರ್ಕಾರ ಮತ್ತು ಟಿಟಿಡಿ ಕಾಳಜಿ ವಹಿಸಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ