Budget ಬೆನ್ನಲ್ಲೇ ಸ್ಮಾರ್ಟ್​ಫೋನ್​, ಎಲೆಕ್ಟ್ರಿಕ್ ವಸ್ತುಗಳ ಬೆಲೆಯಲ್ಲಿ ಭಾರೀ ಇಳಿಕೆ.. ದೊಡ್ಡ ಬೇಡಿಕೆ ಇಟ್ಟಿರುವ ಟೆಕ್

author-image
Ganesh
Updated On
Budget ಬೆನ್ನಲ್ಲೇ ಸ್ಮಾರ್ಟ್​ಫೋನ್​, ಎಲೆಕ್ಟ್ರಿಕ್ ವಸ್ತುಗಳ ಬೆಲೆಯಲ್ಲಿ ಭಾರೀ ಇಳಿಕೆ.. ದೊಡ್ಡ ಬೇಡಿಕೆ ಇಟ್ಟಿರುವ ಟೆಕ್
Advertisment
  • ಇಂದು ಬಜೆಟ್ ಮಂಡಿಸಲಿರುವ ನಿರ್ಮಲಾ ಸೀತಾರಾಮನ್
  • ಟೆಕ್ ಕ್ಷೇತ್ರ ಕೇಂದ್ರ ಸರ್ಕಾರಕ್ಕೆ ಇಟ್ಟಿರುವ ಬೇಡಿಕೆಗಳು ಏನೇನು?
  • ಎಲೆಕ್ಟ್ರಾನಿಕ್ ವಸ್ತುಗಳ ಬೆಲೆಗಳಲ್ಲಿ ಭಾರೀ ಇಳಿಕೆ ನಿರೀಕ್ಷೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಬಜೆಟ್ ಮಂಡಿಸಲಿದ್ದಾರೆ. ಹಣದುಬ್ಬರದಿಂದ ಬಳಲುತ್ತಿರುವ ಜನರಿಗೆ ಬಜೆಟ್‌ನಿಂದ ಪರಿಹಾರ ಸಿಗುವ ನಿರೀಕ್ಷೆ ಇದೆ. ಟೆಕ್ ಕ್ಷೇತ್ರ ಕೂಡ ಭಾರೀ ದೊಡ್ಡ ನಿರೀಕ್ಷೆಯಲ್ಲಿದೆ.

ಫೋನ್ ಮತ್ತು ಇತರ ಎಲೆಕ್ಟ್ರಾನಿಕ್ ಉತ್ಪನ್ನಗಳ ಬೆಲೆಗಳು ಕಡಿಮೆ ಆಗಬಹುದು ಎನ್ನಲಾಗುತ್ತಿದೆ. ಟೆಕ್​ ಕ್ಷೇತ್ರ ಆಮದು ಸುಂಕ ಕಡಿಮೆ ಮಾಡುವಂತೆ ಆಗ್ರಹ ಮಾಡಿದೆ. ಹೀಗಾಗಿ ಹೊಸ ಸ್ಮಾರ್ಟ್‌ಫೋನ್‌ ಖರೀದಿಸುವ ಜನರಿಗೆ ಸರ್ಕಾರ ಸ್ವಲ್ಪ ರಿಲೀಫ್ ನೀಡಬಹುದು.
ಮೊಬೈಲ್ ಫೋನ್ ಕಂಪನಿಗಳು ಆಮದು ಸುಂಕ ಕಡಿಮೆ ಮಾಡಲು ಸರ್ಕಾರವನ್ನು ಒತ್ತಾಯಿಸಿದ್ದವು. ಆಮದು ಸುಂಕ ಕಮ್ಮಿ ಇದ್ದರೆ ಜನರಿಗೆ ಕಡಿಮೆ ಬೆಲೆಗೆ ಫೋನ್​ಗಳು ಸಿಗುತ್ತವೆ.  ಸ್ಮಾರ್ಟ್​ಫೋನ್​ಗಳು ಮಾತ್ರವಲ್ಲದೇ, ಇಯರ್ ಫೋನ್, ಮೌಸ್​, ಕಂಪ್ಯೂಟರ್, ಕೀಬೋರ್ಡ್, ಲ್ಯಾಪ್​ಟಾಪ್, ಐಪ್ಯಾಡ್​ ಸೇರಿದಂತೆ ಅನೇಕ ವಸ್ತುಗಳ ಬೆಲೆ ಕಡಿಮೆಯಾಗುವ ನಿರೀಕ್ಷೆ ಇದೆ. ​

ಇದನ್ನೂ ಓದಿ: Budget : ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿವೆ.. ಮೋದಿ ಬಜೆಟ್​ ಮೇಲೆ ಕರ್ನಾಟಕದ ನಿರೀಕ್ಷೆಗಳು ಏನೇನು..?

ಇತರ ಎಲೆಕ್ಟ್ರಾನಿಕ್ ವಸ್ತುಗಳು ಅಗ್ಗ..?

ಮೊಬೈಲ್ ಹೊರತುಪಡಿಸಿ ಇತರ ಎಲೆಕ್ಟ್ರಾನಿಕ್ ವಸ್ತುಗಳು ಕೂಡ ಬಜೆಟ್ ನಂತರ ಕಡಿಮೆ ಆಗಬಹುದು. ಫೋನ್ ಕಂಪನಿಗಳಂತೆ ಇಂಡಿಯನ್ ಸೆಲ್ಯುಲರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ ​​ಕೂಡ ಸರ್ಕಾರಕ್ಕೆ ಬೇಡಿಕೆ ಇಟ್ಟಿದೆ. ಎಲೆಕ್ಟ್ರಾನಿಕ್ ವಸ್ತುಗಳ ಘಟಕಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಬೇಕೆಂದು ಒತ್ತಾಯ ಮಾಡಿವೆ. ಒಂದು ವೇಳೆ ಸರ್ಕಾರ ಅಂತಹ ನಿರ್ಧಾರಗಳನ್ನು ತೆಗೆದುಕೊಂಡರೆ ಸ್ಮಾರ್ಟ್ ಟಿವಿ ಸೇರಿದಂತೆ ಅನೇಕ ವಸ್ತುಗಳ ಬೆಲೆ ಕಡಿಮೆ ಆಗಲಿದೆ.

ಇದನ್ನೂ ಓದಿ: ಮೋದಿ ಬಜೆಟ್​ ಮೇಲೆ ದೊಡ್ಡ ನಿರೀಕ್ಷೆ.. ಬೆಂಗಳೂರು ಮಂದಿ ಬಯಸಿದ 12 ಬೇಡಿಕೆ ಇಲ್ಲಿದೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment