ಮನೆಯಲ್ಲಿ ಶುಭದ ವಾತಾವರಣ, ಆತಂಕಗಳೆಲ್ಲ ದೂರ ಆಗಲಿದೆ.. ಇವರಿಗೆ ತುಂಬಾ ಒಳ್ಳೆಯ ದಿನ ಇವತ್ತು..!

author-image
Ganesh
Updated On
ಶತ್ರುಗಳ ಕಾಟ; ಕೌಟುಂಬಿಕ ಸಮಸ್ಯೆ; ಮನೆವರಿಗೆಲ್ಲಾ ಅವಮಾನ; ಇಲ್ಲಿದೆ ಇಂದಿನ ಭವಿಷ್ಯ
Advertisment
  •  ಹಣದ ವಿಚಾರಕ್ಕೆ ಸ್ವಲ್ಪ ಮಾತುಕತೆ ನಡೆಯಬಹುದು
  • ಯಾವ ರಾಶಿ ಇರೋರಿಗೆ ಶುಭ ಸುದ್ದಿ ಸಿಗಲಿದೆ ಗೊತ್ತಾ..?
  • ಯಾರಿಗೆ ಶುಭ, ಯಾರಿಗೆ ಅಶುಭ.. ನಿಮ್ಮ ಸಮಸ್ಯೆಗೆ ಪರಿಹಾರ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು. ವೈಶಾಖ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಪೂರ್ವಾಷಾಢ ನಕ್ಷತ್ರ. ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.

ಇದನ್ನೂ ಓದಿ: ಭಾರತದ ಆತಂಕ ಹೆಚ್ಚಿಸಿದ ಅಮೆರಿಕ.. ಟರ್ಕಿ ವಿಚಾರದಲ್ಲಿ ಅಮೆರಿಕ ಮುಂದೆ ತಕರಾರು ಏನು..?

ಮೇಷ

publive-image

  • ಆಸ್ತಿಯ ವಿಚಾರದಲ್ಲಿ ಕುತಂತ್ರ ನಡೆದು ಸಮಸ್ಯೆ ಉಂಟಾಗಬಹುದು
  •  ಇಂದು ಬೆಂಕಿ ಮತ್ತು ನೀರಿನಿಂದ ದೂರವಿರಿ
  • ಯಾವುದೇ ರೀತಿಯ ಕಿರಿಕಿರಿ ಮಾಡಿಕೊಳ್ಳಬೇಡಿ
  •  ಮನೆಯಲ್ಲಿ ಅಸಮಾಧಾನಕರ ವಾತಾವರಣ
  •  ಮಕ್ಕಳಿಂದ ಶುಭವಾರ್ತೆ ಕೇಳಬಹುದು
  •  ಆರ್ಥಿಕ ವಿಚಾರಕ್ಕೆ ಹೋರಾಟ ನಡೆಸಬಹುದು
  •  ಭೂವರಾಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವೃಷಭ

publive-image

  • ನಿಮ್ಮ ಬಗ್ಗೆ ಬಂಧುಗಳಲ್ಲಿ ವಿಶೇಷವಾದ ಚರ್ಚೆ ನಡೆಯಬಹುದು
  •  ಹಣದ ವಿಚಾರಕ್ಕೆ ಸ್ವಲ್ಪ ಮಾತುಕತೆ ನಡೆಯಬಹುದು
  •  ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ ನಡೆಸಬಹುದು
  •  ಇಂದು ಮನೆಯಲ್ಲಿ ಶುಭ ವಾತಾವರಣ
  •  ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಪ್ರಗತಿ
  •  ನೌಕರಿಯಲ್ಲಿ ಸಮಾಧಾನವಿರುವ ದಿನ
  •  ಐಶ್ವರ್ಯ ಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಮಿಥುನ

publive-image

  • ಆರ್ಥಿಕ ಸಂಕಷ್ಟ ದೂರವಾಗುವ ಸಮಯ
  •  ಇಂದು ಮಾನಸಿಕವಾಗಿ ಏನೋ ಒಂದು ರೀತಿಯ ನೋವು, ಕಳವಳ
  •  ಕುಟುಂಬದಲ್ಲಿ ಕಲಹದ ಅವಕಾಶವಿದೆ ಎಚ್ಚರ
  •  ಮೋಜು, ಮಸ್ತಿಗಳಿಂದ ತೊಂದರೆಯಿದೆ
  •  ಸ್ತ್ರೀಯರಿಗೆ ಧನ ಲಾಭದ ಯೋಗವಿದೆ
  •  ಮಕ್ಕಳ ಚಟುವಟಿಕೆ ಸಮಾಧಾನ ಕೊಡಬಹುದು
  •  ನವಗ್ರಹರ ಆರಾಧನೆ ಮಾಡಿ ವಿಶೇಷವಾಗಿ ಚಂದ್ರಗ್ರಹ ಪ್ರಾರ್ಥನೆ ಮಾಡಿ

ಕಟಕ

publive-image

  • ಇಂದು ಹಣ ಹೂಡಿಕೆಯಿಂದ ಲಾಭವಿದೆ
  •  ವಿಷಯ ಕೊರತೆಯಿಂದ ನಷ್ಟ ಉಂಟಾಗಬಹುದು
  •  ಸಂಶಯದ ಮನೋಭಾವ ಒಳ್ಳೆಯದಲ್ಲ
  •  ಮಕ್ಕಳ ಜೊತೆ ಹೊಂದಾಣಿಕೆಯಿರಲಿ
  •  ವ್ಯವಹಾರಿಕವಾಗಿ ಅಭಿವೃದ್ಧಿ ಹೊಂದುವ ಯೋಗವಿದೆ
  •  ಸೇವಕ ವರ್ಗದಿಂದ ಸಮಸ್ಯೆ ಉಂಟಾಗಬಹುದು
  •  ಗೋಪಾಲಕೃಷ್ಣನನ್ನು ಪ್ರಾರ್ಥನೆ ಮಾಡಿ

ಸಿಂಹ

publive-image

  •  ಅಧಿಕವಾದ ತಿರುಗಾಟದಿಂದ ಬೇಸರ ಉಂಟಾಗಬಹುದು
  •  ಶೀತ ಸಂಬಂಧಿ ಸಮಸ್ಯೆ ಕಾಡಬಹುದು
  •  ಬಂಧುಗಳ ಜೊತೆ ಮಾತುಕತೆಯಿಂದ ಸಂತಸ ಉಂಟಾಗಬಹುದು
  •  ಮಿತ್ರರ ಜೊತೆ ಕಲಹವಾಗುವ ಸಾಧ್ಯತೆಯಿದೆ
  •  ನಿಮ್ಮ ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಿ
  •  ಬೇರೆ ಚಟುವಟಿಕೆಗಳಲ್ಲೂ ನಿರ್ದಿಷ್ಟವಾಗಿ ತೊಡಗಿಸಿಕೊಳ್ಳಿ
  •  ಕುಲದೇವತಾರಾಧನೆ ಮಾಡಿ

ಕನ್ಯಾ

publive-image

  • ಇಂದು ಮಕ್ಕಳಿಂದ ಸಹಾಯ, ಸಹಕಾರ ಸಿಗುತ್ತದೆ
  •  ಯಶಸ್ಸಿನ ಬಗ್ಗೆ ಚಿಂತನೆ ಮಾಡುತ್ತೀರಿ
  •  ಆಸ್ತಿಯ ವಿಚಾರದಲ್ಲಿ ಸಮಸ್ಯೆಯಾಗಬಹುದು
  •  ವಾಹನ ಅಪಘಾತವಾಗುವ ಸಾಧ್ಯತೆಯಿದೆ
  •  ರಾಜಕಾರಣಿಗಳ ಸಂಪರ್ಕವಾಗುತ್ತೆ ನಿಮ್ಮ ಕೆಲಸಕ್ಕೆ ಭರವಸೆ ನೀಡಬಹುದು
  •  ಇಂದು ಅವಮಾನಕ್ಕೆ ಅವಕಾಶಗಳಿವೆ
  •  ರುದ್ರ ದೇವರ ಪ್ರಾರ್ಥನೆ ಮಾಡಿ

ತುಲಾ

publive-image

  • ಉದ್ಯೋಗದಲ್ಲಿ ಅಭಿವೃದ್ಧಿ ಕಾಣುವ ದಿನ
  •  ಅಪ್ರಿಯವಾದ ಕೆಲಸಗಳನ್ನು ಅನಿವಾರ್ಯವಾಗಿ ಮಾಡಬೇಕಾಗಬಹುದು
  •  ಮಕ್ಕಳ ಸಹಾಯ ಸಹಕಾರ ಸಿಗಬಹುದು
  •  ಬೇರೆಯವರಿಗೆ ಸಲಹೆ ನೀಡಬೇಡಿ
  •  ಕುಟುಂಬದಲ್ಲಿ ಶಾಂತಿಯ ವಾತಾವರಣವಿರುತ್ತದೆ
  •  ಅಧಿಕಾರಿಗಳಿಂದ ಬೇಸರವಾಗಬಹುದು
  •  ಗಣಪತಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

publive-image

  • ತಂದೆ ಮಕ್ಕಳ ಮಧ್ಯದಲ್ಲಿ ವಾಗ್ವಾದ ನಡೆದು ಬೇಸರವಾಗಬಹುದು
  •  ದೂರ ಪ್ರಯಾಣದ ಸಾಧ್ಯತೆಯಿದೆ
  •  ಅಪಘಾತವಾಗುವ ಸಂಭವವಿದೆ ಎಚ್ಚರಿಕೆವಹಿಸಿ
  •  ಅವಕಾಶ ಕೈತಪ್ಪುವ ಭೀತಿ ಉಂಟಾಗಬಹುದು
  •  ಮಾನಸಿಕವಾಗಿ ನೆಮ್ಮದಿಯಿಲ್ಲದ ದಿನ
  •  ಕೆಟ್ಟ ನಿರ್ಧಾರಗಳಿಗೆ ಅವಕಾಶ ಬೇಡ
  •  ಶಕ್ತಿ ದೇವತಾ ಆರಾಧನೆ ಮಾಡಿ

ಧನುಸು

publive-image

  •  ಇಂದು ಧನಾಗಮನವಾಗುವ ಸಾಧ್ಯತೆಯಿದೆ
  •  ಉತ್ತಮ ಅವಕಾಶಗಳಿಗೆ ಅನುಕೂಲವಿದೆ
  •  ಪ್ರೇಮಿಗಳಿಗೆ ಅನುಕೂಲ, ಜೊತೆಗೆ ಶುಭವಿದೆ
  •  ಉದ್ಯೋಗದಲ್ಲಿ ಸೋಲು ಅದರಿಂದ ನಿರಾಸೆ ಉಂಟಾಗಬಹುದು
  •  ಕುಟುಂಬದಲ್ಲಿ ಆತಂಕ ಮನೆಮಾಡಬಹುದು
  •  ಆಹಾರದಲ್ಲಿ ವ್ಯತ್ಯಾಸದಿಂದ ಅನಾರೋಗ್ಯ ಕಾಡಬಹುದು ಗಮನಿಸಿ
  •  ಸಾಯಿಬಾಬಾರನ್ನು ಪ್ರಾರ್ಥನೆ ಮಾಡಿ

ಮಕರ

publive-image

  • ಇಂದು ದಾಂಪತ್ಯ ಸಮಸ್ಯೆಗೆ ಪರಿಹಾರ ಸಿಗಬಹುದು
  •  ಇಂದು ತಿಳಿಯದ ಕೆಲಸಗಳನ್ನ ಮಾಡಬೇಡಿ
  •  ಪ್ರೇಮಿಗಳಿಗೆ ಸವಾಲುಗಳು ಹೆಚ್ಚಾಗುವ ದಿನ
  •  ಸ್ವಂತ ಉದ್ಯಮಿಗಳಿಗೆ ಲಾಭವಿದೆ
  •  ತಾಂತ್ರಿಕವಾಗಿ ಸಮಸ್ಯೆಗಳು ಕಾಡಬಹುದು
  •  ವ್ಯಾಪಾರದಲ್ಲಿ ಅಭಿವೃದ್ಧಿ ಕಾಣುವ ದಿನ ಆದರೆ ಸಮಧಾನವಿಲ್ಲ
  •  ವಿಷ್ಣು ಸಹಸ್ರನಾಮವನ್ನ ಶ್ರವಣ ಮಾಡಿ

ಕುಂಭ

publive-image

  • ಆರೋಗ್ಯದಲ್ಲಿ ವ್ಯತ್ಯಾಸದಿಂದ ಭಯ ಕಾಡಬಹುದು
  •  ಶತ್ರುಗಳಿಂದ ಮೋಸದ ಸಾಧ್ಯತೆಯಿದೆ ಜಾಗ್ರತೆ
  •  ಇಂದು ಅಪವಾದಕ್ಕೆ ಒಳಗಾಗಬಹುದು
  •  ಮಕ್ಕಳ ವಿಚಾರದಲ್ಲಿ ಚಿಂತೆ ಮಾಡಬಹುದು
  •  ಬಂಧುಗಳಲ್ಲಿ ವಿರಸ ಉಂಟಾಗಬಹುದು
  •  ಕೈ ಹಾಕಿದ ಕೆಲಸಗಳು ಅರ್ಧಕ್ಕೆ ನಿಲ್ಲಬಹುದು
  •  ಸುದರ್ಶನ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಮೀನಾ

publive-image

  • ಮಕ್ಕಳ ಜೀವನದಲ್ಲಿ ಸಮಸ್ಯೆಯಾಗಬಹುದು
  •  ಬಂಧುಗಳಿಂದ ಅಪಹಾಸ್ಯಕ್ಕೆ ಅವಕಾಶವಿದೆ
  •  ವ್ಯವಹಾರಿಕವಾಗಿ ಉತ್ತಮ ವಾತಾವರಣವಿದೆ
  •  ಸ್ಥಿರಾಸ್ತಿ ಖರೀದಿಯ ಬಗ್ಗೆ ಚಿಂತಿಸಬಹುದು
  •  ಹಳೆಯ ಮಿತ್ರರ ಭೇಟಿಯಿಂದ ಸಂತಸವಾಗಬಹುದು
  •  ಧರ್ಮಕಾರ್ಯಕ್ಕೆ ಹಣ ಖರ್ಚು ಮಾಡಬಹುದು
  •  ಶ್ರೀರಾಮನನ್ನು ಪ್ರಾರ್ಥನೆ ಮಾಡಿ
Advertisment