/newsfirstlive-kannada/media/post_attachments/wp-content/uploads/2025/04/dr-rajkumar4.jpg)
ಇಂದು ದಿವಂಗತ ಮೇರುನಟ ಡಾ. ರಾಜ್‌ಕುಮಾರ್ ಜಯಂತಿ. ಏಪ್ರಿಲ್ 24, 1929ರಂದು ರಾಜ್ಕುಮಾರ್ ಅವರು ಜನಿಸಿದರು. ರಾಜ್‌ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಇಂದು ಗಂಧದ ಗುಡಿ ಸಿನಿಮಾವನ್ನು ಮರು ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ:ಪುಟ್ಟಕ್ಕನ ಮಕ್ಕಳು ಸೀರಿಯಲ್ನಲ್ಲಿ ನಿಶ್ಚಿತಾರ್ಥ.. ಸ್ನೇಹಾಗೆ ಸಾಹೇಬ್ರ ಮೇಲಿರೋ ಪ್ರೀತಿಗೆ ಟ್ವಿಸ್ಟ್
ರಾಜಕುಮಾರ್ ಅವರ 150ನೇ ಸಿನಿಮಾವೇ ಗಂಧದ ಗುಡಿ. ಮಾಸ್ತಿಗುಡಿ ಅರಣ್ಯದಲ್ಲಿ ದಸರಾ ಆನೆಗಳ ನಡುವೆ ಗಂಧದ ಗುಡಿ ರೂಪುಗೊಂಡಿತು. 1973ರ ಸೆಪ್ಟಂಬರ್ 14ರಂದು ಗಂಧದ ಗುಡಿ ಸಿನಿಮಾ ಬಿಡುಗಡೆ ಆಗಿತ್ತು. ಅಷ್ಟೇ ಅಲ್ಲದೇ ಯಶಸ್ವಿಯಾಗಿ 25 ವಾರಗಳ ಪ್ರದರ್ಶನ ಕಂಡು ಬ್ಲಾಕ್ ಬಾಸ್ಟರ್ ಆಗಿತ್ತು. ಪ್ರೇಕ್ಷಕರು ಗಂಧದ ಗುಡಿ ಚಿತ್ರವನ್ನು ಇಷ್ಟಪಟ್ಟಿದ್ದರಿಂದ ಹದಿಮೂರೇ ವರ್ಷದಲ್ಲಿ 1986ರಲ್ಲಿ ಮರು ಬಿಡುಗಡೆ ಕಂಡು ದಾಖಲೆ ಮಾಡಿತ್ತು.
ಇದೀಗ ಇಂದು ಡಾ ರಾಜ್‌ಕುಮಾರ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ವಿಷ್ಣುವರ್ಧನ್ ಅಭಿನಯದ ಗಂಧದ ಗುಡಿ ಸಿನಿಮಾವನ್ನು ರಾಜ್ಯಾದಂತ್ಯ ಮರು ಬಿಡುಗಡೆ ಮಾಡಲಾಗಿದೆ. ಈಗಾಗಲೇ ಅಭಿಮಾನಿಗಳು ಥಿಯೇಟರ್ನತ್ತ ಜಮಾಸಿಕೊಂಡು ಗಂಧದ ಗುಡಿ ಸಿನಿಮಾ ವೀಕ್ಷಿಸುತ್ತಿದ್ದಾರೆ.
ದೊಡ್ಮನೆಯಿಂದ ಸಿನಿಮಾ ಇಂಡಸ್ಟ್ರಿ ಕಾಲಿಟ್ಟ ಮಹಿಳಾ ನಿರ್ಮಾಪಕರು ಇಲ್ಲಿ ತನಕ ದೊಡ್ಡ ಗೆಲುವು ಸಾಧಿಸಿದ್ದಾರೆ. ಇದೀಗ ಪಾರ್ವತಮ್ಮ ರಾಜ್‌ಕುಮಾರ್, ಗೀತಾ ಶಿವ ರಾಜ್ಕುಮಾರ್, ಅಶ್ವಿನಿ ಪುನೀತ್ ರಾಜ್‍ಕುಮಾರ್ ಪಟ್ಟಿಗೀಗ ಶಿವಣ್ಣನ ಪುತ್ರಿ ನಿವೇದಿತಾ ಸೇರ್ಪಡೆ ಆಗಿದ್ದಾರೆ. ಇಲ್ಲಿ ತನಕ ವೆಬ್ ಸೀರಿಸ್, ಧಾರಾವಾಹಿ ನಿರ್ಮಾಣ ಮಾಡಿದ್ದ ನಿವೇದಿತಾ, ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ನಿವೇದಿತಾ ನಿರ್ಮಾಣದ ಫೈರ್ ಫ್ಲೈ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆ ಆಗ್ತಿದೆ. ಈಗಾಗಲೇ ಸೆಲೆಬ್ರಿಟಿ ಪ್ರೀಮಿಯರ್ ಶೋ ನಡೆದಿದ್ದು, ಎಲ್ಲರಿಂದಲೂ ಉತ್ತಮವಾದ ಪ್ರತಿಕ್ರಿಯೆ ದೊರೆತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ