ಗುಡ್​ನ್ಯೂಸ್; 2025 ರಿಂದ ಈ ದೇಶಕ್ಕೆ ಹೋಗಲು ಭಾರತೀಯರಿಗೆ ವೀಸಾ ಬೇಕಿಲ್ಲ! ಯಾವ ರಾಷ್ಟ್ರ ಗೊತ್ತಾ?

author-image
Gopal Kulkarni
Updated On
ಗುಡ್​ನ್ಯೂಸ್; 2025 ರಿಂದ ಈ ದೇಶಕ್ಕೆ ಹೋಗಲು ಭಾರತೀಯರಿಗೆ ವೀಸಾ ಬೇಕಿಲ್ಲ! ಯಾವ ರಾಷ್ಟ್ರ ಗೊತ್ತಾ?
Advertisment
  • 2025ರಿಂದ ಈ ದೇಶಕ್ಕೆ ಹೋಗಲು ನಿಮಗೆ ವೀಸಾದ ಅವಶ್ಯಕತೆಯೇ ಇಲ್ಲ
  • ಎರಡು ದೇಶಗಳ ನಡುವೆ ನಡೆದ ದ್ವಿಪಕ್ಷೀಯ ಒಪ್ಪಂದಿಂದ ಈ ಸೌಲಭ್ಯ
  • ಭಾರತೀಯ ಪ್ರವಾಸಿಗರಿಗೆ ವೀಸಾ ಪ್ರಯಾಣಕ್ಕೆ ಮತ್ತೊಂದು ದೇಶ ಲಭ್ಯ

ಭಾರತೀಯರು ಕೆಲವು ರಾಷ್ಟ್ರಗಳಿಗೆ ಟೂರ್ ಹೋಗಲು ವೀಸಾ ಅವಶ್ಯಕತೆ ಇರಲ್ಲ. ವೀಸಾ ಇಲ್ಲದೇನೆ ಹೋಗಬಹುದು ಅಂತಹ ರಾಷ್ಟ್ರಗಳ ಪಟ್ಟಿಗೆ ಈಗ ಮತ್ತೊಂದು ದೇಶ ಸೇರಿಕೊಂಡಿದೆ. ಅದು ರಷ್ಯಾ. ಭಾರತೀಯರು ಸದ್ಯದಲ್ಲಿಯೇ ವೀಸಾ ಫ್ರೀಯಾಗಿ ರಷ್ಯಾಗೆ ಪ್ರವಾಸ ಬೆಳೆಸಬಹುದು. ಈ ಹೊಸ ವ್ಯವಸ್ಥೆಯೊಂದು 2025ರ ಜೂನ್​ನಿಂದ ಆರಂಭವಾಗಲಿದೆ. ಭಾರತ ಹಾಗೂ ರಷ್ಯಾಗಳ ನಡುವೆ ನಡೆದಿರುವ ದ್ವಿಪಕ್ಷೀಯ ಒಪ್ಪಂದದ ಪ್ರಕಾರ ಉಭಯದ ದೇಶಗಳ ನಡುವಿನ ಪ್ರಯಾಣವನ್ನು ವೀಸಾ ಫ್ರೀ ಮಾಡುವ ಉದ್ದೇಶದೊಂದಿಗೆ ಮಾತುಕತೆಗಳಾಗಿವೆ. ಪ್ರವಾಸಿಗರಿಗೆ ವೀಸಾ ರಹಿತ ಪ್ರಯಾಣದ ಸೌಲಭ್ಯವನ್ನು ನೀಡಲು ಉಭಯ ದೇಶಗಳು ಒಪ್ಪಿಕೊಂಡಿವೆ.

2023ರವರೆಗೂ ಭಾರತೀಯರು ರಷ್ಯಾ ಪ್ರವಾಸ ಬೆಳೆಸಬೇಕು ಅಂದ್ರೆ ಇ-ವೀಸಾ ಪಡೆದ ಅರ್ಹತೆಯನ್ನು ಹೊಂದಬೇಕಾಗಿತ್ತು. ಈ ಒಂದು ವೀಸಾ ಪಡೆಯಲು ಕನಿಷ್ಠ ನಾಲ್ಕು ದಿನಗಳಾದರೂ ಬೇಕಾಗಿತ್ತು. ರಷ್ಯಾ ಜೊತೆಗೆ ಇನ್ನೂ ಐದು ರಾಷ್ಟ್ರಗಳೊಂದಿಗೆ ಇ-ವೀಸಾಗಳನ್ನು ಪಡೆದುಕೊಳ್ಳುವ ಸೌಲಭ್ಯ ಭಾರತೀಯರಿಗಿತ್ತು. ಕಳೆದ ವರ್ಷ ಒಟ್ಟು 9,500 ಇ-ವೀಸಾಗಳನ್ನು ನೀಡಲಾಗಿತ್ತು.

ಇದನ್ನೂ ಓದಿ: ಭಿಕ್ಷುಕರಿಗೆ ಅಯ್ಯೋ ಅಂದ್ರೆ ಬೀಳುತ್ತೆ ಕೇಸ್.. ದುಡ್ಡು ಕೊಟ್ರೆ ಬರ್ತಾರೆ ಪೊಲೀಸ್‌; ಕಾರಣ ಏನು ಗೊತ್ತಾ?

ಸದ್ಯ ಭಾರತೀಯರು ರಷ್ಯಾ ಪ್ರವಾಸ ಬೆಳೆಸಬೇಕು ಅಂದ್ರೆ ರಷ್ಯಾ ರಾಯಭಾರಿ ಕಚೇರಿಯಿಂದ ವೀಸಾ ಪಡೆಯಲೇಬೇಕು. ಅಲ್ಲಿ ಹೋಗಲು, ಉಳಿದುಕೊಳ್ಳಲು ಹಾಗೂ ವಾಪಸ್ ಬರಲು ವೀಸಾ ಕಡ್ಡಾಯ. ಇದರ ಪ್ರಕ್ರಿಯೆ ಹಾಗೂ ದಾಖಲೆಗಳ ಪರಿಶೀಲನೆ ತುಂಬಾ ಸಮಯ ತೆಗೆದುಕೊಳ್ಳುತ್ತಿತ್ತು ಸಾಮಾನ್ಯವಾಗಿ ಭಾರತೀಯರು ರಷ್ಯಾಗೆ ತೆರಳುವುದು ವ್ಯಾಪಾರ ಹಾಗೂ ಅಫಿಷೀಯಲ್ ಉದ್ದೇಶದಿಂದ ತೆರೆಳುತ್ತಿದ್ದದ್ದು ಹೆಚ್ಚು. 2022ಕ್ಕೆ ಹೋಲಿಸಿ ನೋಡಿದರೆ 2023ಕ್ಕೆ ಸುಮಾರು 60 ಸಾವಿರ ಭಾರತೀಯರು ರಷ್ಯಾಗೆ ಪ್ರವಾಸಕ್ಕೆ ಹೋಗಿದ್ದಾರೆ. ಪ್ರವಾಸಿಗರ ಸಂಖ್ಯೆಯಲ್ಲಿ ಶೇಕಡಾ 26 ರಷ್ಟು ಏರಿಕೆಯಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಮಕ್ಕಳು ಮಾಡಿಕೊಳ್ಳಲು ಸಂಬಳದ ಜತೆಗೆ ವಾರದಲ್ಲಿ 3 ದಿನ ರಜೆ; ಪೋಷಕರಿಗೆ ವಿಶೇಷ ಸೌಲಭ್ಯ

ನಾನ್ ಸಿಐಎಸ್ ಕಂಟ್ರಿ, ಕಾಮನ್ ವೆಲ್ತ್ ಆಫ್ ಇಂಡಿಪೆಂಡನ್ಸ್​ ಅಲ್ಲದ ದೇಶಗಳಲ್ಲಿ ಬ್ಯುಸಿನೆಸ್ ಉದ್ದೇಶಕ್ಕಾಗಿ ರಷ್ಯಾಗೆ ಭೇಟಿ ನೀಡಿದವರಲ್ಲಿ ಭಾರತ ಮೂರನೇ ಱಂಕ್​ನಲ್ಲಿದೆ 2024ರ ಮೊದಲ ತ್ರೈಮಾಸಿಕದಲ್ಲಿ ಸುಮಾರು 1,700 ಇ-ವೀಸಾಗಳನ್ನು ನೀಡಲಾಗಿದೆ.
ಆದ್ರೆ ಸದ್ಯ ಭಾರತ ಹಾಗೂ ರಷ್ಯಾಗಳ ನಡುವೆ ಆದ ಒಪ್ಪಂದದ ಪ್ರಕಾರ ವೀಸಾ ಫ್ರೀ ಪ್ರಯಾಣವನ್ನು ಸದ್ಯದಲ್ಲಿಯೇ ಕಲ್ಲಿಸಲಾಗುವುದು. ಭಾರತೀಯರು ವೀಸಾ ಫ್ರೀಯಾಗಿ ಚೀನಾ ಇಲ್ಲವೇ ಇರಾನ್ ಮೂಲಕ ಪ್ರಯಾಣಿಸಬಹುದು.ಸದ್ಯ ಭಾರತ ಒಟ್ಟು 62 ದೇಶಗಳ ಜೊತೆ ವೀಸಾ ಫ್ರೀ ಪ್ರಯಾಣ ಬೆಳೆಸುವ ಒಪ್ಪಂದವನ್ನು ಮಾಡಿಕೊಂಡಿದೆ. ಪಾಸ್​ಪೋರ್ಟ್​ ಹೊಂದಿದ ಭಾರತೀಯರು ವೀಸಾ ಇಲ್ಲದೆಯೇ ಮಾಲ್ಡೀವ್ಸ್, ಇಂಡೋನೇಷಿಯಾ ಮತ್ತು ಥೈಲ್ಯಾಂಡ್​ನಂತಹ ದೇಶಗಳನ್ನು ಸುತ್ತಬಹುದು.ಇವುಗಳ ಪಟ್ಟಿಗೆ ಈಗ ರಷ್ಯಾವೂ ಸೇರಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment