ದೆಹಲಿ ಪ್ರವಾಸದಲ್ಲಿ ಸಿದ್ದರಾಮಯ್ಯ ರಾಷ್ಟ್ರಪತಿಗಳ ಭೇಟಿ ಆಗಲು ನಿರ್ಧರಿಸಿದ್ದು ಏಕೆ..?

author-image
Ganesh
Updated On
ದೆಹಲಿ ಪ್ರವಾಸದಲ್ಲಿ ಸಿದ್ದರಾಮಯ್ಯ ರಾಷ್ಟ್ರಪತಿಗಳ ಭೇಟಿ ಆಗಲು ನಿರ್ಧರಿಸಿದ್ದು ಏಕೆ..?
Advertisment
  • ಸಂಜೆ ಸಿಎಂ ಸಿದ್ದರಾಮಯ್ಯ ದೆಹಲಿ ಪ್ರವಾಸ
  • ರಾಷ್ಟ್ರಪತಿ, ಪ್ರಧಾನಿ ಭೇಟಿ ಆಗಲಿರುವ ಸಿಎಂ
  • ರಾಜ್ಯಕ್ಕೆ ಬರಬೇಕಿರೋ ಅನುದಾನದ ವಿಚಾರ ಚರ್ಚೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಜೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿಯಾಗುವ ಉದ್ದೇಶ ಹೊಂದಿದ್ದಾರೆ. ಇದೇ ವೇಳೆ ಹೈಕಮಾಂಡ್​ಗೂ ಭೇಟಿ ಆಗಲಿರುವ ಸಿಎಂ, ರಾಜ್ಯ ರಾಜಕೀಯದ ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ.

ಸಂಜೆ ಸಿಎಂ ಸಿದ್ದರಾಮಯ್ಯ ದೆಹಲಿ ಪ್ರವಾಸ

ಇವತ್ತು ಸಂಜೆ ಸಿಎಂ ಸಿದ್ದರಾಮಯ್ಯ ದೆಹಲಿ ಯಾತ್ರೆ ಕೈಗೊಳ್ತಿದ್ದಾರೆ. ಮಂಗಳವಾರ ರಾಷ್ಟ್ರಪತಿ ಮತ್ತು ಪ್ರಧಾನಿ ಮೋದಿ ಭೇಟಿಗೆ ಸಮಯ ಕೇಳಿದ್ದಾರೆ. ಅದರಲ್ಲೂ ಮೋದಿ ಮತ್ತು ಸಿದ್ದರಾಮಯ್ಯ ಭೇಟಿ ಸಾಕಷ್ಟು ಕುತೂಹಲ ಮನೆ ಮಾಡಿದೆ. 5 ಪ್ರಮುಖ ವಿಧೇಯಕಗಳು ಸೇರಿ ಸುಮಾರು 24 ವಿಧೇಯಕಗಳಿಗೆ ರಾಜ್ಯಪಾಲರು ಅಂಕಿತ ಹಾಕಿಲ್ಲ. ಈ ಹಿನ್ನೆಲೆ ಗವರ್ನರ್​​ ವಿರುದ್ಧ ಸಿಎಂ ದೂರು ನೀಡುವ ಸಾಧ್ಯತೆ ಇದೆ. ನಿನ್ನೆ ರಾಜ್ಯಪಾಲರ ಜೊತೆ ಇನ್ನೊಂದು ಸುತ್ತಿನ ಭೇಟಿ ಆಗಿ ಚರ್ಚಿಸಿದ್ದಾರೆ.

ಇದನ್ನೂ ಓದಿ: ‘ನಾನು ಬಾಯಿ ತೆರೆದ್ರೆ ಸರ್ಕಾರ ಅಲ್ಲಾಡುತ್ತೆ..’ ತಮ್ಮದೇ ಸರ್ಕಾರದ ವಿರುದ್ಧ BR ಪಾಟೀಲ್ ಆಕ್ರೋಶ..?

ರಾಷ್ಟ್ರಪತಿ-ಪ್ರಧಾನಿ ಭೇಟಿಗೆ ಮುಂದಾದ ಸಿಎಂ

ರಾಷ್ಟ್ರಪತಿಗಳ ಅಂಕಿತಕ್ಕಾಗಿ 5 ಮಸೂದೆಗಳನ್ನ ರಾಜ್ಯಪಾಲರು ರವಾನಿಸಿದ್ದಾರೆ. ಈಗ ರಾಷ್ಟ್ರಪತಿಗಳ ಭೇಟಿಗೆ ಮುಂದಾಗಿರುವ ಸಿಎಂ, ಬಿಲ್​ಗಳಿಗೆ ಅಂಕಿತ ಹಾಕಿಸಲು ರಾಷ್ಟ್ರಪತಿಗಳಿಗೆ ಮನವರಿಕೆ ಮಾಡಿ ಮನವಿ ಮಾಡ್ಲಿದ್ದಾರೆ. ರಾಷ್ಟ್ರಪತಿ ನಂತ್ರ ಪ್ರಧಾನಿ ಮೋದಿ ಭೇಟಿಗೂ ಸಿಎಂ ಟೈಂ ಕೇಳಿದ್ದಾರೆ.. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿರೋ ಅನುದಾನದ ಬಗ್ಗೆ ಮೋದಿ ಬಳಿ ಚರ್ಚಿಸಲಿದ್ದಾರೆ. ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ನೆರವು ನೀಡುವಂತೆ ಪ್ರಧಾನಿ ಹಾಗೂ ಕೇಂದ್ರ ಹಣಕಾಸು ಸಚಿವರನ್ನ ಸಿಎಂ ಕೇಳಿಕೊಳ್ಳಲಿದ್ದಾರೆ.. ಜೊತೆಗೆ ಇತರ ಇಲಾಖೆಗಳ ಸಚಿವರನ್ನೂ ಭೇಟಿಯಾಗುವ ನಿರೀಕ್ಷೆ ಇದೆ.

ಇದನ್ನೂ ಓದಿ: ಸರ್ಕಾರದ ನಡೆ ವಿರುದ್ಧ ಹಿರಿಯ ಸಚಿವ ಪರೋಕ್ಷ ಅಸಮಾಧಾನ.. ಸಿದ್ದರಾಮಯ್ಯಗೆ ಪಾಟೀಲ್ ಸುದೀರ್ಘ ಪತ್ರ..!

ಕಾಂಗ್ರೆಸ್​ನ ಹೈಕಮಾಂಡ್ ಭೇಟಿ ಮಾಡಲಿರೋ ಸಿಎಂ ಸಿದ್ದರಾಮಯ್ಯ, ರಾಜ್ಯದಲ್ಲಿ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರ ಭೇಟಿಗೆ ಸಮಯ ಕೇಳಿದ್ದಾರೆ. ಇಂದು ರಾಯಚೂರಿನಲ್ಲಿ 371ಜೆ ದಶಮಾನೋತ್ಸವ ಕಾರ್ಯಕ್ರಮ ಬಳಿಕ ಸಿಎಂ ದೆಹಲಿಗೆ ಹಾರಲಿದ್ದಾರೆ.

ಪರಿಷತ್‌ಗೆ ನಾಲ್ವರನ್ನು ನಾಮನಿರ್ದೇಶನ ಮಾಡುವ ಪಟ್ಟಿಗೆ ಹೈಕಮಾಂಡ್‌ ತಡೆ ನೀಡಿದೆ. ತಡೆಹಿಡಿಯಲಾದ ಇದೇ ಪಟ್ಟಿಗೆ ಅನುಮತಿ ನೀಡುವಂತೆ ಹೈಕಮಾಂಡ್‌ಗೆ ಒತ್ತಡ ಹೇರುವ ಸಾಧ್ಯತೆ ಇದೆ. ಸಹಜವಾಗಿ ಸಿಎಂ ದೆಹಲಿ ಪ್ರವಾಸ ಕಾರಣ, ಸಂಪುಟ ಪುನಾರಚನೆ, ನಿಗಮ ಮಂಡಳಿ ನೇಮಕ ವಿಚಾರದ ಚರ್ಚೆ ಗರಿಗೆದರಿದೆ.. ಒಟ್ಟಾರೆ, ಸಿಎಂ ಡೆಲ್ಲಿ ಪ್ರವಾಸ ಈ ಬಾರಿ ಸಾಕಷ್ಟು ವಿಶೇಷತೆ ಹೊಂದಿದೆ.

ಇದನ್ನೂ ಓದಿ: ಎತ್ತಿನ ಹೊಳೆ ಯೋಜನಾ ವೆಚ್ಚ ಡಬಲ್.. ಪದೇ ಪದೆ ಕಾಮಗಾರಿಗೆ ಡೆಡ್​ಲೈನ್ ಕೊಡ್ತಿದ್ದರೂ ವಿಳಂಬ ಆಗ್ತಿರೋದ್ಯಾಕೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment