newsfirstkannada.com

RCB ಪಾಳೆಯದಲ್ಲಿ ಮನೆ ಮಾಡಿದ ಆತಂಕ; ಗೆಲುವಿನ ಆತ್ಮವಿಶ್ವಾಸಕ್ಕೆ ಅಡ್ಡಿಯಾದ SRHನ ಈ ದಾಂಡಿಗರು..!

Share :

Published April 15, 2024 at 10:25am

  ಬೆಂಗಳೂರು vs ಹೈದ್ರಾಬಾದ್​ ಐಪಿಎಲ್​ ಕದನ

  ಹೋಮ್​​ಗ್ರೌಂಡ್​ನಲ್ಲಿ RCBಗೆ ರಾಯಲ್​ ಚಾಲೆಂಜ್

  ಆತ್ಮವಿಶ್ವಾಸದ ಅಲೆಯಲ್ಲಿ ಸನ್​​ರೈಸರ್ಸ್​ ಹೈದ್ರಾಬಾದ್​

ಐಪಿಎಲ್​ ಟೂರ್ನಿಯ ಮೆಗಾ ಫೈಟ್​ನಲ್ಲಿಂದು ಆರ್​​​ಸಿಬಿಯ ಹೋಮ್​​ಗ್ರೌಂಡ್​ನಲ್ಲೇ ಆರ್​​ಸಿಬಿಗೆ ರಾಯಲ್​ ಚಾಲೆಂಜ್​ ಎದುರಾಗಿದೆ. ಗೆಲುವಿನ ಆತ್ಮವಿಶ್ವಾಸದ ಅಲೆಯಲ್ಲಿರೋ ಸನ್​​ರೈಸರ್ಸ್​ ಹೈದ್ರಾಬಾದ್​​ ಡುಪ್ಲೆಸಿ ಪಡೆಯ ವಿರುದ್ಧ ಘರ್ಜಿಸಲು ಸಜ್ಜಾಗಿದೆ. ಆರ್​​​ಸಿಬಿ ಪಾಳೆಯದಲ್ಲಿ ಆತಂಕವೇ ಮನೆ ಮಾಡಿದೆ. ಆರ್​​ಸಿಬಿಗೆ ಆತಂಕ ಯಾಕೆ?

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಇಂದು ಮತ್ತೊಂದು ಅಗ್ನಿ ಪರೀಕ್ಷೆಗೆ ಸಜ್ಜಾಗಿದೆ. ಹೋಮ್​​​ಗ್ರೌಂಡ್​ ಚಿನ್ನಸ್ವಾಮಿಯಲ್ಲಿ ಸನ್​ರೈಸರ್ಸ್​ ಹೈದ್ರಾಬಾದ್​ ಸವಾಲನ್ನ ಎದುರಿಸಲಿದೆ. ಕೊನೆಯ 2 ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿರೋ ಹೈದ್ರಾಬಾದ್​, ಹ್ಯಾಟ್ರಿಕ್​ ಗೆಲುವಿನ ನಿರೀಕ್ಷೆಯಲ್ಲಿದೆ. ಸತತ 4 ಸೋಲುಗಳಿಂದ ಕಂಗೆಟ್ಟಿರುವ ಆರ್​​​ಸಿಬಿ ಕಥೆ ಅಯೋಮಯವಾಗಿದೆ.

SRH ಬ್ಯಾಟಿಂಗ್​ VS RCB ಬೌಲಿಂಗ್​.. ಕದನ ಕುತೂಹಲ..!
ಇಂದಿನ ಪಂದ್ಯ ಕುತೂಹಲ ಹೆಚ್ಚಿಸಿರೋ ಅಂಶವೇ SRH ಬ್ಯಾಟಿಂಗ್​ VS RCB ಬೌಲಿಂಗ್​. ಆರ್​​ಸಿಬಿ ಬೌಲಿಂಗ್​ ವಿಭಾಗ ಸದ್ಯ ಹೀನಾಯ ಪರ್ಫಾಮೆನ್ಸ್​ ನೀಡ್ತಿದೆ. ಕಳೆದ ಪಂದ್ಯದಲ್ಲಿ 197 ರನ್​ಗಳ ಸವಾಲಿನ ಟಾರ್ಗೆಟ್​ ಅನ್ನ ಕೇವಲ 15.3 ಓವರ್​​ಗಳಲ್ಲೇ ಬಿಟ್ಟು ಕೊಟ್ಟಿದೆ. ವಿಕೆಟ್​ ಕಬಳಿಸಲು ಪರದಾಡ್ತಿರೋ ಬೌಲರ್ಸ್​, ರನ್​ ಲೀಕ್​ ಮಾಡ್ತಿದ್ದಾರೆ. ಆದ್ರೆ, ಹೈದ್ರಾಬಾದ್​ನ ಬ್ಯಾಟರ್ಸ್​​ ಡ್ರೀಮ್​ ಫಾರ್ಮ್​ನಲ್ಲಿದ್ದಾರೆ. ಚಿನ್ನಸ್ವಾಮಿ ಮೈದಾನ ಚಿಕ್ಕ ಗ್ರೌಂಡ್​ ಕೂಡ ಆಗಿರೋದ್ರಿಂದ ಇಂದೂ ರನ್​ಮಳೆ ಸುರಿಸೋ ವಿಶ್ವಾಸದಲ್ಲಿದ್ದಾರೆ.

ಟ್ರಾವಿಸ್​​ ಹೆಡ್​ ಆರ್​​ಸಿಬಿ ಮೊದಲ ‘ಹೆಡ್ಡೇಕ್​’..!
ಸಾಲಿಡ್​ ಫಾರ್ಮ್​ನಲ್ಲಿರೋ ​ಟ್ರಾವಿಸ್​ ಹೆಡ್​ ಸ್ಪೋಟಕ ಆಟದಿಂದ ಐಪಿಎಲ್​ ಅಖಾಡದಲ್ಲಿ ಧೂಳೆಬ್ಬಿಸಿದ್ದಾರೆ. ಬರೋಬ್ಬರಿ 172.72ರ ಸ್ಟ್ರೈಕ್​ರೇಟ್​ನಲ್ಲಿ ಟ್ರಾವಿಡ್​ ಹೆಡ್​ ಘರ್ಜಿಸಿದ್ದಾರೆ. ಆರಂಭದಲ್ಲೇ ಹೊಡಿ-ಬಡಿ ಆಟಕ್ಕೆ ಮುಂದಾಗೋ ಹೆಡ್​​, ಸದ್ಯ ಆರ್​​​ಸಿಬಿ ಟ್ಯಾಂಪ್​ನಲ್ಲೂ ಹೆಡ್ಡೇಕ್​ ಹೆಚ್ಚಿಸಿದ್ದಾರೆ.

ಅಭಿಷೇಕ್​ ಅಬ್ಬರಕ್ಕೆ ಫುಲ್​ ಸ್ಟಾಫ್​ ಇಡೋದೇಗೆ?
23 ವರ್ಷದ ಅಭಿಷೇಕ್​ ಶರ್ಮಾ ಹೈದ್ರಾಬಾದ್​ ಪಡೆಯ ಬ್ಯಾಟಿಂಗ್​ ಬಲವಾಗಿದ್ದಾರೆ. ಬೌಂಡರಿ-ಸಿಕ್ಸರ್​ ಸಿಡಿಸಿ ರನ್ ಡೀಲ್​ ಮಾಡ್ತಿರೋ ಅಭಿಶೇಕ್​ ಬೌಲರ್​​ಗಳನ್ನ ಚಿಂದಿ ಉಡಾಯಿಸ್ತಿದ್ದಾರೆ. ಆಡಿದ 5 ಪಂದ್ಯಗಳಲ್ಲೇ 14 ಬೌಂಡರಿ, 16 ಸಿಕ್ಸರ್​​ ಚಚ್ಚಿರುವ ಅಭಿಷೇಕ್​ ಶರ್ಮಾ, ಬರೋಬ್ಬರಿ 208.23ರ ಸ್ಟ್ರೇಕ್​ರೇಟ್​​ನಲ್ಲಿ ಘರ್ಜಿಸಿದ್ದಾರೆ.

ಕ್ಲಾಸೆನ್​ ಖತರ್ನಾಕ್​​​ ಆಟಕ್ಕೆ ಬ್ರೇಕ್​ ಹಾಕೋದ್ಯಾರು?
ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್​ ಹೆನ್ರಿಚ್​ ಕ್ಲಾಸೆನ್ ಕೂಡ​ ಅದ್ಭುತ​​ ಫಾರ್ಮ್​ನಲ್ಲಿದ್ದಾರೆ. ಸನ್​ರೈಸರ್ಸ್​ ಪಡೆಯ ಮಿಡಲ್​ ಆರ್ಡರ್​ ಬಲವಾಗಿರುವ ಕ್ಲಾಸೆನ್​, ತನ್ನ ಖತರ್ನಾಕ್​ ಆಟದಿಂದ ಎದುರಾಳಿಗಳಿಗೆ ನಡುಕ ಹುಟ್ಟಿಸಿದ್ದಾರೆ. 62.00ರ ರನ್​ಗಳಿಕೆ ಸರಾಸರಿ ಹೊಂದಿರುವ ಕ್ಲಾಸೆನ್​, ಬರೋಬ್ಬರಿ 17 ಸಿಕ್ಸರ್​​​ಗಳನ್ನ ಚಚ್ಚಿದ್ದಾರೆ. 193.75ರ ಸ್ಟ್ರೈಕ್​ರೇಟ್​​ನಲ್ಲಿ 186 ರನ್​ಗಳಿಸಿರೋ ಕ್ಲಾಸೆನ್​ ಆಟಕ್ಕೆ ಬ್ರೇಕ್​ ಹಾಕೋದು ಹೇಗೆ ಆನ್ನೋದು ಆರ್​​ಸಿಬಿ ಮಿಲಿಯನ್​ ಡಾಲರ್​ ಪ್ರಶ್ನೆಯಾಗಿದೆ. ​​​

ಬೌಲರ್​ಗಳ ವೈಫಲ್ಯ.. ಆರ್​​ಸಿಬಿಯಲ್ಲಿ ಆತಂಕ..!
ಒಂದೆಡೆ ಹೈದ್ರಾಬಾದ್​ ಬ್ಯಾಟ್ಸ್​ಮನ್​ಗಳು ಸಾಲಿಡ್​ ಫಾರ್ಮ್​ನಲ್ಲಿದ್ರೆ, ಆರ್​​ಸಿಬಿ ಬೌಲರ್​​ಗಳ ತೀವ್ರ ಕಳಪೆ ಪರ್ಫಾಮೆನ್ಸ್​ ನೀಡ್ತಿದ್ದಾರೆ. ವೈಶಾಖ್​ ವಿಜಯ್​ ಕುಮಾರ್, ಯಶ್​​ ದಯಾಳ್​​​ ಹೊರತುಪಡಿಸಿದ್ರೆ, ಉಳಿದೆಲ್ಲಾ ವೇಗಿ​ಗಳು ಉದಾರವಾಗಿ ರನ್ ​ದಾನ ಮಾಡಿದ್ದಾರೆ. ಬೌಲಿಂಗ್​ ಲೈನ್​ ಅಪ್​ ಅನ್ನ ಟ್ರ್ಯಾಕ್​ಗೆ ತರೋದೆ ಸದ್ಯ ಆರ್​​ಸಿಬಿ ಮುಂದಿರೋ ಬಿಗ್ಗೆಸ್ಟ್​ ಟಾಸ್ಕ್​ ಆಗಿದೆ.

17 ಸೀಸನ್​ನಲ್ಲಿ ಆರ್​​ಸಿಬಿ ಬೌಲರ್ಸ್​
17ನೇ ಸೀಸನ್​ನಲ್ಲಿ 3 ಪಂದ್ಯವನ್ನಾಡಿರುವ ಅಲ್ಜಾರಿ ಜೊಸೆಫ್​​, 11.89ರ ಎಕಾನಮಿಯಲ್ಲಿ ರನ್​ ಬಿಟ್ಟುಕೊಟ್ಟಿದ್ದಾರೆ. 6 ಪಂದ್ಯವಾಡಿರುವ ಮೊಹಮ್ಮದ್​ ಸಿರಾಜ್ 10.40 ಹಾಗೂ 5 ಪಂದ್ಯವನ್ನಾಡಿರುವ ಕ್ಯಾಮರೂನ್​ ಗ್ರೀನ್​​ 9.40, ರೀಸೀ ಟಾಪ್ಲೆ 3 ಪಂದ್ಯದಿಂದ 9.09ರ ಎಕಾನಮಿ ಹೊಂದಿದ್ದಾರೆ.

ಬೌಲಿಂಗ್​ ವಿಭಾಗಕ್ಕೆ ಹೋಲಿಸಿದ್ರೆ, ಕಳೆದ ಪಂದ್ಯದಲ್ಲಿ ಆರ್​​ಸಿಬಿಯ ಬ್ಯಾಟಿಂಗ್​ ಲೈನ್​ಅಪ್​ ಸ್ವಲ್ಪ ಮಟ್ಟಿಗೆ ರಿಧಮ್​ ಕಂಡುಕೊಂಡಿದೆ. ಆದ್ರೆ, ಹೈದ್ರಾಬಾದ್​ ಪಾಳಯದಲ್ಲಿ ಘಟಾನುಘಟಿ ಬೌಲರ್​​ಗಳಿದ್ದು, ಇವರ ಮುಂದೆ ಆಟ ನಡೆಯುತ್ತಾ ಎಂಬ ಕುತೂಹಲವಿದೆ. ಒಟ್ಟಿನಲ್ಲಿ, ಇಂದಿನ ಕದನ ಹೋಮ್​ಗ್ರೌಂಡ್​ನಲ್ಲಿ ನಡೀತಾ ಇದ್ರೂ, ಆರ್​​ಸಿಬಿ ತಂಡದಲ್ಲಿ ಆತಂಕವೇ ಹೆಚ್ಚಾಗಿದೆ. ಆತಂಕವನ್ನ ಮೀರಿ ಆರ್​​ಸಿಬಿ ಗೆಲುವಿನ ಟ್ರ್ಯಾಕ್​ಗೆ ಮರಳಲಿ ಅನ್ನೋದು ಫ್ಯಾನ್ಸ್​ ಪ್ರಾರ್ಥನೆಯಾಗಿದೆ.

ವಿಶೇಷ ವರದಿ: ವಸಂತ್​ ಮಳವತ್ತಿ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

RCB ಪಾಳೆಯದಲ್ಲಿ ಮನೆ ಮಾಡಿದ ಆತಂಕ; ಗೆಲುವಿನ ಆತ್ಮವಿಶ್ವಾಸಕ್ಕೆ ಅಡ್ಡಿಯಾದ SRHನ ಈ ದಾಂಡಿಗರು..!

https://newsfirstlive.com/wp-content/uploads/2024/04/RCB-SRH.jpg

Load More