ಸಿಎಸ್​ಕೆ ವಿರುದ್ಧ ಇವತ್ತು ಬಲಿಷ್ಠ ಆರ್​ಸಿಬಿ ಟೀಂ ಕಣಕ್ಕೆ.. ಹೇಗಿರುತ್ತೆ ತಂಡ..?

author-image
Ganesh
Updated On
RCB ಗೆಲುವಿನ ಹಿಂದಿನ ಹೀರೋಗಳು ಯಾರು..? ಕಿಂಗ್​ ಕೊಹ್ಲಿ, ಫಿಲ್ ಸಾಲ್ಟ್​ ಅಲ್ಲವೇ ಅಲ್ಲ!
Advertisment
  • ಚಿನ್ನಸ್ವಾಮಿಯಲ್ಲಿ ಇವತ್ತು ಆರ್​ಸಿಬಿ ಪಂದ್ಯ ನಡೆಯಲಿದೆ
  • ಚೆನ್ನೈಗೆ ಮತ್ತೆ ಮುಖಭಂಗ ಮಾಡಲು ಆರ್​ಸಿಬಿ ಪ್ಲಾನ್
  • ಇವತ್ತಿನ ತಂಡದಲ್ಲಿ ಯಾರಿಗೆಲ್ಲ ಸ್ಥಾನ ಸಿಗಲಿದೆ..?

ಸೋಲಿಲ್ಲದ ಸರದಾರನಾಗಿ ಮುನ್ನುಗ್ಗುತ್ತಿರುವ ಆರ್​ಸಿಬಿಗೆ ಇವತ್ತು ಚೆನ್ನೈ ಸೂಪರ್​ ಕಿಂಗ್ಸ್ ಎದುರಾಗಲಿದೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ಇಂದು ಸಂಜೆ ಬದ್ಧ ವೈರಿಗಳು ಗೆಲುವಿಗಾಗಿ ಕಣಕ್ಕೆ ಇಳಿಯಲಿವೆ.

ಆರ್​ಸಿಬಿ ಅಭಿಮಾನಿಗಳಿಗೆ ಕಾಡುತ್ತಿರುವ ಪ್ರಶ್ನೆ ಏನೆಂದರೆ, ಸಿಎಸ್​ಕೆ ವಿರುದ್ಧದ ಪಂದ್ಯಕ್ಕೆ ತಂಡದಲ್ಲಿ ಬದಲಾವಣೆ ಆಗಲಿದೆಯಾ ಅನ್ನೋದು. ಸದ್ಯ ಆರ್​ಸಿಬಿ ಗೆಲುವಿನ ಹಳಿಯಲ್ಲಿದೆ. ಹಿಂದಿನ ಪಂದ್ಯದಲ್ಲಿ ಜ್ವರದಿಂದ ಅಲಭ್ಯರಿಂದ ಫಿಲ್ ಸಾಲ್ಟ್ ತಂಡಕ್ಕೆ ಕಂಬ್ಯಾಕ್ ಮಾಡಲಿದ್ದಾರೆ. ಇನ್ನುಳಿದಂತೆ ತಂಡದಲ್ಲಿ ಯಾವುದೇ ಬದಲಾವಣೆ ನಿರೀಕ್ಷೆ ಇಲ್ಲ.

ಇದನ್ನೂ ಓದಿ: IPL ಕದನದಲ್ಲಿ ಅಭಿಮಾನಿಗಳಿಗೆ ಭಾವುಕ ಕ್ಷಣ.. ಕೊಹ್ಲಿ-ಧೋನಿ ಕೊನೆಯ ಬಾರಿಗೆ ಮುಖಾಮುಖಿ..?

ಏಪ್ರಿಲ್ 27 ರಂದು ಆರ್​ಸಿಬಿ ತಂಡವು ಡೆಲ್ಲಿ ಕ್ಯಾಪಿಟಲ್ಸ್​ ಎದುರಿಸಿತ್ತು. ಡೆಲ್ಲಿ ವಿರುದ್ಧ ಆಡಿದ ಆಟಗಾರರನ್ನೇ ಆರ್​ಸಿಬಿ ಉಳಿಸಿಕೊಳ್ಳಲಿದೆ. ಇಂದು ಫಿಲ್ ಸಾಲ್ಟ್​ ಕಣಕ್ಕಿಳಿದರೆ ಜೊಕೆಬ್ ಬೆಥೆಲ್​ಗೆ ಕೊಕ್ ನೀಡಲಾಗುತ್ತದೆ.

ಯಾರೆಲ್ಲ ಇರಲಿದ್ದಾರೆ..?

  • ವಿರಾಟ್ ಕೊಹ್ಲಿ
  •  ಜೊಕೆಬ್ ಬೆಥೆಲ್/ ಫಿಲ್ ಸಾಲ್ಟ್
  •  ರಜತ್ ಪಾಟೀದಾರ್ (ಕ್ಯಾಪ್ಟನ್)
  •  ಜಿತೇಶ್ ಶರ್ಮಾ (ವಿಕೆಟ್ ಕೀಪರ್)
  •  ಟಿಮ್ ಡೆವಿಡ್
  •  ಕೃನಾಲ್ ಪಾಂಡ್ಯ
  •  ರೊಮಾರಿಯೋ ಶೆಫೆರ್ಡ್
  •  ಭುವನೇಶ್ವರ್ ಕುಮಾರ್
  •  ಸುಯೇಶ್ ಶರ್ಮಾ (ಇಂಪ್ಯಾಕ್ಟ್ ಪ್ಲೇಯರ್)
  •  ಜೋಶ್ ಹೇಜಲ್​ವುಡ್
  •  ಯಶ್ ದಯಾಳ್
  •  ದೇವದತ್ ಪಡಿಕ್ಕಲ್ (ಇಂಪ್ಯಾಕ್ಟ್ ಪ್ಲೇಯರ್)

ಇದನ್ನೂ ಓದಿ: ಆರ್​ಸಿಬಿಗೆ ಪದೇ ಪದೆ ಕೈಕೊಡ್ತಿದ್ದಾರೆ 3 ಸೂಪರ್ ಸ್ಟಾರ್ಸ್​.. ಪ್ಲೇ ಆಫ್​ ಅಂಚಿನಲ್ಲಿ ಟೆನ್ಶನ್..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment