/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣಪಕ್ಷ, ಷಷ್ಟೀ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.
ಮೇಷ ರಾಶಿ
/newsfirstlive-kannada/media/post_attachments/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ನೀವು ಮನೆಯಿಂದ ಹೊರಗೆ ಹೋಗುವುದರಿಂದ ಮನೆಯವರಿಗೆ ಬೇಸರವಾಗುವ ಸಾಧ್ಯತೆ
- ಕುಟುಂಬದ ಜವಾಬ್ದಾರಿಗಳು ಹೆಚ್ಚಿನ ಒತ್ತಡ ತರಬಹುದು
- ವ್ಯಾಪಾರ, ವ್ಯವಹಾರ, ಉದ್ಯೋಗ, ವಿದ್ಯೆ ವಿಚಾರಗಳಲ್ಲಿ ಮಂದಗತಿಯಿರುತ್ತದೆ
- ಹಳೆಯ ಕೇಸುಗಳಿದ್ದರೆ ತೀರ್ಮಾನವಾಗಿ ಜಯಶೀಲರಾಗುವ ಯೋಗವಿದೆ
- ಮಾನಸಿಕ ಬೇಸರವು ನಿಮಗೆ ದಿನಪೂರ್ತಿ ಕಾಡಬಹುದು
- ಬೇರೆ ವ್ಯವಹಾರಗಳನ್ನು ಬದಿಗಿಟ್ಟು ಕಾನೂನಿನ ಚೌಕಟ್ಟಿನೊಳಗೆ ಬರುವ ಕೆಲಸಕ್ಕೆ ಹೆಚ್ಚು ಗಮನಕೊಡಿ
- ಮಕ್ಕಳೊಂದಿಗೆ ಉತ್ತಮ ಬಾಂಧವ್ಯ ಉಳಿಸಿಕೊಳ್ಳಿ
- ದೇವಿಯನ್ನು ಆರಾಧಿಸಿ
ವೃಷಭ
/newsfirstlive-kannada/media/post_attachments/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ಭವಿಷ್ಯದ ಯೋಜನೆಗಳನ್ನು ಮನಸ್ಸಿನಲ್ಲಿ ಲೆಕ್ಕ ಹಾಕುತ್ತಾ ತುಂಬಾ ಆಕರ್ಷಿತರಾಗಬಹುದು
- ವ್ಯರ್ಥವಾಗಿ ಸಮಯ ಹೋಗಲು ಬಿಡಬೇಡಿ
- ನಿಮ್ಮ ಕೌಶಲ್ಯ ಹೊರಗಡೆ ಪ್ರಚಾರ ಆಗದೆ ಇರೋದಕ್ಕೆ ನಿಮ್ಮ ಆಲಸ್ಯ ಕಾರಣ
- ವಿವಾದಿತ ವಿಷಯಗಳು ಇತ್ಯರ್ಥವಾಗುತ್ತದೆ
- ಆಟಗಾರರಿಗೆ ಅದರಲ್ಲೂ ಕ್ರಿಕೆಟ್​ ಆಟಗಾರರಿಗೆ ತುಂಬಾ ಒಳ್ಳೆಯ ದಿನ
- ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯಿರಿ
- ಹಿರಿಯರ ಆಶೀರ್ವಾದ ಪಡೆಯಿರಿ
ಮಿಥುನ
/newsfirstlive-kannada/media/post_attachments/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ಅಹಂಕಾರವು ನಿಮಗೆ ಗೊತ್ತಿಲ್ಲದೆ ನಿಮ್ಮನ್ನು ಆವರಿಸಿ ಎಲ್ಲಾ ಕೆಲಸಗಳಿಗೆ ಅಡಚಣೆಯಾಗಬಹುದು
- ಜಟಿಲ ಸಮಸ್ಯೆಗಳಿಗೆ ಇಂದು ಪರಿಹಾರ ಸಿಗಬಹುದು
- ನಿಮ್ಮ ಆರೋಗ್ಯದ ವಿಚಾರದಲ್ಲಿ ಗಮನ ಕೊಡಿ
- ಕುಟುಂಬದಲ್ಲಿ ಉತ್ತಮ ಸಮಯ ಕಳೆಯುತ್ತೀರಿ
- ನಿಮ್ಮ ಮಾರ್ಗದರ್ಶನ ಪಡೆಯುವ ಹಲವರ ಸಮಸ್ಯೆಗಳು ಬಗೆಹರಿಯುತ್ತವೆ
- ಹಣಕಾಸಿನ ವಿಚಾರದಲ್ಲಿ ಏರುಪೇರಾಗಬಹುದು
- ಯಾವುದಾದರು ವ್ಯವಹಾರದಿಂದ ಬರಬೇಕಾದ ಬಾಕಿ ಹಣ ಇಂದು ಕೈ ಸೇರಬಹುದು
- ನಿಮ್ಮ ಪ್ರತಿಭೆ ಮತ್ತು ಚಟುವಟಿಕೆಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ಉತ್ತಮ ದಿನ
- ಶ್ರೀ ಪಂಚಮುಖಿ ಆಂಜನೇಯ ಸ್ವಾಮಿಯನ್ನು ಪಾರ್ಥಿಸಿ
ಕಟಕ
/newsfirstlive-kannada/media/post_attachments/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ಕಾನೂನಿನ ದೃಷ್ಟಿಯಿಂದ ಮಾನಸಿಕವಾಗಿ ಬೇಸತ್ತವರಿಗೆ ಸಣ್ಣದೊಂದು ತಿರುವು ಸಮಾಧಾನ ನೀಡಬಹುದು
- ಗಂಟಲಿಗೆ ಸಂಬಂಧಿಸಿದ ಸೋಂಕು ತಗಲುವ ಸಾಧ್ಯತೆಯಿದೆ
- ನಿಮ್ಮ ಕೋರ್ಟ್​ ಕೆಲಸಕ್ಕೆ ಇಂದು ವಿಶೇಷ ತಿರುವು ಸಿಗುವ ಸಾಧ್ಯತೆ
- ವ್ಯಾಪಾರ ಮತ್ತು ವ್ಯವಹಾರ ದೃಷ್ಟಿಯಿಂದ ಪ್ರಯಾಣಕ್ಕೆ ಅನುಕೂಲಕರ ದಿನ
- ಸಕಾಲಕ್ಕೆ ಸೂಕ್ತ ಔಷಧೋಪಚಾರ ಮಾಡಿಕೊಂಡರೆ ಒಳ್ಳೆಯದು
- ಇಂದು ಪ್ರಭಾವಿ ವ್ಯಕ್ತಿಗಳು ಮನೆಗೆ ಬರಬಹುದು
- ನೌಕರರು ತಮ್ಮ ಉದ್ಯೋಗವನ್ನು ಬದಲಾಯಿಸಲು ಈ ದಿನ ಶುಭವಾಗಿದೆ
- ನಾಗದೇವತೆಗಳನ್ನು ಆರಾಧಿಸಿ
ಸಿಂಹ
/newsfirstlive-kannada/media/post_attachments/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ವೈವಾಹಿಕ ಜೀವನದ ಒತ್ತಡ ದೂರವಾಗುವ ಸಾಧ್ಯತೆಯಿದೆ
- ನೌಕರಿಯ ವಿಚಾರದಲ್ಲಿ ಹಲವಾರು ಸವಾಲುಗಳು ಎದುರಾಗಬಹುದು
- ಈ ದಿನ ಪೂರ್ತಿ ಕುಟುಂಬದ ಸದಸ್ಯರೊಂದಿಗೆ ವಿರಸ ಮುಂದುವರೆಯುವ ಸಾಧ್ಯತೆ
- ಬೇರೆಡೆ ಉದ್ಯೋಗ ಅವಕಾಶ ದೊರಕಬಹುದು
- ಮಕ್ಕಳು ಕೊಟ್ಟ ಸಲಹೆಯನ್ನು ನಿರ್ಲಕ್ಷಿಸಬೇಡಿ
- ರಾಜಕೀಯ ವ್ಯಕ್ತಿಗಳಿಗೆ ಉತ್ತಮ ಸ್ಥಾನ ಸಿಗಲಿದೆ
- ಹಾಗೂ ಆಲೋಚನೆಯ ವಿಚಾರಗಳು ಮುನ್ನೆಲೆಗೆ ಬರುವ ಸಾಧ್ಯತೆಗಳಿವೆ
- ಮೃತ್ಯುಂಜಯನನ್ನು ಆರಾಧಿಸಿ
ಕನ್ಯಾ
/newsfirstlive-kannada/media/post_attachments/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ಇಂದು ಪ್ರೇಮಿಗಳಿಗೆ ಉತ್ತಮ ದಿನ
- ಮನಸ್ಸು ನಿಮ್ಮ ಹಿಡಿತಕ್ಕೆ ಸಿಗದೆ ಹಲವು ತೊಂದರೆಗಳಿಗೆ ನೀವೇ ಕಾರಣರಾಗಬಹುದು
- ನಿಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸುವಲ್ಲಿ ಸಂಪೂರ್ಣ ಪ್ರಯತ್ನವಿರಲಿ
- ವಿದೇಶ ಪ್ರಯಾಣವು ಕೂಡ ಸಂತೋಷ ತರಲಿದೆ
- ನಿಮ್ಮ ವ್ಯಾಪಾರಿ ಬುದ್ಧಿಯಿಂದ ಹೊರಬಂದು ಮಾನಸಿಕ ಸಮಾಧಾನ ಪಡೆದುಕೊಳ್ಳಿ
- ನಿಮ್ಮ ಹಠದ ಸ್ವಭಾವದಿಂದ ವೃತ್ತಿ, ನೌಕರಿ, ವಿದ್ಯಾಕ್ಷೇತ್ರದಲ್ಲಿ ಹಿನ್ನಡೆ ಸಾಧ್ಯತೆ
- ಅಧಿಕಾರಿ ವರ್ಗದಿಂದ ಕೆಲವು ತೊಂದರೆಗಳಾಗಬಹುದು, ತಾತ್ಸಾರ ಮಾಡಬೇಡಿ
- ಆದಿತ್ಯ ಹೃದಯ ಸ್ತೋತ್ರವನ್ನು ಪಠಣೆ ಮಾಡಿ
ತುಲಾ
/newsfirstlive-kannada/media/post_attachments/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ಕುಟುಂಬದ ಸದಸ್ಯರಿಗಾಗಿ ಹಣವ್ಯಯ ಮಾಡುವ ಸಾಧ್ಯತೆ
- ಕ್ಷೇತ್ರಗಳಿಗೆ ಹೋದಾಗ ನಿಮ್ಮ ಮನಸ್ಸು ಶುದ್ಧವಾಗಿರಲಿ
- ಕೆಲಸದಲ್ಲಿ ಹಲವು ಅಡಚಣೆ ತೋರಬಹುದು
- ಆಲಸ್ಯವಿಲ್ಲದ ಮನಸ್ಸಿನಲ್ಲಿ, ಭಯದಿಂದಲೂ ಮುಕ್ತರಾಗಿ ಉತ್ತಮವಾದ ವಾತಾವರಣ ಸೃಷ್ಟಿಸಿಕೊಳ್ಳಿ
- ಯಾವುದೇ ಒಪ್ಪಂದಗಳಿಗೆ ಸಹಿ ಮಾಡುವ ಮುನ್ನ ಸ್ವಲ್ಪ ಆಲೋಚಿಸಿ ತೀರ್ಮಾನ ಮಾಡಿ
- ಅಪರಿಚಿತರು ನಿಮ್ಮ ವಿಷಯದಲ್ಲಿ ತಲೆ ಹಾಕಿ ಮಾನಸಿಕ ಬೇಸರ ಉಂಟು ಮಾಡುವ ಸಾಧ್ಯತೆಯಿದೆ
- ಕ್ಷೇತ್ರ ದೇವತೆಗೆ ಸೇವೆ ಮಾಡಿ
ವೃಶ್ಚಿಕ
/newsfirstlive-kannada/media/post_attachments/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಉಪಕಾರ ಪಡೆದವರು ಸದಾ ನಿಮ್ಮನ್ನು ಗೌರವಿಸುತ್ತಾರೆ
- ಇಂದು ಆಲಸ್ಯವನ್ನು ದೂರಮಾಡಿ ಕಾರ್ಯಕ್ಷೇತ್ರದಲ್ಲಿ ಪ್ರಗತಿ ಸಾಧಿಸಿ
- ಸಂಬಂಧಿಕರು ಹಾಗೂ ಸ್ನೇಹಿತರೊಂದಿಗಿನ ನಿಮ್ಮ ಸಂಬಂಧವನ್ನು ಯಾವುದೇ ಕಾರಣಕ್ಕೂ ಹಾಳು ಮಾಡಿಕೊಳ್ಳಬೇಡಿ
- ಇಂದಿನ ದಿನಚರಿ ಬಹಳ ವ್ಯವಸ್ಥಿತವಾಗಿರುತ್ತದೆ ಅದನ್ನೇ ಪಾಲಿಸಿ ಯಶಸ್ಸು ಸಿಗುತ್ತದೆ
- ಇಂದು ಕುಟುಂಬದವರ ಜೊತೆ ಸಮಯ ಕಳೆಯಿರಿ
- ಕುಟುಂಬದವರು ಬೇಸರವನ್ನು ವ್ಯಕ್ತಪಡಿಸಬಹುದು
- ತಾಪಸ ಮನ್ಯುವನ್ನು ಸ್ಮರಿಸಿ
ಧನಸ್ಸು
/newsfirstlive-kannada/media/post_attachments/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ಮಧ್ಯಾಹ್ನದ ನಂತರ ಸಮಯ ಚೆನ್ನಾಗಿರುವುದಿಲ್ಲ ಎಚ್ಚರವಹಿಸಿ
- ಅನಗತ್ಯ ಗೊಂದಲಗಳಲ್ಲಿ ಸಿಲುಕಬಹುದು, ಸ್ಥಿರ ಮನಸ್ಸಿನಿಂದ ಎಲ್ಲವನ್ನು ಎದುರಿಸಿ
- ಕುಟುಂಬದವರ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಿ
- ನಾನು ಎಂಬ ಅಹಂಕಾರ ನಿಮಗೆ ಹಿನ್ನಡೆ ಉಂಟು ಮಾಡಬಹುದು
- ನಿಮ್ಮ ಕೆಲಸಗಳಿಗೆ ಬೇರೆಯವರನ್ನು ಅವಲಂಬಿಸಬೇಡಿ
- ಮಹಾವಿಷ್ಣುವನ್ನು ಸ್ಮರಿಸಿ
ಮಕರ
/newsfirstlive-kannada/media/post_attachments/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ವ್ಯವಹಾರ ವಿಷಯವನ್ನು ಬದಿಗಿಟ್ಟು ಭಗವಂತನ ಸೇವೆಯಲ್ಲಿ ತೊಡಗಿಸಿಕೊಳ್ಳಿ
- ಕುಟುಂಬ ಸದಸ್ಯರ ನಿರೀಕ್ಷೆಗಳನ್ನು, ಆಸೆಗಳನ್ನು ಪೂರೈಸಲು ಇಂದು ಉತ್ತಮ ಅವಕಾಶ
- ಈ ದಿನ ಲಾಭದ ಅವಕಾಶಗಳು ಹೆಚ್ಚಾಗುವ ಸಾಧ್ಯತೆಗಳಿವೆ
- ಉದ್ಯೋಗದಲ್ಲಿ ನಿರೀಕ್ಷಿತ ಫಲತಾಂಶಗಳಿಂದ ಮನಸ್ಸಿಗೆ ತುಂಬಾ ಸಂತೋಷವಾಗುತ್ತದೆ
- ದೂರದ ಪ್ರಯಾಣಕ್ಕೆ ಅವಕಾಶ ಸಿಗುವ ಸೂಚನೆಯಿದೆ
- ಕುಟುಂಬದ ಸದಸ್ಯರು, ಬಂಧುಗಳು ಸೌಹಾರ್ದಯುತವಾಗಿ ಮಾತುಕತೆ ನಡೆಸುವ ಉತ್ತಮ ವಾತಾವರಣವಿರುತ್ತದೆ
- ಮೂಲದೇವರನ್ನು ಪ್ರಾರ್ಥಿಸಿ
ಕುಂಭ
/newsfirstlive-kannada/media/post_attachments/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ಇಂದು ಮನೆಗೆ ಹೊಸ ಅತಿಥಿ ಬರುವ ಸಾಧ್ಯತೆಯಿದೆ
- ಭೂಮಿ ಅಥವಾ ಜಮೀನಿಗೆ ಸಂಬಂಧಿಸಿದ ಹಳೆಯ ವಿವಾದಗಳಿಗೆ ಮುಕ್ತಿ ಸಿಗುವ ಸಾಧ್ಯತೆ
- ವ್ಯವಹಾರದ ದೃಷ್ಟಿಯಿಂದ ಉ್ತತಮ ದಿನ, ಪ್ರಗತಿ ಸಾಧ್ಯತೆ
- ಕುಟುಂಬದಲ್ಲಿ ನಿಮ್ಮ ಪ್ರಾಬಲ್ಯದಿಂದಲೇ ಎಲ್ಲ ಸಮಸ್ಯೆ ನಿವಾರಣೆಯಾಗಲಿದೆ
- ದೂರದಿಂದ ಬರುವ ಅತಿಥಿಗಳ ಬಗ್ಗೆ ಜಾಗ್ರತೆವಹಿಸಿ
- ಆಂಜನೇಯ ಸ್ವಾಮಿಯ ಅಷ್ಟೋತ್ತರವನ್ನು ಪಠಿಸಿ
ಮೀನ
/newsfirstlive-kannada/media/post_attachments/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ಅನಗತ್ಯ ವಾದ-ವಿವಾದಗಳಲ್ಲಿ ಭಾಗಿಯಾಗಬಾರದು
- ವೃಥಾ ಹಣದ ಖರ್ಚು, ಮಾನಸಿಕ ಸಮಾಧಾನವಿರುವುದಿಲ್ಲ
- ದಾಂಪತ್ಯದಲ್ಲಿ ಸಣ್ಣ ಪುಟ್ಟ ವಿಚಾರಗಳಿಗೆ ಕಿರಿಕಿರಿಯಾಗಬಹುದು
- ಅವರನ್ನು ಸಮಾಧಾನ ಮಾಡಲು ನಿಮ್ಮ ಬಳಿ ಸಮಯವಿರುವುದಿಲ್ಲ
- ನಿಮ್ಮ ಯೋಚನೆಯಲ್ಲಿಯೇ ನೀವು ಹೆಚ್ಚು ಮಗ್ನರಾಗಿರುತ್ತೀರಿ
- ಐಕ್ಯಮತ್ಯ ಮಂತ್ರ ಶ್ರವಣ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us