/newsfirstlive-kannada/media/post_attachments/wp-content/uploads/2024/09/RINKU_SINGH_1.jpg)
ಇಂಡೋ-ಇಂಗ್ಲೆಂಡ್​ 3ನೇ ಚುಟುಕು ಕದನಕ್ಕೆ ವೇದಿಕೆ ಸಜ್ಜಾಗಿದೆ. ಮೊದಲ ಎರಡು ಮ್ಯಾಚ್ ಗೆದ್ದ ಟೀಮ್ ಇಂಡಿಯಾ, ಹ್ಯಾಟ್ರಿಕ್ ಗೆಲುವಿನ ಕನಸು ಕಾಣ್ತಿದ್ರೆ, ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ಸೋಲಿನ ಸೇಡಿಗಾಗಿ ಕಾಯ್ತಿದೆ.
ಟೀಮ್ ಇಂಡಿಯಾ ಗೆಲುವಿನ ಕನಸು ಕಾಣ್ತಿದ್ರೆ, ಇತ್ತ ಸತತ 2 ಪಂದ್ಯಗಳಲ್ಲಿ ಮುಖಭಂಗ ಅನುಭವಿಸಿರುವ ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್, ಟೀಮ್ ಇಂಡಿಯಾದ ನಾಗಲೋಟಕ್ಕೆ ಬ್ರೇಕ್ ಹಾಕಲು ರಣತಂತ್ರ ರೂಪಿಸಿದೆ. ಸೋಲಿಗೆ ಪ್ರತೀಕಾರ ತೀರಿಸಿಕೊಳ್ಳುವ ಹಠದಲ್ಲಿದೆ. ಸರಣಿಯನ್ನ ಜೀವಂತವಾಗಿರಿಸಿಕೊಳ್ಳೋ ಯತ್ನದಲ್ಲಿದೆ.
ಸೂರ್ಯ, ಸಂಜು ಫಾರ್ಮ್​ನದ್ದೇ ಚಿಂತೆ..!
ಕಳೆದ 2 ಪಂದ್ಯಗಳಲ್ಲಿ ಗೆದ್ದರೂ, ಟೀಮ್ ಇಂಡಿಯಾಗೆ ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್ ವೈಫಲ್ಯ ಚಿಂತೆಗೀಡು ಮಾಡಿದೆ. ಇವತ್ತು ಈ ಇಬ್ಬರು ಫಾರ್ಮ್ ಕಂಡುಕೊಳ್ಳಬೇಕಾದ ಅನಿವಾರ್ಯತೆ ಇದ್ದೇ ಇದೆ. ಕ್ಯಾಪ್ಟನ್ ಸೂರ್ಯ, ಮೇಲೆ ಇವತ್ತು ಬೆಟ್ಟದಷ್ಟು ನಿರೀಕ್ಷೆ ಇದೆ. ಈ ಸ್ಟೇಡಿಯಂನಲ್ಲಿ ಈ ಹಿಂದಿನ ಪಂದ್ಯದಲ್ಲಿ ಅಜೇಯ ಶತಕ ಸಿಡಿಸಿದ್ರು. ಇವತ್ತೂ ಅದೇ ವೈಭವ ಮರುಕಳಿಸುತ್ತಾ ಅನ್ನೋದು ಫ್ಯಾನ್ಸ್ ಮನದ ಕುತೂಹಲವಾಗಿದೆ.
ಇದನ್ನೂ ಓದಿ: ‘ಲವ್​ ಯೂ, ಗಿವ್ ಯೂ..’ ಭವ್ಯ ಗೌಡಗೆ Love ಪ್ರಪೋಸ್​ ಮಾಡಿದ ಬಗ್ಗೆ ವಿಕ್ಕಿ ಹೇಳಿದ್ದೇನು?
/newsfirstlive-kannada/media/post_attachments/wp-content/uploads/2025/01/Team-India-11.jpg)
ಮಿಡಲ್ ಆರ್ಡರ್​ಗೆ ಅಗ್ನಿಪರೀಕ್ಷೆ..!
ಟೀಮ್ ಇಂಡಿಯಾದ ಮಿಡಲ್ ಅರ್ಡರ್​ಗೆ ರಾಜ್​ಕೋಟ್​ ಟಿ20 ನಿಜಕ್ಕೂ ಅಗ್ನಿಪರೀಕ್ಷೆಯ ಕಣ. ಕಳೆದ 2 ಪಂದ್ಯಗಳಲ್ಲಿ ಸೂರ್ಯ, ಹಾರ್ದಿಕ್ ಪಾಂಡ್ಯ, ಧೃವ್ ಜುರೇಲ್, ಅಕ್ಷರ್ ಪಟೇಲ್, ವಾಷಿಗ್ಟಂನ್ ಸುಂದರ್ ವೈಫಲ್ಯ ಅನುಭವಿಸಿದ್ದಾರೆ. ಹೀಗಾಗಿ ಇವತ್ತಿನ ರಾಜ್​ಕೋಟ್​ ಕದನದಲ್ಲಿ ಟೀಮ್ ಇಂಡಿಯಾದ ಮಿಡಲ್ ಆರ್ಡರ್​ ಜವಾಬ್ದಾರಿಯುತ ಆಟವಾಡಬೇಕಿದೆ.
ಜುರೇಲ್​ಗೆ ಮತ್ತೊಂದು ಚಾನ್ಸ್​..? ದುಬೆ ಕತೆ ಏನು..?
ರಿಂಕು ಸಿಂಗ್ ಇವತ್ತಿನ ಪಂದ್ಯಕ್ಕೂ ಅಲಭ್ಯರಾಗಿದ್ದಾರೆ. ಹೀಗಾಗಿ ರಿಂಕು ಸ್ಥಾನದಲ್ಲಿ ಧ್ರುವ್ ಜರೇಲ್​ಗೆ ಮತ್ತೊಂದು ಚಾನ್ಸ್ ಸಿಗೋ ಸಾದ್ಯತೆಯಿದೆ. ಜುರೇಲ್​ಗೆ ಪೇಸ್ ಆಲ್​ರೌಂಡರ್​ ಶಿವಂ ದುಬೆ ಫೈಟ್​ ಎದುರಾಗಲಿದೆ. ಬಿಗ್ ಹಿಟ್ಟರ್ ಆಗಿರುವ ದುಬೆ ಮ್ಯಾಚ್ ಫಿನಿಷ್ ಮಾಡೋದ್ರಲ್ಲಿ ಪಂಟರ್ ಕೂಡ ಆಗಿದ್ದಾರೆ. ಹೀಗಾಗಿ ಶಿವಂ ದುಬೆ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.
ಸ್ಪಿನ್ ಟು ವಿನ್ ಫಾರ್ಮುಲಾ?
ಹ್ಯಾಟ್ರಿಕ್ ಗೆಲುವಿನೊಂದಿಗೆ ಸರಣಿ ವಶ ಪಡಿಸಿಕೊಳ್ಳುವ ಲೆಕ್ಕಾಚಾರದಲ್ಲಿರುವ ಸೂರ್ಯ, ರಾಜಕೋಟ್​ನಲ್ಲಿ ಮತ್ತೆ ಸ್ಪಿನ್ ಟು ವಿನ್ ಫಾರ್ಮುಲಕ್ಕೆ ಅಂಟಿಕೊಳ್ಳುವ ನಿರೀಕ್ಷೆ ಇದೆ. ಮಿಸ್ಟ್ರಿ ಸ್ಪಿನ್ನರ್​ ವರುಣ್ ಚಕ್ರವರ್ತಿ, ಲೆಗ್ ಸ್ಪಿನ್ನರ್ ರವಿ ಬಿಷ್ನೋಯಿ ಜೊತೆ ವಾಷಿಗ್ಟಂನ್ ಸುಂದರ್ ಮತ್ತೆ ಇಂಗ್ಲೆಂಡ್ ಲಯನ್ಸ್​ ಬೇಟೆಗಿಳಿಯಲಿದ್ದಾರೆ. ರಾಜ್​ಕೋಟ್​ನ ಪಿಚ್ ರಿಪೋರ್ಟ್​ ಬೇರೆಯದ್ದೇ ಕಥೆ ಹೇಳ್ತಿದೆ.
ಇದನ್ನೂ ಓದಿ: ಕೈಲಾಸ ಮಾನಸ ಸರೋವರ ಯಾತ್ರೆ ಇನ್ನೂ ಸುಲಭ; ವಿಮಾನ ಹಾರಾಟಕ್ಕೆ ಒಪ್ಪಿಕೊಂಡ ಚೀನಾ-ಭಾರತ
/newsfirstlive-kannada/media/post_attachments/wp-content/uploads/2025/01/Team-India-vs-England.jpg)
ರಾಜ್​ಕೋಟ್ ಪಿಚ್ ಹೇಗಿದೆ..?
ರಾಜ್​ಕೋಟ್​ನ ಪಿಚ್ ಪ್ಲಾಟ್​​ ಟ್ರ್ಯಾಕ್​ ಆಗಿದ್ದು, ಇದು ಬ್ಯಾಟ್ಸ್​ಮನ್​ಗಳ ಪಾಲಿಗೆ ಸ್ವರ್ಗವಾಗಿದೆ. ಹೀಗಾಗಿ ಬಿಗ್ ಟೋಟಲ್ ಕಲೆ ಹಾಕುವುದು ಫಿಕ್ಸ್. ಪೇಸ್ ಹಾಗೂ ಬೌನ್ಸಿಯಾಗಿರುವ ಈ ಪಿಚ್​ನಲ್ಲಿ ವೇರಿಯೇಷನ್ಸ್​ ಪೇಸರ್​​ಗಳಿಗೆ ಬಿಗ್ ಅಡ್ವಾಂಟೇಜ್ ಆಗಿದೆ. ಪಂದ್ಯ ಸಾಗುತ್ತಾ ಸ್ಪಿನ್ನರ್​ಗಳಿಗೂ ನೆರವಾಗಲಿದೆ. ಕಿರಿದಾದ ಬೌಂಡರಿ ಹೊಂದಿದ್ದು, ಟಾಸ್ ಗೆದ್ದವರು ಬ್ಯಾಟಿಂಗ್ ಆಯ್ದುಕೊಂಡು ಬಿಗ್ ಸ್ಕೋರ್ ಕಲೆಹಾಕುವ ಲೆಕ್ಕಾಚಾರ ಮಾಡೋದು ಫಿಕ್ಸ್​.
ಬೆಂಚ್ ಕಾದಿದ್ದ ವೇಗಿ ಮೊಹಮ್ಮದ್ ಶಮಿ ಪೇಸರ್​ಗಳಿಗೆ ಅನಕೂಲವಾಗೋ ಈ ಪಿಚ್​ನಲ್ಲಿ ಕಣಕ್ಕಿಳಿಯೋ ಸಾಧ್ಯತೆ ಇದೆ. ವಿನ್ನಿಂಗ್ ಕಾಂಬಿನೇಷನ್ ಬದಲಾವಣೆಗೆ ಮ್ಯಾನೇಜ್​ಮೆಂಟ್​ ಕೈ ಹಾಕುತ್ತಾ ಅನ್ನೋದೆ ಪ್ರಶ್ನೆ. ಟೀಮ್ ಇಂಡಿಯಾ ಹ್ಯಾಟ್ರಿಕ್ ಗೆಲುವಿನೊಂದಿಗೆ ಸರಣಿ ವಶಪಡಿಸಿಕೊಳ್ಳುವ ಲೆಕ್ಕಾಚಾರದಲ್ಲಿದ್ರೆ, ಇಂಗ್ಲೆಂಡ್​ ಡು ಆರ್ ಡೈ ಮ್ಯಾಚ್​ನಲ್ಲಿ ಗೆದ್ದು ಸರಣಿ ಜೀವಂತವಾಗಿಸಿಕೊಳ್ಳುವ ಕನಸು ಕಾಣ್ತಿದೆ. ಯಾರ್ ಗೆಲ್ತಾರೆ ಅನ್ನೋದನ್ನ ಕಾದುನೋಡಬೇಕಿದೆ.
ಇದನ್ನೂ ಓದಿ: Singer Manjamma: ಸರಿಗಮಪ ಖ್ಯಾತಿಯ ಅಂಧ ಗಾಯಕಿ ಮಂಜಮ್ಮ ನಿಧನ
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us