Advertisment

ಡಿವೋರ್ಸ್​ ಬಗ್ಗೆ ಸ್ಪಷ್ಟನೆ ಕೊಡ್ತಾರಾ ಚಂದನ್ ಶೆಟ್ಟಿ- ನಿವೇದಿತಾ.. ಇಂದು ಸಂಜೆ ಬಿಗ್ ಅಪ್​ಡೇಟ್​

author-image
Bheemappa
Updated On
ಪಕ್ಕಾ ಚಾಕಲೇಟ್​ ಗರ್ಲ್​​ ಎಂದಿದ್ದ ಚಂದನ್​ ಶೆಟ್ಟಿ! ನಿವೇದಿತಾ ಜೊತೆಗಿನ ಸಂಸಾರಕ್ಕೆ ಬ್ರೇಕ್ ನೀಡಲು​ ಇದೇನಾ ಕಾರಣ?
Advertisment
  • ಡಿವೋರ್ಸ್ ಆದ ಬಳಿಕ ಚಂದನ್ ಶೆಟ್ಟಿ- ನಿವೇದಿತಾ ಎಲ್ಲಿಗೆ ಹೋಗಿದ್ರು?
  • ಚಂದನ್ ಶೆಟ್ಟಿ- ನಿವೇದಿತಾ ಗೌಡ ಜೂನ್ 7ರಂದು ಡಿವೋರ್ಸ್ ಪಡೆದಿದ್ರು
  • ಬೆಂಗಳೂರಿನಲ್ಲಿ ಸಂಜೆ ಮಾಧ್ಯಮಗೋಷ್ಠಿ ನಡೆಸಿ ಏನೇನು ಹೇಳಲಿದ್ದಾರೆ?

ಬೆಂಗಳೂರು: ಕ್ಯೂಟ್ ಜೋಡಿ ರ್ಯಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾಗೌಡ ಈಗ ನಾನೊಂದು ತೀರ ನೀನೊಂದು ತೀರವೆಂದು ದೂರ, ದೂರವಾಗಿದ್ದಾರೆ. ದಾಂಪತ್ಯ ಜೀವನಕ್ಕೆ ಗುಡ್ ಬಾಯ್ ಹೇಳಿರುವ ಈ ಜೋಡಿಯ ವಿಚಾರ ಇಂಡಸ್ಟ್ರಿ ಮಾತ್ರವಲ್ಲ ಫ್ಯಾನ್ಸ್​ಗೂ ಹರ್ಟ್​ ಮಾಡಿತ್ತು. ಆದ್ರೆ ಯಾವ ಕಾರಣಕ್ಕೆ ಇವರು ದೂರವಾದ್ರೂ ಅನ್ನೋದು ಗೊಂದಲಗಳನ್ನ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಇಂದು ಸಂಜೆ ಚಂದನ್ ಶೆಟ್ಟಿ ಹಾಗೂ ನಿವೇದಿತಾಗೌಡ ಮಾಧ್ಯಮಗೋಷ್ಠಿ ನಡೆಸಲಿದ್ದಾರೆ.

Advertisment

ಇದನ್ನೂ ಓದಿ: ನಾಲ್ಕೇ ವರ್ಷಕ್ಕೆ ಸುಂದರ ಸಂಸಾರಕ್ಕೆ ಅಂತ್ಯ ಹಾಡಿದ ನಿವ್ವಿ-ಕುಕ್ಕಿ; ಇಬ್ಬರ ಮಧ್ಯೆ ನಡೆದಿದ್ದೇನು?

ಚಂದನ್ ಶೆಟ್ಟಿ ಹಾಗೂ ನಿವೇದಿತಾಗೌಡ ಡಿವೋರ್ಸ್ ನಂತರ ಮೈಸೂರಿನಲ್ಲಿದ್ದರು. ಆದರೆ ಈ ಜೋಡಿ ಯಾವ ಕಾರಣಕ್ಕೆ ದೂರವಾದರು ಎನ್ನುವುದು ಗೊಂದಲಗಳನ್ನು ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಡಿವೋರ್ಸ್​ ಕುರಿತು ಸ್ಪಷ್ಟನೆ ನೀಡುವುದಕ್ಕಾಗಿಯೇ ಮೈಸೂರಿನಿಂದ ಬೆಂಗಳೂರಿಗೆ ಇಂದು ಸಂಜೆ 4 ಗಂಟೆಗೆ ಆಗಮಿಸಿ ಮಾಧ್ಯಮಗೋಷ್ಠಿ ನಡೆಸಲಿದ್ದಾರೆ. ಜೂನ್ 7ರಂದು ಡಿವೋರ್ಸ್ ಪಡೆದಿದ್ದ ಚಂದನ್ ಮತ್ತು ನಿವೇದಿತಾ ಕಾನೂನಾತ್ಮಕವಾಗಿ ದೂರ ದೂರ ಆಗಿದ್ದರು. ಆದರೂ ಇವರ ದಾಂಪತ್ಯದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಲವು ವದಂತಿ ಹಬ್ಬಿವೆ.

ಇದನ್ನೂ ಓದಿ: MS ಧೋನಿಯನ್ನ ಹೊಗಳಿದ ರಿಷಬ್​ ಪಂತ್.. ಯಂಗ್ ಪ್ಲೇಯರ್ ಬಗ್ಗೆ ನಾಯಕ ರೋಹಿತ್ ಬೇಜಾರ್ ಆದ್ರಾ?

Advertisment

publive-image

ಚಂದನ್- ನಿವೇದಿತಾ ದಾಂಪತ್ಯ ಜೀವನಕ್ಕೆ ಅಂತ್ಯವಾಡಿರುವ ನಿರ್ಧಾರದ ಬಗ್ಗೆ ಸಾರ್ವಜನಿಕ ವಲಯದಿಂದ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಮಗು ವಿಚಾರಕ್ಕೆ ವಿಚ್ಛೇದನವಾಗಿದೆಂದು, 3ನೇ ವ್ಯಕ್ತಿಯ ಮಧ್ಯ ಪ್ರವೇಶದಿಂದ ದೂರ ಆಗಿರಬಹುದು ಎನ್ನುವ ಟೀಕೆಗಳು ವ್ಯಕ್ತವಾಗಿದ್ದವು. ಅವರ ಕೆಲ ಆಪ್ತರು ಭಿನ್ನಾಭಿಪ್ರಾಯದ ಬಗ್ಗೆ ಬಹಿರಂಗವಾಗಿ ಮಾತಾಡಿದ್ದರು. ಇದರಿಂದ ಚಂದನ್-ನಿವೇದಿತಾ ದಾಂಪತ್ಯದ ಬಗ್ಗೆ ಗೊಂದಲ ಉಂಟಾಗಿತ್ತು. ಹೀಗಾಗಿ ಈ ಎಲ್ಲ ಗೊಂದಲಗಳಿಗೆ ತೆರೆ ಎಳೆಯೋಕೆ ಇಬ್ಬರು ಮುಂದಾಗಿದ್ದಾರೆ. ಇಂದು ಸಂಜೆ 4 ಗಂಟೆಗೆ ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಎಲ್ಲವುದಕ್ಕೂ ಸ್ಪಷ್ಟನೆ ನೀಡಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment