/newsfirstlive-kannada/media/post_attachments/wp-content/uploads/2023/08/GOLD_RATE-1-1.jpg)
ಮಹಿಳೆಯರು ಅಷ್ಟೇ ಅಲ್ಲ, ಪುರುಷರನ್ನೂ ಹಳದಿ ಲೋಹ ಆಕರ್ಷಿಸುತ್ತದೆ. ಮದುವೆ ಸೀಸನ್ನಲ್ಲಂತೂ ಬಂಗಾರದ ಆಭರಣಗಳಿಗೆ ವಿಶೇಷವಾದ ಡಿಮ್ಯಾಂಡ್ ಇದ್ದೆ ಇರುತ್ತದೆ. ನೀವು ಚಿನ್ನ ಖರೀದಿ ಮಾಡಿದರೆ ಮದುವೆಗಳ ಸೀಸನ್ಗಳಲ್ಲಿ ಬಂಗಾರ ಖರೀದಿ ಮಾಡಬೇಕಾದ ಅಗತ್ಯ ಬರುತ್ತದೆ. ಈ ಹೊತ್ತಲೇ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ ಆಗಿದೆ.
ಇಷ್ಟು ದಿನ ಅಂದರೆ 2025ರ ಕೇಂದ್ರ ಸರ್ಕಾರದ ಬಜೆಟ್ಗೂ ಮುನ್ನ ಬಂಗಾರದ ಬೆಲೆಯಲ್ಲಿ ಭಾರೀ ಏರಿಕೆ ಕಂಡಿತ್ತು. 70- 75 ಸಾವಿರ ರೂಪಾಯಿ ಇದ್ದ ಚಿನ್ನ ಒಂದೇ ಸಮನೆ ಏರಿಕೆ ಕಂಡು 84 ಸಾವಿರ ರೂಪಾಯಿ ಗಡಿ ಮುಟ್ಟಿತ್ತು. ಇದರಲ್ಲಿ ಈಗ ಕೊಂಚ ಕಡಿಮೆ ಆಗಿರುವುದು ಬೇಸರ ಕಡಿಮೆ ಮಾಡಿದೆ ಎನ್ನಬಹುದು. ಇಂದಿನ ಬಂಗಾರದ ಬೆಲೆ ಹೀಗಿದೆ.
22 ಕ್ಯಾರೆಟ್ನ ಚಿನ್ನದ ಬೆಲೆ
ಬೆಂಗಳೂರಿನಲ್ಲಿ ಇವತ್ತು 22 ಕ್ಯಾರೆಟ್ನ 1 ಗ್ರಾಂ ಚಿನ್ನದ ಬೆಲೆ ₹7,705 ಇದೆ. ಇದು ನಿನ್ನೆ ₹7,745 ಇತ್ತು. ನಿನ್ನೆ ಬೆಲೆಗೆ ಹೋಲಿಕೆ ಮಾಡಿದರೆ 40 ರೂಪಾಯಿ ಇಳಿಕೆ ಕಂಡಿದೆ.
22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ ₹77,050 ಇದೆ. ಇದು ನಿನ್ನೆ ₹77,450 ಇತ್ತು. ಚಿನ್ನದ ದರದಲ್ಲಿ 400 ರೂಪಾಯಿ ಕಡಿಮೆ ಆಗಿದೆ.
24 ಕ್ಯಾರೆಟ್ನ ಚಿನ್ನದ ಬೆಲೆ ಎಷ್ಟು?
ಬೆಂಗಳೂರಿನಲ್ಲಿ ಇವತ್ತು 24 ಕ್ಯಾರೆಟ್ನ 1 ಗ್ರಾಂ ಚಿನ್ನದ ದರ ₹8,405 ಆಗಿದೆ. ಇದು ನಿನ್ನೆ ₹8,449 ಇತ್ತು. ಇವತ್ತು 44 ರೂಪಾಯಿ ಇಳಿಕೆಯಾಗಿದೆ.
24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ ₹84,050 ಇದೆ. ಇದು ನಿನ್ನೆ ₹84,490 ಇತ್ತು. ನಿನ್ನೆ ದರಕ್ಕೆ ಹೋಲಿಸಿದರೆ ₹440 ಕಡಿಮೆ ಆಗಿದೆ.
ಇದನ್ನೂ ಓದಿ:ದೇಶಕ್ಕಾಗಿ ಆಡುವುದು ಗ್ರೇಟ್ ಫೀಲಿಂಗ್.. 37 ಎಸೆತದಲ್ಲಿ ಸೆಂಚುರಿ ಸಿಡಿಸಿ ಅಭಿಷೇಕ್ ಶರ್ಮಾ ಏನ್ ಹೇಳಿದರು?
ಈ ನಗರಗಳಲ್ಲಿ ಬಂಗಾರದ ಬೆಲೆ..!
ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ ₹77,200 ಇದೆ.
ಚೆನ್ನೈನಲ್ಲಿ 22 ಕ್ಯಾರೆಟ್ ಚಿನ್ನದ ದರ ₹77,050 ಇದೆ.
ಬಳ್ಳಾರಿಯಲ್ಲಿ 22 ಕ್ಯಾರೆಟ್ ಚಿನ್ನ ₹77,050 ಇದೆ.
ಬೆಳ್ಳಿಯ ಬೆಲೆ ಎಷ್ಟಿದೆ?
ಇವತ್ತು ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಯ ಬೆಲೆ ₹99.50 ಇದೆ. ಇದು ನಿನ್ನೆ ₹99.50 ಇತ್ತು. ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಹಾಗೇ ಇಂದು 10 ಗ್ರಾಂ ಬೆಳ್ಳಿಯ ಬೆಲೆ ₹995 ಇದ್ದು ನಿನ್ನೆ ಇದರ ಬೆಲೆ ₹995 ಇತ್ತು. ಹೀಗಾಗಿ ಬೆಳ್ಳಿಯ ಬೆಲೆ ಸೇಮ್ ಟು ಸೇಮ್ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ