ತಿರುಚಿಯಲ್ಲಿ ಬಸವ ಜಯಂತಿ ಸಂಭ್ರಮ.. ಕಾರ್ಯಕ್ರಮ ಉದ್ಘಾಟಿಸಿದ HM ರೇಣುಕ ಪ್ರಸನ್ನ

author-image
Ganesh
Updated On
ತಿರುಚಿಯಲ್ಲಿ ಬಸವ ಜಯಂತಿ ಸಂಭ್ರಮ.. ಕಾರ್ಯಕ್ರಮ ಉದ್ಘಾಟಿಸಿದ HM ರೇಣುಕ ಪ್ರಸನ್ನ
Advertisment
  • ತಿರುಚಿಯಲ್ಲಿ ಬಸವ ಜಯಂತಿ, ಅಭಿನಂದನಾ ಸಮಾರಂಭ
  • ಬ್ರಹ್ಮಪುರ ಆಧೀನಂ ಸ್ವಾಮೀಜಿ ಸಾನಿಧ್ಯದಲ್ಲಿ ಕಾರ್ಯಕ್ರಮ
  • ಕಾರ್ಯಕ್ರಮಕ್ಕೆ ಯಾರೆಲ್ಲ ಅತಿಥಿಗಳಾಗಿ ಬಂದಿದ್ದರು..?

ತಿರುಚಿ: ತಮಿಳುನಾಡಿನ ತಿರುಚಿಯಲ್ಲಿ ಇವತ್ತು ಬಸವ ಜಯಂತಿ (Basava Jayanti-2025) ಮತ್ತು ಅಭಿನಂದನಾ ಸಮಾರಂಭ ನಡೆಯಿತು. ಅಖಿಲ ಭಾರತ ವೀರಶೈವ ಮಹಾಸಭೆಯ ರಾಷ್ಟ್ರೀಯ ಕಾರ್ಯದರ್ಶಿಗಳಾದ ಹೆಚ್.ಎಂ.ರೇಣುಕ ಪ್ರಸನ್ನ ಉದ್ಘಾಟಿಸಿದರು.

ಸಾನಿಧ್ಯವನ್ನು ದಿಂಡಿ ಓಣಂನಾ ಮಹಿಲಂ ಮಠದ ಪೂಜ್ಯ ಬ್ರಹ್ಮಪುರ ಆಧೀನಂ ಸ್ವಾಮೀಜಿ ವಹಿಸಿದ್ದರು. ತಮಿಳುನಾಡು ರಾಜ್ಯ ಘಟಕದ ಅಧ್ಯಕ್ಷರಾದ ಎಸ್.ನಾಗರತಿನಂ ಪ್ರಧಾನ ಕಾರ್ಯದರ್ಶಿಗಳಾದ ಡಿ.ಎಲ್ ಬಾಲಾಜಿಯವರು ಮತ್ತು ರಾಷ್ಟ್ರೀಯ ವಾಣಿಜ್ಯ ಮತ್ತು ಕೈಗಾರಿಕಾ ವಿಭಾಗದ ಅಧ್ಯಕ್ಷರಾದ ಉಮೇಶ್ ಹೆಚ್.ಪಾಟೀಲ್ ಭಾಗವಹಿಸಿದ್ದರು.

publive-image

ಈ ಸಮಾರಂಭದಲ್ಲಿ ಪದ್ಮಶ್ರೀ ಪುರಸ್ಕೃತರಾದ ಕಣ್ಣಪ್ಪ ಸಂಬಂದನ್ ಅವರನ್ನು ಮಹಾಸಭಾ ವತಿಯಿಂದ ಸನ್ಮಾನಿಸಲಾಯಿತು. ಕಣ್ಣಪ್ಪ ಅವರು ಜಾನಪದ ಶೈಲಿಯ ತೆರುಕೊತ್ತು (Terukkuttu) ಬೀದಿ ನಾಟಕ ಮಾಡಿಕೊಂಡು ಬಂದಿದ್ದಾರೆ. ಇದು ಒಂದು ಮನರಂಜನೆ, ಆಚರಣೆ ಮತ್ತು ಸಾಮಾಜಿಕ ಶಿಕ್ಷಣದ ಮಾಧ್ಯಮವಾಗಿದೆ. ತೆರುಕೂತ್ತು ತಮಿಳುನಾಡಿನ ಆರಂಭಿಕ ಕಾಲದಿಂದಲೂ ರೂಢಿಯಲ್ಲಿದೆ. ಇದು ತಮಿಳುನಾಡಿನಲ್ಲಿ ಮತ್ತು ಶ್ರೀಲಂಕಾದ ತಮಿಳು ಮಾತನಾಡುವ ಪ್ರದೇಶಗಳಲ್ಲಿ ಪ್ರಚಲಿತದಲ್ಲಿದೆ.

ಇದನ್ನೂ ಓದಿ:ಟೆಸ್ಲಾ ಹೊಸ ಚಮತ್ಕಾರ.. ಚಾಲಕನಿಲ್ಲದೇ 30 ನಿಮಿಷ ನಗರ ಸುತ್ತಿ ಗ್ರಾಹಕನ ಮನೆ ತಲುಪಿದ ಟೆಸ್ಲಾ ಕಾರು..! VIDEO

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment