ವೈಕುಂಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಹೇಗಿರುತ್ತೆ? 7 ಲಕ್ಷ ಭಕ್ತರಿಗಾಗಿ TTD ಮಹತ್ವದ ನಿರ್ಧಾರ!

author-image
Gopal Kulkarni
Updated On
ವೈಕುಂಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಹೇಗಿರುತ್ತೆ? 7 ಲಕ್ಷ ಭಕ್ತರಿಗಾಗಿ TTD ಮಹತ್ವದ ನಿರ್ಧಾರ!
Advertisment
  • ವೈಕುಂಠ ಏಕಾದಶಿ ಸಂಭ್ರಮಕ್ಕೆ ತಿಮ್ಮಪ್ಪನ ಸನ್ನಿಧಿ ಸಜ್ಜು
  • ಈ ಬಾರಿ 7 ಲಕ್ಷ ಭಕ್ತಾದಿಗಳ ದರ್ಶನಕ್ಕಾಗಿ ವಿಶೇಷ ವ್ಯವಸ್ಥೆ
  • 10 ದಿನಗಳ ಕಾಲ ದ್ವಾರ ದರ್ಶನಕ್ಕೆ TTDಯಿಂದ ಅವಕಾಶ

ವೈಕುಂಠ ಏಕಾದಶಿಗೆ ದಿನಗಣನೆ ಶುರುವಾಗಿದೆ. ಈ ದಿನದಂದು ತಿರುಪತಿ ತಿಮ್ಮಪ್ಪನ ದರ್ಶನ ಮಾಡುವುದು ತುಂಬಾ ಶ್ರೇಷ್ಠ ಎಂಬ ಮಾತುಗಳು ಇವೆ. ಇದೇ ದಿನ ಸ್ವರ್ಗದ ಬಾಗಿಲುಗಳು ತೆರೆಯಲಿವೆ ಎಂಬ ನಂಬಿಕೆ ಸಹಸ್ರಾರು ವರ್ಷಗಳಿಂದ ಇದೆ. ಅದು ಮಾತ್ರವಲ್ಲ ವಿಷ್ಣುವು ಗರುಡವಾಹನದೊಂದಿಗೆ ಮುಕ್ಕೋಟಿ ದೇವತೆಗಳೊಂದಿಗೆ ಬಂದು ಭಕ್ತರಿಗೆ ದರ್ಶನ ನೀಡುತ್ತಾನೆ ಎಂಬ ನಂಬಿಕೆಯೂ ಕೂಡ ಇದೆ. ಹೀಗಾಗಿ, ವೈಕುಂಠ ಏಕಾದಶಿ ಬಂದರೆ ಸಾಕು ತಿರುತಪತಿ ತಿರುಮಲ ದೇವಸ್ಥಾನ ಭಕ್ತಸಾಗರದಿಂದ ತುಂಬಿ ತುಳುಕುತ್ತದೆ. ಲಕ್ಷಾಂತರ ಭಕ್ತರು ಅಂದು ಬಂದು ತಿರುಪತಿ ತಿಮ್ಮಪ್ಪನ ದರ್ಶನ ಮಾಡಿಕೊಂಡು ಹೋಗುತ್ತಾರೆ. ಹೀಗಾಗಿ ಈ ಬಾರಿಯ ವೈಕುಂಠ ಏಕಾದಶಿಯಂದು ಬರುವ ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ ಎಲ್ಲಾ ವ್ಯವಸ್ಥೆಗಳನ್ನು ಟಿಟಿಡಿ ಮಾಡಿಕೊಂಡಿದೆ.

ಈ ಬಗ್ಗೆ ಮಾತನಾಡಿರುವ ತಿರುಮಲ ತಿರುಪತಿ ದೇವಸ್ಥಾನದ ಕಾರ್ಯ ನಿರ್ವಾಹಕ ಅಧಿಕಾರಿ ಜೆ ಶ್ಯಾಮಲಾ ರಾವ್, ವೈಕುಂಠ ಏಕಾದಶಿಯಂದು ದ್ವಾರ ದರ್ಶನಕ್ಕೆ ಪ್ರಮುಖ ಆದ್ಯತೆಯನ್ನು ನೀಡಲಾಗುತ್ತದೆ ಎಂದು ಹೇಳಿದ್ದಾರೆ. ವೈಕುಂಠ ಏಕಾದಶಿ ಹಾಗೂ ವೈಕುಂಠ ದ್ವಾರ ದರ್ಶನದ ಅವಧಿ ಜನವರಿ 10 ರಿಂದ 19ರವರೆಗೆ ಇರಲಿದೆ. ಹೀಗಾಗಿ ಈ ಬಾರಿ ಭಕ್ತಾದಿಗಳಿಗೆ ಅನುಕೂಲವಾಗುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಶ್ಯಾಮಲಾ ರಾವ್ ಹೇಳಿದ್ದಾರೆ.

publive-image

ಈ ಬಾರಿ ತಿರುಪತಿ ತಿರುಮಲ ಸನ್ನಿಧಿಗೆ ಒಟ್ಟು 7 ಲಕ್ಷಕ್ಕೂ ಅಧಿಕ ಭಕ್ತಾದಿಗಳು ಆಗಮಿಸುವ ನಿರೀಕ್ಷೆಯಿದ್ದು ಒಟ್ಟು ಹತ್ತು ದಿನಗಳ ಕಾಲ ವೈಕುಂಠ ದ್ವಾರವನ್ನು ತೆರೆದಿಡಲಾಗುವುದು ಎಂದು ಹೇಳಿದ್ದಾರೆ. ದೇವರ ದರ್ಶನ ಸರಳ ಹಾಗೂ ಸಾಂಗವಾಗಿ ನೇರವೇರಿಸಲು ಹಲವು ನಿಯಮಗಳನ್ನು ಮಾಡಲಾಗಿದೆ. ಜನವರಿ 10 ರಿಂದ 4.30ಕ್ಕೆ ದರ್ಶನ ಆರಂಭವಾಗಲಿದ್ದು ಸರ್ವ ದರ್ಶನ ಬೆಳಗ್ಗೆ 8 ಗಂಟೆಗೆ ಇರಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಅಯೋಧ್ಯೆಯಲ್ಲಿ ಭಾರೀ ಭದ್ರತಾ ಲೋಪ; ಅಧಿಕಾರಿಗಳನ್ನ ಬೆಚ್ಚಿಬೀಳಿಸಿದ ಆರೋಪಿಯ ಕನ್ನಡಕ..!

ವೈಕುಂಠ ಏಕಾದಶಿಯಂದು ಭಕ್ತಾದಿಗಳು ಮಲಯಪ್ಪಾ ದೇವರನ್ನು ಶ್ರೀದೇವಿ ಭೂದೇವಿಯೊಂದಿಗೆ ಬಂಗಾರದ ರಥದಲ್ಲಿ ಮೂರು ಪ್ರಮುಖ ಬೀದಿಗಳಲ್ಲಿ ನಡೆಯುವ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ. ಬೆಳಗ್ಗೆ 9 ರಿಂದ 12 ಗಂಟೆಗೆ ಮಧ್ಯಾಹ್ನ 12 ರಿಂದ 4 ಗಂಟೆಯವರೆಗೆ ಮಲಯಪ್ಪಾ ಸ್ವಾಮಿ ಶ್ರೀದೇವಿ, ಭೂದೇವಿಯೊಂದಿಗೆ ಭಕ್ತಾದಿಗಳಿಗೆ ವಾಹನ ಮಂಟಪಂ ಬಳಿ ದರ್ಶನ ನೀಡಲಿದ್ದಾನೆ ಎಂದು ಹೇಳಿದ್ದಾರೆ.

publive-image

ವೈಕುಂಠ ಏಕಾದಶಿಯ ನಿಮಿತ್ಯವಾಗಿ ವಿಶೇಷ ಚಕ್ರ ಸ್ನಾನವನ್ನು ಬೆಳಗ್ಗೆ 5.30 ರಿಂದ 6.30ರವರೆಗೆ ಏರ್ಪಡಿಸಲಾಗಿದೆ ಎಂದು ಎಂದು ಹೇಳೀದ್ದಾರೆ. ಸರ್ವದರ್ಶನಕ್ಕಾಗಿ ಭಕ್ತಾದಿಗಳಿಗೆ ಒಟ್ಟು 90 ಕೌಂಟರ್​ಗಳಲ್ಲಿ ಟೋಕನ್​ಗಳನ್ನು ನೀಡಲಾಗುವುದು. ತಿರುಪತಿ ಒಟ್ಟು ಎಂಟು ಕೇಂದ್ರಗಳಲ್ಲಿ ಹಾಗೂ ತಿರುಮಲದ ನಾಲ್ಕು ಕೇಂದ್ರಗಳಲ್ಲಿ ಕೌಂಟರ್​ಗಳಿವೆ. ಜನವರಿ 9 ರಿಂದ ಟೋಕನ್ ನೀಡಲು ಆರಂಭಿಸುತ್ತವೆ ಎಂದು ಹೇಳಿದ್ದಾರೆ. ಜನವರಿ 10,11 ಮತ್ತು 12ರಂದು ಅತಿಹೆಚ್ಚು ಭಕ್ತಾದಿಗಳು ಆಗಮಿಸುವ ನಿರೀಕ್ಷೆಯೂ ಕೂಡ ಇದೆ.

ಇದನ್ನೂ ಓದಿ:2025ರ ಮಹಾಕುಂಭ ಮೇಳಕ್ಕೆ ಭಯೋತ್ಪಾದಕ ಸಂಘಟನೆಯಿಂದ ಬೆದರಿಕೆ

publive-image

ಸೀಮಿತ ಮಟ್ಟದಲ್ಲಿ ವಸತಿ ಸೌಕರ್ಯವಿದೆ. ಯಾರು ಟೋಕನ್ ಹಾಗೂ ಟಿಕೆಟ್ ತೆಗೆದುಕೊಂಡಿರುತ್ತಾರೋ ಅವರಿಗೆ ಸರತಿ ಸಾಲಿನಲ್ಲಿ ಬಿಡಲಾಗುವುದು ಟೋಕನ್ ಮತ್ತು ಟಿಕೆಟ್ ಮೇಲೆ ದರ್ಶನದ ಸಮಯವನ್ನು ನಮೂದಿಸಲಾಗಿರುವುದು. ಒಟ್ಟು 12 ಸಾವಿರ ವಾಹನಗಳಿಗೆ ವಿವಿಧ ಪ್ರದೇಶದಲ್ಲಿ ಪಾರ್ಕಿಂಗ್​ ವ್ಯವಸ್ಥೆ ಕಲ್ಪಿಸಲಾಗಿದೆ. ಎಂಬಿಸಿ ಔಟರ್ ರಿಂಗ್​ ರೋಡ್​ ಮತ್ತು ಆರ್​ಬಿಜಿರ್ ಪ್ರದೇಶಗಳಲ್ಲಿ ಪಾರ್ಕಿಂಗ್​ ವ್ಯವಸ್ಥೆ ಮಾಡಲಾಗಿದೆ ಎಂದು ಶ್ಯಾಮಲಾ ರಾವ್ ಹೇಳಿದ್ದಾರೆ.

ಅನ್ನಪ್ರಸಾದ ಸೇರಿದಂತೆ ಹಲವು ಸೇವೆಗಳನ್ನು ನೀಡಲು ಒಟ್ಟು 3 ಸಾವಿರ ಶ್ರೀವಾರಿ ಸೇವಕರು ಇದ್ದಾರೆ. ಸ್ಕೌಟ್ಸ್, ಗೈಡ್​ಗಳು ಕೂಡ ಭಕ್ತಾದಿಗಳಿಗೆ ಬೇಕಾದ ಮಾರ್ಗದರ್ಶನ ಮಾಡಲಿದ್ದಾರೆ.ಒಟ್ಟು 3 ಸಾವಿರ ಪೊಲೀಸರನ್ನು ಭದ್ರತೆಗಾಗಿ 10 ದಿನಗಳ ಕಾಲ ಸನ್ನಿಧಿಯಲ್ಲಿರಲಿದ್ದಾರೆ. 1200 ಜನ ತಿರಮಲದಲ್ಲಿ ಹಗೂ 1800 ಜನ ಪೊಲೀಸರು ತಿರುಪತಿಯಲ್ಲಿ ನಿಯೋಜನೆ ಮಾಡಲಾಗಿದೆ ಎಂದು ಕಾರ್ಯ ನಿರ್ವಾಹಕ ಅಧಿಕಾರಿ ಶ್ಯಾಮಲಾ ರಾವ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment