ವಯಸ್ಸು 50 ಆದರೆ ಏನಂತೆ.. ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿವಾದಿತ ಸಂಸದೆ ಮೌಹಾ ಮೊಯಿತ್ರಾ..!

author-image
Ganesh
Updated On
ವಯಸ್ಸು 50 ಆದರೆ ಏನಂತೆ.. ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿವಾದಿತ ಸಂಸದೆ ಮೌಹಾ ಮೊಯಿತ್ರಾ..!
Advertisment
  • ಜರ್ಮನಿಯಲ್ಲಿ ವಿವಾಹ ಆಗಿರುವ ಮೌಹಾ ಮೊಯಿತ್ರಾ
  • ಬಿಜೆಡಿ ನಾಯಕ ಪಿನಾಕಿ ಮಿಶ್ರಾ ಜೊತೆ ಮದುವೆ
  • ಮದುವೆಗೆ ವಯಸ್ಸಿನ ಮಿತಿ ಇಲ್ಲ ಅನ್ನೋದು ಮತ್ತೆ ಸಾಬೀತು

ಪಶ್ಚಿಮ ಬಂಗಾಳದ ಟಿಎಂಸಿ ಪಕ್ಷದ ಫೈರ್ ಬ್ರ್ಯಾಂಡ್ ಖ್ಯಾತಿಯ ಮೌಹಾ ಮೊಯಿತ್ರಾ ಸದ್ದಿಲ್ಲದೇ ಹಸೆಮಣೆ ಏರಿದ್ದಾರೆ. 50 ವರ್ಷದ ಮೌಹಾ ಮೊಯಿತ್ರಾ ಜರ್ಮನಿಯಲ್ಲಿ ಬಿಜೆಡಿ ಪಕ್ಷದ ನಾಯಕ ಪಿನಾಕಿ ಮಿಶ್ರಾರನ್ನು ವಿವಾಹವಾಗಿದ್ದಾರೆ.

ಮೌಹಾ ಮೊಯಿತ್ರಾ ಹಾಗೂ ಪಿನಾಕಿ ಮಿಶ್ರಾ ಇಬ್ಬರು ಪರಸ್ಪರರ ಕೈಹಿಡಿದು ನಗುತ್ತಾ ಹೆಜ್ಜೆ ಹಾಕುತ್ತಿರುವ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಸದಾ ಸೋಷಿಯಲ್ ಮೀಡಿಯಾದ ಮೂಲಕವೇ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುವ ಮೌಹಾ ಮೊಯಿತ್ರಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಈ ವಿವಾಹದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಪಿನಾಕಿ ಮಿಶ್ರಾ ಕೂಡ ತಮ್ಮ ವೈಯಕ್ತಿಕ ವಿವಾಹದ ಬಗ್ಗೆ ಮೌನವಾಗಿಯೇ ಇದ್ದಾರೆ.

ಇದನ್ನೂ ಓದಿ: ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತಕ್ಕೆ ಮುಖ್ಯವಾದ 6 ಕಾರಣಗಳು..!

publive-image

ಲೋಕಸಭೆ ಒಳಗೆ ಮತ್ತು ಹೊರಗೆ ಸದಾ ಬಿಜೆಪಿ, ಕೇಂದ್ರ ಸರ್ಕಾರದ ವಿರುದ್ಧ ಅಂಕಿ-ಅಂಶ ಸಮೇತ ವಾಗ್ದಾಳಿ ನಡೆಸುವ ಮೌಹಾ ಮೊಯಿತ್ರಾ, ತಮ್ಮ ಹರಿತ ಮಾತುಗಳಿಂದಲೇ ದೇಶದ ಗಮನ ಸೆಳೆದಿದ್ದಾರೆ. ಜೊತೆಗೆ ಕಳೆದ ವರ್ಷ ಬಾಯ್ ಫ್ರೆಂಡ್ ಜೊತೆಗಿನ ಜಗಳದಿಂದಲೂ ದೇಶದ ಗಮನ ಸೆಳೆದಿದ್ದರು. ಬಳಿಕ ಲೋಕಸಭೆಯಲ್ಲಿ ಪ್ರಶ್ನೆ ಕೇಳಲು ಗಿಫ್ಟ್ ಗಳನ್ನ ಪಡೆದಿದ್ದಾರೆ ಎಂಬ ದೂರು ಲೋಕಸಭಾ ಸ್ಪೀಕರ್​ಗೆ ಸಲ್ಲಿಕೆಯಾಗಿತ್ತು. ಈ ದೂರಿನ ಆಧಾರದ ಮೇಲೆ ಲೋಕಸಭೆಯಿಂದ ಮೌಹಾ ಮೊಯಿತ್ರಾರನ್ನು ಲೋಕಸಭೆಯಿಂದ ಸಸ್ಪೆಂಡ್ ಮಾಡಲಾಗಿತ್ತು. ಬಳಿಕ 2024ರ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ ಕೃಷ್ಣಾ ನಗರ ಲೋಕಸಭಾ ಕ್ಷೇತ್ರದಿಂದ 2ನೇ ಭಾರಿಗೆ ಗೆದ್ದು ಮತ್ತೆ ಲೋಕಸಭೆ ಪ್ರವೇಶಿಸಿದ್ದರು.

publive-image

ಇದನ್ನೂ ಓದಿ: ಟಿಕೆಟ್ ಇಲ್ಲ.. ಕಾರ್ಡ್ ಇಲ್ಲ.. ಕೊಂಚ ಯಾಮಾರಿದ್ರೂ ಮೆಟ್ರೋದಲ್ಲೂ ನಡೀತಿತ್ತು ಘೋರ ದುರಂತ!

1974 ರಲ್ಲಿ ಅಸ್ಸಾಂನಲ್ಲಿ ಜನಿಸಿದ್ದ ಮೌಹಾ ಮೊಯಿತ್ರಾ ಅಮೆರಿಕಾದ ಮ್ಯಾಸಾಚ್ಯುಯೆಟ್ಸ್​ನಲ್ಲಿ ಪದವಿ ಪಡೆದಿದ್ದಾರೆ. ವಿದೇಶದಲ್ಲಿ ಇನ್ ವೆಸ್ಟ್ ಮೆಂಟ್ ಬ್ಯಾಂಕರ್ ಆಗಿದ್ದವರು. ಡ್ಯಾನಿಶ್ ದೇಶದ ಫೈನಾನ್ಸಿಯರ್ ಲಾರಸ್ ಬ್ರೋಸನ್ ರನ್ನು ವಿವಾಹವಾಗಿದ್ದರು. ಬಳಿಕ ಡಿವೋರ್ಸ್ ಪಡೆದಿದ್ದರು. ಅದಾದ ಬಳಿಕ ಭಾರತಕ್ಕೆ ಬಂದು ಕಾಂಗ್ರೆಸ್ ಪಕ್ಷ ಸೇರಿದ್ದರು. ಕೆಲವೇ ವರ್ಷಗಳಲ್ಲಿ ಕಾಂಗ್ರೆಸ್ ತ್ಯಜಿಸಿ ಟಿಎಂಸಿ ಪಕ್ಷ ಸೇರಿ 2019 ರಲ್ಲಿ ಕೃಷ್ಣಾ ನಗರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಕಂಡರು. 2024ರಲೋಕಸಭಾ ಚುನಾವಣೆಯಲ್ಲೂ ಮತ್ತೊಮ್ಮೆ ಗೆಲುವು ಸಾಧಿಸಿ 2ನೇ ಭಾರಿಗೆ ಲೋಕಸಭೆ ಪ್ರವೇಶಿಸಿದ್ದಾರೆ.

2023ರಲ್ಲಿ ತಮ್ಮ ಬಾಯ್ ಫ್ರೆಂಡ್ ಜೈ ಅನಂತ್ ಡೆಹ್ರಾಡಾಯಿ ಜೊತೆಗಿನ ಕಿತ್ತಾಟದಿಂದ ದೇಶದ ಗಮನ ಸೆಳೆದಿದ್ದರು. ಜೈ ಅನಂತ್ ಡೆಹ್ರಾಡೂಯಿ ಅವರೆ ಮೌಹಾ ಮೊಯಿತ್ರಾ ರಿಯಲ್ ಎಸ್ಟೇಟ್ ಉದ್ಯಮಿಯಿಂದ ದುಬಾರಿ ಗಿಫ್ಟ್ ಗಳನ್ನು ಪಡೆದಿದ್ದಾರೆ. ಮೌಹಾ ಮೊಯಿತ್ರಾರ ಲಾಗಿನ್ ಅಕೌಂಟ್ ನಿಂದ ರಿಯಲ್ ಎಸ್ಟೇಟ್ ಉದ್ಯಮಿಗಳು ಲೋಕಸಭೆಯಲ್ಲಿ ಪ್ರಶ್ನೆ ಕೇಳಿದ್ದಾರೆ ಎಂದು ಲೋಕಸಭಾ ಸ್ಪೀಕರ್​ಗೆ ದೂರು ಸಲ್ಲಿಕೆಯಾಗಿತ್ತು. ಈ ದೂರಿನ ಆಧಾರದ ಮೇಲೆ ಮೌಹಾ ಮೊಯಿತ್ರಾರನ್ನು ಲೋಕಸಭೆಯಿಂದ ಅಮಾನತು ಮಾಡಲಾಗಿತ್ತು.

ಇದನ್ನೂ ಓದಿ: ‘ಬಾರೋ ನನ್ನ ಕಂದ’.. ಕರುಳು ಹಿಂಡುತ್ತೆ ಜೀವಬಿಟ್ಟ ಮನೋಜ್​ ತಾಯಿ ಮಾತು; VIDEO

publive-image
ಈಗ ಒರಿಸ್ಸಾದ ಬಿಜೆಡಿ ಪಕ್ಷದ ನಾಯಕ ಪಿನಾಕಿ ಮಿಶ್ರಾ ಜೊತೆ ಮೌಹಾ ಮೊಯಿತ್ರಾ ಜರ್ಮನಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಪಿನಾಕಿ ಮಿಶ್ರಾ, 1996 ರಲ್ಲಿ ಬ್ರಿಜ್ ಕಿಶೋರ್ ತ್ರಿಪಾಠಿರನ್ನು ಲೋಕಸಭಾ ಚುನಾವಣೆಯಲ್ಲಿ ಸೋಲಿಸಿ, ಲೋಕಸಭೆ ಪ್ರವೇಶಿದ್ದರು. ರಾಜಕೀಯದ ಜೊತೆಗೆ ಸುಪ್ರೀಂ ಕೋರ್ಟ್ ನಲ್ಲಿ ವಕೀಲರಾಗಿಯೂ ಪಿನಾಕಿ ಮಿಶ್ರಾ ಕೆಲಸ ಮಾಡುತ್ತಿದ್ದಾರೆ. ರಾಜಕೀಯ ಮತ್ತು ವಕೀಲ ವೃತ್ತಿಗಳೆರೆಡರಲ್ಲೂ ಪಿನಾಕಿ ಮಿಶ್ರಾ ಹೆಸರು ಮಾಡಿದ್ದಾರೆ. ಪುರಿ ಲೋಕಸಭಾ ಕ್ಷೇತ್ರದಲ್ಲಿ 2009, 2014, 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಡಿ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.

ಇದನ್ನೂ ಓದಿ: ವರ್ಷದ ಹಿಂದೆ ಮದುವೆ ಆಗಿದ್ದ ಅಕ್ಷತಾ.. RCB ವಿಜಯೋತ್ಸವದಲ್ಲಿ ಗಂಡನ ಎದುರೇ ಜೀವ ಬಿಟ್ಟಳು

publive-image

ಪಿನಾಕಿ ಮಿಶ್ರಾಗೂ ಮೌಹಾ ಮೊಯಿತ್ರಾ ಜೊತೆಗಿನ ವಿವಾಹವೂ 2ನೇ ವಿವಾಹ. ಮೌಹಾ ಮೋಯಿತ್ರಗೂ ಇದು 2ನೇ ವಿವಾಹ. ಕಳೆದ ಲೋಕಸಭೆಯ ಅವಧಿಯಲ್ಲಿ ಬೇರೆ ಬೇರೆ ಪಕ್ಷಗಳಲ್ಲಿ ಸಂಸದರಾಗಿದ್ದವರು ಈಗ ಜೊತೆಯಾಗಿ ಸಂಸಾರ ಮಾಡಲು ವಿವಾಹವಾಗುವ ಮೂಲಕ ದಾಂಪತ್ಯ ಜೀವನ ಪ್ರವೇಶಿಸಿದ್ದಾರೆ. ಮೌಹಾ ಮೊಯಿತ್ರಾ ಅವರು 50ನೇ ವಯಸ್ಸಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಮದುವೆಗೆ ವಯಸ್ಸಿನ ಮಿತಿ ಇಲ್ಲ ಅನ್ನೋದನ್ನು ಸಾಬೀತು ಮಾಡಿದ್ದಾರೆ.

ವಿಶೇಷ ವರದಿ: ಚಂದ್ರಮೋಹನ್, ನ್ಯೂಸ್ ಫಸ್ಟ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment