newsfirstkannada.com

ಮೈತ್ರಿ ಪಾದಯಾತ್ರೆ: ಸಿದ್ದು-ಡಿಕೆಶಿಯ ಒಂದೊಂದು ಮಾತಿಗೂ ಇಂದು ಪ್ರತಿಬಾಣ ಪ್ರಯೋಗ..!

Share :

Published August 10, 2024 at 8:16am

    ಮೈಸೂರು ಅರಮನೆ ಮೈದಾನದಲ್ಲಿ ಕೈಪಡೆಗೆ ಇಂದು ದೋಸ್ತಿ ಟಕ್ಕರ್

    ಪಾದಯಾತ್ರೆ ಸಮಾರೋಪದಲ್ಲಿ ಸಾವಿರಾರು ಸಂಖ್ಯೆ ಜನ ಭಾಗಿ ನಿರೀಕ್ಷೆ

    ಮಹಾರಾಜ ಕಾಲೇಜು ಮೈದಾನ ಸುತ್ತ 4 ಹಂತದಲ್ಲಿ ಭದ್ರತೆ ನೀಡಲಾಗಿದೆ

ಪಾದಯಾತ್ರೆಯ  7 ದಿನ ಇಡೀ ಮೈಸೂರು ಬೆಂಗಳೂರು ಹೆದ್ದಾರಿ ರಂಗು ರಂಗಾಗಿತ್ತು. ಘೋಷಣೆಗಳು ಮುಗಿಲೆತ್ತರ ಚಾಚಿದ್ದವು. ಹುಮ್ಮಸ್ಸಿನಿಂದ ಹಾಕಿದ ಹೆಜ್ಜೆಗಳಿಗೆ ನಿನ್ನೆ ವಿಶ್ರಾಂತಿಗೆ ಜಾರಿದೆ. ನಿನ್ನೆ ಸಿದ್ದು ಗುಡುಗಿದ್ದ ಅದೇ ಸ್ಟೇಜ್​​ನಲ್ಲಿ ಇವತ್ತು ಮೈತ್ರಿಪಡೆ, ಕಂಠಯುದ್ಧ ಸಾರಲಿದೆ. ಸಿದ್ದು-ಡಿಕೆಶಿಯ ಒಂದೊಂದು ಮಾತಿಗೂ ಪ್ರತಿಬಾಣ ಪ್ರಯೋಗ ಆಗಲಿದೆ.

ಇದನ್ನೂ ಓದಿ: ಮನೀಶ್​ ಸಿಸೋಡಿಯಾಗೆ ಹೈಕೋರ್ಟ್​ ಜಾಮೀನು; ದೆಹಲಿ ಸಿಎಂ ಕೇಜ್ರಿವಾಲ್​ಗೆ ಬೇಲ್​ ಯಾವಾಗ?

ಭರ್ತಿ 128 ಕಿ.ಮೀ ದೂರ. ಏಳು ದಿನಗಳ ಐತಿಹಾಸಿಕ ಹೆಜ್ಜೆ. ಕಾವೇರಿ ಒಡಲೂರಿನ ಹೆದ್ದಾರಿ ಉದ್ದಕ್ಕೂ ಕೇಸರಿ-ಹಸಿರಿನ ಮಹಾ ಸಂಗಮ. ಒಂದು ಮುಡಾ, ಇನ್ನೊಂದು ವಾಲ್ಮೀಕಿ. ಇವು ಹಸ್ತಕ್ಕೆ ಅಂಟಿದ ಕಳಂಕ. ನೇರವಾಗಿ ಸಿದ್ದು ಶುದ್ಧ ರಾಜಕಾರಣಕ್ಕೆ ಮಸಿ ಬಳಿದಿದೆ. ರಾಜೀನಾಮೆಗೆ ಆಗ್ರಹಿಸಿ ಕಳೆದ ಶನಿವಾರದಿಂದ ಸಿದ್ದು ಕೋಟೆಗೆ ಲಗ್ಗೆ ಹಾಕಲು ದೋಸ್ತಿಗಳು ಹೆಜ್ಜೆ ಹಾಕಿದ್ರು. ಈ ಹೆಜ್ಜೆಗಳು ನಿನ್ನೆ ಹೊತ್ತಿಗೆ ಸಾಂಸ್ಕೃತಿಕ ನಗರ ತಲುಪಿವೆ. ಬೆಂಗಳೂರಿನ ಕೆಂಗೇರಿಯಿಂದ  ಶುರುವಾದ ಯಾತ್ರೆ ಮೈಸೂರು ಹೊರವಲಯದಲ್ಲಿ ಠಿಕಾಣಿ ಹೂಡಿದೆ.

ಸಿಎಂ ವಿರುದ್ಧ ಕೊನೆಯ ದಿನ ಪಾದಯಾತ್ರೆ ನಡೆಸಿದ ‘ದೋಸ್ತಿ’

ಸಿಎಂ ವಿರುದ್ಧ ಕೊನೆಯ ದಿನಕ್ಕೆ ಕಾಲಿಟ್ಟ ಪಾದಯಾತ್ರೆಯಲ್ಲಿ ನಿನ್ನೆ ಘಟಾನುಘಟಿ ನಾಯಕರು ಹೆಜ್ಜೆ ಹಾಕಿದ್ರು. ವಿಜಯೇಂದ್ರ, ಆರ್.ಅಶೋಕ್, ಅಶ್ವತ್ಥ್‌ ನಾರಾಯಣ್, ಜಗದೀಶ್​ ಶೆಟ್ಟರ್​, ಪ್ರತಾಪ್ ಸಿಂಹ, ಯದುವೀರ್​ ಒಡೆಯರ್​, ಸಿ.ಟಿ.ರವಿ, ನಿಖಿಲ್ ಸೇರಿ ದೋಸ್ತಿ ನಾಯಕರು ಭಾಗಿಯಾಗಿದ್ದರು. ನಿಖಿಲ್​ಗೆ ಬೃಹತ್ ಹಾರಹಾಕಿ ಸ್ವಾಗತಿಸಿದ್ರು. ಹೆಗಲ ಮೇಲೆ ಹೊತ್ತು ಕಾರ್ಯಕರ್ತರು ಸಂಭ್ರಮಿಸಿದ್ರು.

ಅರಮನೆ ಮೈದಾನದಲ್ಲಿ ಕೈಪಡೆಗೆ ಇವತ್ತು ದೋಸ್ತಿ ಟಕ್ಕರ್​​​

ನಿನ್ನೆ ಇದೇ ವೇದಿಕೆಯಲ್ಲಿ ನಡೆದಿದ್ದ ಜನಾಂದೋಲನ ಸಮಾವೇಶದಲ್ಲಿ ಮೈತ್ರಿ ಪಾದಯಾತ್ರೆ ವಿರುದ್ಧ ಗುಡುಗು ಸಿಡಿಲಿನಂತೆ ಕೈಪಡೆ ಘರ್ಜಿಸಿತ್ತು. ಇದೀಗ ಟಕ್ಕರ್​​​ ಕೊಡಲು ಮೈತ್ರಿ ನಾಯಕರು ಸಜ್ಜಾಗಿದ್ದಾರೆ. ಬೆಳಗ್ಗೆ 10 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಕೇಂದ್ರ ಸಚಿವ ಹೆಚ್​​ಡಿಕೆ, ಮಾಜಿ ಸಿಎಂ ಯಡಿಯೂರಪ್ಪ ಸೇರಿ ಹಲವು ಹಿರಿಯರು ಉಪಸ್ಥಿತರಿರಲಿದ್ದಾರೆ.

ಪೊಲೀಸ್​ ಬಿಗಿ ಭದ್ರತೆ

ಮೈಸೂರು ಚಲೋ ಪಾದಯಾತ್ರೆಯ ಸಮಾರೋಪದಲ್ಲಿ ಹೆಚ್ಚಿನ ಜನ ಭಾಗವಹಿಸುವ ನಿರೀಕ್ಷೆ ಇದೆ. ಈ ಹಿನ್ನೆಲೆ ಮಹಾರಾಜ ಕಾಲೇಜು ಮೈದಾನ ಹಾಗೂ ಸುತ್ತಮುತ್ತ ನಾಲ್ಕು ಹಂತದ ಭದ್ರತೆ ಇರಲಿದೆ. ಭದ್ರತೆಗೆ ಮೂವರು ಡಿವೈಎಸ್​ಪಿ, 22 ಇನ್ಸ್​ಪೆಕ್ಟರ್​​ಗಳು, 175 ಎಸ್​ಐ, 100 ಜನ ಕಮಾಂಡೋಗಳು, 500 ಹೋಂ ಗಾರ್ಡ್ಸ್​ಗಳು ಹಾಗೂ ಕೆಎಸ್​ಆರ್​ಪಿ ಜೊತೆಗೆ ಸಿಎಆರ್​ ತುಕಡಿ ಸೇರಿ 4,500 ಮಂದಿ ಪೊಲೀಸರನ್ನ ನಿಯೋಜನೆ ಮಾಡಲಾಗಿದೆ. ಒಟ್ಟಾರೆ, ಮುಡಾ‌‌ ಹಗರಣದಲ್ಲಿ ಸಿಎಂ ರಾಜೀನಾಮೆಗೆ ಆಗ್ರಹಿಸಿ ನಡೆದ ಪಾದಯಾತ್ರೆ ಇವತ್ತು ಅಂತ್ಯ ಆಗಲಿದೆ. ನಿನ್ನೆ ಹಸ್ತಪಡೆ ನೀಡಿದ ಪ್ರತಿ ಹೇಳಿಕೆಗಳಿಗೂ ಮೈತ್ರಿ ಪಡೆ ತಕ್ಕ ಪ್ರತ್ಯುತ್ತರ ನೀಡಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೈತ್ರಿ ಪಾದಯಾತ್ರೆ: ಸಿದ್ದು-ಡಿಕೆಶಿಯ ಒಂದೊಂದು ಮಾತಿಗೂ ಇಂದು ಪ್ರತಿಬಾಣ ಪ್ರಯೋಗ..!

https://newsfirstlive.com/wp-content/uploads/2024/08/HDK.jpg

Load More