/newsfirstlive-kannada/media/post_attachments/wp-content/uploads/2025/06/KARUN-NAIR-3.jpg)
ಲಾರ್ಡ್ಸ್​​​ನಲ್ಲಿ ನಡೆದ 3ನೇ ಟೆಸ್ಟ್​ ಪಂದ್ಯವನ್ನ ಸೋತಿರುವ ಟೀಮ್​ ಇಂಡಿಯಾ ಪಾಲಿಗೆ ಇಂದಿನಿಂದ ಆರಂಭವಾಗೋ 4ನೇ ಟೆಸ್ಟ್​​ ಪಂದ್ಯ ಡು ಆರ್​​ ಡೈ ಆಗಿದೆ. ಸರಣಿ ಜೀವಂತವಾಗಿಸಿರಿಕೊಳ್ಳಬೇಕಂದ್ರೆ ಗೆಲುವು ಅನಿವಾರ್ಯವಾಗಿದೆ. ಶತಾಯಗತಾಯ ಗೆಲ್ಲಲೇಬೇಕಾದ ಪಂದ್ಯಕ್ಕೂ ಮುನ್ನ ಟೀಮ್​ ಇಂಡಿಯಾವನ್ನ ಸೆಲೆಕ್ಷನ್​ ತಲೆನೋವು ಕಾಡ್ತಿದೆ. ಪಂದ್ಯದ ಆರಂಭಕ್ಕೆ ಕೆಲವೇ ಗಂಟೆಗಳಿವೆ. ಆದರೂ ಗೊಂದಲ ಬಗೆಹರಿದಿಲ್ಲ.
ಕರುಣ್​ ನಾಯರ್​​ ಔಟ್​.. ಸುದರ್ಶನ್​ಗೆ ಚಾನ್ಸ್​?
8 ವರ್ಷಗಳ ಬಳಿಕ ಕಮ್​​ಬ್ಯಾಕ್​ ಮಾಡಿದ ಕರುಣ್​ ನಾಯರ್​ ಕಮಾಲ್​ ಮಾಡುವಲ್ಲಿ ವಿಫಲರಾಗಿದ್ದಾರೆ. 6 ಇನ್ನಿಂಗ್ಸ್​ಗಳಿಂದ ಕೇವಲ 131 ರನ್​ಗಳಿಸಿ ನಂಬಿಕೆಯನ್ನ ಹುಸಿಗೊಳಿಸಿದ್ದಾರೆ. ಆಂಗ್ಲರ ನಾಡಲ್ಲಿ ರನ್​ಗಳಿಕೆಗೆ ಸ್ಟ್ರಗಲ್​ ಮಾಡ್ತಿರೋ ಕರುಣ್​, 4ನೇ ಟೆಸ್ಟ್​ನಲ್ಲಿ ಬೆಂಚ್​ ಕಾಯೋ ಸಾಧ್ಯತೆ ದಟ್ಟವಾಗಿದೆ. ಕರುಣ್​ ಬದಲಾಗಿ ಸಾಯಿ ಸುದರ್ಶನ್​​, ಅಭಿಮನ್ಯು ಈಶ್ವರನ್​ ಇಬ್ಬರಲ್ಲಿ ಯಾರನ್ನ ಕಣಕ್ಕಿಳಿಸೋದು ಅನ್ನೋದು ಸದ್ಯ ಪ್ರಶ್ನೆಯಾಗಿದೆ.
ಪ್ಲೇಯಿಂಗ್​-XIಗೆ ದೃವ್​​ ಜುರೇಲ್​​ ಎಂಟ್ರಿ?
ಲಾರ್ಡ್ಸ್​​ ಟೆಸ್ಟ್​ನಲ್ಲಿ ಬೆರಳಿನ ಗಾಯಕ್ಕೆ ತುತ್ತಾದ ರಿಷಭ್​ ಪಂತ್​ ಇಂಜುರಿ ಬಗ್ಗೆ ಯಾವುದೇ ಅಪ್​​ಡೇಟ್​ ಸಿಕ್ಕಿಲ್ಲ. 5 ದಿನಗಳ ಕಾಲ ಕೀಪಿಂಗ್​ ಮಾಡುವಷ್ಟು ಪಂತ್​ ಫಿಟ್​ ಆಗಿಲ್ಲ ಅನ್ನೋ ಮಾಹಿತಿಯಿದೆ. ಹೀಗಾಗಿ ದೃವ್​​ ಜುರೇಲ್​ ಕೀಪರ್​ ಕೋಟಾದಲ್ಲಿ ಆಡುವ ಸಾಧ್ಯತೆಯಿದೆ. ಜುರೇಲ್​ 3ನೇ ಕ್ರಮಾಂಕದಲ್ಲಿ ಬ್ಯಾಟ್​ ಬೀಸಿದ್ರೆ, ಪಂತ್​ನ​ ಸ್ಪೆಷಲಿಸ್ಟ್​ ಬ್ಯಾಟರ್​ ಆಗಿ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿಸೋ ಚರ್ಚೆಗಳು ನಡೆದಿವೆ. ಫೈನಲ್​ ಡಿಶಿಷನ್​ನ ಇಂದು ಮ್ಯಾನೇಜ್​ಮೆಂಟ್​​ ತೆಗೆದುಕೊಳ್ಳಲಿದೆ. ​
ನಿತೀಶ್​​ ರೆಡ್ಡಿ ಸ್ಥಾನದಲ್ಲಿ ಯಾರಿಗೆ ಚಾನ್ಸ್​.?
ಗಾಯಗೊಂಡಿರುವ ನಿತೀಶ್​ ರೆಡ್ಡಿ ಟೆಸ್ಟ್​ ಸರಣಿಯಿಂದಲೇ ರೂಲ್ಡ್​ ಔಟ್​ ಆಗಿದ್ದಾರೆ. ನಿತೀಶ್​ ಸ್ಥಾನದಲ್ಲಿ ಯಾರಿಗೆ ಚಾನ್ಸ್​ ನೀಡೋದು ಅನ್ನೋದು ಸದ್ಯ ಗೊಂದಲ ಮೂಡಿಸಿದೆ. ಆಲ್​​ರೌಂಡರ್​​ ಶಾರ್ದೂಲ್​ ಠಾಕೂರ್​ ಇಂಪ್ರೆಸ್​​ ಮಾಡುವಲ್ಲಿ ಫೇಲ್​ ಆಗಿದ್ರೆ ಹೊಸದಾಗಿ ಎಂಟ್ರಿ ಕೊಟ್ಟಿರೋ ಅನ್ಯುಲ್​ ಕಾಂಬೋಜ್​ ನೆಟ್ಸ್​ನಲ್ಲಿ ಇಂಪ್ರೆಸ್​ ಮಾಡಿದ್ದಾರೆ. ಇದ್ರ ಹೊರತಾಗಿ ನಿತೀಶ್​ ರೆಡ್ಡಿ ಸ್ಥಾನ ಸ್ಪೆಷಲಿಸ್ಟ್​ ಬ್ಯಾಟರ್​ನ ಕಣಕ್ಕಿಳಿಸೋ ಬಗ್ಗೆ ಮಾತುಕತೆ ನಡೆದಿದೆ.
ಆಕಾಶ್​​ ದೀಪ್​ ಅಲಭ್ಯರಾದ್ರೆ 3ನೇ ವೇಗಿ ಯಾರು?
ಇಂಜುರಿಗೆ ತುತ್ತಾಗಿರೋ ಆಕಾಶ್​​ದೀಪ್​ ಫುಲ್​ ಫಿಟ್​ ಆಗಿಲ್ಲ. ಆಡ್ತಾರಾ? ಇಲ್ವಾ? ಅನ್ನೋದ್ರ ಬಗ್ಗೆ ಕ್ಲಾರಿಟಿ ಇಲ್ಲ. ಒಂದು ವೇಳೆ ಆಕಾಶ್​​ದೀಪ್​ ಅಲಭ್ಯರಾದ್ರೆ, 3ನೇ ವೇಗಿಯಾಗಿ ಯಾರು ಆಡಲಿದ್ದಾರೆ ಎಂಬ ಪ್ರಶ್ನೆಯಿದೆ. ಪ್ರಸಿದ್ಧ್​​ ಕೃಷ್ಣ ಕಮ್​​ಬ್ಯಾಕ್​ ಮಾಡ್ತಾರಾ? ಅಥವಾ ಅನ್ಶುಲ್​ ಕಾಂಬೋಜ್​​ ಚಾನ್ಸ್​​ ಗಿಟ್ಟಿಸಿಕೊಳ್ತಾರಾ? ಅನ್ನೋದು ಸದ್ಯ ಕುತೂಹಲ ಮೂಡಿಸಿದೆ. ಕಾಂಬೋಜ್​ ಇಂಡಿಯಾ ಎ ಪರ ಮಿಂಚಿದ್ರೆ, ಪ್ರಸಿದ್ಧ್​​ಗೆ ಅನುಭವದ ಬಲವಿದೆ.
ಇದನ್ನೂ ಓದಿ: ವೀರಶೈವ ಲಿಂಗಾಯತ ಪಂಚ ಪೀಠಾಧೀಶರ ಸಮ್ಮೇಳನ; 12 ನಿರ್ಣಯ ಘೋಷಿಸಿದ ಶ್ರೀಗಳು
ಕಾದ ಕುಲ್​​ದೀಪ್​​ ಯಾದವ್​ಗೆ ಚಾನ್ಸ್​ ಸಿಗುತ್ತಾ.?
ಓಲ್ಡ್​​ ಟ್ರಾಫರ್ಡ್​​​ನ ಪಿಚ್​ ಸ್ವಲ್ಪ ಸ್ಲೋ ಇರಲಿದೆ ಎನ್ನಲಾಗ್ತಿದೆ. ಹಾಗೇನಾದ್ರೂ ಆದ್ರೆ ಚೈನಾಮನ್​ ಸ್ಪಿನ್ನರ್​ ಕುಲ್​​ದೀಪ್​ ಯಾದವ್​ ಕೈಚಳಕ ಮಾಡಬಲ್ಲರು. ಕುಲ್​​ದೀಪ್​ಗೆ ಸ್ಥಾನ ಬಿಟ್ಟು ಕೊಡೋದ್ಯಾರು ಅನ್ನೋದು ಪ್ರಶ್ನೆ? ಜಡೇಜಾ ಸಾಲಿಡ್​​ ಬ್ಯಾಟಿಂಗ್​ನಿಂದ ಮಿಂಚಿದ್ರೆ, ವಾಷಿಂಗ್ಟನ್​ ಸುಂದರ್​ ಬಾಲ್​ ಹಿಡಿದು ಮ್ಯಾಜಿಕ್​ ಮಾಡಿದ್ದಾರೆ. ವಾಸ್ತವ ಹೀಗಿರೋವಾಗ ಕುಲ್​​​ದೀಪ್​​ಗೆ ಸ್ಥಾನ ನೀಡಬೇಕಾ? ಸ್ಥಾನ ನೀಡೋದಾದ್ರೆ ಸುಂದರ್​​-ಜಡೇಜಾ ಇಬ್ಬರಲ್ಲಿ ಯಾರನ್ನ ಕೂರಿಸೋದು? ಎಂಬ ಬಗ್ಗೆ ಚರ್ಚೆ ನಡೆದಿದೆ.
ಪ್ಲೇಯಿಂಗ್​ ಇಲೆವೆನ್​ ಅಯ್ಕೆಗೆ ಸಂಭಂದಿಸಿದಂತೆ ಟೀಮ್​ ಮ್ಯಾನೇಜ್​ಮೆಂಟ್​ ವಲಯದಲ್ಲಿ ಸಾಕಷ್ಟು ಚರ್ಚೆಗಳಂತೂ ನಡೆದಿವೆ. ಫೈನಲ್​ ತಂಡ ಫಿಕ್ಸ್​ ಆಗಿಲ್ಲ. ಇಂದು ಪಿಚ್​​ ನೋಡಿ ಕ್ಯಾಪ್ಟನ್​ ಗಿಲ್​, ಕೋಚ್​ ಗಂಭೀರ್​ ರನ್​ಭೂಮಿಗೆ ಯಾವೆಲ್ಲಾ ಕಲಿಗಳಿನ್ನ ಕಣಕ್ಕಿಳಿಸ್ತಾರೆ ಕಾದು ನೋಡೋಣ.
ಇದನ್ನೂ ಓದಿ:ಆಯೋಗದ ವರದಿಯಿಂದ ಬಿಗ್ ಶಾಕ್.. ಮತದಾರರ ಪಟ್ಟಿಯಿಂದ 52 ಲಕ್ಷ ವೋಟರ್ಸ್​ ಔಟ್​
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ