/newsfirstlive-kannada/media/post_attachments/wp-content/uploads/2023/09/GANAPATI-1.jpg)
ದೇಶದಾದ್ಯಂತ ಗೌರಿ-ಗಣೇಶ ಹಬ್ಬದ ಸಡಗರ ಸಂಭ್ರಮ ಮನೆ ಮಾಡಿದೆ. ಪ್ರತಿ ವರ್ಷದಂತೆ ಈ ವರ್ಷವೂ ಪುತ್ರ ಗಣಪತಿಗಿಂತ ಮೊದಲೇ ತಾಯಿ ಗೌರಿ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಗಣೇಶನಗಿಂತ ಗೌರಿಯನ್ನು ಮೊದಲು ಪೂಜೆ ಮಾಡಿದರೆ ಮನಸ್ಸಿಗೆ ಬಹಳ ಶಾಂತಿ, ನೆಮ್ಮದಿ, ಐಶ್ವರ್ಯ ಎಲ್ಲವೂ ಒಲಿದು ಬರುತ್ತವೆ ಎಂಬುವುದು ಮೊದಲಿನಿಂದಲೂ ಹಿಂದೂಗಳಲ್ಲಿರುವ ನಂಬಿಕೆಯಾಗಿದೆ. ಇದರಿಂದ ತಾಯಿ ಗೌರಿಯನ್ನು ಪ್ರತಿಷ್ಠಾಪನೆ ಮಾಡಿ ಸಾಂಪ್ರದಾಯದಂತೆ ವಿಶೇಷ ಪೂಜೆ ನೆರವೇರಿಸಲಾಗುತ್ತಿದೆ.
ಗೌರಿ ಹಬ್ಬವೆಂದರೆ ಮುತ್ತೈದೆಯರಿಗೆಲ್ಲ ಸೌಭಾಗ್ಯ ನೀಡುವ ಹಬ್ಬ. ಮಹಾಗಣಪತಿ ಪ್ರತಿಷ್ಠಾಪನೆಗೆ ಸಕಲ ಸಿದ್ಧತೆಗಳು ಎಲ್ಲೆಡೆ ನಡೆದಿದ್ದು ಇದಕ್ಕೂ ಮೊದಲೇ ಪಾರ್ವತಿ ಅಥವಾ ಗೌರಿಗೆ ಪೂಜೆ ಮಾಡುವುದು ವಾಡಿಕೆಯಿದೆ. ಅದರಂತೆ ಮಹಿಳೆಯರು ತಟ್ಟೆಯಲ್ಲಿ ಗೌರಿಯ ಮೂರ್ತಿಯನ್ನಿಟ್ಟು ಕುಂಕುಮ, ಹೂವುಗಳಿಂದ ಸಿಂಗಾರ ಮಾಡುತ್ತಾರೆ. ಬಳಿಕ ಮಾವಿನ ತೋರಣಗಳಿಂದ ಸಿದ್ಧಮಾಡಿರುವ ಗಣಪತಿಯ ಕೂರಿಸುವ ಸ್ಥಳದಲ್ಲೇ ಗೌರಿಯನ್ನಿಟ್ಟು ದೀಪಗಳನ್ನು ಹಚ್ಚಿ, ಸಕಲ ಯಶಸ್ಸು ಸಿಗಲೆಂದು ಪೂಜೆ ಸಲ್ಲಿಸುತ್ತಿದ್ದಾರೆ. ನಂತರ ದೇವಿಗೆ ನೈವೇದ್ಯ ಅರ್ಪಿಸುವ ಮೂಲಕ ಗೌರಿ ಹಬ್ಬ ಆಚರಿಸುತ್ತಿದ್ದಾರೆ.
[caption id="attachment_18975" align="alignnone" width="800"] ಗಣಪತಿ[/caption]
ಇಂದು ದೇವಿ ಗೌರಿ ಶಾಂತಿಯಿಂದ ಪ್ರತಿಷ್ಠಾಪನೆ ಆದ ಬಳಿಕ ನಾಳೆ ಮಹಾವಿಘ್ನೇಶನನ್ನ ಅದ್ಧೂರಿಯಾಗಿ ಪ್ರತಿಷ್ಠಾಪನೆ ಮಾಡುತ್ತಾರೆ. ಈಗಾಗಲೇ ಎಲ್ಲ ಕಡೆ ಪೂರ್ವ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ. ಇನ್ನೇನಿದ್ದರೂ ಕೇವಲ ಗಣಪತಿಯನ್ನು ಕೂರಿಸುವುದು ಉಳಿದಿದೆ. ಇನ್ನು ಕೆಲವು ಇಂದೇ ಗೌರಿ-ಗಣೇಶ ಎರಡನ್ನು ಪ್ರತಿಷ್ಠಾಪನೆ ಮಾಡುತ್ತಾರೆ. ಆದರೆ, ಸಂಪ್ರದಾಯದಂತೆ ಮೊದಲು ಗೌರಿಗೆ ಎಲ್ಲ ರೀತಿಯ ಪೂಜೆ-ಪುನಸ್ಕಾರಗಳು ಸಲ್ಲಿದ ನಂತರ ವಿಘ್ನೇಶನನ್ನು ಬರಮಾಡಿಕೊಂಡರೆ ಉತ್ತಮ ಎಂದು ಹೇಳಲಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ