ರಾಜಸ್ವ ಹೆಚ್ಚಿಸಿಕೊಳ್ಳಲು ಸಿದ್ದರಾಮಯ್ಯ ಸರ್ಕಸ್; ಸ್ಟಾಂಪ್ ಡ್ಯೂಟಿ ಏರಿಕೆಗೆ ನಿರ್ಧಾರ.. ಯಾರ ಜೇಬಿಗೆ ಕತ್ತರಿ..?

author-image
Ganesh
ರಾಜಸ್ವ ಹೆಚ್ಚಿಸಿಕೊಳ್ಳಲು ಸಿದ್ದರಾಮಯ್ಯ ಸರ್ಕಸ್; ಸ್ಟಾಂಪ್ ಡ್ಯೂಟಿ ಏರಿಕೆಗೆ ನಿರ್ಧಾರ.. ಯಾರ ಜೇಬಿಗೆ ಕತ್ತರಿ..?
Advertisment
  • ರಾಜಸ್ವಕ್ಕಾಗಿ ಸ್ಟಾಂಪ್ ಡ್ಯೂಟಿ ಏರಿಸಲು ಸರ್ಕಾರ ಚಿಂತನೆ
  • 2013 ರಲ್ಲಿ ಕೊನೆಯ ಬಾರಿಗೆ ಸ್ಟಾಂಪ್ ಡ್ಯೂಟಿ ಏರಿಕೆ
  • ವಾರದ ಹಿಂದೆ ಮಹತ್ವದ ಸಭೆ ನಡೆಸಿರುವ ಸಿಎಂ ಸಿದ್ದು

ಕರ್ನಾಟಕದಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಆಸ್ತಿ ನೋಂದಣಿಯಿಂದ ನಿರೀಕ್ಷಿತ ಮಟ್ಟದಲ್ಲಿ ರಾಜ್ಯ ಸರ್ಕಾರಕ್ಕೆ ಆದಾಯ ಸಂಗ್ರಹವಾಗುತ್ತಿಲ್ಲ. 2025-26ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಆದಾಯ ಸಂಗ್ರಹದ ಕೊರತೆ ಎದುರಾಗಿದೆ. ಕಳೆದ ಹಣಕಾಸು ವರ್ಷದಲ್ಲೂ ನಿರೀಕ್ಷಿತ ಆದಾಯ ಸಂಗ್ರಹದ ಗುರಿ ತಲುಪುವಲ್ಲಿ ಇಲಾಖೆಯು ವಿಫಲವಾಗಿದೆ. ಹೀಗಾಗಿ ಈಗ ರಾಜ್ಯ ಸರ್ಕಾರವು ಆಸ್ತಿ ನೋಂದಣಿಯ ಸ್ಟಾಂಪ್ ಡ್ಯೂಟಿಯನ್ನು ಹೆಚ್ಚಿಸುವ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿದೆ. ಸ್ಟಾಂಪ್ ಡ್ಯೂಟಿಯನ್ನು ಶೇ.1 ರಷ್ಟು ಏರಿಕೆ ಮಾಡುವ ಪ್ರಸ್ತಾಪ ರಾಜ್ಯ ಸರ್ಕಾರದ ಮುಂದೆ ಇದೆ. 2013 ರಲ್ಲಿ ಕೊನೆಯ ಬಾರಿಗೆ ಸ್ಟಾಂಪ್ ಡ್ಯೂಟಿಯನ್ನು ಏರಿಕೆ ಮಾಡಲಾಗಿತ್ತು.

ಇದನ್ನೂ ಓದಿ: ಕರ್ನಾಟಕದಲ್ಲಿ ಆರಿದ್ರ ಮಳೆಯ ಆರ್ಭಟ.. ಹಲವು ಜಿಲ್ಲೆಗಳಲ್ಲಿ ಭಾರೀ ಅನಾಹುತ.. ಏನೆಲ್ಲ ಆಗಿದೆ..?

publive-image

ಕೃಷಿ ಭೂಮಿ, ನಿವೇಶನ, ಮನೆಗಳ ಸಬ್ ರಿಜಿಸ್ಟ್ರಾರ್ ಮೌಲ್ಯ ಅಥವಾ ಗೈಡೆನ್ಸ್ ವ್ಯಾಲ್ಯೂವಿನ ಆಧಾರದ ಮೇಲೆ ಕರ್ನಾಟಕದಲ್ಲಿ ಶೇ.5 ರಷ್ಟು ಸ್ಟಾಂಪ್ ಡ್ಯೂಟಿ ಸಂಗ್ರಹಿಸಲಾಗುತ್ತಿದೆ. ಇದರ ಜೊತೆಗೆ ಶೇ.1 ರಷ್ಟು ರಿಜಿಸ್ಟ್ರೇಷನ್ ಶುಲ್ಕ, ಶೇ.0.5 ರಷ್ಟು ಸೆಸ್ ಹಾಗೂ ಶೇ.0.1 ರಷ್ಟು ಸರ್ ಚಾರ್ಜ್ ಸಂಗ್ರಹಿಸಲಾಗುತ್ತಿದೆ. ಇದರಿಂದಾಗಿ ಕರ್ನಾಟಕದಲ್ಲಿ ಯಾವುದೇ ಸ್ಥಿರಾಸ್ತಿಯನ್ನು ಖರೀದಿಸಬೇಕಾಗಿದ್ದರೂ ಶೇ.6.6 ರಷ್ಟು ಸ್ಟಾಂಪ್ ಡ್ಯೂಟಿ, ನೋಂದಾಣಿ ಶುಲ್ಕ ಪಾವತಿಸುವುದು ಅನಿವಾರ್ಯ. ಇದು ಸದ್ಯ ನಮ್ಮ ಕರ್ನಾಟಕ ರಾಜ್ಯದಲ್ಲಿರುವ ನೋಂದಣಿ ಮತ್ತು ಮುದ್ರಾಂಕ ಶುಲ್ಕ . ಇದರಿಂದ ಸಂಗ್ರಹವಾಗುವ ಆದಾಯವೂ ಸಂಪೂರ್ಣವಾಗಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಹೋಗುತ್ತೆ. ಈಗ ಆದಾಯ ಸಂಗ್ರಹ ಕೊರತೆಯಿಂದ ಸ್ಟಾಂಪ್ ಡ್ಯೂಟಿಯನ್ನು ಶೇ.1 ರಷ್ಟು ಏರಿಕೆ ಮಾಡಿದರೆ ಆಸ್ತಿ ಖರೀದಿದಾರರು ಶೇ.7.6 ರಷ್ಟು ಸ್ಟಾಂಪ್ ಡ್ಯೂಟಿ , ನೋಂದಾಣಿ ಶುಲ್ಕ ಪಾವತಿ ಮಾಡಬೇಕಾಗುತ್ತೆ.

ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ

ಒಂದು ವಾರದ ಹಿಂದೆ ಹಣಕಾಸು ಇಲಾಖೆಯ ಜವಾಬ್ದಾರಿಯನ್ನು ಹೊಂದಿರುವ ಸಿಎಂ ಸಿದ್ದರಾಮಯ್ಯ, ಕಂದಾಯ ಸಚಿವ ಕೃಷ್ಣ ಭೈರೇಗೌಡ ಜೊತೆಗೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಈ ವರ್ಷದ ಆದಾಯ ಸಂಗ್ರಹದ ಅಂಕಿಅಂಶ ಪರಿಶೀಲಿಸಿದ್ದಾರೆ. ಈ ವೇಳೆ 2024-25 ರಲ್ಲಿ ಹಾಗೂ 2025-26ರ ಮೊದಲ ತ್ರೈಮಾಸಿಕದಲ್ಲಿ ಇಲಾಖೆಯಿಂದ ಗುರಿಯ ಪ್ರಕಾರ ಆದಾಯ ಸಂಗ್ರಹವಾಗಿಲ್ಲ ಎಂಬುದು ಸಿಎಂ ಸಿದ್ದರಾಮಯ್ಯ ಗಮನಕ್ಕೆ ಬಂದಿದೆ.

ಇದನ್ನೂ ಓದಿ: ಭಾರತದ ಪರವಾಗಿ ಶುಕ್ಲಾ 7 ಪ್ರಯೋಗ.. ಖುಷಿ ವಿಚಾರ ಅಂದ್ರೆ ಅದರಲ್ಲಿ ಕರ್ನಾಟಕದ್ದೇ 4 ಟೆಸ್ಟ್​ಗಳು..!

publive-image

ಈ ಇಲಾಖೆಯಲ್ಲಿ ನಿಗದಿತ ಗುರಿಯಂತೆ ಆದಾಯ ಸಂಗ್ರಹವಾಗದಿದ್ದರೆ ಗ್ಯಾರಂಟಿ ಸ್ಕೀಮ್ ಸೇರಿದಂತೆ ಅಭಿವೃದ್ಧಿ ಯೋಜನೆಗಳಿಗೆ ಹಣ ಹೊಂದಿಸುವುದು ಕಷ್ಟವಾಗುತ್ತೆ. ಹೀಗಾಗಿ ಶೇ.1 ರಷ್ಟು ಸ್ಟಾಂಪ್ ಡ್ಯೂಟಿ ಏರಿಕೆಯ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆದಿದೆ. ರಾಜ್ಯದ ಕಂದಾಯ ಇಲಾಖೆ ಹಾಗೂ ನೋಂದಾಣಿ ಮುದ್ರಾಂಕ ಇಲಾಖೆಗಳು ಸ್ಟಾಂಪ್ ಡ್ಯೂಟಿಯನ್ನು ಶೇ.1 ರಷ್ಟು ಏರಿಕೆ ಮಾಡುವುದರ ಪರವಾಗಿ ಸಭೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿವೆ. ನೆರೆಯ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಸ್ಟಾಂಪ್ ಡ್ಯೂಟಿ ಕಡಿಮೆ ಇದೆ. ತಮಿಳುನಾಡು ರಾಜ್ಯದಲ್ಲಿ ನೋಂದಣಿ, ಮುದ್ರಾಂಕ ಶುಲ್ಕ ಶೇ.11 ರಷ್ಟು ಇದೆ. ಮಹಾರಾಷ್ಟ್ರದಲ್ಲಿ ಶೇ.7 ರಷ್ಟು ನೋಂದಣಿ ಮುದ್ರಾಂಕ ಶುಲ್ಕ ಸಂಗ್ರಹಿಸಲಾಗುತ್ತಿದೆ.

28 ಸಾವಿರ ಕೋಟಿ ಆದಾಯ ಸಂಗ್ರಹದ ಗುರಿ

2024-25ರ ಹಣಕಾಸು ವರ್ಷದಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ರಾಜ್ಯ ಸರ್ಕಾರ 26 ಸಾವಿರ ಕೋಟಿ ರೂಪಾಯಿ ಆದಾಯ ಸಂಗ್ರಹದ ಗುರಿ ನೀಡಿತ್ತು. ನೋಂದಾಣಿ, ಮುದ್ರಾಂಕ ಇಲಾಖೆಯು ನಿರೀಕ್ಷಿತ ಗುರಿ ತಲುಪಲು ವಿಫಲವಾಗಿ, 22,500 ಕೋಟಿ ರೂಪಾಯಿ ಆದಾಯ ಮಾತ್ರ ಸಂಗ್ರಹಿಸಿತ್ತು. 2025-26 ರಲ್ಲಿ ನೋಂದಣಿ, ಮುದ್ರಾಂಕ ಇಲಾಖೆಗೆ ರಾಜ್ಯ ಸರ್ಕಾರವು 28 ಸಾವಿರ ಕೋಟಿ ರೂಪಾಯಿ ಆದಾಯ ಸಂಗ್ರಹದ ಗುರಿ ನೀಡಿದೆ. ಇದರ ಪ್ರಕಾರ ಮೊದಲ ತ್ರೈಮಾಸಿಕದ ಅಂತ್ಯದ ವೇಳೆಗೆ ನೋಂದಣಿ, ಮುದ್ರಾಂಕ ಇಲಾಖೆಯು 7 ಸಾವಿರ ಕೋಟಿ ರೂಪಾಯಿ ಆದಾಯ ಸಂಗ್ರಹಿಸಬೇಕಿದೆ. ಜೂನ್ 30ಕ್ಕೆ ಮೊದಲ ತ್ರೈಮಾಸಿಕ ಅಂತ್ಯವಾಗುತ್ತಿದೆ.

ಇದನ್ನೂ ಓದಿ: ಕಾವೇರಿ ನದಿ ಪಾತ್ರದಲ್ಲಿ ಪ್ರವಾಹ ಭೀತಿ.. ಈ ಪ್ರವಾಸಿ ತಾಣಗಳಿಗೆ ನಿರ್ಬಂಧ

ಇಲಾಖೆಯು 4,556 ಕೋಟಿ ರೂಪಾಯಿ ಆದಾಯ ಮಾತ್ರ ಸಂಗ್ರಹಿಸಿದೆ. ಅಂದರೆ ಶೇ.35 ರಷ್ಟು ಆದಾಯ ಸಂಗ್ರಹದಲ್ಲಿ ಕೊರತೆಯಾಗಿದೆ. ಇದರಿಂದ ಚಿಂತೆಗೀಡಾಗಿರುವ ರಾಜ್ಯ ಸರ್ಕಾರ ಹೆಚ್ಚಿನ ಆದಾಯ ಹಾಗೂ ವಾರ್ಷಿಕ 28 ಸಾವಿರ ಕೋಟಿ ರೂಪಾಯಿ ಆದಾಯ ಸಂಗ್ರಹಕ್ಕಾಗಿ ಶೇ.1 ರಷ್ಟು ಸ್ಟಾಂಪ್ ಡ್ಯೂಟಿ ಏರಿಕೆಯ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿದೆ ಎಂದು ನೋಂದಾಣಿ, ಮುದ್ರಾಂಕ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

ಆಸ್ತಿ ಮಾರಾಟಕ್ಕೆ ಇ- ಖಾತಾ ಕಡ್ಡಾಯ

ರಾಜ್ಯದಲ್ಲಿ ನಗರ, ಗ್ರಾಮೀಣಾ ಪ್ರದೇಶಗಳಲ್ಲಿ ಆಸ್ತಿ ಮಾರಾಟಕ್ಕೆ ಇ- ಖಾತಾ ಕಡ್ಡಾಯ ಮಾಡಲಾಗಿದೆ. ಇ- ಖಾತಾ ಎಲ್ಲ ಆಸ್ತಿಗೂ ಇನ್ನೂ ಸಿಕ್ಕಿಲ್ಲ. ಇದರಿಂದ ಆಸ್ತಿ ಮಾರಾಟಕ್ಕೆ ಕೆಲವರು ಮುಂದಾಗುತ್ತಿಲ್ಲ. ಜೊತೆಗೆ ಕಾವೇರಿ ಪೋರ್ಟಲ್ ನಲ್ಲಿ ಸರ್ವರ್ ಸಮಸ್ಯೆ ಆಗಾಗ ಎದುರಾಗುತ್ತಿದೆ. ಇದರಿಂದಾಗಿ ನೋಂದಣಿ, ಮುದ್ರಾಂಕ ಇಲಾಖೆಯಲ್ಲಿ ನಿರೀಕ್ಷಿತ ಆದಾಯ ಸಂಗ್ರಹದ ಗುರಿ ತಲುಪಲಾಗುತ್ತಿಲ್ಲ ಎಂದು ರಿಯಲ್ ಎಸ್ಟೇಟ್ ಬಿಲ್ಡರ್, ಡೆವಲಪರ್ ಗಳು ಹೇಳುತ್ತಿದ್ದಾರೆ. ಸ್ಟಾಂಪ್ ಡ್ಯೂಟಿ ಏರಿಕೆಯಿಂದ ರಿಯಲ್ ಎಸ್ಟೇಟ್ ವಲಯಕ್ಕೂ ಹೊಡೆತ ಬೀಳಲಿದೆ. ಆಸ್ತಿ ಖರೀದಿಸುವವರು ಹೆಚ್ಚಿನ ಹಣವನ್ನು ಸ್ಟಾಂಪ್ ಡ್ಯೂಟಿಗೆ ಪಾವತಿಸಬೇಕಾಗುತ್ತೆ. ರಾಜ್ಯ ಸರ್ಕಾರದ ನಾಲ್ಕು ಪ್ರಮುಖ ಆದಾಯ ಮೂಲಗಳಲ್ಲಿ ಅಬಕಾರಿ, ನೋಂದಣಿ, ಮುದ್ರಾಂಕ ಶುಲ್ಕ, ಸಾರಿಗೆ ವಾಹನಗಳ ನೋಂದಾಣಿ ಶುಲ್ಕ, ಕಮರ್ಷಿಯಲ್ ಟ್ಯಾಕ್ಸ್ ಪ್ರಮುಖವಾದವು.

ಇದನ್ನೂ ಓದಿ: ಕೇರಳದ PFI ಹಿಟ್ ಲಿಸ್ಟ್​​ ಭಯಾನಕ.. ಜಡ್ಜ್​ಗಳು, ಕಾರ್ಯಕರ್ತರು ಸೇರಿ 977 ವ್ಯಕ್ತಿಗಳ ಟಾರ್ಗೆಟ್​​​!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment