ಕರ್ನಾಟಕದ ಅತಿದೊಡ್ಡ ಎಜುಕೇಷನಲ್​ ಎಕ್ಸ್​ಪೋ; ವಿದ್ಯಾರ್ಥಿಗಳು, ಪೋಷಕರಿಂದ ಉತ್ತಮ ರೆಸ್ಪಾನ್ಸ್!​

author-image
Veena Gangani
Updated On
ಕರ್ನಾಟಕದ ಅತಿದೊಡ್ಡ ಎಜುಕೇಷನಲ್​ ಎಕ್ಸ್​ಪೋ; ವಿದ್ಯಾರ್ಥಿಗಳು, ಪೋಷಕರಿಂದ ಉತ್ತಮ ರೆಸ್ಪಾನ್ಸ್!​
Advertisment
  • ಸಿಇಟಿ & ಕಾಮೆಡ್-ಕೆಗೆ ಸಂಬಂಧಿಸಿದ ಗೊಂದಲಗಳಿಗೂ ತೆರೆ
  • ಎಕ್ಸ್​​ಪೋಗೆ ಚಾಲನೆ ನೀಡಿದ ನಟ ವಿಜಯ್ ರಾಘವೇಂದ್ರ
  • ಕರ್ನಾಟಕದ ಅತೀ ದೊಡ್ಡ ಶೈಕ್ಷಣಿಕ ಎಕ್ಸ್​ಪೋಗೆ ಇಂದು ಚಾಲನೆ

ಬೆಂಗಳೂರು: ಎಸ್​ಎಸ್​​ಎಲ್​​ಸಿ ಆದ್ಮೇಲೆ ಮುಂದೇನು? ಪಿಯುಸಿ ನಂತರ ಯಾವ ಕೋರ್ಸ್​ ಆಯ್ಕೆ ಮಾಡಿಕೊಳ್ಳಬೇಕು? ಯಾವೆಲ್ಲಾ ಕಾಲೇಜುಗಳಲ್ಲಿ ಯಾವ್ಯಾವ ಕೋರ್ಸ್​ಗಳಿವೆ? ಎಂಬ ವಿದ್ಯಾರ್ಥಿಗಳ ಗೊಂದಲಗಳಿಗೆ ತೆರೆ ಎಳೆಯುವಂತಹ ವೇದಿಕೆಯನ್ನ ಎಡ್ಯುವರ್ಸ್ ಪ್ರಿಮಿಯರ್ ಎಜುಕೇಶನ್ ಎಕ್ಸ್ ಪೋ ಕಲ್ಪಿಸಿದೆ. ಒಂದೇ ಸೂರಿನಡಿ 50ಕ್ಕೂ ಹೆಚ್ಚು ಪ್ರತಿಷ್ಠಿತ ವಿಶ್ವವಿದ್ಯಾಲಯಗಳು, ಕಾಲೇಜುಗಳನ್ನೊಳಗೊಂಡ ಶೈಕ್ಷಣಿಕ ಮೇಳಕ್ಕೆ ಇಂದು ಚಾಲನೆ ಸಿಕ್ಕಿದೆ.

ಇದನ್ನೂ ಓದಿ:ಇಂದಿನಿಂದ ಕರ್ನಾಟಕದ ಅತೀ ದೊಡ್ಡ ಎಡ್ಯುವರ್ಸ್ ಎಜುಕೇಷನ್​ ಎಕ್ಸ್​ಪೋ!

ವಿದ್ಯಾರ್ಥಿಗಳ ಮುಖದಲ್ಲಿ ಮಂದಹಾಸ. ಗೊಂದಲಗಳಿಗೆ ಉತ್ತರ ಸಿಕ್ಕ ಆಶಾಭಾವ. ಫೋಷಕರಲ್ಲಿ ನಿರಾಳತೆ. ತಜ್ಞರ ಸಲಹೆ ಸೂಚನೆ ಇಂತದ್ದೊಂದು ಕ್ಷಣಕ್ಕೆ ಸಾಕ್ಷಿಯಾಗಿದ್ದು, ವಿದ್ಯಾರ್ಥಿಗಳ ಭವಿಷ್ಯದ ದೃಷ್ಠಿಯಿಂದ ಡೆಕ್ಕನ್ ಹೆರಾಲ್ಡ್ & ಪ್ರಜಾವಾಣಿ ಆಯೋಜಿಸಿರುವ ಪ್ರೀಮಿಯರ್ ಎಜುಕೇಶನ್ ಎಕ್ಸ್ ಪೋ. ನ್ಯೂಸ್‌ಫಸ್ಟ್‌ ಈ ಎಕ್ಸ್‌ಪೋನ ಟೆಲಿವಿಷನ್ ಪಾರ್ಟ್‌ನರ್.
ಇವತ್ತು ಮತ್ತು ನಾಳೆ ಎರಡು ದಿನಗಳ ಕಾಲ ಬೆಳಿಗ್ಗೆ 10ರಿಂದ ಸಂಜೆ 5ರ ವರೆಗೆ ಮೇಳ ನಡೆಯಲಿದ್ದು, ಎಲ್ಲರಿಗೂ ಉಚಿತ ಪ್ರವೇಶ ನೀಡಲಾಗಿದೆ. ಈ ಮೇಳದಲ್ಲಿ 50ಕ್ಕೂ ಹೆಚ್ಚಿನ ಶಿಕ್ಷಣ ಸಂಸ್ಥೆಗಳು ಭಾಗಿಯಾಗಿದ್ದು, ವಿದ್ಯಾರ್ಥಿಗಳ ಗೊಂದಲ ಬಗೆಹರಿಸೋದ್ರ ಜೊತೆಯಲ್ಲಿ ವೃತ್ತಿಪರ ಕೋರ್ಸ್​ಗಳ ಬಗ್ಗೆಯೂ ಮಾಹಿತಿ ನೀಡಲಾಯ್ತು. ಎಜುಕೇಶನ್​​ ಎಕ್ಸ್​​ಪೋಗೆ ನಟ ವಿಜಯ್ ರಾಘವೇಂದ್ರ ಚಾಲನೆ ನೀಡಿದ್ರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಜಾವಾಣಿ ಚೀಫ್ ಎಡಿಟರ್ ರಶ್ಮಿ.ಎಸ್ ಜೊತೆ ಡೆಕ್ಕನ್ ಹೆರಾಲ್ಡ್ & ಪ್ರಜಾವಾಣಿ ಹೆಡ್ HR ರಾಜೀವ್ ವೆಲೂರ್, ಎಜುಕೇಶನಿಸ್ಟ್ ಐಶ್ವರ್ಯ ಡಿ.ಕೆ.ಎಸ್ ಹೆಗ್ಡೆ,‌ ನ್ಯೂಸ್ ಫಸ್ಟ್ ಅಸಿಸ್ಟೆಂಟ್​ ಎಡಿಟರ್ ಮತ್ತು ಸೀನಿಯರ್ ಆ್ಯಂಕರ್ ರಕ್ಷತ್ ಶೆಟ್ಟಿ ಭಾಗಿಯಾಗಿದ್ರು. ಈ ವೇಳೆ ಮಾತನಾಡಿದ ಗಣ್ಯರು ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದ್ರು. ಇನ್ನು, ಶಿಕ್ಷಣ ಕ್ಷೇತ್ರದ ಹಲವು ಪರಿಣಿತರು, ತಜ್ಞರು ಎಕ್ಸ್​​ಪೋದಲ್ಲಿ ಭಾಗಿಯಾಗಿದ್ದು ಸಂವಾದ, ಉಪನ್ಯಾಸ ಮತ್ತು ಚರ್ಚೆಗಳನ್ನು ಆಯೋಜಿಸಲಾಗಿತ್ತು.

ಇದನ್ನೂ ಓದಿ: PUC ನಂತರ ಮುಂದೇನು? ನಿಮ್ಮ ಎಲ್ಲಾ ಗೊಂದಲಗಳಿಗೆ ಸಿಗಲಿದೆ ಉತ್ತರ, ಡೋಂಟ್ ಮಿಸ್​..!

ಎರಡೂ ದಿನ ಸಿಇಟಿ ಹಾಗೂ ಕಾಮೆಡ್-ಕೆ ಕುರಿತು ವಿಶೇಷ ಗೋಷ್ಠಿಗಳನ್ನ ನಡೆಸಲಾಗ್ತಿದ್ದು, ಎಕ್ಸ್​ಪೋದಲ್ಲಿ ಭಾಗಿಯಾಗಿ ಮಾತನಾಡಿದ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ರು. ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ನಡೆಯುತ್ತಿರುವ ಎಡ್ಯುವರ್ಸ್​​ ಎಜುಕೇಶನ್​​ ಎಕ್ಸ್​ಪೋ ನಾಳೆ ಕೂಡ ಇರಲಿದ್ದು, ಇವತ್ತು ಎಕ್ಸ್​ಪೋಗೆ ತೆರಳಿ ಮಾಹಿತಿ ಪಡೆಯಲು ಸಾಧ್ಯವಾಗಿಲ್ಲದವರು ನಾಳೆ ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ಎಕ್ಸ್​ಪೋಗೆ ಭೇಟಿ ನೀಡಿ ಭವಿಷ್ಯದ ಗೊಂದಲಗಳನ್ನ ಬಗೆಹರಿಸಿಕೊಳ್ಳಬಹುದಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment