/newsfirstlive-kannada/media/post_attachments/wp-content/uploads/2025/03/CHEEP-RATE-GOLD.jpg)
ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಗಗನಕ್ಕೇರುತ್ತಿದೆ. ಚಿನ್ನದ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪುತ್ತಿದೆ. ಶುದ್ಧ ಚಿನ್ನದ ಬೆಲೆ 90ರ ಗಡಿ ದಾಟಿದೆ. ಒಂದು ಕೆಜಿಯ ಬೆಳ್ಳಿಯ ಬೆಲೆ 1 ಲಕ್ಷದ 15 ಸಾವಿರ ತಲುಪಿದೆ.
ವಾಸ್ತವವಾಗಿ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಗೆ ಡಿಮ್ಯಾಂಡ್ ಹೆಚ್ಚಿದೆ. ಅಂತರರಾಷ್ಟ್ರೀಯ ಬೆಳವಣಿಗೆಗಳ ಪ್ರಕಾರ, ಚಿನ್ನ ಮತ್ತು ಬೆಳ್ಳಿಯ ಬೆಲೆಗಳಲ್ಲಿ ಕಾಲಕಾಲಕ್ಕೆ ಬದಲಾಗುತ್ತಿರುತ್ತೆ. ಕೆಲವೊಮ್ಮೆ ಬೆಲೆಗಳು ಹೆಚ್ಚಾಗುತ್ತವೆ, ಕೆಲವೊಮ್ಮೆ ಕಡಿಮೆಯಾಗುತ್ತವೆ.
ಇದನ್ನೂ ಓದಿ: ಮನೆಯಿಂದ ಹೊರಬರೋ ಮುನ್ನ ಹುಷಾರ್.. ಬಿಸಿಲಿನಿಂದ ಆರೋಗ್ಯದ ಮೇಲೆ ಆಗೋ ಪರಿಣಾಮವೇನು?
ಮಾರ್ಚ್ 20, 2025 ರ ಗುರುವಾರ ಬೆಳಗ್ಗೆ 6 ಗಂಟೆಯವರೆಗೆ ವಿವಿಧ ವೆಬ್‌ಸೈಟ್‌ಗಳಲ್ಲಿ ನೋಂದಾಯಿಸಲಾದ ಬೆಲೆಗಳ ಪ್ರಕಾರ, 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 82,910 ರೂಪಾಯಿ ಮತ್ತು 24 ಕ್ಯಾರೆಟ್‌ನ ಹತ್ತು ಗ್ರಾಂ ಚಿನ್ನದ ಬೆಲೆ 90,450 ರೂಪಾಯಿ ಆಗಿದೆ. ಬೆಳ್ಳಿಯ ಬೆಲೆ ಪ್ರತಿ ಕಿಲೋಗೆ 1,05,100 ರೂಪಾಯಿ. 10 ಗ್ರಾಂ ಚಿನ್ನದ ಬೆಲೆಯಲ್ಲಿ 10 ರೂಪಾಯಿ ಮತ್ತು ಒಂದು ಕಿಲೋ ಬೆಳ್ಳಿಯ ಬೆಲೆಯಲ್ಲಿ 100 ರೂಪಾಯಿ ಏರಿಕೆ ಕಂಡಿದೆ.
10 ಗ್ರಾಂ ಚಿನ್ನದ ಬೆಲೆ
- ಹೈದರಾಬಾದ್: 22 ಕ್ಯಾರೆಟ್‌ನ ಚಿನ್ನದ ಬೆಲೆ 82,910 ರೂಪಾಯಿ ಆಗಿದ್ದರೆ 24 ಕ್ಯಾರೆಟ್ಗೆ 90,450 ರೂಪಾಯಿ ಆಗಿದೆ.
- ವಿಶಾಖಪಟ್ಟಣ: 22 ಕ್ಯಾರೆಟ್ ಚಿನ್ನದ ಬೆಲೆ 82,910 ರೂಪಾಯಿ ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ 90,450 ರೂಪಾಯಿ ಆಗಿದೆ.
- ದೆಹಲಿ: 22 ಕ್ಯಾರೆಟ್‌ನ ಚಿನ್ನದ ಬೆಲೆ 83,060 ರೂಪಾಯಿ ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ 90,600 ರೂಪಾಯಿ.
- ಮುಂಬೈ: 22 ಕ್ಯಾರೆಟ್‌ನ ಚಿನ್ನದ ಬೆಲೆ 82,910 ರೂಪಾಯಿ ಮತ್ತು 24 ಕ್ಯಾರೆಟ್ಗೆ 90,450 ರೂಪಾಯಿ ಆಗಿದೆ.
- ಚೆನ್ನೈ: 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 82,910 ರೂಪಾಯಿ ಮತ್ತು 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 90,450 ರೂಪಾಯಿ
- ಬೆಂಗಳೂರು: 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 82,910 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 90,450 ರೂಪಾಯಿ
ಬೆಳ್ಳಿ ಬೆಲೆ ಕೆಜಿಗೆ
- ಹೈದರಾಬಾದ್: 1,14,100 ರೂ.
- ವಿಶಾಖಪಟ್ಟಣ: 1,14,100 ರೂ.
- ದೆಹಲಿ: 105,100 ರೂ.
- ಮುಂಬೈ: 105,100 ರೂ.
- ಬೆಂಗಳೂರು: 105,100 ರೂ.
- ಚೆನ್ನೈ: 1,14,100 ರೂ.
ಇದನ್ನೂ ಓದಿ: ರಾಮಾಚಾರಿ ಬಾಳಲ್ಲಿ ಮತ್ತೊಬ್ಬ ಹೀರೋಯಿನ್ ಎಂಟ್ರಿ.. ಚಾರುಗೆ ಶುರುವಾಯ್ತು ಆತಂಕ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ