/newsfirstlive-kannada/media/post_attachments/wp-content/uploads/2025/07/SIDDARAMAIAH-DK-SHIVAKUMAR-DEHLI-VISIT.jpg)
ಪವರ್ ಶೇರಿಂಗ್ ಫೈಟ್.. ನಾಯಕತ್ವ ಗುದ್ದಾಟದ ಮಧ್ಯೆ ಇವತ್ತು ಸಿಎಂ, ಡಿಸಿಎಂ ಡೆಲ್ಲಿಯಾತ್ರೆ ಮಾಡ್ತಿದ್ದಾರೆ. ಇವತ್ತು ಪ್ರತ್ಯೇಕವಾಗಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಡೆಲ್ಲಿ ಫ್ಲೈಟ್ ಹತ್ತಲಿದ್ದಾರೆ. ಕಳೆದ ಬಾರಿ ಡೆಲ್ಲಿಯಲ್ಲಿ ನಾನೇ ಐದು ವರ್ಷ ಮುಖ್ಯಮಂತ್ರಿ ಎಂದಿದ್ದ ಸಿದ್ದು ಮತ್ತೇನು ಬಾಂಬ್ ಸಿಡಿಸಲಿದ್ದಾರೆ ಎಂಬ ಕೌತುಕ ಮೂಡಿದೆ. ಸಿಎಂ, ಡಿಸಿಎಂ ಪ್ರತ್ಯೇಕವಾಗಿ ದೆಹಲಿಯಾತ್ರೆ ಮಾಡ್ತಿರೋದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ರಾಹುಲ್ ಗಾಂಧಿ ಭೇಟಿಯಾಗ್ತಾರಾ ಸಿದ್ದು-ಡಿಕೆ?
ಇತ್ತೀಚಿಗಷ್ಟೇ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಡೆಲ್ಲಿಗೆ ಹೋಗಿ ಬಂದಿದ್ರು. ಇದೀಗ ಮತ್ತೆ ಇವತ್ತು ದೆಹಲಿಗೆ ತೆರಳಲಿದ್ದಾರೆ. ಕಳೆದ ಬಾರಿ ಎಐಸಿಸಿ ನಾಯಕ ರಾಹುಲ್ ಗಾಂಧಿ ಭೇಟಿಗೆ ಕಾಲಾವಕಾಶ ಸಿಗದೇ ಸಿಎಂ ವಾಪಸ್ ಆಗಿದ್ರು. ಇದೀಗ ಇವತ್ತು ಮತ್ತೆ ಸಿಎಂ ದೆಹಲಿಗೆ ತೆರಳುತ್ತಿದ್ದಾರೆ. ಡಿಸಿಎಂ ಕೂಡಾ ಹೈ ನಾಯಕರ ಭೇಟಿಗೆ ತೆರಳಲಿದ್ದಾರೆ. ಈ ಬಾರಿಯಾದ್ರೂ ಸಿದ್ದು-ಡಿಕೆ ರಾಹುಲ್ ಗಾಂಧಿಯನ್ನ ಭೇಟಿಯಾಗ್ತಾರಾ ಎಂಬ ಕೌತುಕ ಮೂಡಿದೆ.
ಇದನ್ನೂ ಓದಿ: ಇನ್ನೇರಡು ದಿನದಲ್ಲಿ ಸಿಎಂ ಕಾರ್ಯಕ್ರಮ.. ಕಲಾಸಿಪಾಳ್ಯ ಬಸ್ ನಿಲ್ದಾಣದಲ್ಲಿ ಪತ್ತೆಯಾಯ್ತು ಸ್ಫೋಟಕ ಜಿಲೆಟಿನ್
ದೆಹಲಿಗೆ ಸಿಎಂ, ಡಿಸಿಎಂ
- ಇಂದು ಪ್ರತ್ಯೇಕವಾಗಿ ದೆಹಲಿ ಪ್ರವಾಸ ಕೈಗೊಂಡಿರುವ ಸಿಎಂ ಹಾಗೂ ಡಿಸಿಎಂ
- ಮಧ್ಯಾಹ್ನ 3 ಗಂಟೆಗೆ ಸಿಎಂ ಹೊರಟ್ರೆ, ಸಂಜೆ ವೇಳೆಗೆ ಡಿಸಿಎಂ ದಿಲ್ಲಿ ಪ್ರಯಾಣ
- ಜು.25ರಂದು ದೆಹಲಿ ಒಬಿಸಿ ಸಭೆಯಲ್ಲಿ ಭಾಗಿಯಾಗಲಿರೋ ಸಿದ್ದರಾಮಯ್ಯ
- ಇದೇ ವೇಳೆ ಹೈಕಮಾಂಡ್ ನಾಯಕರನ್ನ ಭೇಟಿಯಾಗಲಿರುವ ಸಿದ್ದರಾಮಯ್ಯ
- ಖಾಲಿ ಇರುವ ನಿಗಮ - ಮಂಡಳಿ, ಎಂಎಲ್ಸಿ ಸ್ಥಾನಗಳ ಬಗ್ಗೆ ಸಿಎಂ ಚರ್ಚೆ
- ಮುಡಾ ಕೇಸ್, ಸುಪ್ರೀಂ ತೀರ್ಪು ಸೇರಿದಂತೆ ಹಲ ವಿಚಾರಗಳ ಚರ್ಚೆ ಸಾಧ್ಯತೆ
- ರಾಹುಲ್ ಗಾಂಧಿಯನ್ನ ಸಿಎಂ, ಡಿಸಿಎಂ ಭೇಟಿಯಾಗುತ್ತಾರಾ ಎಂಬ ಕುತೂಹಲ
- ರಾಹುಲ್ ಗಾಂಧಿ ಭೇಟಿಗೆ ಅವಕಾಶ ಕೇಳಿರುವ ಸಿಎಂ ಸಿದ್ದು, ಡಿಸಿಎಂ ಡಿಕೆಶಿ
- ನಾಯಕತ್ವ ಸಂಬಂಧ ರಾಹುಲ್ ಜೊತೆ ಡಿಕೆಶಿ ಚರ್ಚೆ ಮಾಡುವ ಸಾಧ್ಯತೆ ಇದೆ
ನಾಯಕತ್ವ ಚರ್ಚೆ.. ಸಿಎಂ ಕುರ್ಚಿ ಕಿತ್ತಾಟದ ಮಧ್ಯೆ ಸಿಎಂ, ಡಿಸಿಎಂ ಪ್ರತ್ಯೇಕವಾಗಿ ಡೆಲ್ಲಿ ಕಡೆ ಮುಖ ಮಾಡಿರೋದು ಕಾಂಗ್ರೆಸ್ ವಲಯದಲ್ಲೇ ಬಿಸಿಬಿಸಿ ಟಾಕ್‌ಗೆ ಕಾರಣವಾಗಿದೆ.
ಇದನ್ನೂ ಓದಿ: ‘ಮೊಟ್ಟೆ ಕೊಟ್ರೆ ಶಾಲೆ ಬಿಡಿಸ್ತೀವಿ’.. ಗ್ರಾಮಸ್ಥರ ನಡುವೆ ಭಿನ್ನಮತಕ್ಕೆ ಕಾರಣವಾಯ್ತು ಒಂದು ಮೊಟ್ಟೆ.. ಏನಿದು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ