ಉಪಾಧ್ಯಕ್ಷರು ಮೊದಲು ಅಧಿಕಾರ ಸ್ವೀಕಾರ.. USನಲ್ಲಿ ಹೇಗಿರುತ್ತೆ ಪ್ರಕ್ರಿಯೆ ? ನಿನ್ನೆ ಬದಲು ಇವತ್ತೇ ಯಾಕೆ?

author-image
Ganesh
Updated On
ಉಪಾಧ್ಯಕ್ಷರು ಮೊದಲು ಅಧಿಕಾರ ಸ್ವೀಕಾರ.. USನಲ್ಲಿ ಹೇಗಿರುತ್ತೆ ಪ್ರಕ್ರಿಯೆ ? ನಿನ್ನೆ ಬದಲು ಇವತ್ತೇ ಯಾಕೆ?
Advertisment
  • ಅಮೆರಿಕದ 47ನೇ ಅಧ್ಯಕ್ಷರಾಗಿ ಇಂದು ಟ್ರಂಪ್ ಪ್ರತಿಜ್ಞಾವಿಧಿ
  • ಜನವರಿ 21 ರಂದು ಯಾಕೆ ಪ್ರಮಾಣವಚನ ಸ್ವೀಕಾರ ನಡೀತಿದೆ?
  • ಅಧ್ಯಕ್ಷರ ಪ್ರತಿಜ್ಞಾವಿಧಿಯ ಪ್ರಮಾಣ ವಚನದ ಸಾಲುಗಳು ಏನು..?

ಅಮೆರಿಕದಲ್ಲಿ ಇಂದಿನಿಂದ ಡೊನಾಲ್ಡ್ ಟ್ರಂಪ್ (Donald Trump) ಅವರ ದರ್ಬಾರ್ ಶುರುವಾಗಲಿದೆ. 47ನೇ ಅಧ್ಯಕ್ಷರಾಗಿ ಟ್ರಂಪ್ ಪ್ರತಿಜ್ಞಾವಿಧಿ ಸ್ವೀಕಾರ ಮಾಡಲಿದ್ದು, ಉಪಾಧ್ಯಕ್ಷರಾಗಿ ಜೆಡಿ ವ್ಯಾನ್ಸಿ (JD Vance) ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಅಮೆರಿಕದ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್​ (John Roberts) ಟ್ರಂಪ್‌ಗೆ ಪ್ರಮಾಣ ವಚನ ಬೋಧಿಸಲಿದ್ದಾರೆ.

ಜನವರಿ 21 ರಂದು ಯಾಕೆ ಪ್ರಮಾಣವಚನ..?

ಜನವರಿ 20 ರಂದು ಅಮೆರಿಕದಲ್ಲಿ ಉದ್ಘಾಟನಾ ದಿನ (Inauguration Day) ಎಂದು ಕರೆಯಲಾಗುತ್ತದೆ. ಆ ದಿನ ಹೊಸದಾಗಿ ಆಯ್ಕೆಯಾದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಪ್ರಮಾಣವಚನ ಸ್ವೀಕರಿಸುತ್ತಾರೆ. ಇದನ್ನು ಔಪಚಾರಿಕ ಸಮಾರಂಭವೆಂದು ಪರಿಗಣಿಸಲಾಗುತ್ತದೆ. ಅಮೆರಿಕದ ಅಧ್ಯಕ್ಷರ ಅಧಿಕಾರಾವಧಿಯು ಜನವರಿ 20 ರಿಂದ ಪ್ರಾರಂಭವಾಗುತ್ತದೆ. ಒಂದು ವೇಳೆ ಜನವರಿ 20 ರಂದು ಭಾನುವಾರ ಬಂದರೆ ಜನವರಿ 21 ರಂದು ನಡೆಸಲಾಗುತ್ತದೆ. 1933ಕ್ಕೂ ಮೊದಲು ಅಮೆರಿಕದ ಅಧ್ಯಕ್ಷರು ಮಾರ್ಚ್ 4 ರಂದು ಪ್ರಮಾಣ ವಚನ ಸ್ವೀಕರಿಸುತ್ತಿದ್ದರು. ನಂತರ ಪ್ರಮಾಣವಚನ ಸ್ವೀಕಾರ ದಿನಾಂಕ ಜನವರಿ 20ಕ್ಕೆ ನಿಗಧಿ ಪಡಿಸಲಾಗಿದೆ. ಅಮೆರಿಕದಲ್ಲಿ ಮೊದಲ ಪ್ರಮಾಣ ವಚನ ಸಮಾರಂಭ ಮಾರ್ಚ್​ 4, 1801 ರಂದು ನಡೆಯಿತು. ಥಾಮಸ್ ಜೆಫರ್ಸನ್ US ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

ಇದನ್ನೂ ಓದಿ: ಟ್ರಂಪ್​ಗೂ ನಡುಕ, ಇಡೀ ಅಮೆರಿಕ ಗಢಗಢ.. ಪ್ರಮಾಣ ವಚನ ಸ್ವೀಕಾರದ ಸ್ಥಳವನ್ನೇ ಬದಲಾಯಿಸಿಬಿಟ್ಟ..!

ಯಾರು ನಡೆಸಿಕೊಡ್ತಾರೆ..?

ಅಧ್ಯಕ್ಷರ ಪ್ರಮಾಣ ವಚನ ಸಮಾರಂಭದ ಜವಾಬ್ದಾರಿಯನ್ನು 1901 ರಿಂದ JCCIC ಹೊಂದಿದೆ. ಇಂದು ಜೊ ಬೈಡನ್ ಅವರು ಡೊನಾಲ್ಡ್ ಟ್ರಂಪ್ ಅವರನ್ನು ಶ್ವೇತಭವನದಿಂದ ಕ್ಯಾಪಿಟಲ್ ಕಟ್ಟಡಕ್ಕೆ ಕರೆದೊಯ್ಯುತ್ತಾರೆ. ಜೆಡಿ ವ್ಯಾನ್ಸ್ ಉಪಾಧ್ಯಕ್ಷರಾಗಿ ಮೊದಲು ಪ್ರಮಾಣ ವಚನ ಸ್ವೀಕರಿಸುತ್ತಾರೆ. ನಂತರ ಮುಖ್ಯ ನ್ಯಾಯಮೂರ್ತಿ ಟ್ರಂಪ್ ಅಧ್ಯಕ್ಷರಾಗಿ ಪ್ರಮಾಣ ವಚನ ಬೋಧಿಸಲಿದ್ದಾರೆ. ‘ಅಮೆರಿಕದ ಅಧ್ಯಕ್ಷ ಹುದ್ದೆಯ ಜವಾಬ್ದಾರಿಯನ್ನು ಪ್ರಾಮಾಣಿಕತೆಯಿಂದ ನಿರ್ವಹಿಸುತ್ತೇನೆ. ನಾನು ಯುನೈಟೆಡ್ ಸ್ಟೇಟ್ಸ್‌ನ ಸಂವಿಧಾನವನ್ನು ನನ್ನ ಶಕ್ತಿ ಮೀರಿ ಸಂರಕ್ಷಿಸುತ್ತೇನೆ, ರಕ್ಷಿಸುತ್ತೇನೆ ಮತ್ತು ರಕ್ಷಿಸುತ್ತೇನೆ ಎಂದು ಪ್ರತಿಜ್ಞಾವಿಧಿ ಸ್ವೀಕಾರ ಮಾಡುತ್ತಾರೆ.

ಇದನ್ನೂ ಓದಿ: ಅಮೆರಿಕದಲ್ಲಿ ಇಂದಿನಿಂದ ಟ್ರಂಪ್ ದರ್ಬಾರ್.. 40 ವರ್ಷಗಳ ಇತಿಹಾಸದಲ್ಲೇ ಒಂದು ದೊಡ್ಡ ಬದಲಾವಣೆ

ಹೇಗೆ ನಡೆಯುತ್ತೆ ಕಾರ್ಯಕ್ರಮ..?

  • ಮೊದಲು ಕ್ಯಾಪಿಟಲ್​​ಗೆ ಮೆರವಣಿ ಬರಲಿದೆ
  •  ಉಪಾಧ್ಯಕ್ಷರು ಅಧಿಕಾರ ಸ್ವೀಕಾರ ಮಾಡ್ತಾರೆ
  •  ನಂತರ ಅಧ್ಯಕ್ಷರು ಪ್ರಮಾಣ ವಚನ ಸ್ವೀಕಾರ
  •  ಬಳಿಕ ಉದ್ಘಾಟನಾ ಸಮಾರಂಭದ ಭಾಷಣ
  •  ನಿರ್ಗಮಿತ ಅಧ್ಯಕ್ಷರು, ಉಪಾಧ್ಯಕ್ಷರು ಗೌರವಯುತ ನಿರ್ಗಮನ
  •  ನೂತನ ಅಧ್ಯಕ್ಷರಿಂದ ಕಡತಗಳಿಗೆ ಸಹಿ ಹಾಕುತ್ತಾರೆ
  •  ಉದ್ಘಾಟನಾ ಸಮಾರಂಭದ ಊಟದ ಕಾರ್ಯಕ್ರಮ
  • ಅಧ್ಯಕ್ಷ, ಉಪಾಧ್ಯಕ್ಷರಿಂದ ಮಿಲಿಟರಿ ಪಡೆಗಳ ಪರಿಶೀಲನೆ
  • ಅಧ್ಯಕ್ಷರ ಮೆರವಣಿಗೆ ನಡೆಯಲಿದೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment