25 ಕೋಟಿ ಕಾರ್ಮಿಕರು, ರೈತರಿಂದ ಆಕ್ರೋಶ! ಭಾರತ್ ಬಂದ್​ನಲ್ಲಿ ಏನಿರುತ್ತೆ, ಏನಿರಲ್ಲ..?

author-image
Ganesh
Updated On
25 ಕೋಟಿ ಕಾರ್ಮಿಕರು, ರೈತರಿಂದ ಆಕ್ರೋಶ! ಭಾರತ್ ಬಂದ್​ನಲ್ಲಿ ಏನಿರುತ್ತೆ, ಏನಿರಲ್ಲ..?
Advertisment
  • ಕೇಂದ್ರದ ರೈತ, ಕಾರ್ಮಿಕ ನೀತಿ ವಿರೋಧಿಸಿ ಭಾರತ್​ ಬಂದ್
  • ಕಾರ್ಖಾನೆ, ಟ್ರಾನ್ಸ್​ಪೋರ್ಟ್ ಸೇವೆಯಲ್ಲಿ ಭಾರೀ ವ್ಯತ್ಯಯ ಸಾಧ್ಯತೆ
  • ಟ್ರೇಡ್​ ಯೂನಿಯನ್​ಗಳು ಬಂದ್​ಗೆ ಕರೆ ಕೊಟ್ಟಿದ್ದೇಕೆ?

ಸಾರ್ವಜನಿಕರೇ ದಯವಿಟ್ಟು ಗಮನಿಸಿ.. ಇಂದು ಭಾರತ್ ಬಂದ್​.. ಕೇಂದ್ರದ ಕಾರ್ಮಿಕ ಹಾಗೂ ರೈತ ನೀತಿ ವಿರೋಧಿಸಿ ಟ್ರೇಡ್ ಯೂನಿಯನ್​​ಗಳು ಭಾರತ್​​ ಬಂದ್​ಗೆ ಕರೆ ನೀಡಿವೆ. ಸುಮಾರು 25 ಕೋಟಿ ಕಾರ್ಮಿಕರು, ರೈತರು ಹಾಗೂ ಕೃಷಿ ಕಾರ್ಮಿಕರು ಬಂದ್​​​ನಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಭಾರತ್ ಬಂದ್​.. ದೇಶಕ್ಕೆ ಮತ್ತೊಮ್ಮೆ ಬೀಗ ಹಾಕಲಾಗಿದೆ. ಕೇಂದ್ರ ಸರ್ಕಾರದ ರೈತ, ಕಾರ್ಮಿಕ ನೀತಿಗಳ ವಿರುದ್ಧ AITUC ಸೇರಿ 10ಕ್ಕೂ ಹೆಚ್ಚು ಟ್ರೇಡ್ ಯೂನಿಯನ್​​ಗಳು ಭಾರತ್​ ಬಂದ್​ಗೆ ಕರೆ ನೀಡಿವೆ. ಕೇಂದ್ರದ ಮೋದಿ ಸರ್ಕಾರ ಕಾರ್ಪೋರೇಟ್ ಕಂಪನಿಗಳ ಪರವಾದ ನಿಲುವು ಹೊಂದಿದೆ ಅಂತ ಕಾರ್ಮಿಕ ಸಂಘಟನೆಗಳು ಆರೋಪಿಸಿ ಬೀದಿಗಿಳಿದಿವೆ.

ಇದನ್ನೂ ಓದಿ: ಇವತ್ತು ಭಾರತ್ ಬಂದ್​​.. ಕಾರ್ಮಿಕ ಸಂಘಟನೆಗಳ ಡಿಮ್ಯಾಂಡ್ ಏನೇನು..?

ಕೇಂದ್ರದ ರೈತ, ಕಾರ್ಮಿಕ ನೀತಿ ವಿರೋಧಿಸಿ ಭಾರತ್​ ಬಂದ್

ಇಂದು ರಾಷ್ಟ್ರವ್ಯಾಪಿ ಬಂದ್​​ಗೆ ಕರೆ ನೀಡಲಾಗಿದ್ದು ಬ್ಯಾಂಕಿಂಗ್, ಅಂಚೆ, ವಿಮೆ, ಕಲ್ಲಿದ್ದಲು ಗಣಿ ಕಾರ್ಮಿಕರು ಸೇರಿದಂತೆ 25 ಕೋಟಿ ಕಾರ್ಮಿಕರು ಭಾಗವಹಿಸುವ ನಿರೀಕ್ಷೆ ಇದೆ. ರೈತರು, ಗ್ರಾಮೀಣ ಭಾಗದ ಕಾರ್ಮಿಕರು ಕೂಡ ಮುಷ್ಕರದಲ್ಲಿ ಭಾಗಿಯಾಗ್ತಾರೆ ಅಂತ AITUC ಜನರಲ್ ಸೆಕ್ರೆಟರಿ ಅಮರ್​​ಜಿತ್​​​​ ಕೌರ್ ತಿಳಿಸಿದ್ದಾರೆ..

ಏನಿರುತ್ತೆ, ಏನಿರಲ್ಲ?

  • ಬ್ಯಾಂಕಿಂಗ್, ಪೋಸ್ಟಲ್, ವಿಮಾ ಸೇವೆ, ಕಲ್ಲಿದ್ದಲು ಗಣಿ
  • ಕಾರ್ಖಾನೆ, ಟ್ರಾನ್ಸ್​ಪೋರ್ಟ್ ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ
  • ಸಾರ್ವಜನಿಕ ಸ್ವಾಮ್ಯ, ಸಹಕಾರಿ ಬ್ಯಾಂಕ್ ಸಿಬ್ಬಂದಿ ಭಾಗಿ
  • ಶಾಲಾ-ಕಾಲೇಜು, ಯುನಿವರ್ಸಿಟಿಗಳು ಎಂದಿನಂತೆ ಓಪನ್
  • ಶಾಲಾ ಬಸ್​ ಚಾಲಕರು ಬಂದ್​​ನಲ್ಲಿ ಭಾಗಿಯಾಗುವ ಸಾಧ್ಯತೆ
  • ಬಹುತೇಕ ಎಂದಿನಂತೆ ಸಾರ್ವಜನಿಕ ಸಾರಿಗೆ ಬಸ್ ಸೇವೆ
  • ಸಾರಿಗೆ ಬಸ್​ಗಳು, ಆಟೋಗಳ ಸೀಮಿತ ಸಂಚಾರ ಸಾಧ್ಯತೆ
  • ಆ್ಯಪ್ ಆಧಾರಿತ ಟ್ಯಾಕ್ಸಿ, ಕ್ಯಾಬ್​ಗಳ ಸೇವೆಯಲ್ಲೂ ವ್ಯತ್ಯಯ
  • ರೈಲ್ವೇ ಯೂನಿಯನ್​​​ಗಳು ಬಂದ್​​ನಲ್ಲಿ ಭಾಗಿಯಾಗುತ್ತಿಲ್ಲ

ಬಂದ್​ ಯಾಕೆ? ಬೇಡಿಕೆಗಳೇನು?

  • ಕಳೆದ ವರ್ಷವೇ ಕೇಂದ್ರ ಸರ್ಕಾರಕ್ಕೆ 17 ಅಂಶಗಳ ಬೇಡಿಕೆ ಸಲ್ಲಿಕೆ
  • ಆದ್ರೆ ಈ ಅಂಶಗಳ ಬಗ್ಗೆ ಗಂಭೀರ ಪ್ರತಿಕ್ರಿಯೆ ನೀಡದ ಆರೋಪ
  • 10 ವರ್ಷಗಳಿಂದ ಭಾರತೀಯ ಕಾರ್ಮಿಕರ ಸಮ್ಮೇಳನ ನಡೆಸಿಲ್ಲ
  • ಲೇಬರ್ ಕೋಡ್​ಗಳಿಂದ ಯೂನಿಯನ್​ಗಳು ದುರ್ಬಲ ಆರೋಪ
  • ಗುತ್ತಿಗೆ ನೌಕರಿಗೆ ಪ್ರೋತ್ಸಾಹ, ಖಾಸಗೀಕರಣ ಮಾಡ್ತಿರುವ ಆರೋಪ
  • ಸಾರ್ವಜನಿಕ ವಲಯದಲ್ಲಿ ಹೆಚ್ಚಿನ ನೇಮಕಾತಿ ಬೇಡಿಕೆ ನಿರ್ಲಕ್ಷ್ಯ
  • ಕೂಲಿ ಹೆಚ್ಚಿಸಿಲ್ಲ.. ನಿರುದ್ಯೋಗ ಸಮಸ್ಯೆ ನಿವಾರಿಸದೇ ಇನ್ಸೆಂಟೀವ್
  • ನಿರುದ್ಯೋಗ ಹೆಚ್ಚುತ್ತಿದ್ದು, ಅಗತ್ಯ ವಸ್ತುಗಳ ಬೆಲೆಗಳು ಏರಿಕೆ
  • ಆರೋಗ್ಯ, ಶಿಕ್ಷಣ, ಕಲ್ಯಾಣ ಯೋಜನೆಗಳ ವೆಚ್ಚ ಕಡಿತಗೊಳಿಸಿದೆ

ಒಟ್ಟಾರೆ ಹತ್ತಾರು ಬೇಡಿಕೆಗಳನ್ನು ಇಟ್ಟುಕೊಂಡು ದೇಶವ್ಯಾಪಿ ಬಂದ್​​ಗೆ ಕರೆ ನೀಡಲಾಗಿದೆ. ದಕ್ಷಿಣ ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಭಾರತ ಬಂದ್ ಪರಿಣಾಮ ಅಷ್ಟಾಗಿ ಆಗದಿದ್ದರೂ ಉತ್ತರ ಭಾರತದ ಹಲವೆಡೆ ಬಂದ್ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಇಂದು ಹೈಕಮಾಂಡ್ ಜೊತೆ CM ಸಿದ್ದು 4 ವಿಚಾರ ಚರ್ಚೆ -ರಾಯರೆಡ್ಡಿಗೆ ವಾರ್ನಿಂಗ್ ಕೊಟ್ಟ ಸುರ್ಜೇವಾಲ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment