newsfirstkannada.com

ಅಸಮಾಧಾನದ ಬಗ್ಗೆ ತಿಳಿದು ದಿಢೀರ್ ಸದಾನಂದಗೌಡರ ಭೇಟಿ ಮಾಡಿದ ಶೋಭಾ ಕರಂದ್ಲಾಜೆ..!

Share :

Published March 18, 2024 at 11:28am

  ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್​ ಸಿಗದಿದ್ದಕ್ಕೆ ಅಸಮಾಧಾನ

  ಕ್ಷೇತ್ರದಿಂದ ಪ್ರಚಾರ ಆರಂಭಿಸಿದ ಅಭ್ಯರ್ಥಿ ಶೋಭಾ ಕರಂದ್ಲಾಜೆ

  ಸದಾನಂದಗೌಡರನ್ನ ಕಾಂಗ್ರೆಸ್​ಗೆ ಕರೆತರಲು ಕಸರತ್ತು ನಡೆಯುತ್ತಿದೆಯಾ?

ಬೆಂಗಳೂರು: ಮಾಜಿ ಸಿಎಂ ಡಿ.ವಿ.ಸದಾನಂದ ಗೌಡರಿಗೆ ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಟಿಕೆಟ್ ನಿರಾಕರಿಸಿ ಸಚಿವೆ ಶೋಭಾ ಕರಂದ್ಲಾಜೆಗೆ ನೀಡಲಾಗಿದೆ. ಟಿಕೆಟ್ ಸಿಕ್ಕ ಖುಷಿಯಲ್ಲೇ ಶೋಭಾ ಕರಂದ್ಲಾಜೆ ಪ್ರಚಾರ ಕಾರ್ಯ ಆರಂಭಿಸಿದ್ದು ಇದೇ ವೇಳೆ ಡಿ.ವಿ.ಸದಾನಂದಗೌಡರ ನಿವಾಸಕ್ಕೆ ಭೇಟಿ ನೀಡಿದ್ದಾರೆ.

ಟಿಕೆಟ್ ಸಿಕ್ಕ ಸಂತಸದಲ್ಲಿ ಪ್ರಚಾರ ಕಾರ್ಯ ಆರಂಭಿಸಿರುವ ಶೋಭಾ ಕರಂದ್ಲಾಜೆ ಇಂದು ಬೆಂಗಳೂರಿನ RMV ಬಡಾವಣೆಯ ನಿವಾಸಕ್ಕೆ ಭೇಟಿ ನೀಡಿ, ಡಿ.ವಿ.ಸದಾನಂದ ಗೌಡರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. ಕ್ಷೇತ್ರದಲ್ಲಿ ಸದಾನಂದ ಗೌಡರ ಸಾಥ್ ಇಲ್ಲದಿದ್ದರೆ ಗೆಲ್ಲುವುದು ಕಷ್ಟ ಎಂದು ತಿಳಿದಿರುವ ಕರಂದ್ಲಾಜೆಯವರು ಅವರ ನಿವಾಸಕ್ಕೆ ಭೇಟಿ ನೀಡಿ ಬರ್ತ್​ಡೇಗೆ ವಿಶ್ ಮಾಡುವುದರ ಜೊತೆಗೆ ಕೆಲ ಸಮಯ ಮಾತನಾಡಿದ್ದಾರೆ.

ವಿರೋಧದ ಬೆನ್ನಲ್ಲೇ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಟಿಕೆಟ್​ ಗಿಟ್ಟಿಸಿಕೊಂಡಿದ್ದಾರೆ. ಇದೇ ಕ್ಷೇತ್ರದ ಆಕಾಂಕ್ಷಿಯಾಗಿದ್ದ ಮಾಜಿ ಸಿಎಂ ಡಿವಿ ಸದಾನಂದಗೌಡರಿಗೆ ಟಿಕೆಟ್​ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿದ್ದಾರೆ. ಹೀಗಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಸದಾನಂದಗೌಡರನ್ನು ಕಾಂಗ್ರೆಸ್​ಗೆ ಸೆಳೆಯಲು ಪ್ರಯತ್ನಿಸಿದ್ದಾರೆ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಸಮಾಧಾನದ ಬಗ್ಗೆ ತಿಳಿದು ದಿಢೀರ್ ಸದಾನಂದಗೌಡರ ಭೇಟಿ ಮಾಡಿದ ಶೋಭಾ ಕರಂದ್ಲಾಜೆ..!

https://newsfirstlive.com/wp-content/uploads/2024/03/DV_SADANANDAGOWDA-1.jpg

Load More