ಬಹಳ ದಿನಗಳ ಆಸೆ ಇಂದು ಈಡೇರಬಹುದು
ಬಂಧುಗಳಿಂದ ನಿಮಗೆ ನಷ್ಟ ಉಂಟಾಗಬಹುದು
ಬೇರೆಯವರ ಪದಾರ್ಥಗಳನ್ನು ಬಳಸಬೇಡಿ..!
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲಪಕ್ಷ, ದ್ವಾದಶಿ ತಿಥಿ, ವಿಶಾಖ ನಕ್ಷತ್ರ ರಾಹುಕಾಲ ಶನಿವಾರ ಬೆಳಗ್ಗೆ 9:00 ರಿಂದ 10:30 ರವರೆಗೆ ಇರಲಿದೆ.
ಮೇಷ ರಾಶಿ

- ಬಹಳ ದಿನಗಳ ಆಸೆ ಇಂದು ಈಡೇರಬಹುದು
- ಬಂಧುಗಳಿಂದ ನಷ್ಟ ಉಂಟಾಗಬಹುದು
- ಬೇರೆಯವರ ಪದಾರ್ಥಗಳನ್ನು ಬಳಸಬೇಡಿ
- ಹಣದ ವಿಚಾರದಲ್ಲಿ ಎಚ್ಚರಿಕೆವಹಿಸಿ
- ಮಾನಸಿಕವಾಗಿ ಸಮಾಧಾನ ಇರುವುದಿಲ್ಲ
- ಹಿರಿಯರ ಮಾತನ್ನು ಅನುಸರಿಸಿ
- ಕುಲದೇವತಾ ಆರಾಧನೆ ಮಾಡಿ
ವೃಷಭ

- ಪ್ರಯಾಣದ ಅನಿವಾರ್ಯತೆ ಬರಬಹುದು
- ರಾಜಕೀಯ ವ್ಯಕ್ತಿಗಳ ಭೇಟಿ ಆಗಬಹುದು
- ಉದ್ಯೋಗದಲ್ಲಿ ಅನುಕೂಲಕರವಾದ ದಿನ
- ಮಕ್ಕಳಿಗೆ ಹೊಸ ಉದ್ಯೋಗಕ್ಕೆ ಅವಕಾಶವಿದೆ
- ಇಂದು ವ್ಯವಹಾರದಲ್ಲಿ ಅನುಕೂಲವಿದೆ
- ಸ್ಥಿರಾಸ್ತಿಯಿಂದ ಲಾಭ ಉಂಟಾಗಬಹುದು
- ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಮಿಥುನ

- ಧನ ನಷ್ಟದಿಂದ ನೋವು ಉಂಟಾಗಬಹುದು
- ಉದ್ಯೋಗದಲ್ಲಿ ಕ್ಷುಲ್ಲಕವಾದ ರಾಜಕೀಯದಿಂದ ಬೇಸರ ಆಗಲಿದೆ
- ವಾದ-ವಿವಾದಗಳು ತಾರಕಕ್ಕೇರಬಹುದು
- ಯತ್ನ ಕಾರ್ಯದಲ್ಲಿ ಹಿನ್ನಡೆ ಉಂಟಾಗಬಹುದು
- ಬಂಧುಗಳಿಂದ ಸಹಾಯ ಸಿಗಬಹುದು
- ಮಾನಸಿಕವಾದ ಚಂಚಲತೆ ಬೇಡ
- ಗೋಪೂಜೆಯನ್ನು ಮಾಡಿ
ಕಟಕ

- ಸ್ವಂತ ಉದ್ಯಮದವರಿಗೆ ಅನುಕೂಲವಿದೆ
- ಅಧಿಕಾರಿಗಳಿಂದ ಹಣ ನಷ್ಟವಾಗಬಹುದು
- ಕುಟುಂಬದಲ್ಲಿ ಆಸ್ತಿ ವಿಚಾರಕ್ಕೆ ಮನಸ್ತಾಪ ಆಗಲಿದೆ
- ಯತ್ನ ಕಾರ್ಯದಲ್ಲಿ ಜಯ ಆದರೆ ಸಮಾಧಾನ ಇರುವುದಿಲ್ಲ
- ಒಗ್ಗಟ್ಟಿನ ಮಂತ್ರವನ್ನು ಜಪಿಸುತ್ತೀರಿ
- ನಿಮ್ಮ ಧನಾತ್ಮಕವಾದ ಚಿಂತನೆ ನಿಮಗೆ ಬಲ ಆಗಲಿದೆ
- ನಾಗಾರಾಧನೆ ಮಾಡಿ, ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಸಿಂಹ

- ಉದ್ಯೋಗಿಗಳಿಗೆ ಬಡ್ತಿ ಸಿಗಬಹುದು
- ತಂದೆಯವರಿಂದ ಅನುಕೂಲವಿದೆ
- ಸಮಾಜದಲ್ಲಿ ಪ್ರಶಂಸೆ ಸಿಗಬಹುದು
- ಸ್ನೇಹಿತರ ಮಧ್ಯೆ ಜಗಳಕ್ಕೆ ಅವಕಾಶ ಬೇಡ
- ಮನಸ್ಸನ್ನು ಕೇಂದ್ರೀಕರಿಸಿ ಅಭ್ಯಾಸ ಮಾಡಬೇಕು
- ಮುಂಬರುವ ಯಾವುದೇ ಸವಾಲುಗಳಲ್ಲಿ ಹುಚ್ಚು ಧೈರ್ಯ ಮಾಡಬೇಡಿ
- ಸಾಯಿಬಾಬಾರನ್ನು ಪ್ರಾರ್ಥನೆ ಮಾಡಿ
ಕನ್ಯಾ

- ಆಸ್ತಿಗೆ ತೊಂದರೆ ಆಗುವ ಸೂಚನೆಗಳಿವೆ
- ವ್ಯಾವಹಾರಿಕವಾಗಿ ಎಚ್ಚರಿಕೆವಹಿಸಿ
- ಇಂದು ಅಧಿಕಾರಿಗಳಿಗೆ ನಿರಾಸೆಯ ದಿನ
- ಸತಿ-ಪತಿ ಕಲಹ, ಸಮಸ್ಯೆಯಾಗಬಹುದು
- ಮನೆಯಲ್ಲಿ ಅಶಾಂತಿಯ ವಾತಾವರಣ ಇರಬಹುದು
- ಬೇರೆಯವರ ಜೊತೆಯಲ್ಲಿ ಮೃದುವಾಗಿ ವರ್ತಿಸಿ
- ಗುರು ಪ್ರಾರ್ಥನೆಯನ್ನು ಮಾಡಿ
ತುಲಾ

- ಇಂದು ಉದ್ಯೋಗದಲ್ಲಿ ಲಾಭವಿದೆ
- ರಾಜಕಾರಣಿಗಳ ಭೇಟಿಯಾಗುವುದರಿಂದ ಸಹಾಯ ಸಿಗಬಹುದು
- ಮನೆಯ ನವೀಕರಣಕ್ಕೆ ಖರ್ಚು
- ಶತ್ರುಗಳು ನಿಮ್ಮ ಎದುರು ಸೋಲುತ್ತಾರೆ
- ಋಣ ಬಾಧೆಯಿಂದ ಮುಕ್ತಿ ಸಿಗಬಹುದು
- ಹೊಸ ವ್ಯವಹಾರದ ಆರಂಭವಾಗಬಹುದು
- ಲಕ್ಷ್ಮಿನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ

- ಪ್ರಯಾಣ ಮಾಡಬೇಕಾದ ಸಂದರ್ಭ ಬರಬಹುದು
- ರಾಜಕಾರಣಿಗಳಿಗೆ ಇಲ್ಲಸಲ್ಲದ ಅಪವಾದ ಬರಬಹುದು
- ಮನೆಯಲ್ಲಿ ಕಲುಷಿತ ವಾತಾವರಣ
- ಆಕಸ್ಮಿಕವಾಗಿ ಅಗ್ನಿ ದುರಂತದ ಸಂಭವವಿದೆ
- ಪರಸ್ಪರ ಹೊಂದಾಣಿಕೆ ಇರಲಿ
- ಯಾವುದೇ ಕೆಲಸಗಳನ್ನು ಮುಂದೂಡದಿರಿ
- ವೆಂಕಟರಮಣನನ್ನು ಪ್ರಾರ್ಥನೆ ಮಾಡಿ
ಧನುಸ್ಸು

- ಹಳೆಯ ಬಾಕಿ ಹಣ ಅಥವಾ ದ್ರವ್ಯ ಸಿಗಬಹುದು
- ತಾಯಿಯವರನ್ನು ಚೆನ್ನಾಗಿ ನೋಡಿಕೊಳ್ಳಬೇಕು
- ನೀವು ಬದಲಾಗದ ಹೊರತು ಯಾವುದರ ಬದಲಾವಣೆಯನ್ನು ನಿರೀಕ್ಷೆ ಮಾಡಬೇಡಿ
- ನಕಾರಾತ್ಮಕ ಚಿಂತನೆ ಬೇಡ
- ಅನಗತ್ಯ ವಿಚಾರಗಳಿಂದ ದೂರವಿದ್ದರೆ ಸಮಾಧಾನವಿದೆ
- ಸಾಂಸಾರಿಕವಾಗಿ ಆಡಿದ ಮಾತುಗಳಿಂದ ಅವಮಾನ ಮಾಡಿಕೊಳ್ಳುತ್ತೀರಿ
- ಈಶ್ವರನ ಆರಾಧನೆ ಮಾಡಿ
ಮಕರ

- ಶುಭಕಾರ್ಯ ನಿಂತು ಹೋಗುವ ಸಾಧ್ಯತೆ ಇದೆ
- ಸ್ನೇಹಿತರಿಂದ ನಿಮ್ಮ ತಪ್ಪಿನ ಅರಿವಾಗಬಹುದು
- ಅಧಿಕಾರಿಗಳಿಂದ ಸಲಹೆ, ಸೂಚನೆ ಸಿಗಬಹುದು
- ಯಾವುದೇ ಪರೋಕ್ಷವಾದ ತಪ್ಪುಗಳು ಬೇಡ
- ಹಣ, ವಯಸ್ಸು, ಅಧಿಕಾರ ಎಲ್ಲವೂ ಕ್ಷಣಿಕ ಎಂದು ತಿಳಿದಿರಲಿ
- ನಿಮ್ಮ ತೊಂದರೆಗೆ ನೀವೆ ಕಾರಣರಾಗುತ್ತೀರಿ
- ಲಕ್ಷ್ಮೀನಾರಾಯಣ ಹೃದಯ ಸ್ತೋತ್ರ ಶ್ರವಣ ಮಾಡಿ
ಕುಂಭ

- ಹಣ ಹೂಡಿಕೆಯ ಆಸೆ ಆದರೆ ಸಾಲ ಮಾಡಬೇಕಾಗಬಹುದು
- ದಾಂಪತ್ಯ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ
- ಮಾತಿನಿಂದ ತೊಂದರೆ ಮಾಡಿಕೊಳ್ಳುತ್ತೀರಿ
- ನಂಬಿದವರು ಸಹಕರಿಸುವುದಿಲ್ಲ
- ಮನೆಯಲ್ಲಿ ಒಗ್ಗಟ್ಟಿಲ್ಲದೆ ಬರಬೇಕಾದ ಆದಾಯಕ್ಕೆ ತೊಂದರೆಯಾಗಬಹುದು
- ಅನ್ಯೋನ್ಯತೆ ಇದ್ದರೆ ಮಾತ್ರ ಸಂಪಾದಿಸಬಹುದು
- ಉಮಾಮಹೇಶ್ವರನನ್ನು ಪ್ರಾರ್ಥನೆ ಮಾಡಿ
ಮೀನಾ

- ಆರೋಗ್ಯದ ಬಗ್ಗೆ ಚಿಂತಿಸಬಹುದು
- ಮನೋರೋಗ ಆರಂಭವಾಗಬಹುದು
- ಜನರನ್ನ ಬಂಧುಗಳನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಿ
- ಯಾರ ಸಹಾಯ, ಸಹಕಾರ ಇಲ್ಲದೆ ಬದುಕುವುದಕ್ಕೆ ಸಾಧ್ಯವಿಲ್ಲ
- ಶತ್ರು ಕಾಟ ನಿಮಗೆ ಗೊತ್ತಿಲ್ಲದೆ ಪ್ರಾರಂಭ ಆಗಬಹುದು
- ಹೋರಾಡಿ ಜಯಿಸಲು ಕಷ್ಟ ಸಾಧ್ಯವಿದೆ
- ನವಗ್ರಹರ ಆರಾಧನೆ ಮಾಡಿ ವಿಶೇಷವಾಗಿ ಚಂದ್ರಗ್ರಹರನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ