newsfirstkannada.com

ಬೆಂಗಳೂರಲ್ಲಿ ಇಂದು ಸಂಜೆ ಮಳೆರಾಯನ ಅಬ್ಬರ; ಹವಾಮಾನ ತಜ್ಞರು ಹೇಳಿದ್ದೇನು?

Share :

Published April 12, 2024 at 12:43pm

Update April 12, 2024 at 12:51pm

    ರಾಜ್ಯದಲ್ಲಿ 2 ಡಿಗ್ರಿ ಸೆಲ್ಸಿಯಸ್​ ತಾಪಮಾನ ಈಗಾಗಲೇ ಕಡಿಮೆಯಾಗಿದೆ

    ಇಂದು ರಾಜ್ಯದ ಯಾವ್ಯಾವ ಜಿಲ್ಲೆಗಳಲ್ಲಿ ಮಳೆಯಾಗುತ್ತದೆ ಎಂದು ಮುನ್ಸೂಚನೆ

    2 ದಿನಗಳು ಸ್ವಲ್ಪ ತಂಪಾದ ವಾತಾವರಣ ಇರುತ್ತೆ ಎಂದ ಹವಾಮಾನ ಇಲಾಖೆ

ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನಲ್ಲಿ‌ ಇಂದು ಬೆಳಗ್ಗೆಯಿಂದಲೂ ವಾತಾವರಣ ತಂಪಾಗಿದ್ದು ತಾಪಮಾನ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಸಂಜೆ ಮಳೆ ಬರುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞ ಪ್ರಸಾದ್ ಅವರು ಹೇಳಿದ್ದಾರೆ.

ಸಿಲಿಕಾನ್ ಸಿಟಿಗೆ ಇಂದು ಸಂಜೆ ಮಳೆರಾಯ ಆಗಮನವಾಗುವ ಸಾಧ್ಯತೆ ಬಹುತೇಕ ಇದೆ. ಬೆಂಗಳೂರು ಮತ್ತು ಸುತ್ತಮುತ್ತಾ ಸಂಜೆ ವೇಳೆಗೆ ಗುಡುಗು ಮಿಂಚು ಸಮೇತ ಮಳೆಯಾಗುವ ಸಾಧ್ಯತೆ ಇದೆ. ರಾಜ್ಯದಲ್ಲಿ ನಿನ್ನೆಯಿಂದ 2 ಡಿಗ್ರಿ ತಾಪಮಾನ ಕಡಿಮೆ ಆಗಿದೆ. ಬೀದರ್​ ಮತ್ತು ಕಲಬುರಗಿಯಲ್ಲಿ 2 ರಿಂದ 3 ಸೆಂಟಿ ಮೀಟರ್​ನಷ್ಟು ಮಳೆ ಆಗಿದೆ. ದಕ್ಷಿಣ ಒಳನಾಡು ಮಡಿಕೇರಿಯಲ್ಲಿ ಸ್ವಲ್ಪ ಮಳೆ ಸುರಿದಿದೆ. ಅದರಂತೆ ಇಂದು ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಮಳೆಯಾಗಬಹುದು. ಉತ್ತರ ಒಳನಾಡಿನ ಕಲಬುರಗಿ, ಬೆಳಗಾವಿ ಮತ್ತು ವಿಜಯಪುರದಲ್ಲಿ ಬೂದಿ ಮುಚ್ಚಿದಂತಹ ವಾತವರಣ ಇರಲಿದ್ದು ವರುಣ ಆಗಮನ ಆಗಬಹುದು. ಒಟ್ಟಿನಲ್ಲಿ ರಾಜ್ಯದ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞ ಪ್ರಸಾದ್ ಅವರು ಹೇಳಿದ್ದಾರೆ.

ಇದನ್ನೂ ಓದಿ: ಬೂಮ್ರಾ ಬೊಂಬಾಟ್ ಆಟಕ್ಕೆ RCBಗೆ ಪ್ರಾಣ ಸಂಕಟ.. ಆದ್ರೆ ಕ್ರಿಕೆಟ್​ ಫ್ಯಾನ್ಸ್ ಖುಷ್ ಆಗಿದ್ದೇಕೆ..?

ಇದನ್ನೂ ಓದಿ: ಮುಂಗಾರುಗೆ ಮೊದಲೇ ಆರ್ಭಟಿಸ್ತಿರೋ ವರುಣ.. ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ, ಸಿಡಿಲಿಗೆ ಇಬ್ಬರು ಬಲಿ

ಕಲಬುರಗಿಯಲ್ಲಿ ಅತಿ ಹೆಚ್ಚು ಉಷ್ಣಾಂಶ ದಾಖಲಾಗಿದ್ದು ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಉಷ್ಣಾಂಶದ ಜೊತೆಗೆ ಬಿಸಿ ಹವಾಮಾನ ಮುಂದುವರೆಯುತ್ತೆ. ಇಂದು ಹಲವೆಡೆ ಕೊಂಚ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಇನ್ನೂ ಎರಡು ದಿನಗಳು ಸ್ವಲ್ಪ ತಂಪಾದ ವಾತಾವರಣ ಇರುವುದಾಗಿ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಲ್ಲಿ ಇಂದು ಸಂಜೆ ಮಳೆರಾಯನ ಅಬ್ಬರ; ಹವಾಮಾನ ತಜ್ಞರು ಹೇಳಿದ್ದೇನು?

https://newsfirstlive.com/wp-content/uploads/2024/04/CKD_RAIN_1.jpg

Load More