newsfirstkannada.com

×

IND vs BAN T20: ಸಂಜು ಸ್ಯಾಮ್ಸನ್​​ಗೆ ಇಂದು ಚಾನ್ಸ್​ ಸಿಗೋದು ಡೌಟ್​; ಓಪನಿಂಗ್ ಗೇಮ್ ಪ್ಲಾನ್ ಚೇಂಜ್..!

Share :

Published October 9, 2024 at 9:20am

Update October 9, 2024 at 11:54am

    ಡೆಲ್ಲಿ ವಾರ್​​ನಲ್ಲಿ ಭಾರತ-ಬಾಂಗ್ಲಾ ಮುಖಾಮುಖಿ

    ಸತತ ಎರಡನೇ ಗೆಲುವಿನ ನಿರೀಕ್ಷೆಯಲ್ಲಿ ಭಾರತ

    ಬಾಂಗ್ಲಾ ಸೋಲಿಗೆ ರಿವೆಂಜ್ ತೀರಿಸಿಕೊಳ್ಳುವ ತವಕ

ಎರಡು ದಿನಗಳ ಬಳಿಕ ಟೀಮ್ ಇಂಡಿಯಾ ಎರಡನೇ ಟಿ20 ಫೈಟ್​​​​ಗೆ ಸಜ್ಜಾಗಿದೆ. ಗ್ವಾಲಿಯರ್​ನಲ್ಲಿ ನಿರಾಯಾಸವಾಗಿ ಬಾಂಗ್ಲಾ ಮಣಿಸಿ ವಿಜೃಂಭಿಸಿದ್ದ ಸೂರ್ಯ ಪಡೆ, ಸತತ ಎರಡನೇ ವಿಕ್ಟರಿ ಮೇಲೆ ಕಣ್ಣಿಟ್ಟಿದೆ. ಡೆಲ್ಲಿ ದಂಗಲ್​ನಲ್ಲಿ ಭಾರತಕ್ಕೆ ಗೆಲುವು ಸುಲಭವಿಲ್ಲ. ಐದು ವರ್ಷಗಳ ಹಿಂದಿನ ಕಹಿ ಘಟನೆ, ಸ್ಕೈ ಬಳಗದಲ್ಲಿ ಆತಂಕ ಮೂಡಿಸಿದೆ.

ಭಾರತ-ಬಾಂಗ್ಲಾದೇಶ ನಡ್ವೆ 2ನೇ T20 ಫೈಟ್​​
ಗ್ವಾಲಿಯರ್​​​​​​ನಲ್ಲಿ ಬಾಂಗ್ಲಾ ಹುಲಿಗಳ ಹುಟ್ಟಡಗಿಸಿದ ಟೀಮ್ ಇಂಡಿಯಾ, ಮತ್ತೊಂದು ಟಿ20 ಕದನಕ್ಕೆ ರೆಡಿಯಾಗಿದೆ. ಅರುಣ್​ ಜೇಟ್ಲಿ ಮೈದಾನದಲ್ಲಿ ಉಭಯ ತಂಡಗಳು 2ನೇ ಪಂದ್ಯವನ್ನಾಡಲಿದ್ದು, ಗೆಲುವಿನ ಮೇಲೆ ಕಣ್ಣಿಟ್ಟಿವೆ. ಮೊದಲ ಪಂದ್ಯದಲ್ಲಿ ಕಮಾಂಡಿಂಗ್ ವಿಕ್ಟರಿ ದಾಖಲಿಸಿರೋ ಸುರ್ಯಕುಮಾರ್​​​ ಪಡೆ, ಬಾಂಗ್ಲಾ ಸದೆಬಡಿದು ಇಂದೇ ಸರಣಿ ಗೆಲ್ಲುವ ತವಕದಲ್ಲಿದೆ. ಬಾಂಗ್ಲಾ ಭಾರತಕ್ಕೆ ಶಾಕ್​ ಕೊಟ್ಟು ಪುಟಿದೇಳಲು ಹವಣಿಸ್ತಿದೆ. ಹೀಗಾಗಿ ಡೆಲ್ಲಿ ವಾರ್​ ಸಾಕಷ್ಟು ಕೌತುಕತೆ ಹೆಚ್ಚಿಸಿದೆ.

ಇದನ್ನೂ ಓದಿ:ಟಿ-20ಗೆ ಕಿಂಗ್ ಆಗ್ತಿದ್ದಾರೆ ಭಾರತದ ಈ ಸ್ಟಾರ್ ಬೌಲರ್​​; ಸಿರಾಜ್, ಬುಮ್ರಾ ಅಲ್ಲವೇ ಅಲ್ಲ..!

ಟೀಮ್ ಇಂಡಿಯಾ ಎಚ್ಚರ, ಎಚ್ಚರ..
ಗ್ವಾಲಿಯರ್​ ಗೆಲುವಿನ ಅತ್ಯುತ್ಸಾಹದಲ್ಲಿರೋ ಮೆನ್ ಇನ್​ ಬ್ಲೂ ಇಂದು ಪ್ರವಾಸಿ ಬಾಂಗ್ಲಾವನ್ನ ಈಸಿಯಾಗಿ ಬೇಟೆಯಾಡುವ ಕನಸು ಕಾಣ್ತಿದೆ. ಅದು ಅಷ್ಟು ಸುಲಭವಿಲ್ಲ. ಯಾಕಂದ್ರೆ ಇದೇ ಮೈದಾನದಲ್ಲಿ ಕಳೆದ ಬಾರಿ ಮುಖಾಮುಖಿ ಆದಾಗ ಬಾಂಗ್ಲಾ ತಂಡ, ಭಾರತಕ್ಕೆ ಸೋಲಿನ ರುಚಿ ತೋರಿಸಿತ್ತು. ಸೋಲಿನಿಂದ ಕಂಗೆಟ್ಟಿರೋ ಬಾಂಗ್ಲಾ, ಯಾವುದೇ ಕ್ಷಣದಲ್ಲಿ ತಿರುಗಿ ಬೀಳಬಹುದು. ಹಾಗಾಗಿ ಸ್ಕೈ ಪಡೆ ಎದುರಾಳಿಯನ್ನ, ಹಗುರವಾಗಿ ಪರಿಗಣಿಸದೇ ಎಚ್ಚರಿಕೆಯಿಂದ ಆಟವಾಡಬೇಕಿದೆ.

ಇಂದು ಕೂಡ ತೋರಿಸಬೇಕಿದೆ ಅಗ್ರೆಸ್ಸಿವ್​ ಅಪ್ರೋಚ್​​
ಅಗ್ರೆಸ್ಸಿವ್ ಅಪ್ರೋಚ್​​​ನಿಂದಲೇ ಟೀಮ್ ಇಂಡಿಯಾ, ಮೊದಲ ಟಿ20 ಪಂದ್ಯವನ್ನ ಗೆದ್ದಿತ್ತು. ಭಾರತದ ಆಕ್ರಮಣಕಾರಿ ಆಟಕ್ಕೆ ಬಾಂಗ್ಲಾ ಕಂಗಲಾಗಿತ್ತು. ಎದುರಾಳಿಯನ್ನ ಜಸ್ಟ್​ 127 ರನ್​​​​ಗೆ ಕಟ್ಟಿಹಾಕಿ ಕೇವಲ 11.5 ಓವರ್​ಗಳಲ್ಲೆ ಚೇಸ್​​​​ ಮಾಡಿ ಎಲ್ಲರನ್ನೂ ದಿಗಿಲು ಬಡಿಸಿತ್ತು. ಅದೇ ಹೈ ಪವರ್​​ ಅಂಡ್ ಟೆರರ್​ ಪರ್ಫಾಮೆನ್ಸ್​ ಅನ್ನ, ಸೂರ್ಯ ಆ್ಯಂಡ್​ ಟೀಮ್ ಡೆಲ್ಲಿ ದಂಗಲ್​ನಲ್ಲಿ ರಿಪೀಟ್ ಮಾಡಬೇಕಿದೆ. ಹಾಗಾದರೆ ಇಂದೇ ಸರಣಿ ಕೈವಶವಾಗಲಿದೆ.

ಡಿಸೆಂಟ್​​​​​​ ಆಟವಾಡಿದ ಸ್ಯಾಮ್ಸನ್​​​ ಬೆಂಚ್!
ಗ್ವಾಲಿಯರ್​ ಕದನದಲ್ಲಿ ಓಪನರ್​ ಆಗಿ ಸಿಕ್ಕ ಗೋಲ್ಡನ್ ಚಾನ್ಸ್​​ಅನ್ನ, ಸಂಜು ಸ್ಯಾಮ್ಸನ್ ಹಾಳು ಮಾಡಿಕೊಂಡ್ರು. ಆರಂಭದಿಂದ ಒತ್ತಡದಲ್ಲಿ ಬ್ಯಾಟ್ ಬೀಸಿದ ಸಂಜು, 29 ರನ್​ಗೆ ಆಟ ನಿಲ್ಲಿಸಿದ್ರು. ಸರಣಿ ಗೆಲ್ಲುವ ದೃಷ್ಟಿಯಿಂದ ಭಾರತಕ್ಕೆ ಇಂದಿನ ಪಂದ್ಯ ಮಹತ್ವದ್ದಾಗಿದ್ದು, ಸಂಜು ಬೆಂಚ್​​ ಕಾಯ್ತಾರಾ ಅನ್ನೋ ಪ್ರಶ್ನೆ ಎದ್ದಿದೆ. ಹಾಗೊಂದು ವೇಳೆ ಸ್ಯಾಮ್ಸನ್​​​ಗೆ ಕೈ ಕೊಟ್ಟಿದ್ದೆ ಆದ್ರೆ, ಆ ಜಾಗದಲ್ಲಿ ಹೊಡಿಬಡಿ ಪ್ಲೇಯರ್​​ ಜಿತೇಶ್ ಶರ್ಮಾ ಅದೃಷ್ಟ ಖುಲಾಸಲಿದೆ.

ಬಿಷ್ನೋಯಿ ಚಾನ್ಸ್ ಗಿಟಿಸಿಕೊಳ್ತಾರಾ..?
ಡೆಲ್ಲಿ ಪಿಚ್​, ಸ್ಪಿನ್ನರ್ಸ್​ ಪಾಲಿಗೆ ಸ್ವರ್ಗ ಎನಿಸಿದೆ. ಇದರ ಲಾಭ ಪಡೆಯಲು ಭಾರತ, 2ನೇ ಸ್ಪೆಶಲಿಸ್ಟ್ ಸ್ಪಿನ್ನರ್​ ಆಗಿ ರವಿ ಬಿಷ್ನೋಯಿ ಅವರನ್ನ ಆಡಿಸುವ ಸಾಧ್ಯತೆ ಇದೆ. ಆದ್ರೆ ಯಾರ ಬದಲಿ ಆಡ್ತಾರೆ ಅನ್ನೋದು ಸಸ್ಪೆನ್ಸ್​​. ಯಾಕಂದ್ರೆ ಗ್ವಾಲಿಯರ್​​​ನಲ್ಲಿ ಮಿಂಚಿದ್ದ ಮಿಸ್ಟ್ರಿ ಸ್ಪಿನ್ನರ್​​​​​ ವರುಣ್​ ಚಕ್ರವರ್ತಿ ಸ್ಥಾನಕ್ಕೆ, ಯಾವುದೇ ಕಾರಣಕ್ಕೂ ಕುತ್ತು ಇಲ್ಲ. ಆಲ್​ರೌಂಡರ್​​​​​​​ ಆಗಿ ಸುಂದರ್​​​​​​​​​​​​​​​​​ ಮುಂದುವರಿಯಲಿದ್ದಾರೆ. ಒಂದು ವೇಳೆ ಮ್ಯಾನೇಜ್​​ಮೆಂಟ್​​ ರಿಯಾನ್​​ ಪರಾಗ್ ಕೂರಿಸಿದ್ರೆ, ರವಿ ಬಿಷ್ನೋಯ್ನಿಗೆ ಡೋರ್ ಓಪನ್ ಆಗಲಿದೆ.

ಇದನ್ನೂ ಓದಿ:ಬಾಂಗ್ಲಾ ವಿರುದ್ಧ 2ನೇ ಟಿ20; ಬಲಿಷ್ಠ ಟೀಮ್​ ಇಂಡಿಯಾ ಕಣಕ್ಕೆ; ಸ್ಟಾರ್​ ಆಟಗಾರರೇ ಔಟ್​

ಚಿಕ್ಕ ಬೌಂಡ್ರಿ ಲೈನ್​​​.. ರನ್ ಸುನಾಮಿ ಗ್ಯಾರಂಟಿ
ಡೆಲ್ಲಿಯ ಅರುಣ್ ಜೇಟ್ಲಿ ಮೈದಾನ ಚಿಕ್ಕದಾಗಿದೆ. ಬ್ಯಾಟ್ಸ್​​​ಮನ್ ಇದರ ಲಾಭ ಪಡೆಯಲಿದ್ದು ರನ್ ಹೊಳೆ ನಿರೀಕ್ಷೆ ಇದೆ. ಎಸ್ಪೆಷಲಿ ಪವರ್​ಪ್ಲೇ ಪವರ್​​ಗನ್​ ಅಭಿಷೇಕ್ ಶರ್ಮಾ, ಡಿಸ್ಟ್ರಕ್ಟಿವ್ ಸೂರ್ಯಕುಮಾರ್​ ಯಾದವ್​​​, ಹಾರ್ದಿಕ್​​ ಪಾಂಡ್ಯ ಹಾಗೂ ಫಿನಿಶರ್​​​ ರಿಂಕು ಸಿಂಗ್, ಈ ಮೈದಾನದಲ್ಲಿ ಬ್ಯಾಟಿಂಗ್ ರೌದ್ರನರ್ತನ ನಡೆಸುವುದನ್ನ ಅಲ್ಲಗಳೆಯುವಂತಿಲ್ಲ. ಒಂದೆಡೆ ಟೀಮ್ ಇಂಡಿಯಾ, ಡೆಲ್ಲಿ ವಾರ್​ ಗೆದ್ದು ಇಂದೇ ಸರಣಿ ಗೆಲ್ಲುವ ಲೆಕ್ಕಚಾರದಲ್ಲಿದೆ. ಪ್ರವಾಸಿ ಬಾಂಗ್ಲಾ ಪುಟಿದೆದ್ದು ಸರಣಿ ಜೀವಂತವಾಗಿರಿಸಿಕೊಳ್ಳುವ ಯೋಚನೆಯಲ್ಲಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

IND vs BAN T20: ಸಂಜು ಸ್ಯಾಮ್ಸನ್​​ಗೆ ಇಂದು ಚಾನ್ಸ್​ ಸಿಗೋದು ಡೌಟ್​; ಓಪನಿಂಗ್ ಗೇಮ್ ಪ್ಲಾನ್ ಚೇಂಜ್..!

https://newsfirstlive.com/wp-content/uploads/2024/10/SANJU.jpg

Load More