/newsfirstlive-kannada/media/post_attachments/wp-content/uploads/2024/12/manmohan_singh.jpg)
ಡಾ. ಮನಮೋಹನ್ ಸಿಂಗ್, ಆಧುನಿಕ ಆರ್ಥಿಕತೆಯ ಹರಿಕಾರ. ಮಾತಿಗಿಂತ ಕೃತಿಮೇಲು ಎಂಬ ತತ್ವವನ್ನ ಅರಿತಿದ್ದ ಮಿತಭಾಷಿ. ಆದ್ರೀಗ ವಿಧಿಯ ಕರೆಗೆ ಓಗೊಟ್ಟು ಮಾಜಿ ಪ್ರಧಾನಿ ಇಹಲೋಕ ತ್ಯಜಿಸಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಡಾ. ಮನಮೊಹನ್ ಸಿಂಗ್ ಏಮ್ಸ್​ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಅಪ್ರತಿಮ ನಾಯಕನನ್ನ ಕಳೆದುಕೊಂಡು ಇಡೀ ದೇಶವೇ ಕಂಬನಿ ಮಿಡಿಯುತ್ತಿದ್ದು, ಇಂದು ಭಾರತಾಂಭೆಯ ಹೆಮ್ಮೆಯ ಪುತ್ರ ಮನಮೋಹನ್​ ಸಿಂಗ್​ ಅವರ ಅಂತ್ಯಕ್ರಿಯೆ ನೆರವೇರಲಿದೆ.
ದೆಹಲಿಯ ನಿಗಮಬೋಧ್ ಘಾಟ್‌ನಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ
ಆರ್ಥಿಕ ತಜ್ಞ ಡಾ. ಮನಮೋಹನ್ ಸಿಂಗ್ ಅವರ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವಗಳೊಂದಿಗೆ ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಬೆಳಗ್ಗೆ 11.45ಕ್ಕೆ ದೆಹಲಿಯ ನಿಗಮಬೋಧ ಘಾಟ್‌ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ. ಈಗಾಗಲೇ ನಿಗಮಬೋಧ ಘಾಟ್‌ನಲ್ಲಿ ಮನಮೋಹನ್​ ಸಿಂಗ್​ರ ಅಂತ್ಯಕ್ರಿಯೆಗೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
/newsfirstlive-kannada/media/post_attachments/wp-content/uploads/2024/12/MANMOHAN-SINGH-RAMNATH.jpg)
ದೆಹಲಿಯ ಕಾಂಗ್ರೆಸ್ ಕಚೇರಿಯಿಂದ ಅಂತಿಮ ಯಾತ್ರೆ
ಮನಮೋಹನ್​ ಸಿಂಗ್​ ನಿಧನಕ್ಕೆ ಇಡೀ ದೇಶವೇ ಕಂಬನಿ ಮುಡಿಯುತ್ತಿದ್ದು, ಗಣ್ಯಾತಿಗಣ್ಯರು ಅವರ ನಿವಾಸಕ್ಕೆ ತೆರಳಿ ಅಂತಿಮ ನಮನ ಸಲ್ಲಿಸುತ್ತಿದ್ದಾರೆ.. ಮಾಜಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅಂತಿಮ ದರ್ಶನ ಪಡೆದರು. ಸದ್ಯ ಮಾಜಿ ಪ್ರಧಾನಿಯ ಪ್ರಾರ್ಥಿವ ಶರೀರವು ಅವರ ಸ್ವಗೃಹದಲ್ಲೇ ಇದ್ದು. ಬೆಳಗ್ಗೆ 8 ಗಂಟೆ ಸುಮಾರಿಗೆ ಕಾಂಗ್ರೆಸ್​ ಕಚೇರಿಗೆ ಸ್ಥಳಾಂತರವಾಗಲಿದೆ. ಅಲ್ಲಿ ಕಾಂಗ್ರೆಸ್​ ನಾಯಕರು ಮತ್ತೊಮ್ಮೆ ಅಂತಿಮ ನಮನ ಸಲ್ಲಿಸಲಿದ್ದು, ಬಳಿಕ ಬೆಳಗ್ಗೆ 9.30ಕ್ಕೆ ದೆಹಲಿಯ ಕಾಂಗ್ರೆಸ್​ ಪ್ರಧಾನ ಕಚೇರಿಯಿಂದ ಮನಮೋಹನ್​ ಸಿಂಗ್​ ಅವರ ಅಂತಿಮ ಯಾತ್ರೆ ನಡೆಯಲಿದೆ.
ಪ್ರಧಾನಿಗೆ ಪತ್ರ ಬರೆದು ಮಲ್ಲಿಕಾರ್ಜುನ್ ಖರ್ಗೆ ಮನವಿ
ಭಾರತದ ರಾಜಕೀಯ, ಆರ್ಥಿಕ ಕ್ಷೇತ್ರದ ಅಗ್ರಗಣ್ಯ ನಾಯಕರಲ್ಲಿ ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​ ಒಬ್ಬರು. ಎರಡು ಅವಧಿಗೆ ದೇಶದ ಪ್ರಧಾನಿಯಾಗಿದ್ದ ಸಿಂಗ್ ಅವರ ಸ್ಮಾರಕ ಸ್ಥಾಪಿಸುವ ಕುರಿತು ಮೋದಿ ಮಾತನಾಡಿದ್ದರು. ಇದರ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ಖರ್ಗೆ, ರಾಷ್ಟ್ರನಾಯಕರು ಮತ್ತು ಮಾಜಿ ಪ್ರಧಾನಿಗಳ ಅಂತ್ಯಕ್ರಿಯೆಯ ಸ್ಥಳದಲ್ಲಿಯೇ ಸ್ಮಾರಕ ನಿರ್ಮಿಸುವ ಸಂಪ್ರದಾಯವಿದೆ. ಅದರಂತೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿಯೇ ಮನಮೋಹನ್ ಸಿಂಗ್ ಅಂತ್ಯ ಸಂಸ್ಕಾರ ನಡೆಯಬೇಕು ಎಂದು ಖರ್ಗೆ ಪ್ರಧಾನಿ ಮೋದಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
/newsfirstlive-kannada/media/post_attachments/wp-content/uploads/2024/12/MANMOHAN-SINGH-CWC.jpg)
ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಸಂತಾಪ ಸೂಚಕ ನಿರ್ಣಯ
ಡಾ.ಮನಮೋಹನ್ ಸಿಂಗ್ ಅವರ ಅಗಲಿಕೆಗೆ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ಸಂತಾಪ ಸೂಚಿಸಿತು. ಮನಮೋಹನ್​ ಸಿಂಗ್​ ಆರ್ಥಿಕ ನೀತಿಗಳಿಂದಾಗಿ ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿ ಹೊರಹೊಮ್ಮಿತು ಎಂದು ಕಾಂಗ್ರೆಸ್ ಸ್ಮರಿಸಿದೆ. ಇನ್ನು ಕಾಂಗ್ರೆಸ್​ ನಾಯಕಿ ಸೋನಿಯಾ ಗಾಂಧಿ ಭಾವನಾತ್ಮಕ ಪತ್ರ ಬರೆದಿದ್ದು ಮನಮೋಹನ್ ಸಿಂಗ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಅವರ ನಿಧನ ವೈಯಕ್ತಿಕವಾಗಿ ನಷ್ಟ, ನಾನು ಒಬ್ಬ ಗೆಳೆಯ, ಮಾರ್ಗದರ್ಶಕ, ತತ್ವಜ್ಞಾನಿಯನ್ನ ಕಳೆದುಕೊಂಡಿದ್ದೇನೆ ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಅಧ್ಯಕ್ಷೆ ಸೋನಿಯಾಗಾಂಧಿ ಭಾವುಕ ಮಾತುಗಳನ್ನಾಡಿದ್ದಾರೆ.
/newsfirstlive-kannada/media/post_attachments/wp-content/uploads/2024/12/MANMOHAN-SINGH-GANGARATI.jpg)
ದೇಶದ ಆರ್ಥಿಕತೆಯ ಹರಿಕಾರ ಮನಮೋಹನ್​ ಸಿಂಗ್​ ನಿಧನಕ್ಕೆ ಇಡೀ ದೇಶವೇ ಸಂತಾಪ ಸೂಚಿಸುತ್ತಿದೆ. ಉತ್ತರ ಪ್ರದೇಶದ ಗಂಗಾರತಿ ವೇಳೆ ಮನಮೋಹನ್​ ಸಿಂಗ್​ ಭಾವಚಿತ್ರ ಹಿಡಿದು ಸಂತಾಪ ಸೂಚಿಸಲಾಯ್ತು. ಒಟ್ಟಾರೆ. ಆಧುನಿಕ ಆರ್ಥಿಕತೆಯ ಹರಿಕಾರ.. ವಿಖ್ಯಾತ ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಇನ್ನೂ ನೆನಪು ಮಾತ್ರ. ಆದ್ರೆ, ಭಾರತಕ್ಕೆ ಅವರು ಕೊಟ್ಟಿರೋ ಕೊಡುಗೆ.. 2 ಬಾರಿ ಪ್ರಧಾನಿಯಾಗಿ ಸಲ್ಲಿಸಿರೋ ಸೇವೆ ಈ ಜಗತ್ತು ಇರೋ ತನಕ ಅಜರಾಮರ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us