/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣಪಕ್ಷ, ದಶಮಿ ತಿಥಿ, ಕೃತ್ತಿಕಾ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.
ಮೇಷ ರಾಶಿ
- ಹಳೆಯ ಶತ್ರುಗಳ ಕಾಟ ಇಂದು ತಲೆದೋರಬಹುದು
- ವ್ಯವಹಾರಕ್ಕೆ ಸಂಬಂಧಿಸಿದಂತೆ ದೊಡ್ಡ ನಿರ್ಧಾರ ತೆಗೆದುಕೊಳ್ಳುವ ಅವಕಾಶವಿದೆ
- ಕುಟುಂಬದಲ್ಲೂ ಕೂಡ ಸಣ್ಣಪುಟ್ಟ ಸಮಸ್ಯೆಗಳು ಉದ್ಭವವಾಗಬಹುದು
- ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ನಿರೀಕ್ಷೆ ಮಾಡಬಹುದಾದ ದಿನ
- ತುಂಬಾ ವಿಶ್ರಾಂತಿಯ ಅಗತ್ಯವಿರುತ್ತದೆ
- ಸಣ್ಣ ಸಣ್ಣ ವಿಚಾರಗಳಿಗೆ ದಾಂಪತ್ಯದಲ್ಲಿ ಕಲಹ ಉಂಟಾಗಬಹುದು
- ಕೌಟುಂಬಿಕವಾಗಿ ಉತ್ತಮ ವಾತಾವರಣವಿರುತ್ತದೆ
- ಭಗವತೀ ಉಪಾಸನೆ ಮಾಡಿ
ವೃಷಭ
- ಅವಿವಾಹಿತ ಹೆಣ್ಣು ಮಕ್ಕಳಿಗೆ ಶುಭ ಸೂಚನೆ ಇದೆ
- ಅನಾರೋಗ್ಯ ಪೀಡಿತರಿಗೆ ಈ ದಿನ ಸುಧಾರಣೆಯಿದೆ
- ತುಂಬಾ ಅನಗತ್ಯ ವಿಚಾರಕ್ಕೆ ಜಗಳ ಮಾಡಿಕೊಳ್ಳುತ್ತೀರಿ
- ಕಡಿಮೆ ಸಮಯದಲ್ಲಿ ಹೆಚ್ಚು ಗುಣಮಟ್ಟದ ಕೆಲಸ ಮಾಡಿ ಸಮರ್ಥರೆಂದು ಕರೆಸಿಕೊಳ್ಳುತ್ತೀರಿ
- ಕೆಲವು ನಿರ್ಧಾರಗಳಿಂದ ಬೇರೆ ಬೇರೆ ರೀತಿಗಳಲ್ಲಿ ದೋಷಗಳುಂಟಾಗಬಹುದು
- ಬೇರೆಯವರ ಕೆಲಸದಲ್ಲಿ ತಪ್ಪು ಹುಡುಕಬೇಡಿ
- ಕುಟುಂಬದವರ ಸಂತೋಷಕ್ಕಾಗಿ ನೀವು ತ್ಯಾಗ ಮಾಡಬೇಕಾಗಬಹುದು
- ಕುಟುಂಬ ಸದಸ್ಯರ ಸಹಕಾರ ತುಂಬಾ ಅಗತ್ಯವಿರುತ್ತದೆ
- ಮಹಾದಹರ ಮಂತ್ರ ಶ್ರವಣ ಮಾಡಿ
ಮಿಥುನ
- ಮಾಧ್ಯಮದಲ್ಲಿ ಕೆಲಸ ನಿರ್ವಹಿಸುವವರಿಗೆ ಶುಭವಿದೆ
- ತಂದೆಗೆ ಹೃದಯ ಸಂಬಂಧಿ ತೊಂದರೆ ಕಾಣಬಹುದು ತಾತ್ಸಾರ ಮಾಡಬೇಡಿ
- ಆತುರದಲ್ಲಿ ಯಾವುದೇ ನಿರ್ಧಾರಗಳು ಬೇಡ
- ವ್ಯಾಪಾರಸ್ಥರಿಗೆ ಶುಭ-ಲಾಭಗಳಾಗುವ ದಿನ
- ತುಂಬಾ ಅಗತ್ಯವಿರುವ ಕೆಲಸಗಳು ವಿಳಂಬವಾಗಬಹುದು
- ಮಿಥುನ ರಾಶಿಯವರು ಎಲ್ಲಾ ದಾಖಲೆ ಪತ್ರಗಳನ್ನು ಸರಿಯಾದ ರೀತಿಯಲ್ಲಿಟ್ಟುಕೊಳ್ಳಬೇಕು
- ಅಗತ್ಯ ಬಿದ್ದರೆ ದಾಖಲೆಗಳನ್ನು ತಿದ್ದುಪಡಿ ಮಾಡಿಸಬೇಕು
- ಪರಂಜೋತ್ಯಿ ಕೋಶಾಂಬಾ ಮಂತ್ರ ಪಠಿಸಿ
ಕಟಕ
- ಮಾನಸಿಕವಾಗಿ ಬೇಸರ, ಮನೆಯಲ್ಲಿಯೂ, ಕೆಲಸದಲ್ಲಿಯೂ ನೆಮ್ಮದಿ ಇರೋದಿಲ್ಲ
- ತುಂಬಾ ಒತ್ತಡದ ಕೆಲಸಗಳು,ಬೇಸರ,ಆಯಾಸವಿದ್ದರೂ ಮನೆಯವರಿಗೆ ನಿಮ್ಮ ಸಮಯವನ್ನು ಮೀಸಲಿಡಿ
- ಇಂದು ಆರೋಗ್ಯದ ಬಗ್ಗೆ ಗಮನವಿರಲಿ
- ಸಂಬಳ ಪಡೆಯುವ ಖಾಸಗಿ ನೌಕರರಿಗೆ ಸ್ವಲ್ಪ ಹಿನ್ನಡೆ, ಗೊಂದಲಗಳಾಗುತ್ತವೆ
- ನಿಮ್ಮ ಕಾರ್ಯವೈಖರಿಯ ಗುಟ್ಟನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ
- ಸ್ನೇಹಿತರ ಕೆಲವು ವಿಚಾರಗಳು, ಸ್ವಭಾವಗಳನ್ನು ಕೇಳಿ ನೋವನ್ನು ಅನುಭವಿಸುತ್ತೀರಿ
- ಏಕಾಕ್ಷರ ' ಮಾಯಾ' ಮಂತ್ರವನ್ನು ಪಠನೆ ಮಾಡಿ
ಸಿಂಹ
- ಈ ರಾಶಿಯ ವಿದ್ಯಾರ್ಥಿಗಳಿಗೆ ಉತ್ತಮವಾದ ದಿನ
- ನಿಮ್ಮ ಸಹಪಾಠಿಗಳಿಗೆ, ಸ್ನೇಹಿತರಿಗೆ ವಸ್ತು ಅಥವಾ ಹಣವನ್ನು ದಾನ ಮಾಡುವುದಕ್ಕೆ ಮುಂದಾಗುತ್ತೀರಿ
- ಮನಸ್ಸು ಬೇರೆ ಕಡೆಗೆ ಹೋಗಬಹುದು
- ಅವಕಾಶಗಳ ಲಾಭವನ್ನು ಪಡೆಯಲು ಮುಂದಾಗಬೇಡಿ ಅವಮಾನವಾಗುವ ಸೂಚನೆಗಳಿರುತ್ತದೆ
- ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಿ
- ಸಾಯಂಕಾಲ ಒಳ್ಳೆಯ ವಾತಾವರಣ ಇರುವುದಿಲ್ಲ
- ಕುಂಭ ಕಂಠನೀ ಮಂತ್ರ ಜಪ ಪಠಿಸಿ
ಕನ್ಯಾ
- ಮುಖ್ಯವಾಗಿ ಮಾಡಬೇಕಾದ ಕೆಲಸಗಳು ಮಂದಗತಿಯನ್ನು ಹೊಂದುತ್ತದೆ
- ಬೇರೆಯವರಿಗೆ ಸಹಾಯ ಮಾಡಲು ಹೋಗಿ ನೀವು ತೊಂದರೆಗೆ ಸಿಲುಕಿಕೊಳ್ಳುತ್ತೀರಿ
- ರಾಯಭಾರೀ ಕೆಲಸ ಮಾಡುವವರಿಗೆ ಫಲವಿದೆ
- ಎಲ್ಲದಕ್ಕೂ ಜಗಳವೇ ಪರಿಹಾರವಲ್ಲ ಎಂಬುದನ್ನು ಅರಿಯಬೇಕಾಗುತ್ತದೆ
- ನಕಾರಾತ್ಮಕ ವಿಷಯಗಳೇ ಹೆಚ್ಚು ಗಮನ ಸೆಳೆಯುವಂತಹದ್ದು
- ಪೂರ್ವಿಕರ ವ್ಯಾಪಾರ ಅಭಿವೃದ್ಧಿಯಾಗಲಿದೆ
- ಹಳೆಯ ನೆನಪು ಎಚ್ಚರಿಕೆಯಾಗಿ ಪರಿಣಮಿಸಬಹುದು
- ಸಂಬಂಧಿಕರ ಬಾಂಧವ್ಯ ಗಟ್ಟಿ ಮಾಡಿಕೊಳ್ಳಿ, ವಿರೋಧ ಮಾಡಿಕೊಳ್ಳಬೇಡಿ
- ಸುಮುಚೀ ದೇವಿಯನ್ನು ಪ್ರಾರ್ಥಿಸಿ
ತುಲಾ
- ರಾಜಕೀಯ ವ್ಯಕ್ತಿಗಳು ತಮ್ಮ ಶಕ್ತಿ ಸಾಮರ್ಥ್ಯವನ್ನು ತಮ್ಮ ಕ್ಷೇತ್ರದಲ್ಲಿ ಪ್ರದರ್ಶಿಸಲು ಮುಂದಾಗುತ್ತಾರೆ
- ಸಣ್ಣ ಸಣ್ಣ ವಿಚಾರಗಳಿಗೆ ಮನಸ್ಸು ವಿಕೃತವಾಗುವುದು
- ಸಾಲ ಬಾಕಿ ಬರುವವರಿಗೆ ಇಂದು ಹಣ ಕೈ ಸೇರಬಹುದು
- ನಿಮ್ಮ ಕಾರ್ಯಕೇತ್ರ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಅಡೆತಡೆ ಕಾಣಬಹುದು
- ವಯಸ್ಸಿನ ಅರಿವಿಲ್ಲದ ಯುವ ಪ್ರೇಮಿಗಳಿಗೆ ತೊಂದರೆಯಿದೆ ಜಾಗ್ರತೆ
- ಮನಸ್ಸಿನಲ್ಲಿ ಕಲ್ಮಶಗಳಿಲ್ಲದಿದ್ದರೂ ಹೊಸದಾಗಿ ಹುಟ್ಟುವ ಸಾಧ್ಯತೆಗಳಿರುತ್ತವೆ
- ಮನೋಭವ ಮಂತ್ರ ಜಪಿಸಿ
ವೃಶ್ಚಿಕ
- ಸಂಬಂಧಿಕರ ಬೆಂಬಲ ಮಧ್ಯಮವಾಗಿರುವಂತಹುದು
- ಚಿಕ್ಕ ಮಕ್ಕಳು ಅಥವಾ ವಿದ್ಯಾರ್ಥಿಗಳು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಬಹುದು ನಿಗಾವಹಿಸಿ
- ಓದಿನ ಬಗ್ಗೆ ಆಸಕ್ತಿ ಕಡಿಮೆಯಾಗಬಹುದು
- ಪಿತ್ರಾರ್ಜಿತ ಆಸ್ತಿಯಲ್ಲಿ ಗೊಂದಲ ಸೃಷ್ಟಿಯಾಗಬಹುದು
- ಅಲಂಕಾರಿಕ ಸಾಮಾಗ್ರಿಗಳಿಗೆ,ಉಡುಗೊರೆಗಳಿಗೆ ತುಂಬಾ ಹಣ ಖರ್ಚು ಮಾಡಬೇಕಾದ ಸಮಯ
- ಇಲ್ಲಿ ಸಮಾಧಾನ, ತಾಳ್ಮೆ ಬೇಕಾಗುತ್ತದೆ
- ನಾವೆಲ್ಲವನ್ನು ಕಳೆದುಕೊಂಡೆ ಎಂಬ ನೋವನ್ನು ಮನಸ್ಸಿನಿಂದ ತೆಗೆದುಹಾಕಬೇಕು
- ರಕ್ತೇಶ್ವರೀ ಮಂತ್ರ ಶ್ರವಣ ಮಾಡಿ
ಧನಸ್ಸು
- ಮನೆಯಲ್ಲಿರುವ ಹಿರೀಕರ, ಉದ್ಯೋಗಿಗಳು ತಮ್ಮ ಮೇಲಾಧಿಕಾರಿಗಳ ವಿಶ್ವಾಸಕ್ಕೆ ಭಾಜನರಾಗುತ್ತೀರಿ
- ಉನ್ನತ ಹುದ್ದೆಯಲ್ಲಿರುವವರ ದಾಕ್ಷಿಣ್ಯಕ್ಕೆ ಕೆಲಸ ಮಾಡಬೇಕಾಗುತ್ತದೆ ಜಾಗ್ರತೆ ಇರಲಿ
- ಮಾಡಬೇಕಾದ ಕರ್ತವ್ಯದಲ್ಲಿ, ಕೆಲಸದಲ್ಲಿ ಬಲಹೀನರಾಗಬಹುದು
- ಆಸಕ್ತಿಗನುಗುಣವಾಗಿ ಕೆಲಸಗಳು ಸಿಗಬಹುದು
- ಮನಸ್ಸು ಅತೃಪ್ತಿಯಿಂದ ಕೂಡಿರುತ್ತದೆ
- ಹೆಣ್ಣು ಮಕ್ಕಳಿಗೆ ಸಾಯಂಕಾಲ ಹೊತ್ತಿಗೆ ಆರೋಗ್ಯದಲ್ಲಿ ಸಮಸ್ಯೆಯಾಗಬಹುದು ಎಚ್ಚರಿಕೆ
- ರೇಣುಕಾಂಬಾ ದೇವಿಯನ್ನು ಪ್ರಾರ್ಥಿಸಿ
ಮಕರ
- ಮನಸ್ಸಿಗೆ ಒಪ್ಪುವಂತಹ ಕೆಲಸವನ್ನು ಮಾಡಿ
- ಹತ್ತು ಹಲವು ಆಲೋಚನೆಗಳು ಬೇಡ, ಒಂದು ತೀರ್ಮಾನಕ್ಕೆ ಬದ್ಧರಾಗಿರಿ
- ವೈಯಕ್ತಿಕ ವಿಚಾರಕ್ಕೆ ಮನೆಯವರಿಗೆಲ್ಲಾ ಅವಮಾನ ಮಾಡುವ ಸಂದರ್ಭವಿರಬಹುದು
- ಮಾನಸಿಕವಾಗಿ ನೀವು ತುಂಬಾ ಕುಗ್ಗಿ ಹೋಗುತ್ತೀರಿ
- ಪ್ರೇಮಿಗಳಿಗೆ ತುಂಬಾ ಕುತೂಹಲಕರ ಸಮಯ ಎಂದು ಹೇಳಬಹುದು
- ಹಣ ಅಥವಾ ದ್ರವ್ಯಕ್ಕೆ ಆಸೆ ಪಟ್ಟು ಅವಮಾನವಾಗುವ ಸಾಧ್ಯತೆ ಇದೆ
- ಕರ್ತವ್ಯ ಲೋಪ ಮಾಡಬೇಡಿ
- ಚೌಡೀ ದೇವಿಯನ್ನು ಆರಾಧಿಸಿ
ಕುಂಭ
- ಪ್ರಾಮಾಣಿಕ ಪ್ರಯತ್ನ ಮಾಡಿ ಶುಭವಾಗುತ್ತದೆ
- ಕಾರ್ಯಕ್ಷೇತ್ರಗಳಲ್ಲಿ, ವ್ಯಾಪಾರಗಳಲ್ಲಿ ಪೈಪೋಟಿಯಿಂದ ತೊಂದರೆಯ ಸೂಚನೆ ಇದೆ
- ನಿಯಮಿತ ಆಹಾರ ಸೇವನೆ ಒಳಿತು
- ಶರೀರದ ನೋವು ನಿಮ್ಮನ್ನು ಕಾಡಬಹುದು
- ಸಂಬಂಧಿಕರು ಮತ್ತು ಸ್ನೇಹಿತರ ಒತ್ತಡ ಕೆಲಸ ನಿಮಿತ್ತ ಹೆಚ್ಚಾಗಿರುತ್ತದೆ
- ಕೂರುವುದಕ್ಕೆ, ಓಡಾಡಲು ತುಂಬಾ ಪ್ರಯಾಸ ಪಡಬೇಕಾಗುತ್ತದೆ
- ಆರೋಗ್ಯ ಬಹಳ ಮುಖ್ಯ ನಂತರ ವ್ಯವಹಾರ ಅನ್ನೋದನ್ನ ಅರಿಯಬೇಕಾಗುತ್ತದೆ
- ಶತ್ರು ಸಂಹಾರಕ ಹಿಡುಂಬ ಮಂತ್ರ ಜಪ ಮಾಡಿ
ಮೀನ
- ಮಂಗಳ ಕಾರ್ಯದ ಸೂಚನೆ ಈ ದಿನ ಕಾಣುತ್ತದೆ
- ಬೇರೆಯವರನ್ನು ತೃಪ್ತಿ ಪಡಿಸಲು ಹಣ ಖರ್ಚಾಗಬಹುದು
- ಬೇರೆ ವ್ಯವಹಾರ, ಕುಟುಂಬದಲ್ಲಿ ಕೈಗೊಂಡಿರುವ ವ್ಯವಹಾರವನ್ನ ವಿಸ್ತರಣೆ ಮಾಡಿಕೊಳ್ಳಲು ಚಿಂತನೆ ಮಾಡಬಹುದು
- ಮನಸ್ಸಿಗೆ ಯಾವುದೇ ರೀತಿಯ ಆಯಾಸ ಕಾಣುವುದಿಲ್ಲ, ವ್ಯಾವಹಾರಿಕವಾಗಿಯೇ ಚಿಂತೆ ಮಾಡುತ್ತಿರುತ್ತೀರಿ
- ನಿಮ್ಮ ಶಕ್ತಿ ಮೀರಿದ ವ್ಯವಹಾರ,ಸಂಬಂಧ,ಸಂಪರ್ಕಗಳಿಂದ ಅವಮಾನ ಸಾಧ್ಯತೆ ಇದೆ
- ವ್ಯಾಯಾಮದಿಂದ ದೇಹಕ್ಕೂ, ಧ್ಯಾನದಿಂದ ಮನಸ್ಸಿಗೂ ನೆಮ್ಮದಿ ಸಿಗಬಹುದು
- ಬಿಳಿ ಎಕ್ಕದ ಗಿಡವನ್ನು ಪೂಜಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ