/newsfirstlive-kannada/media/post_attachments/wp-content/uploads/2025/01/PRASIDH_KRISHANA.jpg)
ಲಾರ್ಡ್ಸ್, ಕ್ರಿಕೆಟ್ ಕಾಶಿ ಎಂದೇ ಪ್ರಖ್ಯಾತಿ. ಅತಿ ದೊಡ್ಡ ಇತಿಹಾಸ ಹೊಂದಿರುವ ಲಾರ್ಡ್ಸ್ನಲ್ಲಿ ಸ್ಟೋರ್ಟ್ ಮ್ಯೂಸಿಯಮ್, ಐಕಾನಿಕ್ ಪೆವಿಲಿಯನ್, ಲಾಂಗ್ ರೂಮ್ಗೆ ಪ್ರತ್ಯೇಕತೆ ಇದೆ. ಇಂಥಹ ಕ್ರಿಕೆಟ್ ಕಾಶಿ ಲಾರ್ಡ್ಸ್ನಲ್ಲಿ ಪಂದ್ಯವನ್ನಾಡುವುದು ಆಡುವುದು ಪ್ರತಿ ಕ್ರಿಕೆಟರ್ ಕನಸು. ಇದೀಗ ಹೋಮ್ ಆಫ್ ಕ್ರಿಕೆಟ್ ಲಾರ್ಡ್ಸ್ನಲ್ಲೇ ಟೀಮ್ ಇಂಡಿಯಾ, ಇಂಗ್ಲೆಂಡ್ ಬ್ಯಾಟಲ್ಗೆ ಕೌಂಟ್ಡೌನ್ ಶುರುವಾಗಿದೆ.
ಹೇಗಿರುತ್ತೆ ಪ್ಲೇಯಿಂಗ್-11..?
ಕ್ಯಾಪ್ಟನ್ ಶುಭ್ಮನ್, ಕಳೆದ 2 ಟೆಸ್ಟ್ಗಳಿಂದ 3 ಶತಕ ಸಿಡಿಸಿದ್ದಾರೆ. ಲಾರ್ಡ್ಸ್ನಲ್ಲೂ ಅದೇ ಕ್ಲಾಸ್ ಬ್ಯಾಟಿಂಗ್ ಮುಂದುವರಿಸ್ತಾರಾ ಎಂಬ ಕುತೂಹಲ ಸಹಜವಾಗಿದೆ. ರಿಷಭ್ ಪಂತ್, ರವೀಂದ್ರ ಜಡೇಜಾರಿಂದ ಬರ್ಮಿಂಗ್ಹ್ಯಾಮ್ನ ಪರ್ಫಾಮೆನ್ಸ್ ಮುಂದುವರಿಯಬೇಕಿದೆ. ಈ ಪೈಕಿ ಕನ್ನಡಿಗ ಕೆ.ಎಲ್.ರಾಹುಲ್, ಶುಭ್ಮನ್ ಗಿಲ್ ಎಕ್ಸ್ಟ್ರಾ ಕೇರ್ ತೆಗೆದುಕೊಂಡು ಆಡಬೇಕು ಅನ್ನೋದು ಮರಿಬಾರದು.
ನಿತೀಶ್ ರೆಡ್ಡಿಗೆ ಕೊಕ್? ಜುರೇಲ್, ಶಾರ್ದೂಲ್ vs ಅರ್ಷದೀಪ್..?
ಆಲ್ರೌಂಡರ್ ನಿತೀಶ್ ರೆಡ್ಡಿ ಲಾರ್ಡ್ಸ್ನಲ್ಲಿ ಆಡ್ತಾರಾ ಅನ್ನೋದೇ ಪ್ರಶ್ನೆ. 2ನೇ ಟೆಸ್ಟ್ನಲ್ಲಿ ಬ್ಯಾಟಿಂಗ್, ಬೌಲಿಂಗ್ನಲ್ಲಿ ಫೇಲಾಗಿದ್ದಾರೆ. ಹೀಗಾಗಿ ಪೇಸರ್ಗಳಿಗೆ ನೆರವಾಗುವ ಈ ಪಿಚ್ನಲ್ಲಿ ಸ್ಪೆಷಲಿಸ್ಟ್ ಬ್ಯಾಟರ್ಗೆ ಅವಕಾಶ ನೀಡ್ತಾರಾ? ಸ್ಪೆಷಲಿಸ್ಟ್ ಬೌಲರ್ಗೆ ಕಣಕ್ಕಿಳಿಸ್ತಾರಾ ಅನ್ನೋ ಕ್ಯೂರಿಯಾಸಿಟಿ ಇದೆ. ಹೀಗಾಗಿ ಬ್ಯಾಟರ್ ಆಗಿ ಧ್ರುವ್ ಜುರೇಲ್ಗೆ ಅವಕಾಶ ನೀಡ್ತಾರಾ? ಬೌಲಿಂಗ್ ಜೊತೆ ಬ್ಯಾಟಿಗ್ನಲ್ಲಿ ನೆರವಾಗಬಲ್ಲ ಶಾರ್ದೂಲ್ಗೆ ಅವಕಾಶ ಒದಿಸ್ತಾರಾ? ಇಲ್ಲ ಲೆಫ್ಟಿ ಪೇಸರ್ ಅರ್ಷದೀಪ್ ಡೆಬ್ಯು ಮಾಡಿಸ್ತಾರಾ ಅನ್ನೋದು ಪಂದ್ಯಕ್ಕೂ ಮುನ್ನವೇ ತಿಳಿಯಬೇಕಿದೆ.
ಇದನ್ನೂ ಓದಿ: ಪಂದ್ಯ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾಗೆ ಬೆದರಿಕೆ ಹಾಕಿದ ಬೆನ್ ಸ್ಟೋಕ್ಸ್..!
ಬೂಮ್ರಾ ಬ್ಯಾಕ್.. ಪ್ರಸಿದ್ಧ ಕೃಷ್ಣ ಔಟ್?
ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಜಸ್ಪ್ರಿತ್ ಬೂಮ್ರಾ ಕಮ್ಬ್ಯಾಕ್ ಗ್ಯಾರಂಟಿ. ಹೀಗಾಗಿ ಕನ್ನಡಿಗ ಪ್ರಸಿದ್ಧ್ ಕೃಷ್ಣ ಪ್ಲೇಯಿಂಗ್ ಇಲೆವೆನ್ನಿಂದ ಹೊರಬೀಳಲಿದ್ದಾರೆ. ಎಡ್ಜ್ಬಾಸ್ಟನ್ನಲ್ಲಿ ಫೈರಿ ಸ್ಪೆಲ್ ಮಾಡಿದ್ದ ಆಕಾಶ್ದೀಪ್, ಮೊಹಮ್ಮದ್ ಸಿರಾಜ್ ಸಹಜವಾಗೇ ಮುಂದುವರಿಯಲಿದ್ದಾರೆ. ಲಾರ್ಡ್ಸ್ನಲ್ಲಿ ಸ್ಪಿನ್ ಅಡ್ವಾಂಟೇಜ್ ಇಲ್ಲ. ಈ ಕಾರಣಕ್ಕೆ ಸುಂದರ್ ಬೆಂಚ್ ಕಾಯೋ ಚಾನ್ಸ್ ತಳ್ಳಿ ಹಾಕುವಂತಿಲ್ಲ.
ಲಾರ್ಡ್ಸ್ನಲ್ಲಿ ಲೀಡ್ ಪಡೆದುಕೊಳ್ಳುತ್ತಾ ಟೀಮ್ ಇಂಡಿಯಾ?
ಮೊದಲ ಟೆಸ್ಟ್ ಸೋತ ಟೀಮ್ ಇಂಡಿಯಾ, 2ನೇ ಟೆಸ್ಟ್ನಲ್ಲಿ ಸ್ಟ್ರಾಂಗ್ ಕಮ್ಬ್ಯಾಕ್ ಮಾಡಿದೆ. ಬ್ಯಾಟಿಂಗ್, ಬೌಲಿಂಗ್ನಲ್ಲಿ ಸಂಘಟಿತ ಆಟವಾಡಿದೆ. ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿದ್ದಾರೆ. ಸರಣಿ ಸಮಬಲ ಮಾಡಿಕೊಂಡಿರುವ ಟೀಮ್ ಇಂಡಿಯಾಗೆ ಲಾರ್ಡ್ಸ್ ಟೆಸ್ಟ್ ಮೋಸ್ಟ್ ಇಂಪಾರ್ಟೆಂಟ್. ಸರಣಿ ಗೆಲ್ಲುವಿನ ದೃಷ್ಟಿಯಿಂದ ಈ ಮ್ಯಾಚ್ ಗೆಲ್ಲಬೇಕು. ಈ ನಿಟ್ಟಿನಲ್ಲಿ ಲಾರ್ಡ್ಸ್ನಲ್ಲಿ ಲೀಡ್ ಪಡೆದುಕೊಳ್ಳಬೇಕಿದೆ. ಹೀಗಾಗಿ ಎಚ್ಚರಿಕೆಯ ಜೊತೆಗೆ ಸಂಘಟಿತ ಆಟ ಮತ್ತೊಮ್ಮೆ ಹೊರಬರಬೇಕಿದೆ.
ಒಟ್ನಲ್ಲಿ ಲಾರ್ಡ್ಸ್ನಲ್ಲಿ ಮತ್ತೊಂದು ದಿಗ್ವಿಜಯದ ನಿರೀಕ್ಷೆಯಲ್ಲಿರೋ ಟೀಮ್ ಇಂಡಿಯಾ, ಸಖತ್ ಸ್ಟ್ರಾಂಗ್ ಆಗಿಯೇ ಕಾಣ್ತಿದೆ. ಆನ್ಫೀಲ್ಡ್ನಲ್ಲಿ ನಿರೀಕ್ಷೆಗೆ ತಕ್ಕ ಆಟವಾಡಿದ್ರೆ, ಐತಿಹಾಸಿಕ ಸ್ಟೇಡಿಯಂನಲ್ಲಿ ಮತ್ತೊಂದು ಗೆಲುವು ದಕ್ಕೋದ್ರಲ್ಲಿ ಅನುಮಾನವಿಲ್ಲ.
ಇದನ್ನೂ ಓದಿ: Land Rover: ಖಡಕ್ ಲುಕ್ನೊಂದಿಗೆ ಹೊಸ ಲ್ಯಾಂಡ್ ರೋವರ್.. ಬೆಲೆ ಎಷ್ಟು ಗೊತ್ತಾ..?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ