newsfirstkannada.com

ಇನ್ಮುಂದೆ ತಿಮ್ಮಪ್ಪನ ಲಡ್ಡು ಪ್ರಸಾದದಲ್ಲಿರಲ್ಲ ನಂದಿನಿ ತುಪ್ಪ; ತಿರುಪತಿಗೂ KMFಗೂ ಇದ್ದ 20 ವರ್ಷದ ಸಂಬಂಧ ಕಡಿತ

Share :

Published July 30, 2023 at 1:45pm

Update July 30, 2023 at 2:51pm

    6 ತಿಂಗಳಿಗೆ ಬರೋಬ್ಬರಿ 14 ಲಕ್ಷ ಕೆಜಿಯಷ್ಟು ತುಪ್ಪ ಕೊಡುತ್ತಿದ್ದ KMF

    ತಿರುಪತಿ ಲಡ್ಡು ಪ್ರಸಾದ ಅಂದ್ರೆ ಪ್ರತಿಯೊಬ್ಬ ಭಕ್ತರಿಗೂ ಅಚ್ಚುಮೆಚ್ಚು

    20 ವರ್ಷದ ಬಳಿಕ ತಿರುಪತಿ ಟೆಂಡರ್ ಕೈ ಬಿಡಲು ‘ನಂದಿನಿ’ ನಿರ್ಧಾರ

ಬೆಂಗಳೂರು: ಏಳುಕುಂಡಲವಾಡ, ತಿರುಪತಿ ತಿಮ್ಮಪ್ಪನಿಗೂ ನಮ್ಮ ಹೆಮ್ಮೆಯ ಕೆಎಂಎಫ್‌ ನಂದಿನಿ ತುಪ್ಪಕ್ಕೂ ಅವಿನಾಭಾವ ಸಂಬಂಧವಿತ್ತು. ತಿಮ್ಮಪ್ಪನ ಲಡ್ಡು ಪ್ರಸಾದದ ಸ್ವಾದಿಷ್ಟ ರುಚಿಗೆ ನಂದಿನಿ ತುಪ್ಪವನ್ನೇ ಬಳಸಲಾಗುತ್ತಿತ್ತು. ಇನ್ಮೇಲೆ ತಿರುಪತಿ ಲಡ್ಡು ಪ್ರಸಾದದಲ್ಲಿ ನಂದಿನಿ ತುಪ್ಪ ಇರಲ್ಲ. ಯಾಕಂದ್ರೆ ಬಹಳ ವರ್ಷದ ಬಳಿಕ ತಿರುಪತಿ ತಿಮ್ಮಪ್ಪ ಹಾಗೂ ನಂದಿನಿ ತುಪ್ಪದ ಸಂಬಂಧ ಕಡಿತವಾಗಿದೆ. ತಿಮ್ಮಪ್ಪನ ಲಡ್ಡು ಪ್ರಸಾದಕ್ಕೆ ರಾಜ್ಯದಿಂದ ಸರಬರಾಜು ಆಗುತ್ತಿದ್ದ ನಂದಿನಿ ತುಪ್ಪಕ್ಕೆ ಬ್ರೇಕ್ ಹಾಕಲಾಗಿದೆ ಎಂದು ಕೆಎಂಎಫ್​ ಅಧ್ಯಕ್ಷ ಭೀಮಾ ನಾಯಕ್​ ಮಾಹಿತಿ ನೀಡಿದ್ದಾರೆ.

ತಿರುಪತಿ ಲಡ್ಡು ಪ್ರಸಾದ ಅಂದ್ರೆ ಪ್ರತಿಯೊಬ್ಬ ಭಕ್ತರಿಗೂ ಅಚ್ಚುಮೆಚ್ಚು. ಕಷ್ಟಪಟ್ಟು ತಿರುಮಲ ಬೆಟ್ಟ ಹತ್ತೋ ಭಕ್ತರಂತೂ ಲಡ್ಡು ಪ್ರಸಾದವನ್ನು ಸ್ವೀಕರಿಸಿ ಪುನೀತರಾಗುತ್ತಾರೆ. ಅದರ ರುಚಿಗಂತೂ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದ್ರೂ ಲಡ್ಡು ಪ್ರಸಾದದ ಪೇಟೆಂಟ್ ಸದ್ಯ ಟಿಟಿಡಿ ಬಳಿಯೇ ಇದೆ. ಹೀಗಿರುವ ಲಡ್ಡು ಪ್ರಸಾದದಲ್ಲಿ ಕಳೆದ 20 ವರ್ಷದಿಂದ ನಂದಿನಿ ತುಪ್ಪ ಬಳಸಲಾಗುತ್ತಿತ್ತು. ತಿರುಮಲಕ್ಕೆ ಕೆಎಂಎಫ್​ನಿಂದ ತಾಜಾ, ತಾಜಾ ತುಪ್ಪ ಸರಬರಾಜು ಆಗುತ್ತಿತ್ತು.

ತಿರುಪತಿಯಲ್ಲಿ ತಯಾರಿಸಲಾಗುವ ಲಡ್ಡು ಪ್ರಸಾದ

ತಿರುಪತಿ ಟೆಂಡರ್ ಕೈಬಿಟ್ಟ ಕೆಎಂಎಫ್

ಕಳೆದ 20 ವರ್ಷದಿಂದ ತಿರುಪತಿಗೆ ಕೆಎಂಎಫ್‌ ನಂದಿನಿ ತುಪ್ಪ ಪೂರೈಕೆ ಆಗುತಿತ್ತು. ತಿರುಪತಿಗೆ 6 ತಿಂಗಳಿಗೆ 14 ಲಕ್ಷ ಕೆಜಿಯಷ್ಟು ತುಪ್ಪ ಕೊಡಬೇಕು. ಇಷ್ಟು ದೇವಸ್ಥಾನಕ್ಕೆಂದು ರಿಯಾಯಿತಿ ದರದಲ್ಲಿ ತುಪ್ಪ ಪೂರೈಕೆ ಮಾಡಲಾಗುತ್ತಿತ್ತು. ಆದ್ರೆ ಈ ಬಾರಿ ಕೆಎಂಎಫ್‌ ರಿಯಾಯಿತಿ ದರದಲ್ಲಿ ನಂದಿನಿ ತುಪ್ಪ ನೀಡುವ ತಿರುಪತಿ ಟೆಂಡರ್ ಅನ್ನು ಕೈ ಬಿಟ್ಟಿದೆ. ಕಡಿಮೆ ಬೆಲೆಗೆ ತುಪ್ಪ ಕೊಡಲಾಗಲ್ಲ ಅಂತಾ ಟೆಂಡರ್ ಕಟ್ ಮಾಡಿಕೊಂಡಿದೆ.

ಇದನ್ನೂ ಓದಿ: See Pics: ತಿರುಪತಿ ದೇಗುಲಕ್ಕೆ ಬಂಗಾರದ ಪೂಜಾ ಸಾಮಗ್ರಿ ದಾನ ಮಾಡಿದ ಸುಧಾ ಮೂರ್ತಿ ದಂಪತಿ.. ಚಿನ್ನದ ಆಮೆ, ಶಂಖ ಗಿಫ್ಟ್​..!

ಕರ್ನಾಟಕದಲ್ಲಿ ಸದ್ಯ ಹಾಲಿನ ಕೊರತೆ ಹೆಚ್ಚಾಗುತ್ತಲೇ ಇದೆ. ಹಾಲಿನ ಕೊರತೆಯಿಂದ ಉಪ ಉತ್ಪನ್ನಗಳ ದರ ಏರಿಕೆ ಮಾಡುವುದು ಅನಿವಾರ್ಯ. ಇದರಿಂದಾಗಿ ನಂದಿನಿ ತುಪ್ಪದ ದರವೂ ಹೆಚ್ಚಳವಾಗಿದೆ. ತಿರುಪತಿ ದೇವಸ್ಥಾನಕ್ಕೆ ರಿಯಾಯಿತಿ ದರದಲ್ಲಿ ತುಪ್ಪ ಪೂರೈಕೆ ಮಾಡೋದಕ್ಕೆ ಒಪ್ಪಿಕೊಂಡಿದ್ದ ಕೆಎಂಎಫ್ ಈಗಿನ ಪರಿಸ್ಥಿತಿಯಲ್ಲಿ ರಿಯಾಯಿತಿ ದರದಲ್ಲಿ ಕೊಟ್ರೆ ಲಾಸ್ ಆಗುತ್ತೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕಡಿಮೆ ಬೆಲೆಗೆ ನಂದಿನಿ ತುಪ್ಪ ಮಾರಾಟ ಮಾಡದಿರಲು ಕೆಎಂಎಫ್ ನಿರ್ಧಾರ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಇನ್ಮುಂದೆ ತಿಮ್ಮಪ್ಪನ ಲಡ್ಡು ಪ್ರಸಾದದಲ್ಲಿರಲ್ಲ ನಂದಿನಿ ತುಪ್ಪ; ತಿರುಪತಿಗೂ KMFಗೂ ಇದ್ದ 20 ವರ್ಷದ ಸಂಬಂಧ ಕಡಿತ

https://newsfirstlive.com/wp-content/uploads/2023/07/Nandini-Ghee-Tirupati-1.jpg

Load More