Gold rate: ಚಿನ್ನ, ಬೆಳ್ಳಿ ಬೆಲೆಗಳು ಇಳಿಕೆ ಆಗಿವೆ.. ಇತ್ತೀಚೆಗಿನ ದರ ಎಷ್ಟಿದೆ..?

author-image
Ganesh
Updated On
ಚಿನ್ನಾಭರಣ ಪ್ರಿಯರಿಗೆ ಅತಿ ದೊಡ್ಡ ಶಾಕ್‌.. ₹10,000 ಆಗುತ್ತಾ 10 ಗ್ರಾಂ ಗೋಲ್ಡ್ ರೇಟ್‌; ಕಾರಣವೇನು?
Advertisment
  • ಚಿನ್ನ ಮತ್ತು ಬೆಳ್ಳಿ ದರ ನಿರಂತರವಾಗಿ ಏರಿಕೆ ಆಗ್ತಿದೆ
  • ಬೆಳಗ್ಗೆ 6 ಗಂಟೆಗೆ ಚಿನ್ನ ಎಷ್ಟು ರೂಪಾಯಿ ಇಳಿಕೆ ಆಗಿದೆ?
  • ಒಂದು ಕೆಜಿ ಬೆಳ್ಳಿಗೆ ಎಷ್ಟು ರೂಪಾಯಿ ಗೊತ್ತಾ..?

ಇತ್ತೀಚೆಗಿನ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ನಿರಂತರವಾಗಿ ಏರಿಕೆ ಆಗುತ್ತಲೇ ಇದೆ. ಹಿಂದೆಂದೂ ಕಾಣದ ರೀತಿಯಲ್ಲಿ ದಾಖಲೆಯ ಮಟ್ಟದಲ್ಲಿ ಹೆಚ್ಚುತ್ತಿದೆ. ಅಂತರರಾಷ್ಟ್ರೀಯ ಬೆಳವಣಿಗೆಗಳು ಚಿನ್ನ ಮತ್ತು ಬೆಳ್ಳಿಯ ಬೆಲೆಗಳ ಮೇಲೆ ಪರಿಣಾಮ ಬೀರುತ್ತವೆ. ಇದೇ ಕಾರಣಕ್ಕೆ ಆಗಾಗ ಚಿನ್ನ ಮತ್ತು ಬೆಳ್ಳಿಯ ಬೆಲೆಗಳಲ್ಲಿ ಬದಲಾವಣೆ ಆಗುತ್ತಿರುತ್ತದೆ.

ಇತ್ತೀಚೆಗೆ ಚಿನ್ನ ಮತ್ತು ಬೆಳ್ಳಿಯ ಬೆಲೆ ಸ್ವಲ್ಪ ಕಡಿಮೆಯಾಗಿದೆ. ಸೋಮವಾರ (ಮಾರ್ಚ್ 10, 2025) ಬೆಳಗ್ಗೆ 6 ಗಂಟೆಯ ಹೊತ್ತಿಗೆ ವಿವಿಧ ವೆಬ್‌ಸೈಟ್‌ಗಳಲ್ಲಿ ಪಟ್ಟಿ ಮಾಡಲಾದ ಬೆಲೆಗಳ ಪ್ರಕಾರ 22 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆಯು 80,390 ರೂಪಾಯಿ ಇದೆ. 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ 87,700 ರೂಪಾಯಿ ಆಗಿದೆ. ಒಂದು ಕಿಲೋ ಬೆಳ್ಳಿಗೆ 99,000 ರೂಪಾಯಿ ಇದೆ. ಈ ಮಧ್ಯೆ ಚಿನ್ನದ ಬೆಲೆಯಲ್ಲಿ 10 ಗ್ರಾಂಗೆ 10 ರೂಪಾಯಿ ಮತ್ತು ಬೆಳ್ಳಿಯ ಬೆಲೆ ಕೆಜಿಗೆ 100 ರೂಪಾಯಿ ಕಡಿಮೆ ಆಗಿದೆ.

ಚಿನ್ನ ದುಬಾರಿ..

  • ಬೆಂಗಳೂರು: 22 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ 80,390 ರೂಪಾಯಿ ಮತ್ತು 24 ಕ್ಯಾರೆಟ್​ನ 10 ಗ್ರಾಂ ಚಿನ್ನದ 87,700 ರೂಪಾಯಿ.
  •  ಹೈದರಾಬಾದ್‌: 22 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ 80,390 ರೂಪಾಯಿ ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ 87,700 ರೂಪಾಯಿ ಆಗಿದೆ.
  •  ವಿಶಾಖಪಟ್ಟಣ ಮತ್ತು ವಿಜಯವಾಡ: 22 ಕ್ಯಾರೆಟ್ ಚಿನ್ನದ ಬೆಲೆ 80,390 ರೂಪಾಯಿ ಆಗಿದ್ದರೆ, 24 ಕ್ಯಾರೆಟ್ ಚಿನ್ನದ ಬೆಲೆ 87,700 ರೂಪಾಯಿ
  •  ದೆಹಲಿ: 22 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ 80,540 ರೂಪಾಯಿ ಮತ್ತು 24 ಕ್ಯಾರೆಟ್​ನ ಚಿನ್ನದ ಬೆಲೆ 87,850 ರೂಪಾಯಿ ಆಗಿದೆ.
  •  ಮುಂಬೈ: 22 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ 80,390 ರೂಪಾಯಿ ಮತ್ತು 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 87,700 ರೂಪಾಯಿ ಆಗಿದೆ.
  • ಚೆನ್ನೈ: 22 ಕ್ಯಾರೆಟ್ ಬೆಲೆ 80,390 ರೂಪಾಯಿ ಆಗಿದ್ದರೆ, 24 ಕ್ಯಾರೆಟ್​ 10 ಗ್ರಾಂ ಚಿನ್ನಕ್ಕೆ 87,700 ರೂಪಾಯಿ ಆಗಿದೆ.

ಬೆಳ್ಳಿ (ಕೆಜಿ) ಲೆಕ್ಕದಲ್ಲಿ

  • ಹೈದರಾಬಾದ್‌: 1,08,000 ರೂಪಾಯಿ
  • ವಿಶಾಖಪಟ್ಟಣಂ: 1,08,000 ರೂಪಾಯಿ
  •  ದೆಹಲಿ: 99,000 ರೂಪಾಯಿ
  •  ಮುಂಬೈ: 99,000 ರೂಪಾಯಿ
  •  ಬೆಂಗಳೂರು: 99,000 ರೂಪಾಯಿ
  •  ಚೆನ್ನೈ: 1,08,000 ರೂಪಾಯಿ

ಆದಾಗ್ಯೂ, ಈ ಬೆಲೆಗಳನ್ನು ಬೆಳಿಗ್ಗೆ 6 ಗಂಟೆಗೆ ದಾಖಲಿಸಲಾಗಿದೆ ಎಂಬುದನ್ನು ಗಮನಿಸಬಹುದು. ಚಿನ್ನ ಮತ್ತು ಬೆಳ್ಳಿ ಬೆಲೆಗಳ ಇತ್ತೀಚಿನ ನವೀಕರಣವನ್ನು ನೀವು ತಿಳಿದುಕೊಳ್ಳಲು ಬಯಸಿದರೆ, ನೀವು ಈ ಮೊಬೈಲ್ ಸಂಖ್ಯೆ 8955664433 ಗೆ ಮಿಸ್ಡ್ ಕಾಲ್ ನೀಡಬಹುದು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment