/newsfirstlive-kannada/media/post_attachments/wp-content/uploads/2024/12/GOLD_RATE.jpg)
ಚಿನ್ನ, ಬೆಳ್ಳಿ ಬೆಲೆ ಮಾರುಕಟ್ಟೆಯಲ್ಲಿ ಮೇಲೆ, ಕೆಳಕ್ಕೆ ಆಗುತ್ತಿರುತ್ತವೆ. ಇವುಗಳ ಬೆಲೆಗಳಲ್ಲಿ ಏನೇನು ಆಗಿದೆ ಎಂದು ತಿಳಿದುಕೊಳ್ಳುವುದು ಕುತೂಹಲ ಇರುತ್ತದೆ. ಚಿನ್ನದ ದರ ಕ್ರಿಸ್ಮಸ್ ದಿನಕ್ಕೆ ಹೋಲಿಕೆ ಮಾಡಿದರೆ ಇವತ್ತು ಸಾಧಾರಣ ಏರಿಕೆ ಕಂಡಿದೆ. ಚಿನ್ನ, ಬೆಳ್ಳಿಯ ಬೆಲೆಯಲ್ಲಿ ಎಷ್ಟು ಏರಿಕೆಯಾಗಿದೆ ಎನ್ನುವ ಮಾಹಿತಿ ಈ ಕೆಳಗೆ ಇದೆ.
- ಬೆಂಗಳೂರಿನಲ್ಲಿ ಇವತ್ತು 22 ಕ್ಯಾರೆಟ್ನ 1 ಗ್ರಾಂ ಚಿನ್ನದ ಬೆಲೆ ₹7,125 ಇದೆ. ಇದು ನಿನ್ನೆ ₹7,100 ಇತ್ತು. ಇದರಿಂದ ನಿನ್ನೆ ಬೆಲೆಗೆ ಹೋಲಿಕೆ ಮಾಡಿದರೆ ಬೆಲೆಯಲ್ಲಿ 25 ರೂಪಾಯಿ ಹೆಚ್ಚಳವಾಗಿದೆ.
- 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ ₹71,250 ಇದೆ. ಇದು ನಿನ್ನೆ ₹71,000 ಇತ್ತು. ಇಲ್ಲಿಯೂ ಬೆಲೆಯಲ್ಲಿ ಬದಲಾವಣೆ ಆಗಿದ್ದು ₹250 ಏರಿಕೆ ಆಗಿದೆ.
24 ಕ್ಯಾರೆಟ್ನ ಚಿನ್ನದ ಬೆಲೆ ಎಷ್ಟು?
- ಬೆಂಗಳೂರಿನಲ್ಲಿ ಇವತ್ತು 24 ಕ್ಯಾರೆಟ್ನ 1 ಗ್ರಾಂ ಚಿನ್ನದ ದರ ₹7,773 ಆಗಿದೆ. ಇದು ನಿನ್ನೆ ₹7,745 ಇತ್ತು. 24 ಕ್ಯಾರೆಟ್ ಬೆಲೆಯಲ್ಲಿ ₹28 ಹೆಚ್ಚು ಆಗಿದೆ.
- 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ ₹77,730 ಇದೆ. ಇದು ನಿನ್ನೆ ₹77,450 ಇತ್ತು. ನಿನ್ನೆ ದರ, ಇವತ್ತಿನ ಬೆಲೆಯಲ್ಲಿ ಬದಲಾವಣೆ ಆಗಿದ್ದು ₹280 ಏರಿಕೆ ಆಗಿರುವುದು ಗೊತ್ತಾಗಿದೆ.
ಇದನ್ನೂ ಓದಿ:ಆರ್ಸಿಬಿಯ ಕರ್ನಾಟಕದ ಅಭಿಮಾನಿಗಳಿಗೆ ಶೀಘ್ರದಲ್ಲೇ ಸಿಹಿ ಸುದ್ದಿ.. ಏನ್ ಗೊತ್ತಾ?
ಈ ನಗರಗಳಲ್ಲಿ ಬಂಗಾರದ ಬೆಲೆ..!
- ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ ₹71,400 ಇದ್ರೆ, 24 ಕ್ಯಾರೆಟ್ ಚಿನ್ನ ₹77,880 ಇದೆ.
- ಕೋಲ್ಕತ್ತಾದಲ್ಲಿ 22 ಕ್ಯಾರೆಟ್ ಚಿನ್ನ ₹71,250 ಇದ್ರೆ, 24 ಕ್ಯಾರೆಟ್ ಚಿನ್ನದ ದರ ₹77,730 ಇದೆ.
- ಪುಣೆಯಲ್ಲಿ 22 ಕ್ಯಾರೆಟ್ ಚಿನ್ನದ ದರ ₹71,250 ಇದ್ರೆ, 24 ಕ್ಯಾರೆಟ್ ಚಿನ್ನ ₹77,730 ಇದೆ.
- ಮುಂಬೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ₹71,250 ಇದೆ. 24 ಕ್ಯಾರೆಟ್ ಚಿನ್ನದ ಬೆಲೆ ₹77,730 ಇದೆ.
ಬೆಳ್ಳಿಯ ಬೆಲೆ ಎಷ್ಟಿದೆ?
ಇವತ್ತು ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಯ ಬೆಲೆ ₹92.50 ಇದೆ. ಇದು ನಿನ್ನೆ ₹91.50 ರೂಪಾಯಿ ಇತ್ತು. ಬೆಲೆಯಲ್ಲಿ 1 ರೂಪಾಯಿ ಏರಿಕೆಯಾಗಿದೆ.
ಹಾಗೇ ಇಂದು ಬೆಳ್ಳಿಯ 100 ಗ್ರಾಂ ಬೆಲೆ ₹9,250 ಇದ್ದು ನಿನ್ನೆ ಇದರ ಬೆಲೆ ₹9,150 ರೂಪಾಯಿ ಇತ್ತು. ಬೆಲೆಯಲ್ಲಿ ₹100 ಹೆಚ್ಚಳವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ