/newsfirstlive-kannada/media/post_attachments/wp-content/uploads/2024/08/pharmacy.jpg)
ಕೊಲ್ಕತ್ತಾದ ಆರ್. ಜಿ ಕರ್ ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಹತ್ಯೆ ಪ್ರಕರಣ ಸಂಬಂಧ ದೇಶದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇದೇ ಸಂಬಂಧ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (IMA) ಇಂದು ದೇಶಾದ್ಯಂತ ಖಾಸಗಿ ಆಸ್ಪತ್ರೆ ಬಂದ್ ಮಾಡಲು ಕರೆ ನೀಡಿದೆ. ಅದರಂತೆಯೇ ಬೆಂಗಳೂರಿನಲ್ಲೂ ಇದರ ಬಿಸಿ ತಟ್ಟಿದ್ದು, ದೂರದ ಊರಿನಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಿಗೆ ಬಂದು ರೋಗಿಗಳು ಹಿಂತಿರುವ ಪರಿಸ್ಥಿತಿ ಉಂಟಾಗಿದೆ.
ಖಾಸಗಿ ಆಸ್ಪತ್ರೆಗಳಲ್ಲಿ ಹೊರರೋಗಿ ವಿಭಾಗ ಬಂದ್​ ಹಿನ್ನಲೆ ದೂರದ ಊರಿನಿಂದ ಬೆಂಗಳೂರಿಗೆ ಬರುವ ರೋಗಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಡಯಾಲಿಸಿಸ್ ಸಿಗದೇ ರೋಗಿಗಳು ಪರದಾಡುತ್ತಿದ್ದಾರೆ.
ಇದನ್ನೂ ಓದಿ: ಕೋಲಾರದ ಕೆಂಪು ಸುಂದರಿಗೆ ಸಮಸ್ಯೆ ತಂದೊಡ್ಡಿದ ಬಾಂಗ್ಲಾ ಬಿಕ್ಕಟ್ಟು.. ಟೊಮೊಟೊ ಬೆಲೆ ಶೇ60 ರಷ್ಟು ಕುಸಿತ
[caption id="attachment_81441" align="alignnone" width="800"]
ಡಯಾಲಿಸಿಸ್ ಮಾಡಲು ಬಂದ ಕೃಷ್ಣಪ್ಪ[/caption]
ಅದರಂತೆಯೇ ರಾಜಾಜಿನಗರ ಸುಗುಣ ಆಸ್ಪತ್ರೆಗೆ ಡಯಾಲಿಸಿಸ್​ಗೆಂದು ಬಂದ ರೋಗಿಗಳು ಅತ್ತ ಬಂದ್​ ಹಿನ್ನೆಲೆ ವಾಪಾಸ್​ ಹೋಗುತ್ತಿದ್ದಾರೆ. ತುಮಕೂರಿನ ಗೊರವನಹಳ್ಳಿಯಿಂದ ಬಂದು ವಾಪಸ್ ಹೋಗಲು ಮುಂದಾಗಿದ್ದಾರೆ.
ಇದನ್ನೂ ಓದಿ: 2 ಗಂಟೆ, 80ಕ್ಕೂ ಅಧಿಕ ತಂತ್ರಜ್ಞರ ಪ್ರಯತ್ನ ಯಶಸ್ವಿ; ಕನ್ಹಯ್ಯ ನಾಯ್ಡು ತಂಡದ ರೋಚಕ ಕಾರ್ಯಾಚರಣೆ ಹೇಗಿತ್ತು?
ಡಯಾಲಿಸಿಸ್ ರೋಗಿ ಕೃಷ್ಣಪ್ಪ ಎಂಬವರು ತುಮಕೂರಿನಿಂದ ನಿನ್ನೆ ರಾತ್ರಿಯೇ ಬೆಂಗಳೂರಿಗೆ ಬಂದಿದ್ದರು. ಆದರೆ ಪ್ರೊಟೆಸ್ಟ್ ಇರೋ ಕಾರಣ ಆಸ್ಪತ್ರೆ ಸಿಬ್ಬಂದಿ ಸೋಮವಾರ ಬರ ಹೇಳಿದ್ದಾರೆ. ಪಾಪ ಅವರು ಪ್ರತಿಭಟನೆ ಮಾಡ್ತಾ ಇದ್ದಾರೆ. ವಿಷಯ ಗೊತ್ತಿಲ್ಲದೆ ಬಂದಿದ್ದೇವೆ. ಏನು ಮಾಡೋಕೆ ಆಗಲ್ಲ ವಾಪಸ್ ಹೋಗಬೇಕು. ನಾಳೆವರೆಗೂ ನೀರು ಕಡಿಮೆ ಕುಡಿದು ಸೋಮವಾರ ಬರ್ತೀನಿ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us