Advertisment

ಭಾರತದ ವಿರುದ್ಧ ಸೋತರೂ ಆಸ್ಟ್ರೇಲಿಯಾಗೆ ಸೆಮಿ ಫೈನಲ್​​ಗೆ ಹೋಗಲು ಇದೆ ಅವಕಾಶ..!

author-image
Ganesh
Updated On
ಭಾರತದ ವಿರುದ್ಧ ಸೋತರೂ ಆಸ್ಟ್ರೇಲಿಯಾಗೆ ಸೆಮಿ ಫೈನಲ್​​ಗೆ ಹೋಗಲು ಇದೆ ಅವಕಾಶ..!
Advertisment
  • ಇಂದು ಆಸ್ಟ್ರೇಲಿಯಾ-ಭಾರತ ನಡುವೆ ಪಂದ್ಯ
  • ಆಸ್ಟ್ರೇಲಿಯಾ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ರೆಡಿ
  • ಈಗಾಗಲೇ ಸೆಮಿ ಫೈನಲ್​​ಗೆ ಎಂಟ್ರಿ ನೀಡಿರುವ ಭಾರತ

ಜಸ್ಟ್​ ಒಂದೇ ಹೆಜ್ಜೆ.. ಟೀಮ್ ಇಂಡಿಯಾ ಸೆಮೀಸ್​​ ಅಂಗಳಕ್ಕೆ ಹೆಜ್ಜೆ ಇಡಲು ಒಂದು ಹೆಜ್ಜೆ ಮಾತ್ರವೇ ಬಾಕಿಯಿದೆ. ಈ ಸೆಮೀಸ್ ಸಮರಕ್ಕೂ ಮುನ್ನವೇ ಬಿಗ್ ಬ್ಯಾಟಲ್​​ಗೆ ಟಿ20 ವಿಶ್ವಕಪ್ ವೇದಿಕೆಯಾಗ್ತಿದೆ.

Advertisment

ಇಂಡೋ-ಆಸಿಸ್​ನ ರಣರೋಚಕ ಸೂಪರ್​​-8​​ ಫೈಟ್​ಗೆ ಕೌಂಟ್​ಡೌನ್​ ಶುರುವಾಗಿದ್ದು, ಸೆಂಟ್​ ಲೂಸಿಯಾದಲ್ಲಿ ನಡೆಯಲಿರುವ ಇಂದಿನ ಪಂದ್ಯ ಉಭಯ ತಂಡಗಳಿಗೆ ಪ್ರತಿಷ್ಠೆಯಾಗಿದೆ. ಮತ್ತೊಂದು ಕಡೆ ವಿಶ್ವಚಾಂಪಿಯನ್ ವಿಶ್ವಕಪ್​​ನಿಂದ ಹೊರ ಬೀಳುವ ಆತಂಕ ಎದುರಾಗಿದೆ.

ಇದನ್ನೂ ಓದಿ:Rain Alert ಜೂನ್ 29ವರೆಗೆ ಭಾರೀ ಮಳೆ.. ರಾಜ್ಯದ ಎರಡು ಭಾಗಗಳಿಗೆ ಪ್ರತ್ಯೇಕ ಎಚ್ಚರಿಕೆ..!

ಈಗಾಗಲೇ ಅಫ್ಘಾನಿಸ್ತಾನದ ವಿರುದ್ಧ ಸೋತಿರುವ ಆಸ್ಟ್ರೇಲಿಯಾ ಇಂಡಿಯಾ ವಿರುದ್ಧ ಸೋಲನ್ನು ಅನುಭವಿಸಿದ್ರೆ ಸೆಮಿ ಫೈನಲ್ ಕನಸು ಭಗ್ನಗೊಂಡಂತೆ. ಆದರೂ ಆಸ್ಟ್ರೇಲಿಯಾಗೆ ಸೆಮಿಫೈನಲ್​ಗೆ ಹೋಗಲು ಸಣ್ಣ ದಾರಿಯೊಂದು ಇದೆ.

Advertisment

ಇದನ್ನೂ ಓದಿ:ಒಂದಲ್ಲ.. ಆಸ್ಟ್ರೇಲಿಯಾ ವಿರುದ್ಧ ಒಟ್ಟು 3 ಲೆಕ್ಕ ಚುಕ್ತಾ ಬಾಕಿ ಇದೆ.. ಇಂದು ಪ್ರತೀಕಾರದ ಮ್ಯಾಚ್..!

ಹೀಗಾದರೆ ಆಸ್ಟ್ರೇಲಿಯಾ ಭಾರತದ ಎದುರು ಸೋತರೆ ವಿಶ್ವಕಪ್‌ನಿಂದ ಹೊರಗುಳಿಯುವುದಿಲ್ಲ. ಸೋತ ನಂತರವೂ ಸೆಮಿಫೈನಲ್‌ಗೆ ಹೋಗಲು ಅವಕಾಶ ಇದೆ. ಬಾಂಗ್ಲಾದೇಶದ ಗೆಲುವಿಗಾಗಿ ಆಸ್ಟ್ರೇಲಿಯಾ ಪ್ರಾರ್ಥಿಸಬೇಕಾಗಿದೆ. ಭಾರತದ ವಿರುದ್ಧ ಆಸ್ಟ್ರೇಲಿಯಾ ಸೋತರೆ ಮತ್ತು ಬಾಂಗ್ಲಾದೇಶ ಅಫ್ಘಾನಿಸ್ತಾನವನ್ನು ಸೋಲಿಸಿದರೆ ಆಸ್ಟ್ರೇಲಿಯಾಗೆ ಚಾನ್ಸ್​ ಇದೆ. ರನ್​ ರೇಟ್​ನಲ್ಲಿ ಎರಡನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಸೆಮಿ ಫೈನಲ್​​ಗೆ ಎಂಟ್ರಿ ನೀಡಲಿದೆ.

ಇದನ್ನೂ ಓದಿ:ಭಾರತ vs ಆಸ್ಟ್ರೇಲಿಯಾ ಪಂದ್ಯ ರದ್ದು ಸಾಧ್ಯತೆ.. ಅಭಿಮಾನಿಗಳಿಂದ ಈಗಲೇ ಬೇಸರ.. ಕಾರಣ ಇಲ್ಲಿದೆ

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment