/newsfirstlive-kannada/media/post_attachments/wp-content/uploads/2024/04/rain3.jpg)
ಏಪ್ರಿಲ್ ತಿಂಗಳಲ್ಲಿ ದಿನದಿಂದ ದಿನಕ್ಕೆ ರಾಜ್ಯದಲ್ಲಿ ಬಿರುಬಿಸಿಲು ಹೆಚ್ಚಾಗುತ್ತಿತ್ತು. ರಣಭೀಕರ ಬಿಸಿಲಿನಿಂದ ಹೈರಾಣಾಗಿದ್ದ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ಇಂದು ಬಹುತೇಕ ಜಿಲ್ಲೆಗಳಲ್ಲಿ ಬಿಸಿಲಿನ ನಡುವೆ ಜನರಿಗೆ ಮಳೆಯ ಸಿಂಚನೆ ದೊರೆತಿದೆ. ಏಪ್ರಿಲ್ 12ರಂದು ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಅದರಂತೆ ದಾವಣಗೆರೆ, ವಿಜಯಪುರ ಹಾಗೂ ಶಿವಮೊಗ್ಗದ ಜನತೆಗೆ ಮಳೆರಾಯ ತಂಪೆರೆದಿದ್ದಾನೆ.
/newsfirstlive-kannada/media/post_attachments/wp-content/uploads/2024/04/RAIN.jpg)
ಇದನ್ನೂ ಓದಿ:ಮುನಿಸು ಮರೆತು ಒಟ್ಟಿಗೆ ಕಾಣಿಸಿಕೊಂಡ ಇಮ್ರಾನ್ ಹಶ್ಮಿ, ಮಲ್ಲಿಕಾ ಶೆರಾವತ್; ಮರ್ಡರ್ 2 ಬರುತ್ತಾ?
ಇನ್ನು, ಬೆಣ್ಣೆ ನಗರಿ ದಾವಣಗೆರೆಯಲ್ಲಿ ಸತತ ಅರ್ಧಗಂಟೆಗೂ ಅಧಿಕ ಕಾಲ ಮಳೆಯಾಗಿದೆ. ಬಿಸಿಲಿನ ಬೇಗೆಗೆ ಬೆಂದು ಹೋಗಿದ್ದ ಬೆಣ್ಣೆ ನಗರಿ ಜನ ಈಗ ಸಖತ್​ ಕೂಲ್​ ಕೂಲ್​ ಆಗಿದ್ದಾರೆ. ಬಿಸಿಲಿನ ಶೆಕೆಯಿಂದ ನಲುಗಿದ್ದ ನಗರದ ಜನರ ಮುಖದಲ್ಲಿ ಮಳೆರಾಯ ಮಂದಹಾಸ ಮೂಡಿಸಿದ್ದಾನೆ. ಜೊತೆಗೆ ಬರದಿಂದ ನೀರಿನ ಕೊರತೆಯಿದ್ದು, ಇನ್ನೂ ನಗರದ ಜನತೆ ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಾಗಬಹುದು ಎಂಬ ನಿರೀಕ್ಷೆಯಲ್ಲಿ ಇದ್ದಾರೆ.
/newsfirstlive-kannada/media/post_attachments/wp-content/uploads/2024/04/rain5.jpg)
ಇತ್ತ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಮಳೆಯ ಆರ್ಭಟ ಜೋರಾಗಿತ್ತು. ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ಹಲವೆಡೆಯಲ್ಲಿ ಧಾರಾಕಾರ ಮಳೆಯಾಗಿದೆ. ಹಲವು ದಿನಗಳಿಂದ ಮಳೆ ಇಲ್ಲದೇ ಕಂಗೆಟ್ಟಿದ್ದ ರೈತರ ಮುಖದಲ್ಲಿ ಮಳೆರಾಯ ಮಂದಹಾಸ ಮೂಡಿಸಿದ್ದಾನೆ. ಕಳೆದ ಅರ್ಧ ಗಂಟೆಯಿಂದ ತೀರ್ಥಹಳ್ಳಿ ವ್ಯಾಪ್ತಿಯಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದೆ.
ಇದನ್ನೂ ಓದಿ:ಕಾಲೇಜು ವಿದ್ಯಾರ್ಥಿನಿಯರಿಗೆ ಗುಡ್​ನ್ಯೂಸ್: ಮುಟ್ಟಿನ ಸಮಯದಲ್ಲಿ ರಜೆ ಘೋಷಣೆ: ಯಾವಾಗ ಜಾರಿ?
/newsfirstlive-kannada/media/post_attachments/wp-content/uploads/2024/04/rain4.jpg)
ಇನ್ನು, ವಿಜಯಪುರದ ಹಲವು ಗ್ರಾಮಗಳಲ್ಲಿ ಕೂಡ ಮಳೆಯಾಗಿದೆ. ಗುಡುಗು, ಸಿಡಿಲು ಸಹಿತ ಜಿಟಿ ಜಿಟಿ ಮಳೆಯಾಗಿದೆ. ಬಿಸಿಲಿನ ಬೇಗೆಯಿಂದ ಜನ ರೋಸಿ ಹೋಗಿದ್ದರು. ಇದೀಗ ಮಳೆಯ ಸಿಂಚನದಿಂದ ವಿಜಯಪುರ ಜನತೆ ಫುಲ್ ಖುಷ್​ ಆಗಿದ್ದಾರೆ. ಇತ್ತ ರಾಜಧಾನಿ ಬೆಂಗಳೂರಿನಲ್ಲಿ ಇಂದು ಸಂಜೆ ವೇಳೆಗೆ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us