/newsfirstlive-kannada/media/post_attachments/wp-content/uploads/2025/07/GOLD_PRICE.jpg)
ಆಭರಣ ಪ್ರಿಯರಿಗೆ ಸಮಾಧಾನಕರ ಸುದ್ದಿ ಸಿಕ್ಕಿದೆ. ಕಳೆದ ತಿಂಗಳುಗಳಿಂದ ಚಿನ್ನದ ಬೆಲೆ ನಿರಂತವಾಗಿ ಏರುತ್ತಲೇ ಇತ್ತು. ಗಗನಕ್ಕೇರಿದ್ದ ಚಿನ್ನದ ಬೆಲೆ ಈಗ ಕುಸಿಯಲು ಆರಂಭಿಸಿದೆ. ಜುಲೈ 24 ಮತ್ತು 25 ರಂದು ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ.
ಚಿನ್ನದ ಪ್ರಸ್ತುತ ಬೆಲೆ..!
ದೇಶದಲ್ಲಿ ಸರಾಸರಿ 10 ಗ್ರಾಂನ 24 ಕ್ಯಾರೆಟ್ ಚಿನ್ನದ ಬೆಲೆ 1,00,960 ರೂಪಾಯಿ. 10 ಗ್ರಾಂನ 22 ಕ್ಯಾರೆಟ್ ಚಿನ್ನದ ಬೆಲೆ 92,540 ರೂಪಾಯಿ ಆಗಿದೆ. ದೆಹಲಿಯಲ್ಲಿ 24 ಕ್ಯಾರೆಟ್‌ನ ಚಿನ್ನದ ಬೆಲೆ 1,01,110 ರೂಪಾಯಿ ಆಗಿದ್ದರೆ 10 ಗ್ರಾಂನ 22 ಕ್ಯಾರೆಟ್ ಚಿನ್ನದ ಬೆಲೆ 92,540 ರೂಪಾಯಿ ಆಗಿದೆ.
ಇದನ್ನೂ ಓದಿ: ಹೃದಯ ವಿದ್ರಾವಕ ಘಟನೆ.. ಮಗ ನದಿ ಪಾಲಾದ ಸುದ್ದಿ ಕೇಳಿ ಕೆರೆಗೆ ಹಾರಿದ ತಾಯಿ
ಮುಂಬೈನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 1,00,960 ರೂಪಾಯಿ ಆಗಿದ್ದರೆ, 22 ಕ್ಯಾರೆಟ್ ಚಿನ್ನದ ಬೆಲೆ 92,540 ರೂಪಾಯಿ ಆಗಿದೆ. ಚೆನ್ನೈನಲ್ಲಿ 24 ಕ್ಯಾರೆಟ್‌ನ ಬೆಲೆ 1,00,960 ರೂ. 22 ಕ್ಯಾರೆಟ್‌ನ ಬೆಲೆ 92,540 ರೂಪಾಯಿ ಆಗಿದೆ.
ಬೆಂಗಳೂರಿನಲ್ಲಿ 24 ಕ್ಯಾರೆಟ್ ಬೆಲೆ 1,00,960 ರೂಪಾಯಿ ಆಗಿದ್ದರೆ, 22 ಕ್ಯಾರೆಟ್ ಬೆಲೆ 92,540 ರೂಪಾಯಿ ಆಗಿದೆ. ಹೈದರಾಬಾದ್‌ನಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1,00,960 ರೂಪಾಯಿ ಆಗಿದ್ದರೆ 22 ಕ್ಯಾರೆಟ್‌ನ ಬೆಲೆ 92,540 ರೂಪಾಯಿ ಆಗಿದೆ.
ಚಿನ್ನ ಮತ್ತು ಬೆಳ್ಳಿ ಬೆಲೆಗಳು ಕಾಲಕಾಲಕ್ಕೆ ಬದಲಾಗುತ್ತವೆ. ಚಿನ್ನ ಮತ್ತು ಬೆಳ್ಳಿ ಬೆಲೆಗಳ ಇತ್ತೀಚಿನ ನವೀಕರಣದ ಬಗ್ಗೆ ನೀವು ತಿಳಿದುಕೊಳ್ಳಲು ಬಯಸಿದರೆ ಈ ಮೊಬೈಲ್ ಸಂಖ್ಯೆ 8955664433 ಗೆ ಮಿಸ್ಡ್ ಕಾಲ್ ನೀಡಬಹುದು.
ಇದನ್ನೂ ಓದಿ: ಅಣ್ಣಯ್ಯ ಸೀರಿಯಲ್ನಲ್ಲಿ ರೋಚಕ ಟ್ವಿಸ್ಟ್.. ಪೆದ್ದ ಮನು ಕೈಯಲ್ಲಿರೋ ರಾಜದಂಡದಲ್ಲಿ ಅಡಗಿದೆ ಮಹಾ ಗುಟ್ಟು!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ