PUC ನಂತರ ಮುಂದೇನು? ನಿಮ್ಮ ಎಲ್ಲಾ ಗೊಂದಲಗಳಿಗೆ ಸಿಗಲಿದೆ ಉತ್ತರ, ಡೋಂಟ್ ಮಿಸ್​..!

author-image
Bheemappa
Updated On
PUC ನಂತರ ಮುಂದೇನು? ನಿಮ್ಮ ಎಲ್ಲಾ ಗೊಂದಲಗಳಿಗೆ ಸಿಗಲಿದೆ ಉತ್ತರ, ಡೋಂಟ್ ಮಿಸ್​..!
Advertisment
  • ನ್ಯೂಸ್​​ಫಸ್ಟ್, ಪ್ರಜಾವಾಣಿ ಸಹಯೋಗದಲ್ಲಿ Education expo
  • ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದ ಹಲವು ಪರಿಣಿತರು ಸಂವಾದದಲ್ಲಿ ಭಾಗಿ
  • ಹೆಚ್ಚು ಮಾರ್ಕ್ಸ್​ ತೆಗೆದು ಗೆದ್ದವರಿಗೆ ಸಿಗಲಿದೆ ₹1 ಲಕ್ಷ ಬಹುಮಾನ

ಪಿಯುಸಿ ನಂತರ ಮುಂದೇನು? ಯಾವ ಕೋರ್ಸ್​ ಆಯ್ಕೆ ಮಾಡಿಕೊಳ್ಳಬೇಕು? ವೃತ್ತಿ ಪರ ಕೋರ್ಸ್​ ಎಷ್ಟಿವೆ? ಹೀಗೆ, ನಿಮ್ಮ ತಲೆಯಲ್ಲಿ ಸಾಕಷ್ಟು ಗೊಂದಲಗಳಿದ್ಯಾ? ಹಾಗಿದ್ರೆ, ತಡ ಯಾಕೆ, ಈ ಪ್ರಶ್ನೆಗಳಿಗೆ ಉತ್ತರ ಸಿಗಬೇಕಂದ್ರೆ ಇವತ್ತು ಎಡ್ಯುವರ್ಸ್​ EDUCATION EXPOಗೆ ಬನ್ನಿ.

ಪಿಯುಸಿ ಮುಗಿಸಿದ ವಿದ್ಯಾರ್ಥಿಗಳ ತಲೆಯಲ್ಲಿ ಸಾಕಷ್ಟು ಕನ್ಯೂಫನ್ಸ್​ ಇರುತ್ವೆ. ವಾಟ್ ನೆಕ್ಸ್ಟ್​?. ಎಡ್ಯುವರ್ಸ್‌ ಕರ್ನಾಟಕದ ಪ್ರತಿಷ್ಠಿತ ಶೈಕ್ಷಣಿಕ ಮೇಳ. ನ್ಯೂಸ್ ಫಸ್ಟ್ ಟೆಲಿವಿಷನ್ ಪಾರ್ಟ್​ನರ್ ಆಗಿ ಪ್ರಜಾವಾಣಿ ಮತ್ತು ಡೆಕ್ಕನ್‌ ಹೆರಾಲ್ಡ್ ಬಳಗ ಪ್ರಸ್ತುತಪಡಿಸುವ education expo ಇಂದು ಆರಂಭವಾಗಲಿದೆ. ನಗರದ ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ಇಂದು ಮತ್ತು ನಾಳೆ, ಎರಡು ದಿನ ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ಈ ಮೇಳ ನಡೆಯಲಿದ್ದು, ಎಲ್ಲ ಶೈಕ್ಷಣಿಕ ಮನಸ್ಸುಗಳು ಭಾಗಿಯಾಗಲು ಮುಕ್ತ ಆಹ್ವಾನವಿದೆ.

publive-image

ಕಾರ್ಯಕ್ರಮ ಉದ್ಘಾಟಿಸಿಲಿರುವ ನಟ ವಿಜಯ್​ ರಾಘವೇಂದ್ರ

ನಟ ವಿಜಯರಾಘವೇಂದ್ರ ಶೈಕ್ಷಣಿಕ ಮೇಳವನ್ನು ಉದ್ಘಾಟಿಸಲಿದ್ದಾರೆ. ಎರಡೂ ದಿನ ಸಿಇಟಿ ಹಾಗೂ ಕಾಮೆಡ್‌–ಕೆ ಕುರಿತು ವಿಶೇಷ ಗೋಷ್ಠಿಗಳು ನಡೆಯಲಿವೆ. ಅನೇಕ ಪ್ರತಿಷ್ಠಿತ ಸಂಸ್ಥೆಗಳು ಶಿಕ್ಷಣ ಕ್ಷೇತ್ರದ ಹಲವು ಪರಿಣತರು, ತಜ್ಞರು ಪಾಲ್ಗೊಳ್ತಿದ್ದಾರೆ. ಪರಿಣತರೊಂದಿಗೆ ಸಂವಾದ, ಉಪನ್ಯಾಸ ಮತ್ತು ಚರ್ಚೆಗಳನ್ನು ಆಯೋಜಿಸಲಾಗುತ್ತದೆ. ವಿದ್ಯಾರ್ಥಿಗಳು ಪೋಷಕರು ತಮಗಿರುವ ಗೊಂದಲಗಳನ್ನ ಬಗೆಹರಿಸಿ ಕೊಳ್ಳಲು ಅವಕಾಶವಿದೆ.

50ಕ್ಕೂ ಹೆಚ್ಚಿನ ಶಿಕ್ಷಣ ಸಂಸ್ಥೆಗಳು ಪಾಲ್ಗೊಳ್ಳೋ ಈ ಕಾರ್ಯಕ್ರಮದಲ್ಲಿ ಏನೆಲ್ಲ ಇರಲಿದೆ ಅನ್ನೋದನ್ನ ನೋಡೋದಾದ್ರೆ..

  • ವಿಶೇಷ ಕೋರ್ಸ್‌ಗಳ ಹಾಗೂ ಪದವಿಗಳ ಬಗ್ಗೆ ಮಾಹಿತಿ
  • ವಿದ್ಯಾರ್ಥಿಗಳಷ್ಟೆಲ್ಲದೇ ಪಾಲಕರಿಗೂ ಮಾರ್ಗದರ್ಶನ
  • ವಿಶ್ವಾಸ ಹೆಚ್ಚಿಸಲು ವಿಶೇಷ ಉಪನ್ಯಾಸಗಳ ಆಯೋಜನೆ
  • ಸಿಇಟಿ, ಕಾಮೆಡ್​ಕೆ ಸಂಬಂಧದ ಸಮಗ್ರ ಮಾಹಿತಿ ಲಭ್ಯ
  • ಪರೀಕ್ಷಾರ್ಥಿಗಳಿಗೆ ಎರಡು ದಿನ ಮಾಕ್​ ಟೆಸ್ಟ್ ಆಯೋಜನೆ
  • ಹೆಚ್ಚು ಅಂಕಗಳಿಸಿದ 10 ಜನರಿಗೆ 1 ಲಕ್ಷ ಮೌಲ್ಯದ ಬಹುಮಾನ

ಇದನ್ನೂ ಓದಿ: ಗ್ರಾಹಕರಿಗೆ ಬಿಗ್​ ಶಾಕ್​​.. ಯುಗಾದಿ ಹಬ್ಬಕ್ಕೆ ಬಸ್​ ಟಿಕೆಟ್​ ದರ ದಿಢೀರ್​ ಏರಿಕೆ; ಎಷ್ಟು ಗೊತ್ತಾ?

publive-image

what next ಅನ್ನೋದು ಎಷ್ಟೋ ಜನ ಪಿಯು ವಿದ್ಯಾರ್ಥಿಗಳಿಗೆ ಇರುವ ಅತೀ ದೊಡ್ಡ ಪ್ರಶ್ನೆ. ಈ ಪ್ರಶ್ನೆಗೆ ಸೂಕ್ತ ಉತ್ತರ ಅಂದ್ರೆ ಅಗತ್ಯ ಮಾರ್ಗದರ್ಶನ. ಈ ಸಲಹೆ ಪಡೆದು ಆ ಗೊಂದಲಗಳ ಬಗೆಹರಿಸಿಕೊಳ್ಳಲು ಎಡ್ಯುವರ್ಸ್‌ ಶೈಕ್ಷಣಿಕ ಮೇಳ ಉತ್ತಮ ವೇದಿಕೆ ಅಂದ್ರೆ ತಪ್ಪಾಗಲ್ಲ. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬನ್ನಿ ಲಾಭ ಪಡೆದು ಕೊಳ್ಳಿ. ಅಷ್ಟೇ ಅಲ್ಲ, ಏಪ್ರಿಲ್‌ 13 ಮತ್ತು 14ರಂದು ಹುಬ್ಬಳ್ಳಿಯಲ್ಲಿಯೂ ಈ ಮೇಳವನ್ನೂ ಆಯೋಜಿಸಲಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment