newsfirstkannada.com

ಒಕ್ಕಲಿಗರ ಒಗ್ಗಟ್ಟಿಗಾಗಿ ಹೊಸತೊಡಕು ಪಾಲಿಟಿಕ್ಸ್.. ಮೈತ್ರಿ ನಾಯಕರಿಂದ ಹೊರ ಬೀಳಲಿದೆ ದೊಡ್ಡ ಸಂದೇಶ..!

Share :

Published April 10, 2024 at 7:18am

    ವೋಟ್​ಗಳನ್ನ ಸೆಳೆಯಲು ಮಠ ಮಂಥನಕ್ಕೆ ಮುಂದಾದ ಮೈತ್ರಿ

    ಹಳೇ ಮೈಸೂರು ಭಾಗದ ಮತಗಳನ್ನ ಸೆಳೆಯಲು ಮಾಸ್ಟರ್ ಪ್ಲಾನ್

    ಒಕ್ಕಲಿಗ ಸಮುದಾಯದ ರಾಜ್ಯ ನಾಯಕರಿಂದ ಭಾರೀ ರಣತಂತ್ರ

ನಿನ್ನೆ ಯುಗಾದಿ ಮುಗೀತು.. ಇವತ್ತು ಹೊಸ ತೊಡಕು.. ಈ ಹೊಸ ತೊಡಕುನಲ್ಲೇ ಜಾತಿ ಒಗ್ಗಟ್ಟನ್ನ ಗಟ್ಟಿ ಮಾಡಿ ಮತಬುಟ್ಟಿ ಭದ್ರ ಮಾಡಿಕೊಳ್ಳೋದು ಮೈತ್ರಿ ನಾಯಕರು ರಣತಂತ್ರ ಹೆಣೆದಿದ್ದಾರೆ. ಒಕ್ಕಲಿಗ ವೋಟ್‌ಗಳನ್ನ ಸೆಳೆಯಲು ಮಠ ಮಂಥನಕ್ಕೆ ಮುಂದಾಗಿದ್ದಾರೆ. ಡಿಕೆ ಶಿವಕುಮಾರ್​ಗೆ ಕೌಂಟರ್ ಕೊಡಲು ಮೈತ್ರಿ ನಾಯಕರು ಹೊಸತೊಡಕನ್ನೇ ನೆಪ ಮಾಡ್ಕೊಂಡಿದ್ದಾರೆ.

ಲೋಕಸಭಾ ಚುನಾವಣೆಗೆ ಮೈತ್ರಿ ನಾಯಕರು ಮಹಾ ರಣತಂತ್ರವನ್ನ ರೂಪಿಸಿದ್ದಾರೆ.. ಯುಗಾದಿ ಹಬ್ಬದ ಮರುದಿನವೇ ಮಠ ಮಂಥನಕ್ಕೆ ಸಜ್ಜಾಗಿದ್ದಾರೆ.. ಒಕ್ಕಲಿಗ ಮತಗಳೇ ಹೆಚ್ಚಾಗಿರೋ ಹಳೇ ಮೈಸೂರು ಭಾಗದ ಮತಗಳನ್ನ ಸೆಳೆಯಲು ಬಿಜೆಪಿ ನಾಯಕರು ಮಹಾರಣತಂತ್ರವೊಂದನ್ನ ರೂಪಿಸಿದ್ದಾರೆ.

ಇದನ್ನೂ ಓದಿ: ದುಬಾರಿ ರೋಲ್ಸ್​​ ರಾಯ್ಸ್​ ಕಾರ್​​ ಖರೀದಿಸಿದ ನೀತಾ ಅಂಬಾನಿ; ಅಬ್ಬಬ್ಬಾ! ಇದರ ಬೆಲೆ ಎಷ್ಟು ಗೊತ್ತಾ?

ಇವತ್ತು 14 ಅಭ್ಯರ್ಥಿಗಳು ಆದಿಚುಂಚನಗಿರಿ ಸ್ವಾಮೀಜಿ ಭೇಟಿ

ಲೋಕಸಭಾ ಅಖಾಡವನ್ನು ಬಿಜೆಪಿ-ಜೆಡಿಎಸ್ ನಾಯಕ ಭಾರೀ ಪ್ರತಿಷ್ಠೆಯಾಗಿ ಪರಿಗಣಿಸಿದ್ದಾರೆ. 28ಕ್ಕೆ 28 ಕ್ಷೇತ್ರಗಳನ್ನು ಗೆಲ್ಲಲೇಬೇಕು ಎಂಬ ಪ್ಲಾನ್ ಮಾಡುತ್ತಿದ್ದಾರೆ.. ಈ ನಿಟ್ಟಿನಲ್ಲಿ ಮೊದಲಿಗೆ ಒಕ್ಕಲಿಗ ಮತಗಳೇ ಪ್ರಾಬಲ್ಯ ಹೊಂದಿರುವ ನಿರ್ಣಾಯಕ ಕ್ಷೇತ್ರಗಳನ್ನು ತಮ್ಮತ್ತ ಸೆಳೆಯುವ ತಂತ್ರ ಹೆಣೆದಿದ್ದಾರೆ. ಒಕ್ಕಲಿಗ ಸಮುದಾಯದ ರಾಜ್ಯ ನಾಯಕರುಗಳಾದ ಆರ್.ಅಶೋಕ್, ಹೆಚ್.ಡಿ ಕುಮಾರಸ್ವಾಮಿ, ಸಿ.ಎನ್.ಅಶ್ವತ್ಥ್‌ ನಾರಾಯಣ್ ಮಾಸ್ಟರ್‌ ಪ್ಲಾನ್ ರೂಪಿಸಿದ್ದಾರೆ.

ಇಂದು ಬೆಂಗಳೂರಿನ ಆದಿಚುಂಚನಗಿರಿ ಮಠಕ್ಕೆ ಮೊದಲ ಹಂತದ ಚುನಾವಣೆಯನ್ನು ಎದುರಿಸುವ 14 ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳು ಭೇಟಿ ನೀಡಲಿದ್ದಾರೆ. ಇಂದು ಬೆಳಗ್ಗೆ 9 ಗಂಟೆಗೆ ಬೆಂಗಳೂರಿನ ಆದಿಚುಂಚನಗಿರಿ ಮಠದಲ್ಲಿ ನಿರ್ಮಲಾನಂದ ಶ್ರೀಗಳಿಂದ ಆಶೀರ್ವಾದ ಪಡೆಯಲಿದ್ದಾರೆ. ಈ ಮೂಲಕ ಹಳೆಯ ಮೈಸೂರು ಭಾಗದ ಪ್ರಬಲ ಒಕ್ಕಲಿಗ ಮತಗಳೇ ನಿರ್ಣಾಯಕವಾಗಿರುವ ಕ್ಷೇತ್ರಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳನ್ನ ಗೆಲುವಿನ ದಡ ಸೇರಿಸುವ ಗೇಮ್‌ಪ್ಲಾನ್ ಆನ್ ಮಾಡಿದ್ದಾರೆ.

ನಿರ್ಮಲಾನಂದ ಶ್ರೀಗಳ ಆಶೀರ್ವಾದ ಇರಲೇಬೇಕು

ಲೋಕಸಭಾ ಚುನಾವಣೆಯಲ್ಲಿ 28ಕ್ಕೆ 28 ಕ್ಷೇತ್ರವನ್ನು ಗೆಲ್ಲಬೇಕು ಅಂದ್ರೆ, ನಿರ್ಮಲಾನಂದ ಶ್ರೀಗಳ ಆಶೀರ್ವಾದ ಇರಲೇಬೇಕು. ಹೀಗಾಗಿ ಇಂದು ಯುಗಾದಿಯ ಮರುದಿನ. ಹೀಗಾಗಿ, ಹೊಸತಡಕು ಹೆಸರಿನಲ್ಲಿ ಮಠಕ್ಕೆ ಭೇಟಿ‌ ಕೊಟ್ಟು ಸ್ವಾಮಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಈ ಮೂಲಕ ಹೊಸ‌ ಸಂದೇಶ ರವಾನೆ ಮಾಡುವ ಗೇಮ್‌ಪ್ಲಾನ್‌ ಮೈತ್ರಿ ನಾಯಕರದ್ದು.

ಇದನ್ನೂ ಓದಿ: 75KG ವೇಟ್​ ಲಿಫ್ಟಿಂಗ್​ ಮಾಡಿದ 9 ವರ್ಷದ ಬಾಲಕಿ; ಈಕೆ ಸಾಧನೆ ಕೇಳಿದ್ರೆ ಶಾಕ್​ ಆಗ್ತೀರಾ!

ಮಂಡ್ಯ, ಹೇಳಿ ಕೇಳಿ ಒಕ್ಕಲಿಗರ ಕೋಟೆ. ಬಾಡೂಟಕ್ಕೆ ಸಖತ್ ಫೆಮಸ್. ಇದೇ ಬಾಡೂಟವನ್ನೆ ಬಳಸಿಕೊಂಡು ಮತ ಸೆಳೆಯಲು ಮೈತ್ರಿ ನಾಯಕರು ಮುಂದಾಗಿದ್ದಾರೆ.

‘ಮೈತ್ರಿ’ ಹೊಸತೊಡಕು

  • ಬೆಳಗ್ಗೆ ಆದಿಚುಂಚನಗಿರಿ ಮಠಕ್ಕೆ ಹೆಚ್‌ಡಿಕೆ ಮತ್ತು ಆರ್. ಅಶೋಕ್ ಭೇಟಿ
  • ನಂತರ ಬಿಡದಿಯ ಹೆಚ್ಡಿಕೆ ತೋಟದ ಮನೆಗೆ ತೆರಳಲಿರುವ ಮೈತ್ರಿ ನಾಯಕರು
  • ಕುಮಾರಸ್ವಾಮಿ ಮನೆಯ ಹೊಸತೊಡಕು ಸಂಭ್ರಮದಲ್ಲಿ ಮುಖಂಡರು ಭಾಗಿ
  • ಒಕ್ಕಲಿಗ ಸಮುದಾಯದ ಶಾಸಕರು, ಮಾಜಿ ಶಾಸಕರು, ಪರಿಷತ್ ಸದಸ್ಯರು
  • ಮಾಜಿ ಪರಿಷತ್ ಸದಸ್ಯರು ಹಾಗೂ ಬಿಜೆಪಿ ಜೆಡಿಎಸ್ ಮುಖಂಡರು ಹಾಜರ್
  • ಡಿ.ಕೆ ಶಿವಕುಮಾರ್​​ಗೆ ಠಕ್ಕರ್ ಕೊಡಲು ಹೆಚ್ಡಿಕೆ & ಆರ್ ಅಶೋಕ್ ಪ್ಲಾನ್
  • ಒಕ್ಕಲಿಗರಿಗಾಗಿ ನಾವು ಜೊತೆಯಾಗಿ ಇರುತ್ತೇವೆ ಎಂದು ಸಂದೇಶ ರವಾನೆ

ಇದನ್ನೂ ಓದಿ: ರಜನಿ, ಪ್ರಭಾಸನ್ನೇ ಮೀರಿಸಿದ ಅಲ್ಲು ಅರ್ಜುನ್​; ಅಬ್ಬಬ್ಬಾ! ಪುಷ್ಪಾ-2ಗೆ ಇಷ್ಟು ಕೋಟಿ ತಗೊಂಡ್ರಾ?

ಹೊಸತೊಡಕು ಮೂಲಕ ಮೈತ್ರಿ ನಾಯಕರು ಹೊಸ ರಾಜಕೀಯಕ್ಕೆ ನಾಂದಿ ಹಾಡಿದ್ದಾರೆ. ಈ ಮೂಲಕ ಒಕ್ಕಲಿಗರ ಮತ ಸೆಳೆಯಲು ರಣತಂತ್ರ ಹೆಣೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒಕ್ಕಲಿಗರ ಒಗ್ಗಟ್ಟಿಗಾಗಿ ಹೊಸತೊಡಕು ಪಾಲಿಟಿಕ್ಸ್.. ಮೈತ್ರಿ ನಾಯಕರಿಂದ ಹೊರ ಬೀಳಲಿದೆ ದೊಡ್ಡ ಸಂದೇಶ..!

https://newsfirstlive.com/wp-content/uploads/2024/04/HDK_ASHOK.jpg

Load More