/newsfirstlive-kannada/media/post_attachments/wp-content/uploads/2025/07/DARSHAN-3.jpg)
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪಾಲಿಗೆ ಇವತ್ತು ಬಿಗ್ಡೇ. ಬರೀ ದರ್ಶನ್ ಮಾತ್ರವಲ್ಲ, ದರ್ಶನ್ ಗೆಳತಿ ಪವಿತ್ರಾ ಗೌಡ ಸೇರಿದಂತೆ 7 ಆರೋಪಿಗಳಿಗೂ ಮಹತ್ವದ ದಿನ.
ದರ್ಶನ್ ಪಾಲಿಗೆ ಬಿಗ್ ಡೇ
ರೇಣುಕಾಸ್ವಾಮಿ ಕೇಸ್‌ನಲ್ಲಿ ನಟ ದರ್ಶನ್, ಪವಿತ್ರಾಗೌಡ ಹಾಗೂ ಇತರೆ ಆರೋಪಿಗಳ ಜಾಮೀನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಈಗಾಗಲೇ ರಾಜ್ಯ ಸರ್ಕಾರ ಪರ ವಕೀಲರ ವಾದ ಆಲಿಸಿ, ದಾಖಲೆಗಳನ್ನು ಸ್ವೀಕರಿಸಿರುವ ಪೀಠ, ಇವತ್ತು ಆರೋಪಿಗಳ ಪರ ವಕೀಲರ ವಾದ ಮಂಡನೆಯನ್ನು ಕೇಳಲಿದ್ದು, ಬಳಿಕ ಅಂತಿಮ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ. ಸುಪ್ರೀಂ ಕೋರ್ಟ್ನಲ್ಲಿ ಕಳೆದ ವಾರ ನಡೆದ ವಿಚಾರಣೆ ವೇಳೆ ಹೈಕೋರ್ಟ್ ತೀರ್ಪಿನ ಬಗ್ಗೆ ಬೇಸರ ವ್ಯಕ್ತಪಡಿಸಿತ್ತು.
ದರ್ಶನ್ ಬೇಲ್ ಬಗ್ಗೆ ಸುಪ್ರೀಂ ಅತೃಪ್ತಿ
- ನಮಗೆ ಪೊಲೀಸರು ನೀಡಿರುವ ಸಾಕ್ಷ್ಯಗಳು ತೃಪ್ತಿ ತಂದಿವೆ
- ಬೇಲ್ ನೀಡಲು ಹೈಕೋರ್ಟ್ ಕಾರಣಗಳು ಸಮಂಜಸವಾಗಿಲ್ಲ
- ಹೈಕೋರ್ಟ್ ಆದೇಶದಲ್ಲಿ ಚಡಪಡಿಕೆ ಎದ್ದು ಕಾಣುತ್ತಿದೆ
- ಬೇಲ್ ನೀಡಲು ಅಂಶ ಸಿಗಲಿ ಎನ್ನುವ ಚಡಪಡಿಕೆ ಕಾಣುತ್ತಿದೆ
- ಈ ವಿಷ್ಯದಲ್ಲಿ ಹೈಕೋರ್ಟ್ ತನ್ನ ವಿವೇಚನೆ ಸೂಕ್ತವಾಗಿ ಬಳಸಿಲ್ಲ
- ಜಾಮೀನಿನ ವಿಷ್ಯದಲ್ಲಿ ನಾವೇಕೆ ಮಧ್ಯಪ್ರವೇಶ ಮಾಡಬಾರದೆಂದು
- ನಟ ದರ್ಶನ್ ಪರ ವಕೀಲ ಕಪಿಲ್ ಸಿಬಲ್ಗೆ ಸುಪ್ರೀಂ ಪ್ರಶ್ನೆ
ಸುಪ್ರೀಂಕೋರ್ಟ್ನ ನ್ಯಾಯಮೂರ್ತಿ ಜೆಬಿ ಪಾರ್ದಿವಾಲಾ ಹಾಗೂ ನ್ಯಾಯಮೂರ್ತಿ ಮಹದೇವನ್ ನೇತೃತ್ವದ ದ್ವಿಸದಸ್ಯ ಪೀಠವು ಇವತ್ತು ವಿಚಾರಣೆ ಮುಂದುವರಿಸಲಿದೆ. ಈಗಾಗಲೇ ಸರ್ಕಾರಿ ಪರ ವಕೀಲರ ವಾದ ಮುಗಿದಿದ್ದು, ದರ್ಶನ್ ಪರ ಖ್ಯಾತ ವಕೀಲ ಕಪಿಲ್ ಸಿಬಲ್ ಇವತ್ತು ವಾದ ಮಂಡಿಸಲಿದ್ದಾರೆ. ಕಪಿಲ್ ಸಿಬಲ್ ಅವರ ವಾದವನ್ನು ಆಲಿಸಿ ಸುಪ್ರೀಂಕೋರ್ಟ್ ಬಹುತೇಕ ಇವತ್ತೇ ತನ್ನ ತೀರ್ಪು ಪ್ರಕಟಿಸುವ ಸಾಧ್ಯತೆ ಇದ್ದು ದರ್ಶನ್‌ಗೆ ಟೆನ್ಷನ್ ಹೆಚ್ಚಿಸಿದೆ. ಜೊತೆಗೆ ಸಾಕ್ಷಿ ಜೊತೆ ಕಾಣಿಸಿ ಕೊಳ್ಳುವ ಮೂಲಕ ಜಾಮೀನು ನಿಯಮವನ್ನು ಉಲ್ಲಂಘಿಸಿದ್ದಾರೆ. ರೆಗ್ಯುಲರ್ ಬೇಲ್ಗೂ ಮೊದ್ಲು.. ಬೆನ್ನು ನೋವಿಗೆ ಸರ್ಜರಿ ಕಾರಣ ಕೊಟ್ಟು ಜಾಮೀನು ಪಡೆದಿದ್ರು. ಆದ್ರೆ, ದರ್ಶನ್ ಬೆನ್ನು ನೋವಿಗೆ ಸರ್ಜರಿ ಮಾಡಿಸಿಕೊಂಡಿಲ್ಲ. ಸದ್ಯ ಹೈಕೋರ್ಟ್ ಜಾಮೀನು ನೀಡಿರೋದರ ಬಗ್ಗೆಯೇ ಸುಪ್ರೀಂಕೋರ್ಟ್ ಅತೃಪ್ತಿಯೇ ವ್ಯಕ್ತಪಡಿಸಿರೋದು ಆರೋಪಿ ದರ್ಶನ್‌ಗೆ ಟೆನ್ಶನ್ ಹೆಚ್ಚಿಸಿದೆ. ಒಂದ್ವೇಳೆ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿದ್ರೆ, ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ ಏಳು ಆರೋಪಿಗಳೂ ಮತ್ತೆ ಜೈಲು ಪಾಲಾಗುವ ಸಾಧ್ಯತೆ ಇದೆ.
ದಿ ಡೆವಿಲ್ ಶೂಟಿಂಗ್ನಲ್ಲಿರುವ ನಟ ದರ್ಶನ್‌ಗೆ ಢವಢವ
ಜಾಮೀನಿನ ಮೇಲೆ ಹೊರಗಿರುವ ನಟ ದರ್ಶನ್ ಸದ್ಯ ದಿ ಡೆವಿಲ್ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಜುಲೈ 30ರವರೆಗೆ ವಿದೇಶದಲ್ಲಿ ಶೂಟಿಂಗ್ ಅವಕಾಶ ಸಿಕ್ಕಿದ್ದು, ಥೈಲ್ಯಾಂಡ್ನಲ್ಲಿ ದಿ ಡೆವಿಲ್ ಶೂಟಿಂಗ್ ಭರ್ಜರಿ ಆಗಿ ಸಾಗಿದೆ. ಶೂಟಿಂಗ್ ಬಿಡುವಿನ ವೇಳೆ ದರ್ಶನ್ ಥೈಲ್ಯಾಂಡ್ನ ಬೀದಿಗಳಲ್ಲಿ ಸುತ್ತಾಡುತ್ತಾ, ಪಾರ್ಟಿ ಮಾಡುತ್ತಾ ಶೂಟಿಂಗ್ ಎಂಜಾಯ್ ಮಾಡ್ತಿದ್ದಾರೆ.
ಇದನ್ನೂ ಓದಿ: ಎಂಜಿನಿಯರ್ ಕನಸು ಕಾಣ್ತಿರೋರಿಗೆ ಬಿಗ್ ಶಾಕ್.. ಶೇಕಡಾ 83ರಷ್ಟು ಅಭ್ಯರ್ಥಿಗಳಿಗೆ ಕೆಲಸ ಸಿಗ್ತಿಲ್ಲ!
ಒಟ್ಟಾರೆ.. ಇವತ್ತು ನಟ ದರ್ಶನ್ ಪಾಲಿಗೆ ಮಹತ್ವದ ದಿನ ಅಂದ್ರೂ ತಪ್ಪಾಗೋದಿಲ್ಲ. ಒಂದ್ವೇಳೆ ಸುಪ್ರೀಂಕೋರ್ಟ್ ರಾಜ್ಯ ಸರ್ಕಾರದ ಮೇಲ್ಮನವಿಯನ್ನು ಪರಿಗಣಿಸಿದ್ರೆ.. ಸ್ಯಾಂಡಲ್ವುಡ್ನ ಸಾರಥಿ ದರ್ಶನ್ ಮತ್ತೆ ಜೈಲಿಗೆ ಹೋಗುವ ಸಂಭವ ಎದುರಾಗಬಹುದು. ಜೊತೆಗೆ ಮುಂಬರುವ ಡೆವಿಲ್ ಸಿನಿಮಾಕ್ಕೂ ವಿಘ್ನ ಎದುರಾಗಬಹುದು. ಹೀಗಾಗಿ ಇವತ್ತು ಎಲ್ಲರ ಚಿತ್ತ ಸುಪ್ರೀಂಕೋರ್ಟ್ನತ್ತ ಹರಿದೆ.
ಇದನ್ನೂ ಓದಿ: ಅಚ್ಚರಿ ಮೂಡಿಸಿದ ಧನಕರ್ ದಿಢೀರ್ ರಾಜೀನಾಮೆ.. ರಾಷ್ಟ್ರಪತಿಗೆ ಬರೆದ ಪತ್ರದಲ್ಲಿ ಏನಿದೆ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ