newsfirstkannada.com

PUC Result: ವಿಜ್ಞಾನ​ ವಿಭಾಗದಲ್ಲಿ ವಿದ್ಯಾಲಕ್ಷ್ಮಿ ಟಾಪರ್.. 1 ಲಕ್ಷ ರೂಪಾಯಿ ಬಹುಮಾನ ಕೊಟ್ಟಿದ್ದು ಯಾರು?

Share :

Published April 10, 2024 at 3:22pm

    ಶೇಕಡಾ 100ಕ್ಕೆ ನೂರರಷ್ಟು ಫಲಿತಾಂಶ ಪಡೆದುಕೊಂಡ ಪಿಯು ಕಾಲೇಜು

    ವಿಜ್ಞಾನ ವಿಭಾಗದಲ್ಲಿ ಇಡೀ ರಾಜ್ಯಕ್ಕೆ ಫಸ್ಟ್ ಬಂದಿದ್ದಕ್ಕೆ ₹1 ಲಕ್ಷ ಬಹುಮಾನ​

    ಕಾಲೇಜಿನಲ್ಲಿ ಓದಿದ್ದ 619 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ

ಬೆಳಗಾವಿ: ಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಹುಬ್ಬಳ್ಳಿಯ ವಿದ್ಯಾನಿಕೇತನ ಕಾಲೇಜಿನ ವಿದ್ಯಾರ್ಥಿನಿ A.ವಿದ್ಯಾಲಕ್ಷ್ಮಿ ಇಡೀ ರಾಜ್ಯಕ್ಕೆ ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಲೇಜು ವತಿಯಿಂದ ಬಹುಮಾನವಾಗಿ 1 ಲಕ್ಷ ರೂಪಾಯಿಗಳನ್ನು ಚೆಕ್ ರೂಪದಲ್ಲಿ ನೀಡಲಾಗಿದೆ.

ವಿದ್ಯಾರ್ಥಿನಿ A.ವಿದ್ಯಾಲಕ್ಷ್ಮಿ ಹುಬ್ಬಳ್ಳಿಯ ವಿದ್ಯಾನಿಕೇತನ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಸದ್ಯ ಇವರು ರಿಲೀಸ್ ಆಗಿರುವ ಪಿಯುಸಿ ಫಲಿತಾಂಶದಲ್ಲಿ ವಿಜ್ಞಾನ ವಿಭಾಗದಲ್ಲಿ 600 ಅಂಕಗಳಿಗೆ 598 ಅಂಕಗಳನ್ನು ಪಡೆದುಕೊಂಡಿದ್ದಾರೆ. ಈ ಮೂಲಕ ಇಡೀ ರಾಜ್ಯಕ್ಕೆ ವಿಜ್ಞಾನ ವಿಭಾಗದಲ್ಲಿ ವಿದ್ಯಾಲಕ್ಷ್ಮಿ ಅವರು ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: PUC Result: ಅಪ್ಪ-ಅಮ್ಮ ರೈತಾಪಿ ಕೆಲಸ.. ಬಡತನದಲ್ಲಿ ಅರಳಿದ ಪ್ರತಿಭೆ ಸೌಂದರ್ಯ..!

ನ್ಯೂಸ್ ಫಸ್ಟ್ ಜೊತೆ ತಮ್ಮ ಖುಷಿಯನ್ನ ಹಂಚಿಕೊಂಡಿರುವ ವಿದ್ಯಾರ್ಥಿನಿ ಎ.ವಿದ್ಯಾಲಕ್ಷ್ಮಿ ಅವರು, ತಂದೆ, ತಾಯಿಯ ಸಹಕಾರ ಹಾಗೂ ಕಾಲೇಜಿನ ಪ್ರಾಧ್ಯಾಪಕರ ಸಹಕಾರದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಸತತ ಪರಿಶ್ರಮ ಹಾಗೂ ನಿಗಧಿತ ಟೈಮ್​ ಟೇಬಲ್ ಪ್ರಕಾರ ದಿನ ಅಭ್ಯಾಸ ಮಾಡಿದ್ದರಿಂದ ಇಂತಹ ಅತ್ಯತ್ತಮ ರಿಸಲ್ಟ್​​ ಬಂದಿದೆ. ಇದು ನನಗೆ ತುಂಬಾ ಖುಷಿ ಕೊಟ್ಟಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: 75KG ವೇಟ್​ ಲಿಫ್ಟಿಂಗ್​ ಮಾಡಿದ 9 ವರ್ಷದ ಬಾಲಕಿ; ಈಕೆ ಸಾಧನೆ ಕೇಳಿದ್ರೆ ಶಾಕ್​ ಆಗ್ತೀರಾ!

ಇದನ್ನೂ ಓದಿ: ದುಬಾರಿ ರೋಲ್ಸ್​​ ರಾಯ್ಸ್​ ಕಾರ್​​ ಖರೀದಿಸಿದ ನೀತಾ ಅಂಬಾನಿ; ಅಬ್ಬಬ್ಬಾ! ಇದರ ಬೆಲೆ ಎಷ್ಟು ಗೊತ್ತಾ?

ಇನ್ನು ಹುಬ್ಬಳ್ಳಿಯ ವಿದ್ಯಾನಿಕೇತನ ಪಿಯು ವಿಜ್ಞಾನ ಕಾಲೇಜು ಶೇಕಡಾ 100ಕ್ಕೆ ನೂರರಷ್ಟು ಫಲಿತಾಂಶ ಪಡೆದುಕೊಂಡಿದೆ. ಈ ಸಲ ಈ ಕಾಲೇಜಿನ ಎಲ್ಲ 619 ವಿದ್ಯಾರ್ಥಿಗಳು ಪಿಯು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇದರಿಂದ ಪಾಸ್ ಆದಂತಹ ಎಲ್ಲ ವಿದ್ಯಾರ್ಥಿಗಳಿಗೆ ಚೌಗಲಾ ಸಂಸ್ಥೆಯ ವಿದ್ಯಾನಿಕೇತನ ಪಿಯು ಕಾಲೇಜಿನ ಪ್ರಾಂಶುಪಾಲ ಅನಿಲ್ ಕುಮಾರ್ ಅವರು ಶುಭಾಶಯ ಕೋರಿದ್ದಾರೆ. ಅಲ್ಲದೇ ಇಡೀ ರಾಜ್ಯಕ್ಕೆ ಫಸ್ಟ್ ರ್ಯಾಂಕ್ ಪಡೆದುಕೊಂಡ ಎ.ವಿದ್ಯಾಲಕ್ಷ್ಮಿಗೆ ಕಾಲೇಜು ವತಿಯಿಂದ ಬಹುಮಾನವಾಗಿ 1 ಲಕ್ಷ ರೂಪಾಯಿಗಳನ್ನು ಚೆಕ್ ರೂಪದಲ್ಲಿ ನೀಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

PUC Result: ವಿಜ್ಞಾನ​ ವಿಭಾಗದಲ್ಲಿ ವಿದ್ಯಾಲಕ್ಷ್ಮಿ ಟಾಪರ್.. 1 ಲಕ್ಷ ರೂಪಾಯಿ ಬಹುಮಾನ ಕೊಟ್ಟಿದ್ದು ಯಾರು?

https://newsfirstlive.com/wp-content/uploads/2024/04/HBL_A_VIDYALAXMI.jpg

Load More